Home
ಸುದ್ದಿಜಾಲ

ChatGPTಗೆ ಸೆಡ್ಡು ಹೊಡೆಯಲು ಬರ್ತಿದೆ ಗೂಗಲ್‌ನ ಹೊಸ ಟೂಲ್‌!

ಟೆಕ್‌ ವಲಯದಲ್ಲಿ ಬಿರುಗಾಳಿ ಎಬ್ಬಿಸಿರುವ ChatGPTಗೆ ಇದೀಗ ಗೂಗಲ್‌ ಸೆಡ್ಡು ಹೊಡೆಯಲು ಮುಂದಾಗಿದೆ. ಭವಿಷ್ಯದಲ್ಲಿ ತೀವ್ರ ಪೈಪೋಟಿ ಎದುರಾಗಲಿದೆ ಅನ್ನೊದನ್ನ ಗುರುತಿಸಿರುವ ಗೂಗಲ್‌ ಪ್ರಾರಂಭದಲ್ಲಿಯೇ ChatGPTಯನ್ನು ಕಟ್ಟಿಹಾಕಲು ಮುಂದಾಗಿದೆ. ಇದಕ್ಕಾಗಿ ChatGPTಗೆ ಪ್ರತಿಸ್ಫರ್ಧಿಯಾಗಿ ಗೂಗಲ್‌ ಬಾರ್ಡ್‌ AI ಅನ್ನು ಅನಾವರಣಗೊಳಿಸಿದೆ. ಗೂಗಲ್‌ ಬಾರ್ಡ್‌ AI ಚಾಲಿತ ಚಾಟ್‌ಬಾಟ್‌ ಆಗಿದ್ದು, ಚಾಟ್‌ಜಿಪಿಟಿ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.

ChatGPTಗೆ ಸೆಡ್ಡು ಹೊಡೆಯಲು ಬರ್ತಿದೆ ಗೂಗಲ್‌ನ ಹೊಸ ಟೂಲ್‌!

ಹೌದು, ಗೂಗಲ್‌ ChatGPTಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಹೊಸ ಗೂಗಲ್‌ ಬಾರ್ಡ್ ಅನ್ನು ಪರಿಚಯಿಸಿದೆ. ಇದು ಗೂಗಲ್‌ನ ಸ್ವಂತ ಭಾಷೆಯ ಮಾದರಿಯಾದ ಲ್ಯಾಮ್‌ಡಿಎ ಅನ್ನು ಕಂಟ್ರೋಲ್‌ ಮಾಡಲಿದೆ. ಅಂದರೆ ChatGPT ಮಾದರಿಯಲ್ಲಿಯೇ ಸಂಬಾಷಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದು, ನೀವು ಕೇಳುವ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾದ್ರೆ ಗೂಗಲ್‌ನ ಹೊಸ ಬಾರ್ಡ್‌ ಹೇಗೆ ಕಾರ್ಯನಿರ್ವಹಿಸಲಿದೆ? ಇದರ ಕಾರ್ಯವೈಖರಿ ಹೇಗಿರಲಿದೆ? ಇದು ChatGPTಗಿಂತ ಹೇಗೆ ಭಿನ್ನವಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏನಿದು ಗೂಗಲ್ ಬಾರ್ಡ್ ?

ಗೂಗಲ್‌ ಬಾರ್ಡ್‌ ಅನ್ನೊದು AI-ಚಾಲಿತ ಚಾಟ್‌ಬಾಟ್ ಆಗಿದೆ. ಇದು ChatGPTಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ. ChatGPT ಮಾದರಿಯಲ್ಲಿಯೇ ಗೂಗಲ್‌ ಬಾರ್ಡ್‌ ಕೂಡ ಸಂಭಾಷಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದು, ನೀವು ಕೇಳುವ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಿದೆ ಎಂದು ವರದಿಯಾಗಿದೆ. ಇದಲ್ಲದೆ ತಾನು ನೀಡುವ ಉತ್ತರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗೂಗಲ್‌ ಬಾರ್ಡ್‌ ವೆಬ್‌ನಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಎಂದು ಗೂಗಲ್‌ ಹೇಳಿದೆ.

ChatGPTಗೆ ಸೆಡ್ಡು ಹೊಡೆಯಲು ಬರ್ತಿದೆ ಗೂಗಲ್‌ನ ಹೊಸ ಟೂಲ್‌!

