ಗೂಗಲ್ ಕ್ರೋಮ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡೋದು ಇದೀಗ ಇನ್ನಷ್ಟು ಸುಲಭ!
ಗೂಗಲ್ ಕ್ರೋಮ್‌ನಲ್ಲಿ ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡುವುದು ಇನ್ಮುಂದೆ ಇನ್ನಷ್ಟು ಸುಲಭವಾಗಲಿದೆ. ಬಳಕೆದಾರರ ಅಗತ್ಯತೆಯನ್ನು ಮನಗಂಡಿರುವ ಗೂಗಲ್ ಸರ್ಚ್ ಹಿಸ್ಟರಿ ಡಿಲೀಟ್‌ಗಾಗಿ ಹೊಸ ಆಯ್ಕೆ ನೀಡಲು ಮುಂದಾಗಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ಸಿಂಗಲ್ ಟ್ಯಾಪ್‌ನಲ್ಲಿ ಹದಿನೈದು ನಿಮಿಷಗಳ ಬ್ರೌಸಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡಬಹುದು ಎಂದು ಹೇಳಲಾಗಿದೆ. ಇದರಿಂದ ಬಳಕೆದಾರರು ತಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡುವುದಕ್ಕೆ ಪರದಾಡಬೇಕಾದ ಅಗತ್ಯವಿಲ್ಲ ಎನ್ನಲಾಗಿದೆ.

ಹೌದು, ಗೂಗಲ್ ಕ್ರೋಮ್ ಬ್ರೌಸಿಂಗ್ ಹಿಸ್ಟರಿ ಡಿಲೀಟ್ ಆಯ್ಕೆಯಲ್ಲಿ ಹೊಸ ಫೀಚರ್ಸ್ ಸೇರ್ಪಡೆ ಮಾಡಿದೆ. ಇದರಿಂದ ಬ್ರೌಸರ್ ಹಿಸ್ಟರಿಯನ್ನು ಸುಲಭವಾಗಿ ಡಿಲೀಟ್ ಮಾಡಬಹುದಾಗಿದೆ. ಇದನ್ನು ಕ್ವಿಕ್ ಡಿಲೀಟ್ ಎಂದು ಹೆಸರಿಸಲಾಗಿದ್ದು, ಕ್ರೋಮ್‌ನಲ್ಲಿ ಮೂರು ಚುಕ್ಕೆಗಳ ಓವರ್‌ಪ್ಲೋ ಮೆನುವಿನಲ್ಲಿ ಕಾಣಿಸಲಿದೆ. ಇದರ ಮೂಲಕ ನಿಮ್ಮ ಸರ್ಚ್ ಹಿಸ್ಟರಿ ಬೇರೆಯವರ ಕೈಗೆ ಸಿಗದಂತೆ ಮಾಡಬಹುದಾಗಿದೆ. ಹಾಗಾದ್ರೆ ಗೂಗಲ್ ಕ್ರೋಮ್ ಸೇರಿರುವ ಹೊಸ ಕ್ವಿಕ್ ಡಿಲೀಟ್ ಆಯ್ಕೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಏನಿದು ಕ್ವಿಕ್ ಡಿಲೀಟ್ ?
ಗೂಗಲ್ ಕ್ರೋಮ್‌ನಲ್ಲಿ ಹೊಸದಾಗಿ ಸೇರ್ಪಡೆ ಆಗಿರುವ ಕ್ವಿಕ್ ಡಿಲೀಟ್ ಆಯ್ಕೆಯ ಆಕ್ವಿವೇಶನ್ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಇದರ ಬಳಕೆ ಹೇಗೆ ಎನ್ನುವುದು ಇನ್ನು ನಿರ್ಧಿಷ್ಟಪಡಿಸಿಲ್ಲ. ಆದರೆ ಈ ಆಯ್ಕೆಯು ಬಳಕೆದಾರರಿಗೆ ಬ್ರೌಸಿಂಗ್ ಹಿಸ್ಟರಿ ಡೇಟಾವನ್ನು ಡಿಲೀಟ್ ಮಾಡಲು ಅನುಮತಿಸಲಿದೆ. ಅಲ್ಲದೆ ಇದರ ಮೂಲಕ ಕಂಪ್ಲಿಟ್ ಅಕೌಂಟ್ ಸೆಶನ್ ಆಕ್ಟಿವಿಟಿಯನ್ನು ಡಿಲೀಟ್ ಮಾಡಲು ಸಾಧ್ಯವಾಗಲಿದೆ.

