Home
ಸುದ್ದಿಜಾಲ

ಸ್ಮಾರ್ಟ್‌ಫೋನಿನ ಗೂಗಲ್ ಆಪ್ ನಲ್ಲಿ the1975..com ಎಂದು ಟೈಪ್ ಮಾಡಿದರೆ ಏನೇನೋ ಆಗುತ್ತಂತೆ.!!

By Gizbot Bureau

ಕೆಲವೊಮ್ಮೆ ಕೆಲವು ಆಪ್ ಗಳು ವಿಲಕ್ಷಣವಾಗಿ ವರ್ತಿಸಿಬಿಡುತ್ತೆ. ಹೀಗೆ ಆಗಲು ಕಾರಣ ಕೆಲವೊಮ್ಮೆ ನೀವು ಗುರುತಿಸಿರದ ದೋಷಗಳಿಂದಾಗಿರಬಹುದು, ಇನ್ನೂ ಕೆಲವೊಮ್ಮೆ ಕಳ್ಳಕಾಕರ ಕೈಚಳಕದಿಂದ ಆಗಿರಬಹುದು, ಮತ್ತೂ ಕೆಲವೊಮ್ಮೆ ವೈರಸ್ ಗಳ ಕಾಟದಿಂದಾಗಿರಬಹುದು, ಇದನ್ನೂ ಹೊರತು ಪಡಿಸಿ ಕೆಲವೊಮ್ಮೆ ಕಾರಣವೇ ಇಲ್ಲದಿರಬಹುದು.

ಫೋನಿನ ಗೂಗಲ್ ಆಪ್ ನಲ್ಲಿ the1975..com ಎಂದು ಟೈಪ್ ಮಾಡಿದರೆ ಏನೇನೋ ಆಗುತ್ತಂತೆ..


ಒಂದು ಪ್ರಮುಖ ಪ್ರಕರಣದಲ್ಲಿ ಹೀಗೆಯೇ ಆಗಿದೆ. ರೆಡ್ ಇಟ್ ಬಳಕೆದಾರರು ಮುಗ್ಗರಿಸುವಂತ ವಿಚಿತ್ರವೊಂದಕ್ಕೆ ಸಾಕ್ಷಿಯಾದರು. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಆಪ್ ಬಳಸಿದಾಗ ವಿಲಕ್ಷಣವಾದ ಗ್ಲಿಚ್ ಗಳು ಕಾಣಿಸಿಕೊಳ್ಳಲು ಪ್ರಾರಂಭವಾದವು.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ the1975..com ಎಂದು ಗೂಗಲ್ ಆಪ್ ನಲ್ಲಿ ಟೈಪ್ ಮಾಡಿ ಸರ್ಚ್ ಮಾಡಿದರೆ ವಿಚಿತ್ರವಾದ ಸರಣಿ ಗೆರಗಳು ಡಿಸ್ಪ್ಲೇ ಆಗುತ್ತಿರುವುದನ್ನು ರೆಡ್ ಇಟ್ ಬಳಕೆದಾರರು ಗುರುತಿಸಿದ್ದಾರೆ. ಅಚಾನಕ್ ಆಗಿ ಈ ಯುಆರ್ ಎಲ್ ಟೈಪ್ ಮಾಡಿದಾಗ ಅವರಿಗೆ ಹೀಗೆ ಆಗಿದೆ. ಅವರಿಗಾದ ಅನುಭವವನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

ತಿಳಿಸಲಾಗದ ಕಾರಣವೊಂದಕ್ಕಾಗಿ ಅವರು the1975..com ಎಂದು ಅವರ ಸರ್ಚ್ ಬಾರ್ ನಲ್ಲಿ ಟೈಪ್ ಮಾಡಿದ್ದಾರಂತೆ. ಕೂಡಲೇ ಅವರಿಗೆ ಅವರ ಇತ್ತೀಚಿನ ಟೆಕ್ಸ್ಟ್ ಮೆಸೇಜ್ ಡಿಸ್ಪ್ಲೇ ಆಗಿದೆ ಮತ್ತು ಕೂಡಲೇ ವಿಲಕ್ಷಣವಾದ ಸರಣಿ ಗೆರೆಗಳು ಕಾಣಿಸಿಕೊಂಡವು ಎಂದು ರೆಡ್ ಇಟ್ ಬಳಕೆದಾರರು ವಿವರಿಸಿದ್ದಾರೆ.

