ಗೂಗಲ್‌ನಿಂದ ಫೀಚರ್ ಡ್ರಾಪ್ ಬಿಡುಗಡೆ! ಏನೆಲ್ಲಾ ಬದಲಾಗಲಿದೆ ಗೊತ್ತಾ?
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಆಂಡ್ರಾಯ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬಿಗ್ ಫೀಚರ್ ಡ್ರಾಪ್ ಅನ್ನು ಘೋಷಿಸಿದೆ. ಇದರ ಮೂಲಕ ಗೂಗಲ್ ಮೆಸೇಜಸ್, ಫೋಟೋಸ್, ಗೂಗಲ್ ಅಸಿಸ್ಟೆಂಟ್, ಲೈವ್ ಟ್ರಾನ್ಸಕ್ರಿಬ್, ಗೂಗಲ್ ಟಿವಿ ಮತ್ತು ಜಿಬೋರ್ಡ್ ಫಂಕ್ಷನ್‌ನಲ್ಲಿ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದೆ. ಇದರಿಂದ ಗೂಗಲ್‌ನ ಈ ಎಲ್ಲಾ ಸೇವೆಗಳಲ್ಲಿ ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಆಂಡ್ರಾಯ್ಡ್‌ನ ನಿಯರ್‌ಬೈ ಶೇರ್ ಮತ್ತು ಸ್ಕ್ರೀನ್-ಟೈಮ್ ವಿಜೆಟ್‌ಗಳಲ್ಲೂ ಕೂಡ ಅಪ್ಡೇಟ್ ತರಲಿದೆ.

ಹೌದು, ಗೂಗಲ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಡ್ರಾಪ್ ಫೀಚರ್ಸ್ ಅನ್ನು ಪರಿಚಯಿಸಿದೆ. ಇದರಿಂದ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಗೂಗಲ್‌ನ ಸೇವೆಗಳಲ್ಲಿ ಹೊಸ ಅಪ್ಡೇಟ್ ಲಭ್ಯವಾಗಲಿದೆ. ಇದರಿಂದ ಹೊಸ ಅನುಭವವನ್ನು ಬಳಕೆದಾರರು ಪಡೆದುಕೊಳ್ಳಲಿದ್ದಾರೆ. ಫೀಚರ್ ಡ್ರಾಪ್‌ನ ಭಾಗವಾಗಿ ಗೂಗಲ್ ಮೆಸೇಜಸ್‌ನಲ್ಲಿ ವೀಡಿಯೋಗಳನ್ನು ಉನ್ನತ ಮಟ್ಟದ ರೆಸಲ್ಯೂಶನ್‌ನಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ. ಇನ್ನುಳಿದಂತೆ ಗೂಗಲ್‌ನ ಫೀಚರ್ ಡ್ರಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಮೆಸೇಜಸ್
ಗೂಗಲ್ ಕಂಪೆನಿಯ ಗೂಗಲ್ ಮೆಸೇಜಸ್ ಹೊಸ ಅಪ್ಡೇಟ್ ಅನ್ನು ಪಡೆದುಕೊಂಡಿದೆ. ಇದರಿಂದ ಐಫೋನ್ ಬಳಕೆದಾರರ ರಿಯಾಕ್ಷನ್ ನಿಮಗೆ ಟೆಕ್ಸ್ಟ್ ಮೆಸೇಜ್‌ಗಳಲ್ಲಿ ಎಮೋಜಿಯಾಗಿ ಗೋಚರಿಸಲಿದೆ. ಇದರ ಜೊತೆಗೆ, ಆಂಡ್ರಾಯ್ಡ್ ಬಳಕೆದಾರರು ಶೀಘ್ರದಲ್ಲೇ ವೀಡಿಯೊಗಳು ಮತ್ತು ಫೋಟೋಗಳನ್ನು ಸಂಭಾಷಣೆಯೊಳಗೆ ಗೂಗಲ್ ಫೋಟೋಗಳ ಲಿಂಕ್‌ಗಳಾಗಿ ಸೆಂಡ್ ಮಾಡಿದರೆ ಅದೇ ರೆಸಲ್ಯೂಶನ್‌ನಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ. ಅಲ್ಲದೆ ಮೆಸೇಜ್‌ಗಳು ಇದೀಗ ಆಟೋಮ್ಯಾಟಿಕ್ ಆಗಿ ಬಳಕೆದಾರರ ಸಂದೇಶಗಳನ್ನು ವೈಯಕ್ತಿಕ ಮತ್ತು ವ್ಯಾಪಾರ ಟ್ಯಾಬ್‌ಗಳಲ್ಲಿ ಸಂಘಟಿತ ಇನ್‌ಬಾಕ್ಸ್‌ನೊಂದಿಗೆ ವಿಂಗಡಿಸುತ್ತದೆ. ಜೊತೆಗೆ, 24 ಗಂಟೆಗಳ ನಂತರ ಒನ್-ಟೈಮ್ ಪಾಸ್‌ವರ್ಡ್ ಅಥವಾ OTP ಹೊಂದಿರುವ ಸಂದೇಶಗಳನ್ನು ಸ್ವಯಂಚಾಲಿತವಾಗಿ ಡಿಲೀಟ್ ಮಾಡಲಿದೆ ಎಂದು ಗೂಗಲ್ ಹೇಳಿಕೊಂಡಿದೆ.

