ನಿಮ್ಮನ್ನು ಯಾರಾದರೂ ಟ್ರ್ಯಾಕ್ ಮಾಡುತ್ತಿದ್ದಾರೆಯೇ? ಗೂಗಲ್‌ನಿಂದ ತಿಳಿಯೋದು ಈಗ ಸುಲಭ!
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಸಾಕಷ್ಟು ಉಪಯುಕ್ತವಾಗಿದ್ದು, ಅನಗತ್ಯ ಬ್ಲೂಟೂತ್ ಟ್ರ್ಯಾಕರ್‌ಗಳ ಬಗ್ಗೆ ಮಾಹಿತಿ ನೀಡಲಿದೆ. ಇದರಿಂದ ಬೇರೆಯವರು ತಮ್ಮ ಬ್ಲೂಟೂತ್ ಟ್ರ್ಯಾಕರ್‌ಗಳ ಮೂಲಕ ನಿಮ್ಮ ವಸ್ತುಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲದಂತೆ ಮಾಡಲಿದೆ.
ಹೌದು, ಗೂಗಲ್ ಬಳಕೆದಾರರಿಗೆ ಅಪರಿಚಿತ ಟ್ರ್ಯಾಕರ್‌ಗಳನ್ನು ಪತ್ತೆ ಹಚ್ಚುವ ಅನ್‌ನೋನ್ ಟ್ರ್ಯಾಕರ್ ಅಲರ್ಟ್ಸ್ ಫೀಚರ್ಸ್ ಪರಿಚಯಿಸಿದೆ. ಇದಕ್ಕಾಗಿ ಆಪಲ್‌ನೊಂದಿಗೆ ಸಹಯೋಗವನ್ನು ಹೊಂದಿದ್ದು, ಈ ಫೀಚರ್ಸ್ ಆಪಲ್ ಏರ್‌ಟ್ಯಾಗ್ ಅನ್ನು ಮಾತ್ರ ಬೆಂಬಲಿಸಲಿದೆ ಎಂದು ಗೂಗಲ್ ಹೇಳಿದೆ. ಹಾಗಾದ್ರೆ ಗೂಗಲ್‌ನ ಅನ್‌ನೋನ್ ಟ್ರ್ಯಾಕರ್ ಅಲರ್ಟ್ಸ್ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸದಿಕೊಡ್ತೀವಿ ಓದಿರಿ.

ಇತ್ತೀಚಿನ ದಿನಗಳಲ್ಲಿ ಬ್ಲೂಟೂತ್ ಟ್ರ್ಯಾಕರ್‌ಗಳ ಬಳಕೆಮಾಡುವವರ ಸಂಖ್ಯೆ ಹೆಚ್ಚಿದೆ. ಆದರೆ ಇವುಗಳನ್ನು ಉತ್ತಮ ಕೆಲಸಕ್ಕೆ ಬಳಸುವುದು ಮಾತ್ರವಲ್ಲ ಕಾರು ಕಳ್ಳತನದಂತಹ ಅಪರಾಧ ಕೃತ್ಯಗಳಲ್ಲಿಯೂ ಕೂಡ ಬಳಸಲಾಗುತ್ತಿದೆ ಎಂದು ವರದಿಯಾಗಿದೆ. ಕೆಲವರು ತಮ್ಮ ಬ್ಲೂಟೂತ್ ಟ್ರ್ಯಾಕರ್‌ಗಳ ಮೂಲಕ ಕಾರುಗಳನ್ನು ಟ್ರ್ಯಾಕ್ ಮಾಡುವ ಹಾಗೂ ಅವುಗಳನ್ನು ಕಳ್ಳತನ ಮಾಡುವ ಕೃತ್ಯಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೂಗಲ್ ಅನ್‌ನೋನ್ ಟ್ರ್ಯಾಕರ್ ಫೀಚರ್ಸ್ ಪರಿಚಯಿಸಿದೆ.
