Home
ಸುದ್ದಿಜಾಲ

ಭಾರತದಲ್ಲಿ ಗೂಗಲ್ 'AI ಮೋಡ್' ವೈಶಿಷ್ಟ್ಯ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ!

ಟೆಕ್ ದೈತ್ಯ ಗೂಗಲ್ ತನ್ನ ಬಹುನಿರೀಕ್ಷಿತ 'AI ಮೋಡ್' ವೈಶಿಷ್ಟ್ಯವನ್ನು ಭಾರತದಲ್ಲಿ ಎಲ್ಲಾ ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ. ಕಳೆದ ತಿಂಗಳು ಲ್ಯಾಬ್‌ಗಳಲ್ಲಿ ಪ್ರಯೋಗವಾಗಿ ಪರಿಚಯಿಸಲಾದ ಈ ವೈಶಿಷ್ಟ್ಯವು ಈಗ ಎಲ್ಲರಿಗೂ ಲಭ್ಯವಿದ್ದು, ಬಳಕೆದಾರರು AI-ಚಾಲಿತ ಪ್ರತಿಕ್ರಿಯೆಗಳನ್ನು ಪಡೆಯಲು ಮತ್ತು ವೆಬ್‌ನಲ್ಲಿ ವಿಷಯಗಳನ್ನು ಹೆಚ್ಚು ಆಳವಾಗಿ ಅನ್ವೇಷಿಸಲು ಸಹಾಯ ಮಾಡುತ್ತದೆ. ಇದು ಗೂಗಲ್‌ನ ಅತ್ಯಂತ ಶಕ್ತಿಶಾಲಿ AI ಸರ್ಚ್ ಅನುಭವವನ್ನು ಒದಗಿಸುತ್ತದೆ ಮತ್ತು ಬಳಕೆದಾರರಿಗೆ ಯಾವುದೇ ಪ್ರಶ್ನೆ ಕೇಳಲು ಸುಲಭವಾಗಿಸುತ್ತದೆ.

ಈ ವೈಶಿಷ್ಟ್ಯವು ಜೆಮಿನಿ 2.5 ರ ಕಸ್ಟಮ್ ಆವೃತ್ತಿಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಗೂಗಲ್ ಸರ್ಚ್‌ನಲ್ಲಿ ಲಭ್ಯವಿದೆ, ಲ್ಯಾಬ್‌ಗಳಿಗೆ ಸೈನ್ ಅಪ್ ಮಾಡುವ ಅಗತ್ಯವಿಲ್ಲ. AI ಮೋಡ್ ಮಲ್ಟಿಮೋಡಲ್ ಆಗಿದ್ದು, ಬಳಕೆದಾರರು ತಮ್ಮ ಪ್ರಶ್ನೆಗಳನ್ನು ಮಾತನಾಡುವ ಮೂಲಕ ಅಥವಾ ಫೋಟೋ ತೆಗೆದು ಕೇಳಬಹುದು. ಕೃತಕ ಬುದ್ಧಿಮತ್ತೆ (AI)ಯಲ್ಲಿ ಮಲ್ಟಿಮೋಡಲ್ ಎಂದರೆ, ಒಂದೇ ಸಮಯದಲ್ಲಿ ವಿವಿಧ ವಿಧಾನಗಳು ಅಥವಾ ಡೇಟಾ ಪ್ರಕಾರಗಳಿಂದ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ಮತ್ತು ಸಂಯೋಜಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.

"ಲ್ಯಾಬ್ಸ್‌ನಲ್ಲಿ ಎಲ್ಲಾ ವೈಶಿಷ್ಟ್ಯಗಳು AI ಮೋಡ್‌ನಲ್ಲಿ ಲಭ್ಯವಿದ್ದು, ನೀವು ಟೈಪ್ ಮಾಡಬಹುದು, ನಿಮ್ಮ ಧ್ವನಿಯನ್ನು ಬಳಸಬಹುದು ಅಥವಾ ಲೆನ್ಸ್‌ನೊಂದಿಗೆ ಫೋಟೋ ತೆಗೆದು ಸಹಾಯಕ ಲಿಂಕ್‌ಗಳೊಂದಿಗೆ ಶ್ರೀಮಂತ, ಸಮಗ್ರ ಪ್ರತಿಕ್ರಿಯೆ ಪಡೆಯಬಹುದು ಮತ್ತು ಫಾಲೋ-ಅಪ್ ಪ್ರಶ್ನೆಗಳೊಂದಿಗೆ ಆಳವಾಗಿ ಅನ್ವೇಶಿಸಬಹುದು" ಎಂದು ಕಂಪನಿಯು ತಿಳಿಸಿದೆ. Google ಪ್ರಕಾರ, ಬಳಕೆದಾರರು Google ಅಪ್ಲಿಕೇಶನ್‌ನ ಸರ್ಚ್ ಇಂಟರ್ಫೇಸ್‌ನಲ್ಲಿ ಹೊಸ ಮೀಸಲಾದ ಟ್ಯಾಬ್‌ನಲ್ಲಿ ಈ ವೈಶಿಷ್ಟ್ಯವನ್ನು ನೋಡಬಹುದು, ಇದನ್ನು ಇಂಗ್ಲಿಷ್‌ನಲ್ಲಿ ಪ್ರವೇಶಿಸಬಹುದು.

ಭಾರತದಲ್ಲಿ ಗೂಗಲ್ 'AI ಮೋಡ್' ವೈಶಿಷ್ಟ್ಯ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ!

