Home
ಸುದ್ದಿಜಾಲ

ಆಂಡ್ರಾಯ್ಡ್ ಮೆಸೇಜ್ ಗಳಿಗೆ ಸದ್ಯದಲ್ಲೇ ಬರಲಿದೆ ಗೂಗಲ್ ಅಸಿಸ್ಟೆಂಟ್

By Gizbot Bureau

ಹುಡುಕಾಟದ ದೈತ್ಯ ಎಂದು ಕರೆಯುವ ಗೂಗಲ್ ಸಂಸ್ಥೆ ಆಂಡ್ರಾಯ್ಡ್ ಮೆಸೇಜ್ ಗಳಿಗೆ ಗೂಗಲ್ ಅಸಿಸ್ಟೆಂಟ್ ನ ಬೆಂಬಲವು ಸದ್ಯದಲ್ಲೇ ಸಿಗಲಿದೆ ಎಂಬ ಬಗ್ಗೆ ಪ್ರಕಟಿಸಿದೆ. ಬಳಕೆದಾರರು ಇನ್ನು ಮುಂದೆ ಟೆಕ್ಸ್ಟ್ ಮೆಸೇಜ್ ಗಳನ್ನು ಓದುವುದಕ್ಕೆ ಮತ್ತು ಕಳುಹಿಸುವುದಕ್ಕೆ ಗೂಗಲ್ ಅಸಿಸ್ಟೆಂಟ್ ನ್ನು ಬಳಕೆ ಮಾಡಬಹುದು.

ಇಂಗ್ಲೀಷ್ ಭಾಷೆಯಲ್ಲಿ ಮಾತ್ರ:

ಇಂಗ್ಲೀಷ್ ಭಾಷೆಯಲ್ಲಿ ಮಾತ್ರ:

ಒಂದು ವೇಳೆ ಬಳಕೆದಾರರು ಗೂಗಲ್ ಅಸಿಸ್ಟೆಂಟ್ ನ್ನು ಟೆಕ್ಸ್ಟ್ ಮಾಡುವುದಕ್ಕೆ ಬಳಕೆ ಮಾಡಿದರೆ ಆಪ್ ನ ಸ್ಮಾರ್ಟ್ ರಿಪ್ಲೈ ಸೆಕ್ಷನ್ ನಲ್ಲಿ ಒಂದು ಬಟನ್ ಕಾಣಿಸುತ್ತದೆ. ಒಂದು ವೇಳೆ ಬಳಕೆದಾರರು ಆ ಬಟನ್ ನ್ನು ಟ್ಯಾಪ್ ಮಾಡಿದರೆ ಇದು ಅಸಿಸ್ಟೆಂಟ್ ಗೆ ಪ್ರಶ್ನೆ ಕೇಳುತ್ತದೆ ಮತ್ತು ಉತ್ತರವನ್ನು ನೇರವಾಗಿ ಟೆಕ್ಸ್ಟ್ ಮೆಸೇಜ್ ಥ್ರೆಡ್ ನಲ್ಲಿ ಹಾಕುತ್ತದೆ. ಸದ್ಯಕ್ಕೆ ಇದು ಕೇವಲ ಇಂಗ್ಲೀಷ್ ಭಾಷೆಗೆ ಮಾತ್ರವೇ ಸೀಮಿತವಾಗಿರುತ್ತದೆ.

ಮಾಹಿತಿಗಳು ಯಾವುದನ್ನು ಆಧರಿಸಿದೆ?

ಮಾಹಿತಿಗಳು ಯಾವುದನ್ನು ಆಧರಿಸಿದೆ?

ಹಾಗಂತ ಗೂಗಲ್ ಇನ್ನು ಮುಂದೆ ನಿಮ್ಮ ಟೆಕ್ಸ್ಟ್ ಮೆಸೇಜ್ ಗಳನ್ನು ಓದುವುದನ್ನು ನಿಲ್ಲಿಸಿಬಿಡುತ್ತದೆ ಎಂದು ಚಿಂತಿಸಬೇಡಿ. ಕಂಪೆನಿ ಹೇಳಿರುವಂತೆ ನೀವು ಟ್ಯಾಪ್ ಮಾಡಿರುವ ಗೂಗಲ್ ಅಸಿಸ್ಟೆಂಟ್ ಬಟನ್ನಿನ ಟೆಕ್ಸ್ಟ್ ನ್ನು ಮಾತ್ರವೇ ಗೂಗಲ್ ಸರ್ವರ್ ಗೆ ಮಾಹಿತಿಯಂತೆ ನೀಡಲಾಗುತ್ತದೆ. ಥ್ರೆಡ್ ನಲ್ಲಿ ಏನಿದೆ ಎಂಬುದರ ಆಧಾರದಲ್ಲಿ ಗೂಗಲ್ ಅಸಿಸ್ಟೆಂಟ್ ನ ಸಲಹೆಗಳು ಇರುತ್ತದೆ.

