ಬ್ಲಾಗರ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವಂತಿಲ್ಲ: ಗೂಗಲ್

Written By:

ಜನಪ್ರಿಯ ಸೇವೆ ಬ್ಲಾಗರ್‌ನಲ್ಲಿ ವಯಸ್ಕರ ವಿಷಯವನ್ನು ನಿಷೇಧಿಸುವ ತೀರ್ಮಾನವನ್ನು ಗೂಗಲ್ ಕೈಗೊಂಡಿದೆ. ಮಾರ್ಚ್ 23 ರ ನಂತರ ಅಶ್ಲೀಲತೆಯನ್ನು ಪ್ರದರ್ಶಿಸುವ ಯಾವುದೇ ಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಕಂಪೆನಿ ತಿಳಿಸಿದೆ.

ಬ್ಲಾಗರ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವಂತಿಲ್ಲ: ಗೂಗಲ್

ನಿಮ್ಮ ಪ್ರಸ್ತುತ ಬ್ಲಾಗ್ ಈ ರೀತಿಯ ಯಾವುದೇ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ಹೊಂದಿಲ್ಲ ಎಂದಾದಲ್ಲಿ ನೀವು ಯಾವುದೇ ಬದಲಾವಣೆಗಳನ್ನು ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನಿಮ್ಮ ಬ್ಲಾಗ್‌ನಲ್ಲಿ ಇಂತಹ ಚಿತ್ರಗಳು ಒಂದುವೇಳೆ ಇದ್ದಲ್ಲಿ ನಿಮ್ಮ ಬ್ಲಾಗ್ ಅನ್ನು ಅಳಿಸುವುದಿಲ್ಲ ಬದಲಾಗಿ ಮಾರ್ಚ್ 23, 2015 ರ ನಂತರ ಅದನ್ನು ಖಾಸಗಿಯಾಗಿ ಪರವರ್ತಿಸಲಾಗುತ್ತದೆ ಅದೇ ರೀತಿ ಬ್ಲಾಗ್‌ನ ಮಾಲೀಕರು ಅಥವಾ ಬ್ಲಾಗ್ ಎಡ್ಮಿನ್‌ಗಳು ಅಂತೆಯೇ ಮಾಲೀಕರು ಯಾರೊಂದಿಗೆ ಬ್ಲಾಗ್ ಅನ್ನು ಹಂಚಿಕೊಳ್ಳುತ್ತಾರೋ ಅವರಿಗೆ ವಿಷಯಗಳನ್ನು ನೋಡಬಹುದಾಗಿದೆ.

ನಿಮ್ಮ ಬ್ಲಾಗ್ ಅನ್ನು ಎಕ್ಸ್‌ಎಮ್‌ಎಲ್ ಫೈಲ್ ಅಥವಾ ನಿಮ್ಮ ಬ್ಲಾಗ್ ಪಠ್ಯವನ್ನು ಆರ್ಕೈವ್ ಕೂಡ ಮಾಡಬಹುದಾಗಿದೆ. ಎಂದು ನೂತನ ನೀತಿ ತಿಳಿಸಿದೆ. ಬ್ಲಾಗ್‌ನಲ್ಲಿ ಹಂಚಿಕೊಳ್ಳುವ ಅಶ್ಲೀಲ ಚಿತ್ರಗಳು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಬಳಕೆದಾರರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವುದರಿಂದ ಇಂತಹವುಗಳ ಮೇಲೆ ನಿಷೇಧವನ್ನು ಹೇರಲಾಗಿದೆ ಎಂದು ನೀತಿ ತಿಳಿಸಿದೆ.

English summary
This article tells about Google bans adult content on Blogger.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot