Home
ಸುದ್ದಿಜಾಲ

Google Map New Features : ಗೂಗಲ್‌ ಮ್ಯಾಪ್‌ ಬಳಸುವ ಮುನ್ನ ಈ ಹೊಸ ಫೀಚರ್ಸ್‌ಗಳ ಬಗ್ಗೆ ಗಮನಿಸಿ!

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಲೈವ್‌ ಫ್ರಮ್‌ ಪ್ಯಾರಿಸ್‌ ಈವೆಂಟ್‌ ನಡೆಸುತ್ತಿದೆ. ಈ ಈವೆಂಟ್‌ನಲ್ಲಿ ಗೂಗಲ್‌ ಹಲವು ಜನಪ್ರಿಯ ಫೀಚರ್ಸ್‌ಗಳನ್ನು ಘೋಷಣೆ ಮಾಡಿದೆ. ಈ ಫೀಚರ್ಸ್‌ಗಳು ಗೂಗಲ್‌ನ ಸೇವೆಗಳಲ್ಲಿ ಲಭ್ಯವಾಗಲಿವೆ. ಅದರಂತೆ ಗೂಗಲ್‌ ತನ್ನ ಗೂಗಲ್‌ ಮ್ಯಾಪ್‌ ಸೇವೆಯಲ್ಲಿಯೂ ಸಹ ಹೊಸ ಅಪ್ಡೇಟ್‌ ಅನ್ನು ಘೋಷಿಸಿದೆ. ಇದರಲ್ಲಿ ಒಟ್ಟು ಏಳು ಹೊಸ ಫೀಚರ್ಸ್‌ಗಳನ್ನು ಗೂಗಲ್‌ ಮ್ಯಾಪ್‌ನಲ್ಲಿ ಪರಿಚಯಿಸುವುದಾಗಿ ಹೇಳಿದೆ. ಈ ಮೂಲಕ ಗೂಗಲ್‌ ಮ್ಯಾಪ್‌ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.

ಗೂಗಲ್‌ ಮ್ಯಾಪ್‌ ಬಳಸುವ ಮುನ್ನ ಈ ಹೊಸ ಫೀಚರ್ಸ್‌ಗಳ ಬಗ್ಗೆ ಗಮನಿಸಿ!

ಹೌದು, ಗೂಗಲ್‌ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿದೆ. ಇದರಲ್ಲಿ ಕೆಲವು ಫೀಚರ್ಸ್‌ಗಳು ಈಗಾಗಲೇ ಲಭ್ಯವಿರುವ ಫೀಚರ್ಸ್‌ಗಳ ಮುಂದುವರೆದ ಭಾಗವಾದರೆ, ಇನ್ನು ಕೆಲವು ಫೀಚರ್ಸ್‌ಗಳು ಹೊಸದಾಗಿ ಎಂಟ್ರಿ ನೀಡುತ್ತಿವೆ. ಇದರಿಂದ ಗೂಗಲ್‌ ಮ್ಯಾಪ್‌ ಬಳಸುವವರಿಗೆ ಇನ್ನಷ್ಟು ಉಪಯೋಗವಾಗಲಿದೆ ಎಂದು ಗೂಗಲ್‌ ಹೇಳಿಕೊಂಡಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ ಸೇರಲಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗ್ಲಾನ್ಸ್ ಮಾಡಬಹುದಾದ ಡೈರೆಕ್ಷನ್ಸ್‌ (Glanceable Directions)