ಜಿಬೋರ್ಡ್
ಗೂಗಲ್ ತನ್ನ ಜಿಬೋರ್ಡ್ ಅನ್ನು ವ್ಯಾಕರಣ ತಿದ್ದುಪಡಿ ಫೀಚರ್ಸ್‌ನೊಂದಿಗೆ ಅಪ್ಡೇಟ್ ಮಾಡಿದೆ. ಈ ಹೊಸ ಫೀಚರ್ಸ್ ವ್ಯಾಕರಣ ದೋಷಗಳನ್ನು ಪತ್ತೆಹಚ್ಚುವುದಕ್ಕೆ ಸಹಾಯ ಮಾಡಲಿದೆ. ಅಲ್ಲದೆ ಸಂದೇಶಗಳನ್ನು ಟೈಪ್ ಮಾಡುವಾಗ ಬಳಕೆದಾರರಿಗೆ ಸಹಾಯ ಮಾಡಲು ಸಲಹೆಗಳನ್ನು ನೀಡುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ. ಇದಲ್ಲದೆ ಕಂಪನಿಯು ಎಮೋಜಿ ಕಿಚನ್ ಅನ್ನು ಕೂಡ ಅಪ್ಡೇಟ್ ಮಾಡಿದೆ. ಇದರಿಂದ 2,000 ಕ್ಕೂ ಹೆಚ್ಚು ಹೊಸ ಎಮೋಜಿ ಮ್ಯಾಶಪ್‌ಗಳನ್ನು ಸ್ಟಿಕ್ಕರ್‌ಗಳಾಗಿ ಲಭ್ಯವಿದೆ.

ಲೈವ್ ಟ್ರಾನ್ಸ್ಕ್ರಿಬ್
ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಸ್ಥಾಪಿಸಲಾದ ಲೈವ್ ಟ್ರಾನ್ಸ್‌ಕ್ರೈಬ್ ಫೀಚರ್ಸ್‌ನಲ್ಲಿ ಹೊಸ ಅಪ್ಡೇಟ್ ಲಭ್ಯವಾಗಲಿದೆ. ಅಲ್ಲದೆ ಇತರ ಎಲ್ಲಾ ಆಂಡ್ರಾಯ್ಡ್ ಸಾಧನಗಳಿಗೆ ಡೌನ್‌ಲೋಡ್ ಮಾಡಲು ಉಚಿತ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ. ವೈ-ಫೈ ಮತ್ತು ಡೇಟಾ ಲಭ್ಯವಿಲ್ಲದಿದ್ದಾಗ ಅಥವಾ ಸ್ಥಿರವಾದ ಇಂಟರ್ನೆಟ್ ಪ್ರವೇಶವಿಲ್ಲದ ಪ್ರದೇಶಗಳಲ್ಲಿ ಲೈವ್ ಟ್ರಾನ್ಸ್‌ಕ್ರೈಬ್ ಅಪ್ಲಿಕೇಶನ್ ಈಗ ಆಫ್‌ಲೈನ್ ಮೋಡ್ ಅನ್ನು ನೀಡಲಿದೆ ಎನ್ನಲಾಗಿದೆ.

ಗೂಗಲ್ ಫೋಟೋಸ್
ಇನ್ನು ಗೂಗಲ್ ಪೋಟೋಸ್‌ನಲ್ಲಿ ಸಾಕುಪ್ರಾಣಿಗಳು, ಆಹಾರ ಮತ್ತು ಸಸ್ಯಗಳಂತಹ ಹೆಚ್ಚಿನ ವಿಷಯಗಳಿಗೆ ಫೋಟೋ ಬ್ಲರ್ ಮೋಡ್ ಅನ್ನು ತರುತ್ತಿದೆ.

ಆಂಡ್ರಾಯ್ಡ್ ಟಿವಿ
ಗೂಗಲ್ ಆಂಡ್ರಾಯ್ಡ್ ಟಿವಿಯಲ್ಲಿ ಹೊಸ ಹೈಲೈಟ್ಸ್ ಟ್ಯಾಬ್ ಅನ್ನು ಸೇರಿಸುತ್ತಿದೆ. ಇದರಿಂದ ನೀವು ಆಸಕ್ತಿ ಹೊಂದಿರುವ ಯಾವುದೇ ಹೊಸ ಚಲನಚಿತ್ರ, ಟಿವಿ ಸರಣಿ ಅಥವಾ ಲೇಖನವನ್ನು ಆಧರಿಸಿದ ವೀಡಿಯೊಗೆ ನೇರ ಪ್ರವೇಶ ಪಡೆಯಬಹುದು. ಅಲ್ಲದೆ ಆ ಚಿತ್ರವನ್ನು ಪ್ಲೇ ಮಾಡಬಹುದು, ರೇಟ್ ಮಾಡಬಹುದು ಅಥವಾ ನಂತರ ವೀಕ್ಷಿಸಬಹುದು ಎಂದು ಗೂಗಲ್ ಹೇಳಿದೆ.