ಇನ್ನು ಗೂಗಲ್‌ ಬಾರ್ಟ್‌ ಚಾಟ್‌ಬಾರ್ಟ್‌ LaMDA ಮೂಲಕ ಕಾರ್ಯನಿರ್ವಹಿಸಲಿದೆ. LaMDA ಅನ್ನೋದು ಗೂಗಲ್‌ನ ಲ್ಯಾಗ್ವೇಜ್‌ ಮಾಡೆಲ್‌ ಆಗಿದೆ. ಇದನ್ನು ನ್ಯೂರಲ್ ನೆಟ್‌ವರ್ಕ್ ಆರ್ಕಿಟೆಕ್ಚರ್‌ನಲ್ಲಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಬಿಲ್ಟ್‌ ಮಾಡಲಾಗಿದೆ. ChatGPT ಕೂಡ GPT-3 ಲ್ಯಾಂಗ್ವೇಜ್‌ ಮಾಡೆಲ್‌ ಅನ್ನು ಹೊಂದಿದ್ದು, ಇದನ್ನು ಕೂಡ ಟ್ರಾನ್ಸ್‌ಫಾರ್ಮರ್‌ನಲ್ಲಿಯೇ ಬಿಲ್ಟ್‌ ಮಾಡಲಾಗಿದೆ ಅನ್ನೊದು ವಿಶೇಷವಾಗಿದೆ. ಇದೇ ಕಾರಣಕ್ಕೆ ChatGPTಗೆ ಗೂಗಲ್‌ ಬಾರ್ಡ್‌ ಪ್ರಬಲ ಪ್ರತಿಸ್ಪರ್ಧಿಯಾಗಿರಲಿದೆ ಎನ್ನಲಾಗಿದೆ.

ಗೂಗಲ್‌ ಬಾರ್ಡ್‌ ಅನ್ನು ಬಳಸುವುದು ಹೇಗೆ?

ಗೂಗಲ್‌ ಪರಿಚಯಿಸಿರುವ ಗೂಗಲ್‌ ಬಾರ್ಡ್‌ ಪ್ರಸ್ತುತ ಎಲ್ಲರಿಗೂ ಕೂಡ ಲಭ್ಯವಾಗುತ್ತಿಲ್ಲ. ಇದು ಪ್ರಸ್ತುತ ಕೆಲವು ಆಯ್ದ ಬಳಕೆದಾರರಿಗೆ ಪರೀಕ್ಷಾರ್ಥವಾಗಿ ಲಭ್ಯವಿದೆ. ಬಾರ್ಡ್ ನ ಗುಣಮಟ್ಟದಲ್ಲಿ ಇನ್ನು ಏನಾದರೂ ಬದಲಾವಣೆ ತರಬೇಕಾ ಎನ್ನುವ ದೃಷ್ಟಿಯಲ್ಲಿ ಗೂಗಲ್‌ ಇದನ್ನು ಸಾರ್ವಜನಿಕರಿಗೆ ಇನ್ನು ಕೂಡ ಪರಿಚಯಿಸಿಲ್ಲ ಎನ್ನಲಾಗಿದೆ. ನೈಜ-ಪ್ರಪಂಚದ ಮಾಹಿತಿಯಲ್ಲಿ ಗುಣಮಟ್ಟ, ಸುರಕ್ಷತೆಗಾಗಿ ಬಾರ್ಡ್‌ ಉಪಯೋಗಕ್ಕೆ ಬರಲಿದೆ ಅನ್ನೊದನ್ನ ಗೂಗಲ್‌ ಹೇಳಿದೆ.

ChatGPTಗೆ ಸೆಡ್ಡು ಹೊಡೆಯಲು ಬರ್ತಿದೆ ಗೂಗಲ್‌ನ ಹೊಸ ಟೂಲ್‌!

ಗೂಗಲ್‌ಗೆ ಈ ಚಾಟ್‌ಬಾಟ್‌ ಯಾಕೆ ನಿರ್ಣಾಯಕವಾಗಿದೆ?

