ಗೂಗಲ್ ನಲ್ಲಿ ಒಲಿಂಪಿಕ್ಸ್ ಬ್ಯಾಸ್ಕೆಟ್ ಬಾಲ್ ಆಡಿ

Posted By: Varun
ಗೂಗಲ್ ನಲ್ಲಿ ಒಲಿಂಪಿಕ್ಸ್ ಬ್ಯಾಸ್ಕೆಟ್ ಬಾಲ್ ಆಡಿ
ಲಂಡನ್ ಒಲಿಂಪಿಕ್ಸ್ 2012 ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಭಾರತವೂ ಕಳೆದ ಒಲಿಂಪಿಕ್ಸ್ ಗೆ ಹೋಲಿಸಿದರೆ ಉತ್ತಮ ಪ್ರದರ್ಶನವನ್ನೇ ನೀಡುತ್ತ ಬಂದಿದೆ.

ಇದುವರೆ ಅತ್ಯಂತ ಯಶಸ್ವಿಯಾಗಿ ಮುಂದುವರೆಯುತ್ತಿರುವಲಂಡನ್ ಒಲಿಂಪಿಕ್ಸ್ ನಲ್ಲಿ ಹಲವಾರು ಹೊಸ ದಾಖಲೆಗಳು ಬರೆಯಲ್ಪಟ್ಟಿವೆ. ಇದಕ್ಕೆ ಗೌರವ ಸಲ್ಲಿಸಲು ಗೂಗಲ್ ಪ್ರತಿ ದಿನವೂ ಡೂಡಲ್ ಅನ್ನು ಪ್ರಕಟಿಸುತ್ತಿದ್ದು ನೆನ್ನೆ ಹರ್ಡಲ್ ಗೇಮ್ ಅನ್ನು ಪ್ರಕಟಿಸಿತ್ತು. ಇವತ್ತು ಬ್ಯಾಸ್ಕೆಟ್ ಬಾಲ್ ಡೂಡಲ್ ಅನ್ನು ಪ್ರಕಟಿಸಿದ್ದು,ನೋಡಲು ಬಲು ಮಜವಾಗಿದೆ.

ವಿಶೇಷವೇನೆಂದರೆ ನೀವು ವೀಡಿಯೋ ಗೇಮ್ ರೀತಿಯಲ್ಲಿ ಆಡಬಹುದಾಗಿದ್ದು, ಸ್ಕೋರ್ ಅನ್ನು ಗೂಗಲ್ ಪ್ಲಸ್ ನಲ್ಲಿ ಶೇರ್ ಕೂಡ ಮಾಡಬಹುದಾಗಿದೆ.

ಗೂಗಲ್ ಬ್ಯಾಸ್ಕೆಟ್ ಬಾಲ್ ಆಡುವುದು ಸುಲಭವಾಗಿದ್ದು, ಸ್ಪೇಸ್ ಬಾರ್ ಹಾಗು ಮೌಸ್ ನ ಎಡ ಬಾಗದ ಬಟನ್ ಒತ್ತಿ ಹಿಡಿದು ಬಾಲ್ ಅನ್ನು ಬ್ಯಾಸ್ಕೆಟ್ ಗೆ ಹಾಕಬಹುದು. ಒಟ್ಟು 24 ಸೆಕೆಂಡ್ ಕಾಲಾವಕಾಶವಿದ್ದು ಎಷ್ಟು ಬಾಲ್ ಅನ್ನು ಬೇಕಾದರೂ ಬ್ಯಾಸ್ಕೆಟ್ ಗೆ ಹಾಕಲು ಪ್ರಯತ್ನಿಸಬಹುದು.

ನಿಮ್ಮ ಸ್ಕೋರ್ ಗೆ ಅನುಗುಣವಾಗಿ ನಿಮಗೆ ಚಿನ್ನ, ಬೆಳ್ಳಿ ಇಲ್ಲವೆ ಕಂಚಿನ ಪದಕವನ್ನೂ ಗೂಗಲ್ ಕೊಡುತ್ತೆ. ಅಂದ ಹಾಗೆ ನೀವು ಆಡುವ ಮೊದಲು ಒಮ್ಮೆ ಈ ಡೂಡಲ್ ವೀಡಿಯೋವನ್ನ ನೋಡಿಬಿಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot