Home
ಸುದ್ದಿಜಾಲ

ಗೂಗಲ್ ತೆಕ್ಕೆಗೆ ಬೆಂಗಳೂರಿನ 'ವೇರ್ ಈಸ್ ಮೈ ಟ್ರೈನ್’ ಆಪ್!..ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ?

ಭಾರತದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಪಡೆಯುತ್ತಿದ್ದ 'ವೇರ್ ಈಸ್ ಮೈ ಟ್ರೈನ್' ಆಪ್ ಅಭಿವೃದ್ಧಿ ಪಡಿಸಿದ ಬೆಂಗಳೂರು ಮೂಲದ ಸಿಗ್ಮಯಿಡ್ ಲ್ಯಾಬ್ ಕಂಪನಿಯನ್ನು ಗೂಗಲ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಬಗ್ಗೆ ಗೂಗಲ್ ಕಂಪೆನಿ ಅಧಿಕೃತ ಮಾಹಿತಿ ನೀಡಿದ್ದು, ಸಿಗ್ಮಯಿಡ್ ಲ್ಯಾಬ್ ಜೊತೆಗೆ ಹೆಚ್ಚಿನದನ್ನು ನಿರ್ಮಿಸಲು ಗೂಗಲ್ ಜೊತೆಯಾಗಿರುತ್ತದೆ ಎಂಬುದಾಗಿ ಹೇಳಿಕೊಂಡಿದೆ.

ಇಷ್ಟು ದಿನಗಳ ಕಾಲ ಊಹಾಪೋಹವಾಗಿದ್ದ ಈ ಸುದ್ದಿ ಈಗ ಅಧಿಕೃತವಾಗಿದ್ದು, ದೇಶದ ರೈಲುಗಳು ಪ್ರಸ್ತುತ ಸಮಯದಲ್ಲಿ ಎಲ್ಲಿ ಸಂಚರಿಸುತ್ತಿದೆ ಎನ್ನುವ ರಿಯಲ್ ಟೈಮ್ ಮಾಹಿತಿಯನ್ನು ತಿಳಿಸುವ 'ವೇರ್ ಈಸ್ ಮೈ ಟ್ರೈನ್' ಆಪ್ ಈಗ ಗೂಗಲ್ ಪಾಲಾಗಿದೆ. ಜೊತೆಗೆ ಗೂಗಲ್ ತೆಕ್ಕೆಗೆ ಬಿದ್ದ ಬೆಂಗಳೂರಿನ ಎರಡನೇ ಕಂಪೆನಿಯಾಗಿಯೋ ಸಿಗ್ಮಯಿಡ್ ಲ್ಯಾಬ್ ಗುರುತಿಸಿಕೊಂಡಿದೆ.

ಗೂಗಲ್ ತೆಕ್ಕೆಗೆ ಬೆಂಗಳೂರಿನ 'ವೇರ್ ಈಸ್ ಮೈ ಟ್ರೈನ್’ ಆಪ್!

ಈ ಮೊದಲು ನಗರದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಂಪನಿ 'ಹಳ್ಳಿ ಲ್ಯಾಬ್ಸ್' ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಗೂಗಲ್, ಈಗ ಸಿಗ್ಮಯಿಡ್ ಲ್ಯಾಬ್ ಅನ್ನು ಸೆಳೆದುಕೊಂಡಿದೆ. ಹಾಗಾದರೆ, ಗೂಗಲ್ ತೆಕ್ಕೆಗೆ ಬಿದ್ದ ಸಿಗ್ಮಯಿಡ್ ಲ್ಯಾಬ್ ಕಂಪನಿಯ 'ವೇರ್ ಈಸ್ ಮೈ ಟ್ರೈನ್' ಆಪ್ ವಿಶೇಷತೆ ಏನು?, ಆಪ್‌ ಮೇಲೆ ಗೂಗಲ್ ಕಣ್ಣು ಬಿದ್ದದ್ದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು 'ವೇರ್ ಈಸ್ ಮೈ ಟ್ರೈನ್’ ಆಪ್?

ಏನಿದು 'ವೇರ್ ಈಸ್ ಮೈ ಟ್ರೈನ್’ ಆಪ್?

ದೇಶದ ಎಲ್ಲಾ ರೈಲುಗಳ ಮಾಹಿತಿಯನ್ನು ನಿಖರವಾಗಿ ನೀಡುವ ಖಾಸಾಗಿ ಆಪ್ ಇದಾಗಿದ್ದು, ಪ್ರಯಾಣಿಕರು ಪ್ರಯಾಣಿಸಬೇಕಾದ ರೈಲು ಎಲ್ಲಿದೆ ಎಂಬುದರ ರಿಯಲ್ ಟೈಮ್ ಮಾಹಿತಿಯನ್ನು ಗ್ರಾಹಕರಿಗೆ ನೀಡುತ್ತದೆ. ಸೆಲ್ ಟವರ್‌ಗಳ ಮಾಹಿತಿಯನ್ನು ಬಳಸಿಕೊಂಡು ಅಂತರ್ಜಾಲದ ಬಳಕೆ ಇಲ್ಲದೆಯೇ ಈ ಮಾಹಿತಿಯನ್ನು ಒದಗಿಸುವುದು ಈ ಆಪ್‌ನ ಪ್ರಮುಖ ವಿಶೇಷತೆಯಾಗಿದೆ.