ಗೂಗಲ್ ಅಸಿಸ್ಟೆಂಟ್
ಫೀಚರ್ ಡ್ರಾಪ್ ಮೂಲಕ ಗೂಗಲ್ ಅಸಿಸ್ಟೆಂಟ್‌ನಲ್ಲಿ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದೆ. ಇನ್ಮುಂದೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಅಸಿಸ್ಟೆಂಟ್ ಸಹಾಯದಿಂದ ಗೂಗಲ್ ಪೇ ಬಳಸಿ ಪಾರ್ಕಿಂಗ್‌ಗೆ ಹಣ ಪಾವತಿಸಬಹುದು. ಪಾರ್ಕಿಂಗ್ ಸ್ಟೇಟಸ್ ಚೆಕ್ ಮಾಡಲು ಧ್ವನಿ ಆಜ್ಞೆಗಳನ್ನು ಬಳಸಿಕೊಂಡು ಅವರ ಪಾರ್ಕಿಂಗ್ ಅನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಈ ಫೀಚರ್ಸ್ US ನಲ್ಲಿ 400 ಕ್ಕೂ ಹೆಚ್ಚು ನಗರಗಳಲ್ಲಿ ಪಾರ್ಕ್‌ಮೊಬೈಲ್ ಸ್ಟ್ರೀಟ್ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ಡಿಜಿಟಲ್ ವೆಲ್-ಬೀಯಿಂಗ್
ಗೂಗಲ್ ಡ್ರಾಪ್ ಫೀಚರ್ ಮೂಲಕ ಹೊಸ ಸ್ಕ್ರೀನ್ ಟೈಮ್ ವಿಜೆಟ್ ಅನ್ನು ಸಹ ಹೊರತರುತ್ತಿದೆ. ಇದರಿಂದ ಬಳಕೆದಾರರು ಆ ದಿನ ಹೆಚ್ಚು ಬಳಸಿದ ಮೂರು ಅಪ್ಲಿಕೇಶನ್‌ಗಳ ಒಂದು ನೋಟವನ್ನು ನೀಡುತ್ತದೆ. ಇದೇ ವಿಜೆಟ್ ಬಳಕೆದಾರರಿಗೆ ಅವರ ಅಪ್ಲಿಕೇಶನ್‌ಗಳು, ಫೋಕಸ್ ಮೋಡ್ ಮತ್ತು ಬೆಡ್‌ಟೈಮ್ ಮೋಡ್‌ಗಾಗಿ ದೈನಂದಿನ ಟೈಮರ್‌ಗಳನ್ನು ಸಹ ನೀಡುತ್ತದೆ.

ನಿಯರ್ ಬೈ ಶೇರ್
ಇನ್ನು ಗೂಗಲ್ ಡ್ರಾಪ್ ಫೀಚರ್ ಮೂಲಕ ನಿಯರ್ ಬೈ ಶೇರ್ ನಲ್ಲಿಯೂ ಕೂಡ ಹೊಸ ಅಪ್ಡೇಟ್ ಅನ್ನು ಹೊರತಂದಿದೆ. ಇದು ಆಂಡ್ರಾಯ್ಡ್ ಬಳಕೆದಾರರಿಗೆ ಸಿಂಗಲ್ ಟೈಂ ನಲ್ಲಿ ಒಬ್ಬ ವ್ಯಕ್ತಿಗಿಂತ ಹೆಚ್ಚಾಗಿ ಅನೇಕ ಜನರೊಂದಿಗೆ ಹಂಚಿಕೊಳ್ಳಲು ಸುಲಭಗೊಳಿಸುತ್ತದೆ. ಆಂಡ್ರಾಯ್ಡ್ 6 ಅಥವಾ ನಂತರದ ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಎಲ್ಲಾ ಸಾಧನಗಳಲ್ಲಿ ಈ ಫೀಚರ್ಸ್ ಅನ್ನು ಹೊರತರಲಾಗುತ್ತಿದೆ. ಈ ಫೀಚರ್ಸ್‌ಗಳನ್ನು ಆಂಡ್ರಾಯ್ಡ್ ಡಿವೈಸ್‌ಗಳಿಗೆ ಯಾವಾಗ ಹೊರತರುತ್ತದೆ ಎಂಬುದನ್ನು ಗೂಗಲ್ ವಿವರಿಸಿಲ್ಲ.


Click it and Unblock the Notifications








