Google: ಗೂಗಲ್ ಕ್ರೋಮ್‌ನಲ್ಲಿ ಪಾರ್ಸ್‌ವರ್ಡ್ ಸುರಕ್ಷತೆಗಾಗಿ ಬಂತು ಹೊಸ ಫೀಚರ್ಸ್!
ಇಂಟರ್‌ನೆಟ್ ಬ್ರೌಸ್ ಮಾಡುವವರಿಗೆ ತಕ್ಷಣ ನೆನಪಾಗುವುದೇ ಗೂಗಲ್ ಕ್ರೋಮ್. ಅಷ್ಟರ ಮಟ್ಟಿಗೆ ಗೂಗಲ್ ಕ್ರೋಮ್ ತನ್ನ ಜಾಲವನ್ನು ವ್ಯಾಪಿಸಿಕೊಂಡಿದೆ. ಇದೀಗ ಗೂಗಲ್ ತನ್ನ ಕ್ರೋಮ್ ಬ್ರೌಸರ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಸಾಕಷ್ಟು ಸುರಕ್ಷತೆ ಮತ್ತು ಪಾಸ್‌ವರ್ಡ್‌ಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲಿದೆ.
ಹೌದು, ಗೂಗಲ್ ಕ್ರೋಮ್ ಬಳಕೆದಾರರಿಗೆ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದು ಬಳಕೆದಾರರಿಗೆ ತಮ್ಮ ರಾಜಿಯಾದ ಪಾಸ್‌ವರ್ಡ್‌ಗಳ ಬಗ್ಗೆ ತಿಳಿಸುತ್ತದೆ ಎಂದು ಖಚಿತಪಡಿಸಲಿದೆ. ಇದರಿಂದ ಕ್ರೋಮ್ ಅನ್ನು ಇನ್ನಷ್ಟು ಸುಗಮವಾಗಿ ನಡೆಸಲು ಸುಧಾರಿತ ಕಾರ್ಯಕ್ಷಮತೆ ನೀಡಲಿದೆ. ಹಾಗಾದ್ರೆ ಗೂಗಲ್ ತನ್ನ ಕ್ರೋಮ್‌ನಲ್ಲಿ ಸೇರ್ಪಡೆ ಮಾಡಿರುವ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೈಯಕ್ತಿಕಗೊಳಿಸಿದ ಮತ್ತು ಪೂರ್ವಭಾವಿ ಸುರಕ್ಷತಾ ಪರಿಶೀಲನೆ
ಗೂಗಲ್ ತನ್ನ ಕ್ರೋಮ್ ಬ್ರೌಸರ್‌ನಲ್ಲಿ ಪಾಸ್‌ವರ್ಡ್ ಸುರಕ್ಷತೆಗಾಗಿ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಇದು ಎಂದಿಗಿಂತಲೂ ಹೆಚ್ಚು ವೈಯಕ್ತೀಕರಿಸಲಾಗಿದ್ದು, ಪೂರ್ವಭಾವಿಯಾಗಿದೆ ಎಂದು ಹೇಳಲಾಗಿದೆ. ಅಂದರೆ ಹೊಸದಾಗಿ ನವೀಕರಿಸಲಾದ ಸುರಕ್ಷತಾ ಪರಿಶೀಲನೆಯು ಈಗ ಆಟೋಮ್ಯಾಟಿಕ್ ಬ್ಯಾಕ್‌ಗ್ರೌಂಡ್ ವೆರಿಫಿಕೇಷನ್ ಮಾಡಲಿದೆ. ಇದರಿಂದ ನಿಮ್ಮ ಪಾಸ್‌ವರ್ಡ್ ಹಾಗೂ ಸುರಕ್ಷತೆಗೆ ಭದ್ರತಾ ಅಪಾಯ ಎದುರಾಗುವುದನ್ನು ಮುಂಚಿತವಾಗಿಯೇ ತಿಳಿಸಲಿದೆ. ಗೂಗಲ್ ಕ್ರೋಮ್ ನೀಡುವ ಆಲರ್ಟ್ ಸಂದೇಶಗಳು ಕ್ರೋಮ್‌ನಲ್ಲಿರುವ ಮೂರು-ಡಾಟ್ ಮೆನುವಿನಲ್ಲಿ ಗೋಚರಿಸುತ್ತವೆ.
ಇದಲ್ಲದೆ ಹೆಚ್ಚುವರಿಯಾಗಿ, ಸೈಟ್ ಅನುಮತಿಗಳನ್ನು ಹಿಂತೆಗೆದುಕೊಳ್ಳಲು ಸುರಕ್ಷತಾ ಪರಿಶೀಲನೆಯ ಸಾಮರ್ಥ್ಯವನ್ನು ಗೂಗಲ್ ಇನ್ನಷ್ಟು ವಿಸ್ತರಿಸಿದೆ. ಇದರಿಂದ ಬಹಳ ದಿನಗಳಿಂದ ನೀವು ಭೇಟಿ ನೀಡದ ಸೈಟ್‌ಗಳಿಗಾಗಿ ನೀಡಿರುವ ಅನುಮತಿಯನ್ನು ಕ್ರೋಮ್ ಅಟೋಮ್ಯಾಟಿಕ್ ಆಗಿ ವಾಪಾಸ್ ಪಡೆದುಕೊಳ್ಳಲಿದೆ. ಈ ಫೀಚರ್ಸ್ ಸೂಕ್ಷ್ಮ ಮಾಹಿತಿಗೆ ಅನಗತ್ಯ ಪ್ರವೇಶವನ್ನು ಸೀಮಿತಗೊಳಿಸುವ ಮೂಲಕ ಕ್ರೋಮ್ ಬ್ರೌಸರ್‌ನಲ್ಲಿ ಹೆಚ್ಚುವರಿ ಭದ್ರತೆಯ ಲೇಯರ್ ಅನ್ನು ಸೇರಿಸಿದೆ.