ಗೂಗಲ್ ಮ್ಯಾಪ್‌ನಲ್ಲಿ ಹೊಸದಾಗಿ ಗ್ಲಾನ್ಸ್ ಮಾಡಬಹುದಾದ ಡೈರೆಕ್ಷನ್‌ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಲು ಸಿದ್ಧತೆ ನಡೆದಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಲಾಕ್‌ಸ್ಕ್ರೀನ್‌ ಮೂಲಕವೇ ತಮ್ಮ ಪ್ರಯಾಣವನ್ನು ಟ್ರ್ಯಾಕ್‌ ಮಾಡಲು ಅವಕಾಶ ನೀಡಲಿದೆ. ಅಂದರೆ ನಿಮ್ಮ ಮೊಬೈಲ್‌ ಫೋನ್‌ ಸ್ಕ್ರೀನ್‌ ಲಾಕ್‌ ಆಗಿರುವಾಗಲೂ ETA ಗಳನ್ನು ನೋಡಲು ಸಾಧ್ಯವಾಗಲಿದೆ. ಅಅಲ್ಲದೆ ನಿಮ್ಮ ಫೋನ್‌ ಅನ್ನು ಅನ್‌ಲಾಕ್‌ ಮಾಡಿದ ನಂತರ ಅಪ್ಲಿಕೇಶನ್ ತೆರೆಯುವ ಮೂಲಕ ಮತ್ತು ಸಮಗ್ರ ನ್ಯಾವಿಗೇಷನ್ ಮೋಡ್ ಅನ್ನು ಬಳಸಬಹುದಾಗಿದೆ. ಒಂದು ವೇಳೆ ನೀವು ಮತ್ತೊಂದು ಮಾರ್ಗವನ್ನು ತೆಗೆದುಕೊಳ್ಲಲು ಹೋದರೆ ಆಟೋಮ್ಯಾಟಿಕ್‌ ಟ್ರಿಪ್‌ ಅನ್ನು ಇದು ಅಪ್ಡೇಟ್‌ ಮಾಡಲಿದೆ.

ಗೂಗಲ್‌ ಮ್ಯಾಪ್‌ ಬಳಸುವ ಮುನ್ನ ಈ ಹೊಸ ಫೀಚರ್ಸ್‌ಗಳ ಬಗ್ಗೆ ಗಮನಿಸಿ!

ಇಮ್ಮೆರ್ಸಿವ್‌ ವ್ಯೂ (Immersive View)

ಇಮ್ಮೆರ್ಸಿವ್‌ ವ್ಯೂ ಫೀಚರ್ಸ್‌ ಅನ್ನು ಗೂಗಲ್‌ ತನ್ನ I/O 2022 ಈವೆಂಟ್‌ನಲ್ಲಿ ಘೋಷಣೆ ಮಾಡಿತ್ತು. ಇದೀಗ ಈ ಫೀಚರ್ಸ್‌ ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಟೋಕಿಯೊದಲ್ಲಿನ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಇಮ್ಮರ್ಸಿವ್ ವ್ಯೂ ಫೀಚರ್ಸ್‌ ಮೂಲಕ ನೀವು ವೆದರ್‌ ರಿಪೋರ್ಟ್‌, ಟ್ರಾಫಿಕ್ ಮತ್ತು ಬ್ಯುಸಿನೆಸ್ ಲೇಯರ್ಡ್ ಬಗ್ಗೆ ಮಾಹಿತಿಯನ್ನು ತಿಳಿಯಬಹುದು.

ಲೈವ್ ವ್ಯೂ (Live View)

ಇನ್ನು ಗೂಗಲ್ ತನ್ನ ಲೈವ್ ವ್ಯೂ ಫೀಚರ್ಸ್‌ ಅನ್ನು ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಪ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಟೋಕಿಯೋದಲ್ಲಿ ಪರಿಚಯಿಸಿದೆ. ಅಲ್ಲದೆ ಮುಂದಿನ ತಿಂಗಳುಗಳಲ್ಲಿ, ಬಾರ್ಸಿಲೋನಾ, ಡಬ್ಲಿನ್ ಮತ್ತು ಮ್ಯಾಡ್ರಿಡ್‌ಗೆ ಈ ಫೀಚರ್ಸ್‌ ಅನ್ನು ವಿಸ್ತರಿಸುವುದಾಗಿ ಘೋಷಣೆ ಮಾಡಿದೆ.

ಗೂಗಲ್‌ ಮ್ಯಾಪ್‌ ಬಳಸುವ ಮುನ್ನ ಈ ಹೊಸ ಫೀಚರ್ಸ್‌ಗಳ ಬಗ್ಗೆ ಗಮನಿಸಿ!