ಕೂಡಲೇ ಬಳಕೆದಾರರು ಗೂಗಲ್ ಪಿಕ್ಸಲ್, ಸ್ಯಾಮ್ ಸಂಗ್, ಒನ್ ಪ್ಲಸ್, ಎಲ್ ಜಿ, ಹುವಾಯಿ ಸ್ಮಾರ್ಟ್ ಫೋನ್ ಗಳಲ್ಲಿ ಪ್ರಯತ್ನಿಸಿ ನೋಡಿದ್ದಾರೆ ಮತ್ತು ಅವರಿಗೆ ಅದೇಅನುಭವವಾಗಿದೆ.

ಕೇವಲ the1975..com ಇದನ್ನು ಟೈಪ್ ಮಾಡಿದಾಗ ಮಾತ್ರವಲ್ಲ, ಬದಲಾಗಿ “Vizel viagens”,” Izela viagens" and "Zela viagens” ಎಂದು ಟೈಪ್ ಮಾಡಿದಾಗಲೂ ಇಂತಹ ಗ್ಲಿಚ್ ಕಾಣಿಸಿಕೊಂಡಿದೆಯಂತೆ.

ಇಲ್ಲಿ ಭಾರತದಲ್ಲೂ ಕೂಡ ಮೂರು ಸ್ಮಾರ್ಟ್ ಫೋನ್ ಗಳಲ್ಲಿ ಇದನ್ನು ಪ್ರಯತ್ನಿಸಿ ನೋಡಲಾಗಿದೆ. ಒನ್ ಪ್ಲಸ್ 5T, ಮೊಬಿಸ್ಟಾರ XQ ಯಲ್, ಸ್ಯಾಮ್ ಸಂಗ್ ಗ್ಯಾಲಕ್ಸಿ S7ಯಲ್ಲಿ ಬಂದ ಫಲಿತಾಂಶದಿಂದ ನಿಜಕ್ಕೂ ಆಶ್ಚರ್ಯವಾಗಿದೆ. ಸ್ವಲ್ಪಮಟ್ಟಿಗೆ ರೆಡ್ ಇಟ್ ಬಳಕೆದಾರರಿಗಿಂತ ಅನುಭವ ಭಿನ್ನವಾಗಿದೆ. ಯಾವುದೇ ಫೋನ್ ಗಳು ಟೆಕ್ಸ್ಟ್ ಮೆಸೇಜ್ ನ್ನು ಡಿಸ್ಪ್ಲೇ ಮಾಡಲಿಲ್ಲ.

How to Send Message to Multiple Contacts on WhatsApp - GIZBOT KANNADA

ಆದರೆ ಕುತೂಹಲಕಾರಿಯಾಗಿ ಗ್ಲಿಚ್ ಗಳು ಕಾಣಿಸಿಕೊಳ್ಳುತ್ತೆ. ಯಾವ ಬಳಕೆದಾರರು ಆಪ್ ಗಳ ಪರ್ಮಿಷನ್ ಗಳನ್ನು ರಿಸ್ಟ್ರಿಕ್ಟ್ ಮಾಡಿರುತ್ತಾರೋ ಅವರಿಗೆ ಈ ರೀತಿಯ ಅನುಭವ ಆಗಲಿಕ್ಕಿಲ್ಲ. ಅಂದರೆ ಈ ಆಪ್ ಕ್ಯಾಮರಾ, ಕ್ಯಾಲೆಂಡರ್, ಕಾಂಟ್ಯಾಕ್ಸ್, ಸ್ಟೋರೇಜ್ ಇತ್ಯಾದಿಗಳ ಪರ್ಮಿಷನ್ ಇದ್ದಾಗ ಮಾತ್ರ ಗ್ಲಿಚ್ ಬರುವಂತೆ ಮಾಡುತ್ತೆ.

ಗೂಗಲ್ ಆಪ್ ನಲ್ಲಿ ಮೆಸೇಜ್ ಗಳನ್ನು ನೋಡಲು ಬಳಕೆದಾರರು ಇದೊಂದೇ ಮೆಥೆಡ್ ಫಾಲೋ ಮಾಡಬೇಕಾಗಿಲ್ಲ. ಬದಲಾಗಿ show me my text messages ಎಂದು ಸರ್ಚ್ ಬಾರ್ ನಲ್ಲಿ ಟೈಪ್ ಮಾಡಿದರೂ ಕೂಡ ಅದೇ ಫಲಿತಾಂಶ ದೊರೆಯಲಿದೆ ಆದರೆ ಕೆಲವು ಫರ್ಮಿಷನ್ ಗಳು ಬೇಕಾಗುತ್ತೆ.

Best Mobiles in India

English summary
Google app triggers a glitch on typing 'the1975..com' for select users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+