Home
ಸುದ್ದಿಜಾಲ

Google: ಆಂಡ್ರಾಯ್ಡ್‌ ಫೋನ್‌ ಬಳಕೆದಾರರೇ ಇಲ್ಲಿ ಗಮನಿಸಿ! ಗೂಗಲ್‌ನಿಂದ ಹೊಸ ಅಪ್ಡೇಟ್‌ ಪ್ರಕಟ!

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹೊಸ ಅಪ್ಡೇಟ್‌ ಮೂಲಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲು ಮುಂದಾಗಿದೆ. ಈ ಫೀಚರ್ಸ್‌ಗಳು ನಿಮ್ಮ ಡೇಟಾ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಗೂಗಲ್‌ ಹೇಳಿದೆ.

ಹೌದು, ಗೂಗಲ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಅನಾವರಣಗೊಳಿಸಿದೆ. ಇವುಗಳು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು WearOS ಸ್ಮಾರ್ಟ್‌ವಾಚ್‌ಗಳಲ್ಲಿ ಲಭ್ಯವಾಗಲಿವೆ. ಈ ಫೀಚರ್ಸ್‌ಗಳು ಹಲವು ರೀತಿಯ ಉಪಯೋಗಗಳನ್ನು ಹೊಂದಿದ್ದು, ಹೊಸ ಅನುಭವ ನೀಡಲಿವೆ. ಹಾಗಾದ್ರೆ ಗೂಗಲ್‌ನ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ ಫೋನ್‌ ಬಳಕೆದಾರರೇ ಇಲ್ಲಿ ಗಮನಿಸಿ!ಗೂಗಲ್‌ನಿಂದ ಹೊಸ ಅಪ್ಡೇಟ್‌ ಪ್ರಕಟ

ಓದುವ ಅಭ್ಯಾಸ (Reading practice)
ಹೆಸರೇ ಸೂಚಿಸುವಂತೆ ಈ ಫೀಚರ್ಸ್‌ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಲಭ್ಯವಾಗಲಿದೆ. ಇದರ ಮೂಲಕ ಓದುಗರು ತಮ್ಮ ಶಬ್ದಕೋಶ ಮತ್ತು ಗ್ರಹಿಕೆ ಕೌಶಲ್ಯಗಳನ್ನು ಸುಧಾರಿಸಲು ಸಾಧ್ಯವಾಗಲಿದೆ. ಅಂದರೆ ನಿಮಗೆ ಉಚ್ಚಾರಣೆ ಮಾಡಲು ಕಷ್ಟವಾಗುವ ಪದಗಳನ್ನು ಅಭ್ಯಾಸ ಮಾಡಲು ಈ ಫೀಚರ್ಸ್‌ ಅನುವು ಮಾಡಿಕೊಡಲಿದೆ. ಪ್ರಸ್ತುತ ಫೀಚರ್ಸ್‌ ಗೂಗಲ್‌ ಪ್ಲೇ ಬುಕ್ಸ್‌ಗಳಲ್ಲಿ ಲಭ್ಯವಾಗಲಿದೆ.

ಹೊಸ ವಿಜೆಟ್‌ಗಳು (New widgets)
ಹೊಸ ಅಪ್ಡೇಟ್‌ ಮೂಲಕ ಗೂಗಲ್‌ ಮೂರು ಹೊಸ ಆಂಡ್ರಾಯ್ಡ್ ವಿಜೆಟ್‌ಗಳನ್ನು ಘೋಷಿಸಿದೆ. ಇದರಿಂದ ಬಳಕೆದಾರರು ಇದೀಗ ತಮ್ಮ ಹೋಮ್ ಸ್ಕ್ರೀನ್ ಅನ್ನು ಹೊಸ ಶಾರ್ಟ್‌ಕಟ್‌ಗಳೊಂದಿಗೆ Google TVಯೊಂದಿಗೆ ಚಲನಚಿತ್ರ ಸಲಹೆಗಳನ್ನು ಕಸ್ಟಮೈಸ್ ಮಾಡಬಹುದು. ಅಲ್ಲದೆ ಗೂಗಲ್‌ ಫೈನಾನ್ಸ್‌ನೊಂದಿಗೆ ಆಯ್ಕೆಮಾಡಿದ ಸ್ಟಾಕ್‌ಗಳನ್ನು ಟ್ರ್ಯಾಕ್ ಮಾಡಬಹುದು. ಜೊತೆಗೆ ಗೂಗಲ್‌ ನ್ಯೂಸ್‌ ಮೂಲಕ ಡೈಲಿ ಅಪ್ಡೇಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ರೀಮಿಕ್ಸ್ ಸ್ಟಿಕ್ಕರ್ ( Remix sticker)
ಗೂಗಲ್‌ ಪರಿಚಯಿಸಿರುವ ಮತ್ತೊಂದು ಹೊಸ ಆಯ್ಕೆ ಎಂದರೆ ರೀಮಿಕ್ಸ್‌ ಸ್ಟಿಕ್ಕರ್‌ ಆಗಿದೆ. ಇದರಿಂದ ಬಳಕೆದಾರರು ತಮ್ಮ ಎಮೋಜಿಗಳನ್ನು ಸಿಕ್ಕರ್‌ಗಳಾಗಿ ರೀಮಿಕ್ಸ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ರೀಮಿಕ್ಸ್‌ ಸ್ಟಿಕ್ಕರ್‌ಗಳನ್ನು Gboard ಮೂಲಕ ಸಂದೇಶಗಳಾಗಿ ಕಳುಹಿಸಲು ಅನುಮತಿಸುತ್ತದೆ.