ಪ್ರಸ್ತುತ ಚಾಟ್‌ಜಿಪಿಟಿ ತನ್ನ ನಿಖರ ಸಂಭಾಷಣೆ ಹಾಗೂ ಉತ್ತರಗಳ ಮೂಲಕ ಎಲ್ಲರ ಗಮನಸೆಳೆಯುತ್ತಿದೆ. ಇದೇ ಸಮಯದಲ್ಲಿ ಗೂಗಲ್‌ ಬಾರ್ಡ್‌ ಅನಾವರಣಗೊಂಡಿದೆ. ಇದನ್ನು LaMDA ಮೂಲಕ ನಡೆಸುವುದರಿಂದ ಇದು ಎಷ್ಟು ನಿಖರವಾಗಿ ಉತ್ತರ ನೀಡಲಾಗಿದೆ ಅನ್ನೊದು ತಿಳಿದುಬರಬೇಕುದೆ. ಏಕೆಂದರೆ ಚಾಟ್‌ಜಿಪಿಟಿ ಕೂಡ ಕೆಲವೊಮ್ಮೆ ತಪ್ಪು ಉತ್ತರಗಳನ್ನು ನೀಡಿದೆ. ಆದರೆ ಚಾಟ್‌ಜಿಪಿಟಿ ಡೆವಲಪರ್‌ಗಳನ್ನು ಅದನ್ನು ಇನ್ನಷ್ಟು ಸುಧಾರಿಸುವ ಕೆಲಸವನ್ನು ನಡೆಸುತ್ತಿದ್ದಾರೆ. ಆದರೆ LaMDA ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೊದು ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ ಈ ಹಿಂದೆ LaMDA ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದ್ದು, ಇದನ್ನು ಸಂವೇದನಾ ಶೀಲ ಎಂದು ಸಹ ಹೇಳಲಾಗಿತ್ತು.

ಏನಿದು ChatGPT? ಇದರ ಕಾರ್ಯನಿರ್ವಹಣೆ ಹೇಗೆ?

ChatGPT ಅನ್ನೊದು ಒಂದು ರೀತಿಯ AI ಚಾಟ್‌ಬಾಟ್ ಆಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಒಪನ್‌AI (OpenAI) ಸಂಸ್ಥೆ ಪರಿಚಯಿಸಿದೆ. ಇದು ಮನುಷ್ಯನ ಅಲೋಚನೆಗೆ ಸರಿಸಮನಾಗಿ ಯೋಚನೆ ಮಾಡಲಿದೆ ಎಂದು ಹೇಳಲಾಗ್ತಿದೆ. ಇದಕ್ಕೆ ನೀವು ಪ್ರಶ್ನೆಗಳನ್ನು ಕೇಳಿದರೆ ತಾನೇ ಯೋಚಿಸಿ ಉತ್ತರವನ್ನು ನೀಡಲಿದೆ. ಇದಕ್ಕಾಗಿ ಡೇಟಾ ಸೆಟ್‌ಗಳ ಮೂಲಕ ತರಬೇತಿಯನ್ನು ಕೂಡ ನೀಡಲಾಗಿದೆ ಎಂದು ವರದಿಯಾಗಿದೆ.

ChatGPTಗೆ ಸೆಡ್ಡು ಹೊಡೆಯಲು ಬರ್ತಿದೆ ಗೂಗಲ್‌ನ ಹೊಸ ಟೂಲ್‌!

ChatGPTಯ ಕಾರ್ಯನಿರ್ವಹಣೆಯಿಂದ ಏನೆಲ್ಲಾ ಲಾಭ?

ChatGPT AI ಆಧಾರಿತ ತಂತ್ರಜ್ಞಾನವಾಗಿದ್ದು, ನೀವು ಕೇಳಿದ ಪ್ರಶ್ನೆಗಳಿಗೆ ತನ್ನದೇ ಅದ ಆಲೋಚನೆಯ ಉತ್ತರಗಳನ್ನು ನೀಡಲಿದೆ. ಅಲ್ಲದೆ ಇದು ನೀಡುವ ಉತ್ತರಗಳು ಸಾಕಷ್ಟು ನಿಖರವಾಗಿವೆ ಎಂದು ಹೇಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಇದು ಉಪಯೋಗಕ್ಕೆ ಬರಲಿದೆ. ಅಲ್ಲದೆ ಗೂಗಲ್‌ಗೆ ಪ್ರತಿಸ್ಫರ್ಧಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಕೂಡ ಇದೆ.

Best Mobiles in India

English summary
Bard will distill the information available on the web instead of simply suggesting articles like how it is on the Google search engine.know more details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+