'AI ಮೋಡ್' ವೈಶಿಷ್ಟ್ಯದ ಬಿಡುಗಡೆ ಕುರಿತು, X ನಲ್ಲಿ ಪೋಸ್ಟ್ ಮಾಡಿದ ಸುಂದರ್ ಪಿಚೈ ಅವರು, "ಲ್ಯಾಬ್ಸ್‌ನಲ್ಲಿ ಉತ್ತಮ ಪ್ರತಿಕ್ರಿಯೆಯ ನಂತರ, ನಾವು ಭಾರತದಲ್ಲಿ ಎಲ್ಲರಿಗೂ (ಇಂಗ್ಲಿಷ್‌ನಿಂದ ಆರಂಭಕ್ಕೆ) ಹುಡುಕಾಟದಲ್ಲಿ AI ಮೋಡ್ ಅನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತಿದ್ದೇವೆ. ಇದು ಹುಡುಕಾಟದ ಸಂಪೂರ್ಣ ಮರುಕಲ್ಪನೆಯಾಗಿದೆ ಮತ್ತು ಇನ್ನಷ್ಟು ಜನರು ಇದನ್ನು ಬಳಸಬೇಕೆಂದು ನಾವು ಉತ್ಸುಕರಾಗಿದ್ದೇವೆ." ಎಂದು ಹೇಳಿದ್ದಾರೆ.

ಹಾಗೆಯೇ, ಗೂಗಲ್ ಪ್ರಾಡೆಕ್ಟ್ ಮ್ಯಾನೇಜ್‌ಮೆಂಟ್ ಮತ್ತು ಸರ್ಚ್ ಉಪಾಧ್ಯಕ್ಷೆ ಹೇಮಾ ಬುಡರಾಜು ಅವರು ತಮ್ಮ ಬ್ಲಾಗ್‌ನಲ್ಲಿ, "ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ, ಜನರು ಇದರ ವೇಗ ಮತ್ತು ಪ್ರತಿಕ್ರಿಯೆಗಳ ಗುಣಮಟ್ಟವನ್ನು ಮೆಚ್ಚುತ್ತಿದ್ದಾರೆ" ಎಂದು ತಿಳಿಸಿದ್ದಾರೆ. "ಬಳಕೆದಾರರು ಇದನ್ನು ವಿಭಿನ್ನ ರೀತಿಯಲ್ಲಿ ಬಳಸುತ್ತಿದ್ದಾರೆ - ಕಲಿಯಲು ವಿಷಯಗಳಿಗೆ ಆಳವಾಗಿ ಧುಮುಕುವುದು ಮತ್ತು ಸಂಕೀರ್ಣವಾದ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು" ಎಂದು ಹೇಳಿದ್ದಾರೆ.

ಕಳೆದ ತಿಂಗಳು, Google ತನ್ನ ಜೆಮಿನಿ ಅಪ್ಲಿಕೇಶನ್‌ಗೆ ನವೀಕರಣವನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ವಿಶ್ಲೇಷಣೆಗಾಗಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಅನುಮತಿಸುತ್ತದೆ. ಇದು ಸಂಕೀರ್ಣವಾದ, ಬಹು-ಹಂತದ ಪ್ರಶ್ನೆಗಳನ್ನು ಸರಾಗವಾಗಿ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ, ಇದರಿಂದ ಬಹು ಗೂಗಲ್ ಸರ್ಚ್ ಅಗತ್ಯವನ್ನು ನಿವಾರಣೆಯಾಗಿದೆ. ಉದಾಹರಣೆಗೆ, "ಬಿಸಿಲಿನ ಸಮಯದಲ್ಲಿ ನನ್ನ ಮಕ್ಕಳನ್ನು ಒಳಾಂಗಣದಲ್ಲಿ ಹೇಗೆ ಸಕ್ರಿಯವಾಗಿ ಇರಿಸಬಹುದು?" ಎಂದು ಕೇಳಬಹುದು.

ಹೀಗೆ ಕೇಳಿದಾಗ, AI ಮೋಡ್ ಎಲ್ಲಾ ವಿವರಗಳನ್ನು ಒಮ್ಮೆಗೇ ಪರಿಗಣಿಸುತ್ತದೆ ಮತ್ತು ನೀವು ಉಲ್ಲೇಖಿಸಿದ ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡು ನಿಮಗೆ ಸಹಾಯಕವಾದ, ವೈಯಕ್ತಿಕಗೊಳಿಸಿದ ಪ್ರತಿಕ್ರಿಯೆಯನ್ನು ನೀಡುತ್ತದೆ. iOS ಮತ್ತು Android ಸಾಧನಗಳ ಬಳಕೆದಾರರು ಈಗಾಗಲೇ ಈ ಕಾರ್ಯಕ್ಕೆ ಪ್ರವೇಶ ಹೊಂದಿದ್ದಾರೆ. AI ಹುಡುಕಾಟ ಅನುಭವವು ನಿಮ್ಮ ಕುತೂಹಲವನ್ನು ಅನ್ವೇಷಿಸಲು ಮತ್ತು ನಿಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ನೀವು ಹೇಗೆ ಬಹಸುತ್ತೀರಾ ಎಂಬುದನ್ನು ಈ ಕೆಳಗೆ ಕಾಮೆಂಟ್ ಮೂಲಕ ತಿಳಿಸಿ.

Best Mobiles in India

English summary
Google introduces AI Search Mode in India, allowing users to ask any question without the need to sign up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+