ಆಂಡ್ರಾಯ್ಡ್‌ ಫೋನ್‌ ಬಳಕೆದಾರರೇ ಇಲ್ಲಿ ಗಮನಿಸಿ!ಗೂಗಲ್‌ನಿಂದ ಹೊಸ ಅಪ್ಡೇಟ್‌ ಪ್ರಕಟ

ಡಾರ್ಕ್ ವೆಬ್ ರಿಪೋರ್ಟ್‌ (Dark web report)
ಗೂಗಲ್‌ನ ಡಾರ್ಕ್ ವೆಬ್ ಸ್ಕ್ಯಾನಿಂಗ್ ಫೀಚರ್ಸ್‌ ಇದೀಗ ಯುಎಸ್‌ನಲ್ಲಿ ಲಭ್ಯವಿದೆ. ಇದು ಬಳಕೆದಾರರಿಗೆ US ನಲ್ಲಿನ ಹೆಚ್ಚಿನ Google ಖಾತೆಗಳಿಗೆ ಈಗ ಲಭ್ಯವಿದೆ. ಇದು ಬಳಕೆದಾರರಿಗೆ ತಮ್ಮ Gmail ವಿಳಾಸವನ್ನು ಡಾರ್ಕ್ ವೆಬ್‌ಗೆ ಒಡ್ಡಲಾಗಿದೆಯೇ ಎಂದು ಪರಿಶೀಲಿಸಲು ಅನುಮತಿಸುತ್ತದೆ. ಅಂದರೆ ನಿಮ್ಮ ಡೇಟಾ ಮಾಹಿತಿ ಡಾರ್ಕ್‌ ವೆಬ್‌ನಲ್ಲಿ ಇದೆಯಾ ಅನ್ನೊದನ್ನ ಪತ್ಯತೆ ಹಚ್ಚಲು ಸಹಕಾರಿಯಾಗಿದೆ.

ಸ್ಪಾಟಿಫೈ ಟೈಲ್ (Spotify tile)
ಗೂಗಲ್‌ನ ಸ್ಪಾಟಿಫೈ ಟೈಲ್ ಫೀಚರ್ಸ್‌ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಸೂಕ್ತವಾಗಿದೆ. ಇದು ಸ್ಮಾರ್ಟ್‌ವಾಚ್‌ಗಳನ್ನು ಹೊಂದಿರುವ Spotify ಬಳಕೆದಾರರು ತಮ್ಮ ನೆಚ್ಚಿನ ಪಾಡ್‌ಕಾಸ್ಟ್‌ಗಳಿಂದ ಮ್ಯೂಸಿಕ್‌ ರೇಂಜ್‌ ಅನ್ನು ಪಡೆಯಲು ಸಾದ್ಯವಾಗಲಿದೆ.

ಟ್ರಾನ್ಸಿಟ್‌ ಕಾರ್ಡ್ (Transit card)
WearOS ಗಾಗಿ ಗೂಗಲ್‌ ವಾಲೆಟ್‌ ಟ್ರಾನ್ಸಿಟ್‌ ಕಾರ್ಡ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇದು ಬಳಕೆದಾರರಿಗೆ ಟ್ಯಾಪ್ ಮಾಡಲು ಮತ್ತು ಟ್ರಾನ್ಸಫರ್‌ ಮಾಡಲು ಅನುಮತಿಸುತ್ತದೆ.

ನೋಟ್ ಟೈಲ್ (Note tile)
WearOs ಬಳಕೆದಾರರಿಗಾಗಿ ಗೂಗಲ್‌ ನೋಟ್ ಟೈಲ್ ಆಯ್ಕೆಯನ್ನು ನೀಡಿದೆ. ಇದರಿಂದ ಸ್ಮಾರ್ಟ್‌ವಾಚ್‌ನಲ್ಲಿ ಬಳಕೆದಾರರು ಏನಾದರೂ ನೋಟ್‌ ಮಾಡಬೇಕಾದರೆ ಒಂದೇ ಟೈನ್‌ ಅನ್ನು ಸೇರಿಸಬಹುದಾಗಿದೆ. ಅಲ್ಲದೆ ನೀವು ಪಿನ್‌ ಮಾಡಿದ ನೋಟ್‌ಗಳನ್ನು ಸರ್ಚ್‌ ಮಾಡಲು ಬಳಕೆದಾರರು ತಮ್ಮ ಟೈಲ್‌ಗಳ ಮೂಲಕ ಸ್ವೈಪ್ ಮಾಡಬಹುದು.

Best Mobiles in India

English summary
Google announced new features for Android smartphones and tablets
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+