Home
ಸುದ್ದಿಜಾಲ

2019 ರ ಲೋಕಸಭೆ ಚುಣಾವಣೆಗೆ ಹೊಸ ನೀತಿ ಪ್ರಕಟಿಸಿದ ಗೂಗಲ್

ಭಾರತದ ಲೋಕಸಭೆಯ ಎಲೆಕ್ಷನ್ ಹತ್ತಿರವಾಗುತ್ತಿದೆ. ರಾಜಕೀಯ ಕ್ಯಾಂಪೇನ್ ಗಳು ಆರಂಭವಾಗುವುದಕ್ಕೂ ಮುನ್ನ ಗೂಗಲ್ ಹೊಸ ಚುಣಾವಣಾ ನೀತಿಯನ್ನು ದೇಶದಲ್ಲಿ ಪ್ರಕಟಿಸಿದೆ. ಭಾರತದಲ್ಲಿ ಆನ್ ಲೈನ್ ನಲ್ಲಿ ಯಾರು ಚುಣಾವಣೆಯ ಜಾಹೀರಾತುಗಳನ್ನು ಖರೀದಿಸುತ್ತಾರೆ ಎಂಬ ಬಗ್ಗೆ ಮಾಹಿತಿಯನ್ನು ನೀಡಲಿದೆ.

ಚುನಾವಣಾ ಜಾಹೀರಾತು ನೀತಿ:

ಚುನಾವಣಾ ಜಾಹೀರಾತು ನೀತಿ:

ಗೂಗಲ್ ತಿಳಿಸಿರುವಂತೆ ತನ್ನ ನೂತನ ಚುಣಾವಣೆಯ ಜಾಹೀರಾತು ನೀತಿಯ ಅನುಸಾರ ರಾಜಕೀಯ ಜಾಹೀರಾತು ಕ್ಯಾಂಪೇನ್ ಮಾಡುವವರು ಚುಣಾವಣಾ ಆಯೋಗದಿಂದ ಹೊರಡಿಸಿರುವ ಪ್ರಿ-ಸರ್ಟಿಫಿಕೇಟ್ ನ್ನು ಒದಗಿಸಬೇಕಾಗುತ್ತದೆ ಅಥವಾ ಚುಣಾವಣಾ ಆಯೋಗದಿಂದ ಅಧಿಕೃತವಾಗಿರುವವರಿಂದ ಒದಗಿಸಬೇಕು.

ಭಾರತದ ಗೂಗಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ತಾವು ಪ್ರಕಟಿಸಲು ಇಚ್ಛಿಸುವ ಪ್ರತಿ ಜಾಹೀರಾತುಗೂ ಇದರ ಅಗತ್ಯವಿರುತ್ತದೆ.

ಮೌಂಟೇಲ್ ವ್ಯೂ ಸಂಸ್ಥೆಯಿಂದ ಪರಿಶೀಲನೆ:

ಮೌಂಟೇಲ್ ವ್ಯೂ ಸಂಸ್ಥೆಯಿಂದ ಪರಿಶೀಲನೆ:

ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆ ಮೌಂಟೇನ್ ವ್ಯೂ ಸಂಸ್ಥೆ ಗೂಗಲ್ ಫ್ಲಾಟ್ ಫಾರ್ಮ್ ನಲ್ಲಿ ಪ್ರಕಟಗೊಳ್ಳುವ ಪ್ರತಿ ವಯಕ್ತಿಕ ಜಾಹೀರಾತನ್ನೂ ಕೂಡ ಪ್ರಕಟಗೊಳ್ಳುವ ಮುನ್ನ ಪರೀಕ್ಷಿಸುತ್ತದೆ. ಎಲೆಕ್ಷನ್ನಿನ ಜಾಹೀರಾತುಗಳ ವೆರಿಫಿಕೇಷನ್ ಪ್ರೊಸೆಸ್ ಫೆಬ್ರವರಿ 14,2019 ರಿಂದ ಆರಂಭವಾಗುತ್ತದೆ ಎಂದು ಗೂಗಲ್ ತಿಳಿಸಿದೆ.

ಪಾರದರ್ಶಕತೆಗೆ ಒತ್ತು:

ಪಾರದರ್ಶಕತೆಗೆ ಒತ್ತು:

ಭಾರತದಲ್ಲಿ ರಾಜಕೀಯ ಜಾಹೀರಾತುಗಳಿಗಾಗಿ ಯಾರು ಎಷ್ಟು ಹಣವನ್ನು ಹಾಕುತ್ತಿದ್ದಾರೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಲು ಕಂಪೆನಿಯು ನೆರವು ನೀಡುತ್ತದೆ. ರಾಜಕೀಯ ಜಾಹೀರಾತುಗಳ ಪಾರದರ್ಶಕತೆ ವರದಿ ಮತ್ತು ಶೋಧಿಸುವ ರಾಜಕೀಯ ಜಾಹೀರಾತು ಗ್ರಂಥಾಲಯವನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಇದನ್ನು ನಿಗದಿಗೊಳಿಸಲಾಗುತ್ತದೆ.