ಅಪ್ಡೇಟ್ ಫರ್ಫಾಮೆನ್ಸ್ ಕಂಟ್ರೋಲ್
Google ಇದೀಗ ಹೊಸ, ಚುರುಕಾದ ಕಾರ್ಯಕ್ಷಮತೆ ನಿಯಂತ್ರಣಗಳ ಫೀಚರ್ಸ್ ಅನ್ನು ಪರಿಚಯಿಸಿದೆ. ಬಳಕೆದಾರರು ಈಗ ಮೆಮೊರಿ ಸೇವರ್ ಮೋಡ್‌ನಲ್ಲಿ ಸುಳಿದಾಡಿ ತಮ್ಮ ಟ್ಯಾಬ್ ಮೆಮೊರಿ ಬಳಕೆಯ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಮಾಹಿತಿಯು ಟ್ಯಾಬ್‌ಗಳು ನಿಷ್ಕ್ರಿಯವಾದಾಗ ಉಳಿಸಲಾದ ಸಂಭಾವ್ಯ ಮೆಮೊರಿಯ ಕುರಿತು ವಿವರಗಳನ್ನು ಒಳಗೊಂಡಿರಲಿದೆ.
ಇದಲ್ಲದೆ ಹೆಚ್ಚು ಕಸ್ಟಮೈಸ್ ಮಾಡಿದ ಮತ್ತು ನಿಯಂತ್ರಿತ ಕಾರ್ಯಕ್ಷಮತೆಯ ಅನುಭವವನ್ನು ಒದಗಿಸುವ ಮೂಲಕ ಯಾವ ಸೈಟ್‌ಗಳು ಯಾವಾಗಲೂ ಸಕ್ರಿಯವಾಗಿರಬೇಕು ಎಂಬುದನ್ನು ನಿರ್ದಿಷ್ಟಪಡಿಸಲು ಬಳಕೆದಾರರಿಗೆ ಕ್ರೋಮ್ ಅವಕಾಶ ನೀಡಲಿದೆ. ಇದಕ್ಕಾಗಿ ಮೆಮೊರಿ ಸೇವರ್ ಮೋಡ್ ಅನ್ನು ಹೊಂದಿಸಲು, ಬಳಕೆದಾರರು ಸೆಟ್ಟಿಂಗ್‌ಗಳಲ್ಲಿನ ಕಾರ್ಯಕ್ಷಮತೆ ವಿಭಾಗಕ್ಕೆ ನ್ಯಾವಿಗೇಟ್ ಮಾಡಬಹುದಾಗಿದೆ.

ಟ್ಯಾಬ್ ಗುಂಪುಗಳ ಸಾಮರ್ಥ್ಯ
ಗೂಗಲ್ ಇದೀಗ ಟ್ಯಾಬ್ ಗ್ರೂಪ್‌ಗಳನ್ನು ಸೇವ್ ಮಾಡುವ ಸಾಮರ್ಥ್ಯವನ್ನು ಕ್ರೋಮ್ ನಲ್ಲಿ ಪರಿಚಯಿಸಿದೆ. ಈ ಫೀಚರ್ಸ್ ಬಳಕೆದಾರರಿಗೆ ತಮ್ಮ ಟ್ಯಾಬ್‌ಗಳನ್ನು ಪರಿಣಾಮಕಾರಿಯಾಗಿ ಡಿಕ್ಲಟರ್ ಮಾಡಲು ಅನುಮತಿಸಲಿದೆ. ಇದನ್ನು ಇನ್ನಷ್ಟು ಉಪಯುಕ್ತವಾಗಿಸುವ ಮೂಲಕ, ಗೂಗಲ್ ಕ್ರಾಸ್-ಡಿವೈಸ್ ಕಾರ್ಯವನ್ನು ಕೂಡ ಸೇರಿಸಿದೆ. ಇದು ಇತರ ಡೆಸ್ಕ್‌ಟಾಪ್ ಡಿವೈಸ್‌ಗಳಲ್ಲಿ ಪ್ರವೇಶಿಸಬಹುದಾದ ಟ್ಯಾಬ್ ಗ್ರೂಪ್‌ಗಳನ್ನು ಸೇವ್ ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶ ನೀಡಲಿದೆ.
ಮಲ್ಟಿ ಪ್ರಾಜೆಕ್ಟ್‌ಗಳನ್ನು ಮಾಡುವ ಬಳಕೆದಾರರಿಗೆ ಈ ಫೀಚರ್ಸ್ ಸೂಕ್ತವಾಗಿದೆ. ಏಕೆಂದರೆ ಟ್ಯಾಬ್ ಗುಂಪುಗಳನ್ನು ಸೇವ್ ಮಾಡುವ ಮೂಲಕ, ಬಳಕೆದಾರರು ತಾವು ಎಲ್ಲಿ ತಮ್ಮ ಕಾರ್ಯವನ್ನು ಸ್ಟಾಪ್ ಮಾಡಿರುತ್ತಾರೋ ಅಲ್ಲಿಂದ ಮುಂದುವರೆಯಲು ಸಾಧ್ಯವಾಗಲಿದೆ. ಇದು ಹೆಚ್ಚು ಸುವ್ಯವಸ್ಥಿತ ಮತ್ತು ಉತ್ಪಾದಕ ಬ್ರೌಸಿಂಗ್ ಅನುಭವವನ್ನು ಬಲಪಡಿಸುತ್ತದೆ.


Click it and Unblock the Notifications