ಉದಾಹರಣೆ:

ಉದಾಹರಣೆ:

ಉದಾಹರಣೆಗೆ ಒಂದು ವೇಳೆ ನೀವು ಒಂದು ರೆಸ್ಟೋರೆಂಟ್ ಗೆ ಹೋಗುವ ಬಯಕೆಯ ಬಗ್ಗೆ ಮೆಸೇಜ್ ರಿಸೀವ್ ಮಾಡಿದರೆ ಆಗ ಸಲಹೆಗಳು ಪಿಝಾ ಎಜೋಜಿ ಜೊತೆಗೆ ಎಸ್ ಎಂದು ಅದರ ಮುಂದೆ ಬರೆದಿರುವುದಾಗಿರಬಹುದು ಅಥವಾ ರೆಸ್ಟೋರೆಂಟ್ ಹುಡುಕಾಟಕ್ಕೆ ಒಂದು ಬಟನ್ ಲಭ್ಯವಾಗಬಹುದು ಸಿಕ್ಕಿರುವ ಸಜೆಷನ್ ಗಳನ್ನು ನೀವು ಟ್ಯಾಪ್ ಮಾಡಿದರೆ ಸಣ್ಣ ಅಸಿಸ್ಟೆಂಟ್ ಬಾಕ್ಸ್ ಸ್ಲೈಡ್ ಅಪ್ ಆಗಿ ಒಂದು ಕಾರ್ಡ್ ನಲ್ಲಿ ಮಾಹಿತಿಗಳು ಮತ್ತು ಆಯ್ಕೆಗಳಿರುತ್ತದೆ.

ಗೂಗಲ್ ಅಲೋ ಶಟ್ ಡೌನ್:

ಗೂಗಲ್ ಅಲೋ ಶಟ್ ಡೌನ್:

ಆಂಡ್ರಾಯ್ಡ್ ಮೆಸೇಜಸ್ ಗಳಿಗೆ ಹೊಸ ಫೀಚರ್ ಗಳನ್ನು ಸೇರಿಸುವುದರಲ್ಲಿ ಗೂಗಲ್ ಸದ್ಯ ಬ್ಯುಸಿಯಾಗಿದೆ. ಮೆಸೇಜಿಂಗ್ ಆಪ್ ಅಲೋವನ್ನು ಶಟ್ ಡೌನ್ ಮಾಡಿದ ನಂತರ ಗೂಗಲ್ ಆಂಡ್ರಾಯ್ಡ್ ಮೆಸೇಜಸ್ ಗಳ ಮೇಲೆ ಭಾರೀ ಕಾರ್ಯನಿರತವಾಗಿದೆ. ಈ ಮೆಸೇಜಿಂಗ್ ಆಪ್ ಮುಂದಿನ ತಿಂಗಳಾಂತ್ಯದ ಒಳಗೆ ಸಂಪೂರ್ಣವಾಗಿ ಶಟ್ ಡೌನ್ ಆಗುತ್ತದೆ. ಗೂಗಲ್ ಅಲೋ ಸಂಪೂರ್ಣವಾಗಿ ಶಟ್ ಡೌನ್ ಆದ ನಂತರ ಆಂಡ್ರಾಯ್ಡ್ ಮೆಸೇಜ್ ಮಾತ್ರವೇ ಕಂಪೆನಿಯ ಟೆಕ್ಸ್ಟಿಂಗ್ ಆಪ್ ಆಗಿ ಉಳಿಯುತ್ತದೆ ಮತ್ತು ಇದು ಎಸ್ಎಂಎಸ್, ಎಂಎಂಎಸ್, ಆರ್ ಸಿಎಸ್ ಗೆ ಬೆಂಬಲ ನೀಡುತ್ತದೆ.

ಜಿಯೋ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್:

ಜಿಯೋ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್:

ಇತ್ತೀಚೆಗೆ ಗೂಗಲ್ ಕಿಯೋಸ್ ನಲ್ಲಿ ರನ್ ಆಗುವ ಫೀಚರ್ ಫೋನ್ ಗಳಲ್ಲಿ ಗೂಗಲ್ ಅಸಿಸ್ಟೆಂಟ್ ನ್ನು ತರುವ ಬಗ್ಗೆ ಪ್ರಕಟಣೆಯನ್ನು ನೀಡಿತ್ತು. ಅಂದರೆ ಸದ್ಯದಲ್ಲಿ ರಿಲಯನ್ಸ್ ಜಿಯೋಫೋನ್ ಮತ್ತು ಜಿಯೋಫೋನ್ 2 ಗಳಲ್ಲಿ ಗೂಗಲ್ ಅಸಿಸ್ಟೆಂಟ್ ಗೆ ಬೆಂಬಲ ಸಿಗಲಿದೆ.

Best Mobiles in India

English summary
Google Assistant is coming to Android Messages soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+