ಚೇತನ್ ಕೃಷ್ಣಮೂರ್ತಿ ಹೇಳಿಕೆ:

ಚೇತನ್ ಕೃಷ್ಣಮೂರ್ತಿ ಹೇಳಿಕೆ:

ಇದು ಯಾರು ಎಷ್ಟು ಹಣವನ್ನು ಹೂಡಿಕೆ ಮಾಡಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದಾರೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡುವುದಕ್ಕೆ ಸಹಕಾರಿಯಾಗಿರುತ್ತದೆ ಎಂಬುದಾಗಿ ಗೂಗಲ್ ಇಂಡಿಯಾದ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ಆಗಿರುವ ಚೇತನ್ ಕೃಷ್ಣಮೂರ್ತಿ ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಯುಎಸ್ ಮಾದರಿ ಕಾರ್ಯಕ್ರಮ:

ಕಳೆದ ವರ್ಷ ಯುಎಸ್ ನಲ್ಲಿ ನಡೆದ ಮಧ್ಯಮ ಎಲೆಕ್ಷನ್ ನಲ್ಲಿ

ಪರಿಚಯಿಸಲಾಗಿರುವ ಮಾದರಿಯಲ್ಲೇ ಪೊಲಿಟಿಕಲ್ ಆಡ್ ಲೈಬ್ರರಿಯನ್ನು ಭಾರತದಲ್ಲಿ ಈ ಕಂಪೆನಿಯು ಪರಿಚಯಿಸಲಿದೆ ಎಂಬುದು ಗಮನಾರ್ಹ ಸಂಗತಿ.ಸಾಮಾನ್ಯ ಜನರಿಗೆ ಹಲವು ಫ್ಯಾಕ್ಟರ್ ಗಳ ಆಧಾರದಲ್ಲಿ ಈ ಜಾಹೀರಾತುಗಳನ್ನು ಗಮನಿಸುವುದಕ್ಕೆ ಸಾಧ್ಯವಾಗುತ್ತದೆ. ಉದಾಹರಣೆಗೆ ದಿನಾಂಕ, ಖರ್ಚು ಮಾಡಿರುವ ಹಣ, ಟೈಪ್( ಟೆಕ್ಸ್ಟ್, ವೀಡಿಯೋ, ಇಮೇಜ್), ಅನಿಸಿಕೆಗಳು ಇತ್ಯಾದಿ.

ಯಾರು ಪಾವತಿಸಿದರು?

ರಾಜಕೀಯ ಜಾಹೀರಾತಿನ ಮೇಲ್ಬಾಗದಲ್ಲಿ 'Paid for by' ಲೇಬಲ್ ನ್ನು ಕೂಡ ಗೂಗಲ್ ಹಾಕಿರುತ್ತದೆ. ಪಾರದರ್ಶಕ ವರದಿ ಮತ್ತು ಜಾಹೀರಾತು ಗ್ರಂಥಾಲಯದ ಜೊತೆಗೆ ಯಾರು ಈ ಜಾಹೀರಾತಿಗೆ ಪಾವತಿ ಮಾಡಿದ್ದಾರೆ ಎಂಬುದು ತಿಳಿಸಲಾಗುತ್ತದೆ. ಇದಕ್ಕಾಗಿ ಜಾಹೀರಾತುದಾರರು ಭಾರತದ ಎಲೆಕ್ಷನ್ ಆಡ್ ಪಾಲಿಸಿ ಗೆ ತೆರಳಿ ಹೆಚ್ಚಿನ ವಿವರಗಳನ್ನು ತಿಳಿಯಬಹುದು.

ಮಾರ್ಚ್ ನಿಂದ ಲೈವ್:

ಕೃಷ್ಣಮೂರ್ತಿ ಅವರ ಬ್ಲಾಗ್ ಪೋಸ್ಟ್ ನಲ್ಲಿ ಭಾರತದ ಪೊಲಿಟಿಕಲ್ ಆಡ್ ಟ್ರಾನ್ಸ್ಪರೆನ್ಸಿ ರಿಪೋರ್ಟ್ ಮತ್ತು ಆಡ್ ಲೈಬ್ರರಿ ಎರಡೂ ಕೂಡ ಮಾರ್ಚ್ 2019 ರಿಂದ ಲೈವ್ ಆಗಲಿದೆ ಎಂದು ತಿಳಿಸಿದ್ದಾರೆ.

Best Mobiles in India

English summary
Google announces new election ad policy in India ahead of Lok Sabha Elections 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+