ಗೂಗಲ್ ಜಿಬೋರ್ಡ್ ಗೆ ಸೇರುತ್ತಿವೆ 28 ಹೊಸ ಭಾಷೆಗಳು
ಗೂಗಲ್ ತನ್ನ ಜಿಬೋರ್ಡ್ ಆಪ್ ನಲ್ಲಿ ಹಲವು ಹೊಸ ವೈಶಿಷ್ಟ್ಯತೆಗಳನ್ನು ಸೇರಿಸಿ ಅಪ್ ಡೇಟ್ ಆಗಿದೆ. ಆಪ್ ನ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ವಾಟ್ಸ್ ನ್ಯೂ ವಿಭಾಗದಲ್ಲಿ ಈ ಹೊಸ ಅಪ್ ಡೇಟ್ ಗಳು ಕಾಣಲು ಲಭ್ಯವಾಗುತ್ತಿದೆ.
ಮೊದಲನೆಯದಾಗಿ , ಜಿಬೋರ್ಡ್ ಈಗ ಬಳಕೆದಾರರಿಗೆ 'Make a GIF' ಗೆ ಟೆಕ್ಸ್ಟ್ ನ್ನು ಸೇರಿಸಲು ಅವಕಾಶ ನೀಡುತ್ತದೆ. ಅಷ್ಟೇ ಅಲ್ಲ ಗೂಗಲ್ ಈಗ 15 ಹೊಸ ಭಾಷೆಗಳಿಗೆ ಸ್ಟಿಕ್ಕರ್ ಬೆಂಬಲವನ್ನು ನೀಡುತ್ತಿದೆ. ಅಷ್ಟೇ ಅಲ್ಲ ಸುಮಾರು 28 ಹೊಸ ಭಾಷೆಗಳನ್ನು ಕೂಡ ಜಿಬೋರ್ಡ್ ಆಪ್ ತನ್ನಲ್ಲಿ ಹೊಸದಾಗಿ ಸೇರಿಸಿದೆ.

ಅವುಗಳೆಂದರೆ ಬಾಗ್ರಿ, ಬ್ಯಾಟ್ಬ್ ಟೋಬಾ, ಬೆಂಚ್, ಭಿಲಿ, ಕ್ಯಾಪಿಝೋನ್, ಚಾವಕಾನೊ, ಈಸ್ಟರ್ನ್ ಮಿನ್, ಫಿಜಿ ಹಿಂದಿ, ಗೀಝ್, ಗುರುನಿ, ಇಂಗುಶ್, ಖರಸಾನಿ ತುರ್ಕಿಕ್, ಕಿಪ್ಸಿಸ್, ಮಹಾರಾಷ್ಟ್ರ ಕೊಂಕಣಿ, ಲೆಜ್ಜಿಯನ್, ಮಿಜೊ, ಮಗುಂಡಿನೊ, ಮಲಯ (ಬ್ರೂನಿ) ದಕ್ಷಿಣ ಮಿನ್, ಉತ್ತರ ಸಾಮಿ, ಖಶ್ಖಿ, ರಿಂಕನಡಾ ಬಿಕೊಲ್, ಸುರ್ಪುಪುರಿ, ಟೌಸಾಗ್, ಅಪ್ಪರ್ ಸ್ಯಾಕ್ಸನ್, ವಾಸವಿ.
ಆಪ್ ನ ನೂತನ ವರ್ಷನ್ 7.14.19.206421213 ತೂಕ ಮತ್ತು 142MB ಸೈಜ್ ನಲ್ಲಿದೆ. ಕೆಲವು ದಿನಗಳ ಹಿಂದೆ ಇದು ಬೇಟಾ ಟೆಸ್ಟಿಂಗ್ ನಲ್ಲಿದ್ದು ಈಗಿನ ಅಪ್ ಡೇಟ್ ನಲ್ಲಿ ಸದ್ಯ ಲಭ್ಯವಾಗಿದೆ. ಕಳೆದ ವಾರ, ಗೂಗಲ್ ಆಂಡ್ರಾಯ್ಡ್ ಪಿ ನ ಅಂತಿಮ ಡೆವಲಪರ್ ಪ್ರೀವ್ಯೂವನ್ನು ಬಿಡುಗಡೆಗೊಳಿಸಿದೆ.