ಗೂಗಲ್ ಕ್ರೋಮ್‌ನಲ್ಲಿ ಕ್ವಿಕ್ ಡಿಲೀಟ್ ಆಯ್ಕೆಯನ್ನು ಆಕ್ಟಿವ್ ಮಾಡುವುದು ಹೇಗೆ?
ಇನ್ನು ಒಂದು ಭಾರಿ ಕ್ವಿಕ್ ಡಿಲೀಟ್ ಆಯ್ಕೆಯನ್ನು ಆಕ್ಟಿವ್ ಮಾಡಿದರೆ ಇದು ಗೂಗಲ್ ಕ್ರೋಮ್‌ನ ಮೂರು ಚುಕ್ಕೆಗಳ ಓವರ್ ಪ್ಲೋ ಮೆನುವಿನಲ್ಲಿ ಕಾಣಿಸಲಿದೆ. ಇದರ ಮೂಲಕ ಬಳಕೆದಾರರು ತಮ್ಮ ಕೊನೆಯ 15 ನಿಮಿಷಗಳ ಬ್ರೌಸಿಂಗ್ ಡೇಟಾವನ್ನು ಕ್ವಿಕ್ ಆಗಿ ಡಿಲೀಟ್ ಮಾಡಬಹುದಾಗಿದೆ. ಹೆಸರೇ ಸೂಚಿಸುವಂತೆ ಕ್ವಿಕ್ ಡಿಲೀಟ್ ಕ್ಷಣಾರ್ಧದಲ್ಲಿ ನಿಮ್ಮ ಬ್ರೌಸಿಂಗ್ ಹಿಸ್ಟರಿ ಡಿಲೀಟ್ ಮಾಡಲಿದೆ. ಇದರಿಂದ ನಿಮ್ಮ ಹದಿನೈದು ನಿಮಿಷಗಳ ಎಲ್ಲಾ ಸರ್ಚ್ ಬ್ರೌಸಿಂಗ್ ಹಿಸ್ಟರಿಯನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡಬಹುದು.
ಗೂಗಲ್ ಕ್ರೋಮ್ ಸೇರಿರುವ ಕ್ವಿಕ್ ಡಿಲೀಟ್ ಆಯ್ಕೆಯು ಇದೀಗ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ. ಕಳೆದ ವರ್ಷವೇ ಈ ಆಯ್ಕೆಯನ್ನು ಗೂಗಲ್ ಕ್ರೋಮ್‌ನಲ್ಲಿ ಪರೀಕ್ಷಿಸಲಾಗಿತ್ತು ಅನ್ನೊದು ಇಂಟ್ರೆಸ್ಟಿಂಗ್ ವಿಚಾರವಾಗಿದೆ. ಇದರೊಂದಿಗೆ ಗೂಗಲ್ ಕ್ರೋಮ್‌ನಲ್ಲಿ ಕೆಲವು ಪ್ರೈವೆಸಿ ಫೀಚರ್ಸ್‌ಗಳನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಇದರಿಂದ ಕ್ರೋಮ್‌ನಲ್ಲಿ ಸೆಕ್ಯೂರ್ ಬ್ರೌಸಿಂಗ್ ಸಾಧ್ಯವಾಗಲಿದೆ. ಈ ಮೂಲಕ ಗೂಗಲ್ ಕ್ರೋಮ್ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಅಧ್ಯತೆ ನೀಡಲು ಮುಂದಾಗಿದೆ.

ಇದಲ್ಲದೆ ಗೂಗಲ್ ಇತ್ತೀಚಿಗೆ ಗೂಗಲ್ ಕ್ರೋಮ್ (Google Chrome) ಅಪ್ಡೇಟ್‌ನಲ್ಲಿ ಹೊಸ ಪಾಸ್‌ಕೀಗಳನ್ನು ಪರಿಚಯಿಸಿತ್ತು. ಇವುಗಳ ಮೂಲಕ ಬಳಕೆದಾರರು ಪಾಸ್‌ವರ್ಡ್‌ಗಳನ್ನು ಟೈಪ್ ಮಾಡದೆಯೇ ಲಾಗಿನ್ ಮಾಡಲು ಅವಕಾಶ ನೀಡಲಾಗಿದೆ. ಈ ಪಾಸ್‌ಕೀ ಗಳನ್ನು ಮರುಬಳಕೆ ಮಾಡಲಾಗದ ಕಾರಣ ಹೆಚ್ಚು ಸುರಕ್ಷಿತವಾಗಿರುತ್ತವೆ, ಇದಿಷ್ಟೇ ಅಲ್ಲದೆ ಸರ್ವರ್ ಉಲ್ಲಂಘನೆಗಳಲ್ಲಿ ಸೋರಿಕೆಯಾಗುವುದಿಲ್ಲ ಮತ್ತು ಫಿಶಿಂಗ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸುತ್ತವೆ. ಪಾಸ್‌ಕೀಗಳನ್ನು ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದ್ದು, ವಿವಿಧ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇದು ಕೆಲಸ ಮಾಡುತ್ತದೆ. ಹಾಗೆಯೇ ಪಾಸ್‌ಕೀ ಮೂಲಕ ಸೈನ್ ಇನ್ ಮಾಡಲು ಬಳಕೆದಾರರು ಡಿವೈಸ್ ಅನ್ನು ಅನ್‌ಲಾಕ್ ಆಗಿರುವ ರೀತಿಯಲ್ಲಿಯೇ ದೃಢೀಕರಿಸಬೇಕಿದೆ ಎಂದು ಗೂಗಲ್ ಹೇಳಿದೆ.


Click it and Unblock the Notifications








