Home
ಸುದ್ದಿಜಾಲ

ಕ್ರೋಮ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಗೂಗಲ್‌!

ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಮೊದಲ ಗೂಗಲ್‌ ಸರ್ಚ್‌ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಗೂಗಲ್‌ ಕ್ರೋಮ್‌ ವೆಬ್‌ ಬ್ರೌಸಿಂಗ್‌ ಮಾಡೋದಕ್ಕೆ ಸಾಕಷ್ಟು ಜನಪ್ರಿಯತೆ ಪಡೆದಿದೆ. ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಸುಲಭವಾಗಿ ಬ್ರೌಸಿಂಗ್‌ ಮಾಡೋದಕ್ಕೆ ಅವಕಾಶ ನೀಡುತ್ತದೆ. ಸದ್ಯ ಇದೀಗ ಗೂಗಲ್‌ ತನ್ನ ಕ್ರೋಮ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ವೆಬ್‌ನಲ್ಲಿ ನ್ಯಾವಿಗೇಟ್‌ ಮಾಡುವಾಗ ಮಾಹಿತಿಯನ್ನು ಸರ್ಚ್‌ ಮಾಡುವುದಕ್ಕೆ ಈ ಫೀಚರ್ಸ್‌ಗಳು ಸಹಾಯ ಮಾಡಲಿವೆ ಎನ್ನಲಾಗಿದೆ.

ಗೂಗಲ್‌ ಕ್ರೋಮ್‌

ಹೌದು, ಗೂಗಲ್‌ ಕ್ರೋಮ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದ ನ್ಯಾವಿಗೇಟ್‌ ಮಾಡುವಾಗಲು ಸುಲಭವಾಗಿ ಕಾರ್ಯನಿರ್ವಹಿಸಲು ಸಾದ್ಯವಾಗಲಿದೆ. ಇವುಗಳಲ್ಲಿ ಕೆಲವು ಫೀಚರ್ಸ್‌ಗಳು ಈಗಿನಿಂದಲೇ ಸಾರ್ವಜನಿಕರಿಗೆ ಲಭ್ಯವಿರುತ್ತವೆ. ಇನ್ನು ಕೆಲವು ಫೀಚರ್ಸ್‌ಗಳು ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿವೆ. ಹಾಗಾದ್ರೆ ಗೂಗಲ್ ತನ್ನ ಕ್ರೋಮ್ ಬ್ರೌಸರ್‌ಗಾಗಿ ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜರ್ನೀಸ್

ಜರ್ನೀಸ್

ಗೂಗಲ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳಲ್ಲಿ ಜರ್ನೀಸ್ ಕೂಡ ಒಂದಾಗಿದೆ. ನೀವು ಪ್ರಯಾಣ ಮಾಡುವಾಗ ನಿಮ್ಮನ್ನು ಸುಲಭವಾಗಿ ಪಿಕಪ್ ಮಾಡಲು ಸಹಾಯಕವಾಗದೆ. ಈ ಹೊಸ ಫೀಚರ್ಸ್‌ನಿಂದ ಹಿಂದಿನ ಯಾವುದೇ ಸರ್ಚ್‌ ಹಿಸ್ಟರಿಯನ್ನು ಮತ್ತೆ ನೋಡುವುದಕ್ಕೆ ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಈ ಹಿಂದೆ ಸರ್ಚ್‌ ಮಾಡಿದ ಪೇಜ್‌ ಅನ್ನು ಹುಡುಕುತ್ತಾ ಕೂರುವ ಬದಲು ವಿಷದ ಪ್ರಕಾರದ ಗುಂಪುಗಳಲ್ಲಿ ಸರ್ಚ್‌ ಮಾಡಬಹುದು ಎಂದು ಗೂಗಲ್‌ ಹೇಳಿದೆ. ಈಗ ಜರ್ನೀಸ್ ಫೀಚರ್ಸ್‌ ಅನ್ನು, ಕ್ರೋಮ್‌ನ ಡೆಸ್ಕಟಾಪ್‌ ಆವೃತ್ತಿಯಲ್ಲಿ ಲಭ್ಯವಾಗಲಿದೆ.