ಉಪಯೋಗಗಳು ಇನ್ನು ಹಲವಿವೆ!

ಉಪಯೋಗಗಳು ಇನ್ನು ಹಲವಿವೆ!

'ವೇರ್ ಈಸ್ ಮೈ ಟ್ರೈನ್' ಆಪ್ ರೈಲು ಎಲ್ಲಿದೆ ಎಂಬುದರ ರಿಯಲ್ ಟೈಮ್ ಮಾಹಿತಿ ಜೊತೆಗೆ, ಪ್ರಯಾಣಿಸುತ್ತಿರುವ ರೈಲಿನ ವೇಗವನ್ನು ತಿಳಿದುಕೊಳ್ಳಲು ಹಾಗೂ ಪ್ರಯಾಣಿಕರ ಪ್ರಯಾಣದ ಕೊನೆಯ ಸ್ಥಳ ತಲುಪಿದ ಬಗ್ಗೆ ಎಚ್ಚರಿಸುವ ಕೆಲಸವನ್ನು ಸಹ ಮಾಡಲಿದೆ. ಇದು ಭಾರತದಲ್ಲಿರುವ ಇನ್ನಿತರ ರೈಲ್ವೆ ಆಪ್‌ಗಳಿಗಿಂತ ಮುಂದುವರೆದ ಸೇವೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

10 ದಶಲಕ್ಷಕ್ಕಿಂತ ಹೆಚ್ಚು ಡೌನ್‌ಲೋಡ್ !

10 ದಶಲಕ್ಷಕ್ಕಿಂತ ಹೆಚ್ಚು ಡೌನ್‌ಲೋಡ್ !

ಭಾರತದಲ್ಲಿ 2018ರಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಮೊಬೈಲ್ ಆಪ್‌ಗಳ ಪೈಕಿ 'ವೇರ್ ಈಸ್ ಮೈ ಟ್ರೈನ್' ಕೂಡ ಸ್ಥಾನ ಪಡೆದುಕೊಂಡಿದೆ. ಇದುವರೆಗೂ 10 ದಶಲಕ್ಷಕ್ಕಿಂತ ಹೆಚ್ಚು ಮಂದಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅಂದರೆ, ಈ ಆಪ್ ದೇಶದಲ್ಲೇ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಆಪ್ ಕೂಡ ಆಗಿದೆ ಎನ್ನಬಹುದು.

ಗೂಗಲ್ ತೆಕ್ಕೆಗೆ ಬಿದ್ದದ್ದು ಹೇಗೆ?

ಗೂಗಲ್ ತೆಕ್ಕೆಗೆ ಬಿದ್ದದ್ದು ಹೇಗೆ?

ಸಣ್ಣ ಸಣ್ಣ ಜನಪ್ರಿಯ ತಂತ್ರಜ್ಞಾನ ಕಂಪೆನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಗೂಗಲ್ ಯಾವಾಗಲೂ ಮುಂದಿದೆ. ಈಗ ಕೇವಲ 10 ಜನ ನೌಕರರನ್ನು ಹೊಂದಿರುವ 'ವೇರ್ ಈಸ್ ಮೈ ಟ್ರೈನ್'ಹೆಚ್ಚು ಜನರ ಮೊಬೈಲ್ ಸೇರುತ್ತಿರುವುದರಿಂದ ಗೂಗಲ್ ಅದನ್ನು ಖರೀದಿ ಮಾಡಿದೆ. ಭಾರತದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುವ ಇರಾದೆ ಗೂಗಲ್‌ಗೆ ಇರುವುದು ಇದಕ್ಕೆ ಕಾರಣ.

ಸಿಗ್ಮಯಿಡ್ ಲ್ಯಾಬ್ ಮಾರಾಟವಾದ ಬೆಲೆ?

ಸಿಗ್ಮಯಿಡ್ ಲ್ಯಾಬ್ ಮಾರಾಟವಾದ ಬೆಲೆ?

ಇಟಿ ವರದಿ ಮಾಡಿರುವಂತೆ ಮತ್ತು ತಂತ್ರಜ್ಞಾನ ವಿಶ್ಲೇಷಕರ ಪ್ರಕಾರ, ಗೂಗಲ್ ಕಂಪೆನಿ ಅಂದಾಜು 40 ಮಿಲಿಯನ್ ಡಾಲರ್ ಪಾವತಿಸುವ ಮೂಲಕ ‘ವೇರ್ ಈಸ್ ಮೈ ಟ್ರೈನ್' ಆಪ್ ಅಭಿವೃದ್ಧಿ ಪಡಿಸಿದ ಸಿಗ್ಮಯಿಡ್ ಲ್ಯಾಬ್ ಅನ್ನು ಖರೀದಿಸಿದೆ ಎನ್ನಲಾಗಿದೆ. ಅಂದರೆ, ಭಾರತದ ರೂ.ಗಳ ಲೆಕ್ಕದಲ್ಲಿ 288 ಕೋಟಿ ರೂಪಾಯಿಗಳಿಗೆ ಸಿಗ್ಮಯಿಡ್ ಲ್ಯಾಬ್ ಮಾರಾಟವಾಗಿದೆ.

Best Mobiles in India

English summary
Search giant Google has acquired one of India’s most popular train apps, Where is My Train for an undisclosed amount. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+