ಇತ್ತೀಚಿನ ಜನರೇಷನ್ ನ ಪಿಕ್ಸೆಲ್ ಸ್ಮಾರ್ಟ್ಫೋನ್ಗಳ ಪ್ರಾರಂಭದ ಟೈಮ್ ಲೈನ್ ಅನ್ನು ನೆನಪಿನಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತಿದೆ. ಮುಂದಿನ ತಿಂಗಳು ಅಂತಿಮ ಬಿಡುಗಡೆ ನಡೆಯುವ ಮುನ್ನ ಆಂಡ್ರಾಯ್ಡ್ ಪಿ ನ ಡೆವಲಪರ್ ಪ್ರಿವ್ಯೂ 5 ಅಥವಾ ಬೆಟಾ 4 ನ ಸ್ಟೇಬಲ್ ವರ್ಷನ್ ನ್ನು ನೀವು ಪ್ರಯತ್ನಿಸಿ ನೋಡಬಹುದು.
ಇದರ ತೂಕವು 51.7ಎಂಬಿ, ಸದ್ಯ ಈ ಅಪ್ ಡೇಟ್ ಆಂಡ್ರಾಯ್ಡ್ ಪಿ ಬೆಟಾ 3 ವರ್ಷನ್ ಬಳಸುವವರಿಗೆ ಲಭ್ಯವಾಗುತ್ತದೆ. ಬೆಟಾ ವರ್ಷನ್ ನಲ್ಲಿ ಗುರುತಿಸಲ್ಪಟ್ಟ ಹಲವಾರು ಬಗ್ ಗಳನ್ನು ಈ ಅಪ್ ಡೇಟ್ ನಲ್ಲಿ ಸರಿಪಡಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.ಸದ್ಯ ಗೂಗಲ್ ಪಿಕ್ಸಲ್, ಪಿಕ್ಸಲ್ ಎಕ್ಸ್ಎಲ್, ಪಿಕ್ಸಲ್ 2 ಮತ್ತು ಪಿಕ್ಸಲ್ 2 ಎಕ್ಸ್ ಎಲ್ ನಲ್ಲಿ ಆಂಡ್ರಾಯ್ಡ್ ಪಿ ಬೆಟಾ ವರ್ಷನ್ ಕೂಡ ಲಭ್ಯವಿದೆ.
ಆಂಡ್ರಾಯ್ಡ್ ಬೆಟಾ 4 ಅಪ್ ಡೇಟ್ ನ ಜೊತೆಗೆ , ಕಂಪೆನಿಯು ಹೋಮ್ ಸ್ಕ್ರೀನ್ ನ ಕೆಳಭಾಗದ ಸರ್ಚ್ ಬಾರ್ ನಲ್ಲಿರುತ್ತಿದ್ದ ಮೈಕ್ರೋಫೋನ್ ಐಕಾನ್ ನ್ನು ತೆಗೆದು ಹಾಕಿದೆ. ಇದರ ಜೊತೆಗೆ , ನೋಟಿಫಿಕೇಷನ್ ಬಾರ್ ನಲ್ಲಿರುವತ್ತಿದ್ದ ಆಟೋ ರೋಟೆಟ್ ಐಕಾನ್ ಕೂಡ ಇಲ್ಲವಾಗಿದೆ.ಅಷ್ಟೇ ಅಲ್ಲ ಆಂಡ್ರಾಯ್ಡ್ ಕೆಲವು ವಿಷುವಲ್ ಬದಲಾವಣೆಯನ್ನು ಕೂಡ ತರಲಿದ್ದು ಅದು ಸೆಟ್ಟಿಂಗ್ಸ್ ಮೆನುವಿಗೆ ಹೊಸ ಲುಕ್ ನೀಡುತ್ತದೆ ಮತ್ತು ಪುಲ್ ಡೌನ್ ಮೆನುವಿಗೆ ಒಂದಷ್ಟು ಶಾರ್ಟ್ ಕಟ್ ಗಳನ್ನು ಕೂಡ ಇದು ಒದಗಿಸುತ್ತದೆ.


Click it and Unblock the Notifications