ಗೂಗಲ್‌

ಗೂಗಲ್‌ ಕ್ರೋಮ್‌ನಲ್ಲಿ ನಿಮ್ಮ ಸರ್ಚ್‌ ಹಿಸ್ಟರಿಯಲ್ಲಿ ನೀವು ಸಂಬಂಧಿತ ಪದವನ್ನು ಟೈಪ್ ಮಾಡಿದಾಗ ನೀವು ಭೇಟಿ ನೀಡಿದ ಸಂಬಂಧಿತ ಸೈಟ್‌ಗಳ ಪಟ್ಟಿಯನ್ನು ಕಾಣಬಹುದು. ಈ ಸಮಯದಲ್ಲಿ ನೀವು ಮುಂದೆ ಪ್ರಯತ್ನಿಸಲು ಬಯಸುವ ಸಂಬಂಧಿತ ಸರ್ಚ್‌ಗಳ ಬಗ್ಗೆ ನಿಮಗೆ ಸಹಾಯಕವಾದ ಸಲಹೆಗಳನ್ನು ಜರ್ನೀಸ್ ಫೀಚರ್ಸ್‌ ನೀಡಲಿದೆ. ಗೂಗಲ್‌ ಕ್ರೋಮ್‌ನ ಜರ್ನೀಸ್ ವಿಭಾಗವು ಕ್ರೋಮ್‌ ಹಿಸ್ಟರಿ ಫೀಚರ್ಸ್‌ಗಿಂತ ಭಿನ್ನವಾಗಿದೆ. ಈ ಫೀಚರ್ಸ್‌ ನಿಮಗೆ ನಿಮ್ಮ ಸರ್ಚ್‌ 'ಸಬ್ಜೆಕ್ಟ್‌' ಎಂದು ಕರೆಯುವ ರೀತಿಯಲ್ಲಿ ಸಂಘಟಿಸುತ್ತದೆ. ಅಂದರೆ ನೀವು ಪ್ರಯಾಣಿಸಲು ಬಯಸಿದರೆ ನಿಮ್ಮ ಜರ್ನೀಸ್ ವಿಭಾಗದಲ್ಲಿ ನೀವು ಪ್ರಯಾಣಕ್ಕಾಗಿ ಹುಡುಕಿದರೆ, ನೀವು ಹುಡುಕಿದ ಎಲ್ಲಾ ಸರ್ಚ್‌ ಆಕ್ಟಿವಿಟಿಯನ್ನು ಕಾಣಬಹುದು.

ಟೆಕ್‌ ಆಕ್ಷನ್‌

ಟೆಕ್‌ ಆಕ್ಷನ್‌

ಸರ್ಚ್‌ ಬಾರ್‌ನಿಂದದ ನೇರವಾಗಿ ಬ್ರೌಸಿಂಗ್ ಹಿಸ್ಟರಿಯನ್ನು ತೆರವುಗೊಳಿಸುವುದರ ಹೊರತಾಗಿ, ಸರ್ಚ್‌ ಬಾರ್‌ನಿಂದ ನೇರವಾಗಿ ತೆಗೆದುಕೊಳ್ಳಬಹುದಾದ ಹೊಸ ಕ್ರಮಗಳನ್ನು ಗೂಗಲ್‌ ಹೊರತಂದಿದೆ. ಇವುಗಳಲ್ಲಿ ಮ್ಯಾನೇಜ್‌ ಸೆಟ್ಟಿಂಗ್ಸ್‌, ಕಸ್ಟಮೈಸ್ ಕ್ರೋಮ್‌, ವ್ಯೂ ಯುವರ್‌ ಕ್ರೋಮ್‌ ಹಿಸ್ಟರಿ, ಮ್ಯಾನೇಜ್‌ ಆಕ್ಸೆಸಿಬಿಲಿಟಿ ಸೆಟ್ಟಿಂಗ್ಸ್‌, ಶೇರ್‌ ದಿಸ್‌ ಟ್ಯಾಬ್ ಮತ್ತು ಪ್ಲೇ ಕ್ರೋಮ್‌ ಡಿನೋ ಗೇಮ್‌ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ.

ಮೋರ್‌ ವಿಜೆಟ್ಸ್‌

ಮೋರ್‌ ವಿಜೆಟ್ಸ್‌

ಗೂಗಲ್‌ ಆಂಡ್ರಾಯ್ಡ್‌ ಕ್ರೋಮ್‌ನಲ್ಲಿ ಹೊಸ ವಿಜೆಟ್ಸ್‌ ಅನ್ನು ಸೇರಿಸಿದೆ. ಇದರಿಂದ ನೀವು ಟೆಕ್ಸ್‌ ಸರ್ಚ್‌, ವಾಯ್ಸ್‌ ಸರ್ಚ್‌, ಲೆನ್ಸ್ ಸರ್ಚ್‌ ಅನ್ನು ತ್ವರಿತವಾಗಿ ಪ್ರಾರಂಭಿಸಬಹುದು. ಇಲ್ಲವೇ ನಿಮ್ಮ ಹೋಮ್‌ಸ್ಕ್ರೀನ್‌ನಿಂದಲೇ ಇಕಾಗ್ನಿಟೋ ಟ್ಯಾಬ್ ಅನ್ನು ತೆರೆಯಬಹುದು. ಆಂಡ್ರಾಯ್ಡ್‌ ಕ್ರೋಮ್‌ನಲ್ಲಿ ವಿಜೆಟ್ ಪಡೆಯಲು, ಕ್ರೋಮ್‌ ಐಕಾನ್ ಅನ್ನು ಲಾಂಗ್‌ ಪ್ರೆಸ್‌ ಮಾಡಬೇಕಾಗುತ್ತದೆ.

Best Mobiles in India

English summary
Google adds new features to Chrome that can help you find information and get things done easily
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+