ಇನ್‌ಡೋರ್‌ ಲೈವ್ ವ್ಯೂ (Indoor Live View)

ಇನ್ನು ಇದೇ ಸಂದರ್ಭದಲ್ಲಿ ಗೂಗಲ್‌ ತನ್ನ ಇನ್‌ಡೋರ್‌ ಲೈವ್‌ ವ್ಯೂ ಫೀಚರ್ಸ್‌ ಅನ್ನು ಬಾರ್ಸಿಲೋನಾ, ಬರ್ಲಿನ್, ಫ್ರಾಂಕ್‌ಫರ್ಟ್, ಲಂಡನ್, ಮ್ಯಾಡ್ರಿಡ್, ಮೆಲ್ಬೋರ್ನ್, ಪ್ಯಾರಿಸ್, ಪ್ರೇಗ್, ಸಾವೊ ಪಾಲೊ, ಸಿಂಗಾಪುರ್, ಸಿಡ್ನಿ ಮತ್ತು ತೈಪೆಯಲ್ಲಿ 1,000 ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾಲ್‌ಗಳಲ್ಲಿ ಜಾರಿಗೆ ತರುವುದಾಗಿ ಘೋಷಣೆ ಮಾಡಿದೆ.

ಶಾರ್ಟ್‌ ಟ್ರಪ್ಸ್‌ಗಳಿಗೆ ಚಾರ್ಜಿಂಗ್ ಸ್ಟಾಪ್‌ಗಳ ಸೇರ್ಪಡೆ ( Adding charging stops to shorter trips)

ಗೂಗಲ್‌ EV-ಕೇಂದ್ರಿತ ಫೀಚರ್ಸ್‌ಗಳನ್ನು ಕೂಡ ಗೂಗಲ್‌ ಮ್ಯಾಪ್‌ನಲ್ಲಿ ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿದೆ. ಇದರಿಂದ ನೀವು ಪ್ರಯಾಣ ಮಾಡುವಾಗ ನಿಮ್ಮ ಇವಿ ವೆಹಿಕಲ್‌ಗಳ ಚಾರ್ಜ್‌ ಲೆವೆಲ್‌ ಆಧಾರದ ಮೇಲೆ ಚಾರ್ಜಿಂಗ್‌ ಸ್ಟಾಪ್‌ಗಳ ಮಾಹಿತಿಯನ್ನು ತಿಳಿಸುವ ಕೆಲಸ ಮಾಡಲಿದೆ. ಒಂದು ವೇಳೆ ನಿಮಗೆ ಹತ್ತಿರ ವಿರುವ ಚಾರ್ಜಿಂಗ್‌ ಸ್ಟಾಪ್‌ ಇಷ್ಟವಾಗದಿದ್ದರೆ, ಕೆಲವೇ ಟ್ಯಾಪ್‌ಗಳ ಮೂಲಕ ಅದನ್ನು ಇನ್ನೊಂದಕ್ಕೆ ಸುಲಭವಾಗಿ ಬದಲಾಯಿಸಬಹುದು.

ಗೂಗಲ್‌ ಮ್ಯಾಪ್‌ ಬಳಸುವ ಮುನ್ನ ಈ ಹೊಸ ಫೀಚರ್ಸ್‌ಗಳ ಬಗ್ಗೆ ಗಮನಿಸಿ!

ಅತ್ಯಂತ ವೇಗದ ಚಾರ್ಜಿಂಗ್ ಕೇಂದ್ರಗಳು (Very fast charging stations)

ಗೂಗಲ್ ಮ್ಯಾಪ್ಸ್ ಬಿಲ್ಟ್-ಇನ್‌ನೊಂದಿಗೆ ಬರುವ ಇವಿಗಳಲ್ಲಿ 'ಅತ್ಯಂತ ವೇಗದ' ಚಾರ್ಜಿಂಗ್ ಫಿಲ್ಟರ್ ಅನ್ನು ಪರಿಚಯಿಸುವುದಾಗಿ ಗೂಗಲ್‌ ಘೋಷಣೆ ಮಾಡಿದೆ. ಇದು 150 ಕಿಲೋವ್ಯಾಟ್ ಅಥವಾ ಹೆಚ್ಚಿನ ಚಾರ್ಜರ್‌ಗಳನ್ನು ಹೊಂದಿರುವ ನಿಲ್ದಾಣಗಳನ್ನು ಸರ್ಚ್‌ ಮಾಡಲು ಬಳಕೆದಾರರಿಗೆ ಅನುಮತಿಸಲಿದೆ.

Best Mobiles in India

English summary
While some of these features expand the availability of the company’s existing features, others introduce brand new functionality within the app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+