TrueEmoji: ಕೋಲ್ಕತಾ ಹುಡುಗನಿಗೆ ರೂ 13,23,900 ಗೂಗಲ್‌ ಪ್ರಶಸ್ತಿ

By Suneel
|

ಕೋಲ್ತತಾ ಮೂಲದ ಸುಮೇಶ್‌ ದುಗಾರ್ ಎಂಬುವವರು "TrueEmoji" ಯನ್ನು ಅಭಿವೃದ್ದಿ ಪಡಿಸಿ ಗೂಗಲ್‌ನಿಂದ $20,000 (1,323,900 ರೂಪಾಯಿ) ಪ್ರಶಸ್ತಿಯನ್ನು ಪಡೆದಿದ್ದಾರೆ. ಅಂದಹಾಗೆ ಇವರು ಅಭಿವೃದ್ದಿ ಪಡಿಸಿರುವ "TrueEmoji" ಸಾಮಾಜಿಕ ಜಾಲತಾಣದ ಸಂವಹನ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆ ತರಲಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿರಿ.

ಓದಿರಿ:ಕ್ರಿಕೆಟ್‌ನಲ್ಲಿ ಬಳಸುವ ಅತ್ಯಾಧುನಿಕ ಟೆಕ್ನಾಲಜಿಗಳು ಯಾವುವು ಗೊತ್ತೇ?

1

1

ಕೋಲ್ಕತಾ'ದ ಸುಮೇಶ್‌ ದುಗಾರ್‌ ಎಂಬುವವರು ಸಾಫ್ಟ್‌ವೇರ್‌ ಒಂದನ್ನು ಅಭಿವೃದ್ದಿಪಡಿಸಿದ್ದು, ಸಾಫ್ಟ್‌ವೇರ್‌ ವ್ಯಕ್ತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತದೆ.

2

2

ಸುಮೇಶ್‌ ದುಗಾರ್ 10,000 ಉದ್ಯಮಿಗಳ ನಡುವೆ ಇವರು ಪ್ರಶಸ್ತಿಗೆ ಅರ್ಹರಾಗಿ ಗೂಗಲ್‌ನ ಲಾಂಚ್‌ಪ್ಯಾಡ್‌ನಿಂದ $20,000 (1,323,900 ರೂಪಾಯಿ) ಪ್ರಶಸ್ತಿಯನ್ನು "TrueEmoji" ಅಭಿವೃದ್ದಿಪಡಿಸಿದ್ದಕ್ಕಾಗಿ ಪಡೆದಿದ್ದಾರೆ.
ಚಿತ್ರ ಕೃಪೆ: ಟೈಮ್ಸ್‌ ಆಫ್‌ ಇಂಡಿಯಾ

3

3

ಮಾನವರು ಟೆಕ್ನಾಲಜಿಯನ್ನು ಬಳಸಲು ಭಾವನೆಗಳ ರಹಿತ ಅವಕಾಶವಿದೆ. ಅದು ನಮ್ಮನ್ನು ಒಂದು ರೀತಿ ರೋಬೋಟಿಕ್‌ಗಳಂತೆ ಮಾಡುತ್ತದೆ. ಆದರೆ ನಮ್ಮ ಕೋಲ್ಕತಾ ನಗರದಲ್ಲಿ ಉತ್ತಮವಾಗಿ ನ್ಯೂನತೆಯನ್ನು ನೀಗಿಸಿದೆ ಎಂದು "TrueEmoji" ಕುರಿತು ಹೇಳಿದ್ದಾರೆ.

4

4

TrueEmoji ಸಂವಹನ ಮಾಧ್ಯಮಗಳಲ್ಲಿ ದಿನನಿತ್ಯ ಜೀವನದಲ್ಲಿ ತೊಡಗಿಕೊಳ್ಳುವಿಕೆಯನ್ನು ಬದಲಿಸುತ್ತದೆ ಎಂದು ಸುಮೇಶ್‌ ದುಗಾರ್‌ ಹೇಳಿದ್ದಾರೆ.

5

5

TrueEmoji ಫೀಚರ್‌ಗಳು
* TrueEmoji ಅಲ್ಗೋರಿಥಮ್‌ಗಳ ಆಧಾರದಲ್ಲಿದ್ದು, ವ್ಯಕ್ತಿಯ ಭಾವನೆಗಳನ್ನು ಗುರುತಿಸಿ ಅದರ ಪ್ರಕಾರ ಪ್ರತಿಕ್ರಿಯೆ ನೀಡುತ್ತದೆ.
* ವ್ಯಕ್ತಿಯೊಂದಿಗಿನ ಸಂವಾದ ವ್ಯಕ್ತಿಯ ಭಾವನೆ ಆಧಾರದಲ್ಲಿ ಬದಲಾಗುತ್ತದೆ.
* ಇದು ಸ್ಮಾರ್ಟ್‌ಫೋನ್‌'ಗೆ ಅಪ್ಲಿಕೇಶನ್‌ ರೀತಿಯಲ್ಲಿ ಡೌನ್‌ಲೋಡ್‌ ಆಗುತ್ತದೆ.
* ಒಮ್ಮೆ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್‌ ಆದರೆ ಇದು ವ್ಯಕ್ತಿಯ ಭಾವನೆಗಳನ್ನು ಕ್ಯಾಮೆರಾ ಮೂಲಕ ವಿಶ್ಲೇಷಿಸುತ್ತದೆ ಎಂದು ಸುಮೇಶ್‌ ದುಗಾರ್‌ ಹೇಳಿದ್ದಾರೆ.

Best Mobiles in India

English summary
Google awards $20,000 to Kolkata boy for ‘TrueEmoji' tech. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X