ಏರ್‌ಟ್ಯಾಗ್‌ಗಳು ಮತ್ತು ಟೈಲ್ಸ್‌ಗಳಂತಹ ಬ್ಲೂಟೂತ್ ಟ್ರ್ಯಾಕರ್‌ಗಳನ್ನು ಸಾಮಾನ್ಯವಾಗಿ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ. ಆದರೆ ಕೆಲವರು ಇತರ ಜನರನ್ನು ಹಿಂಬಾಲಿಸಲು ಬಳಸುತ್ತಿದ್ದಾರೆ. ಆದರಿಂದ ನಿಮ್ಮ ಟ್ರ್ಯಾಕ್ ಮಾಡುತ್ತಿರುವ ಅಪರಿಚಿತ ಟ್ರ್ಯಾಕರ್‌ಗಳ ಬಗ್ಗೆ ಗೂಗಲ್‌ನ ಹೊಸ ಫೀಚರ್ಸ್ ತಿಳಿಸಿಕೊಡಲಿದೆ. ಇದರಿಂದ ನಿಮಗೆ ಸಾಕಷ್ಟು ಉಪಯೋಗವಾಗಲಿದ್ದು, ಅಪರಿಚಿತ ಬ್ಲೂಟೂತ್ ಟ್ರ್ಯಾಕರ್‌ಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ಗೂಗಲ್‌ನ ಈ ಹೊಸ ಫೀಚರ್ಸ್ ಆಡ್ರಾಯ್ಡ್ 6 Marshmellow ಅಥವಾ ನಂತರದ ಆವೃತ್ತಿಯಲ್ಲಿ ರನ್ ಆಗುವ ಡಿವೈಸ್‌ನಲ್ಲಿ ಲಭ್ಯವಾಗಲಿದೆ. ಅಂದರೆ ನೀವು ಪ್ರಯಾಣಿಸುವಾಗ ನಿಮ್ಮನ್ನ ಯಾವುದೇ ಅಪರಿಚಿತ ಬ್ಲೂಟೂತ್ ಟ್ರ್ಯಾಕರ್‌ಗಳು ಟ್ರ್ಯಾಕ್ ಮಾಡುತ್ತಿದ್ದರೆ ಕೂಡಲೇ ಗೂಗಲ್ ನಿಮಗೆ ನೋಟಿಫಿಕೇಶನ್ ಕಳುಹಿಸಲಿದೆ. ಈ ಮೂಲಕ ಅಜ್ಞಾತ ಟ್ರ್ಯಾಕರ್ ಗಳ ಬಗ್ಗೆ ಎಚ್ಚರಿಕೆಯನ್ನು ನೀಡಲಿದೆ. ಇದರಿಂದ ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.
ಒಂದು ವೇಳೆ ನೀವು ನಿಮ್ಮನ್ನು ಟ್ರ್ಯಾಕ್ ಮಾಡುತ್ತಿರುವ ಟ್ರ್ಯಾಕರ್ ಬಗ್ಗೆ ಹೆಚ್ಚಿನ ವಿವರಗಳು ಬೇಕು ಎನಿಸಿದರೆ ನಿಮಗೆ ಬಂದಿರುವ ನೋಟಿಫಿಕೇಶನ್ ಕ್ಲಿಕ್ ಮಾಡಬೇಕಾಗುತ್ತದೆ. ನೋಟಿಫಿಕೇಶನ್ ಮೇಲೆ ಟ್ಯಾಪ್ ಮಾಡಿದರೆ ನಿಮ್ಮನ್ನು ಟ್ರ್ಯಾಕರ್ ಎಲ್ಲಿಂದ ಟ್ರ್ಯಾಕ್ ಮಾಡುತ್ತಿದ್ದಾನೆ ಎನ್ನುವ ಲೊಕೇಶನ್ ಮ್ಯಾಪ್ ಅನ್ನು ಕಾಣಬಹುದಾಗಿದೆ. ಅಲ್ಲದೆ ಬಳಕೆದಾರರು ತಮ್ಮ ಫೋನ್‌ನ ಹಿಂಭಾಗದಲ್ಲಿ ಟ್ರ್ಯಾಕರ್ ಅನ್ನು ಅಳವಡಿಸಿಕೊಳ್ಳುವ ಮೂಲಕ ಮಾಲೀಕರ ಸಿರೀಸ್ ನಂಬರ್ ಮತ್ತು ಮಾಹಿತಿಯನ್ನು ಬಹಿರಂಗಪಡಿಸಬಹುದಾಗಿದೆ.

'ಅನ್‌ನೋನ್ ಟ್ರ್ಯಾಕರ್ ಅಲರ್ಟ್ಸ್' ಫೀಚರ್ಸ್ ಆಪಲ್‌ನ ಏರ್‌ಟ್ಯಾಗ್ ಅನ್ನು ಮಾತ್ರ ಬೆಂಬಲಿಸುತ್ತದೆ ಎಂದು ಗೂಗಲ್ ಹೇಳಿದೆ. ಆದರೆ ಈ ಫೀಚರ್ಸ್ ಭವಿಷ್ಯದಲ್ಲಿ ಹೆಚ್ಚಿನ ಬ್ಲೂಟೂತ್ ಆಧಾರಿತ ಟ್ರ್ಯಾಕರ್‌ಗಳಿಗೆ ಬೆಂಬಲವನ್ನು ನೀಡುವ ಸಾಧ್ಯತೆಯಿದೆ. ಇದಲ್ಲದೆ ಗೂಗಲ್ ಈಗಾಗಲೇ 'ಫೈಂಡ್ ಮೈ ಡಿವೈಸ್' ನೆಟ್‌ವರ್ಕ್‌ನಲ್ಲಿ ಸಹ ಕಾರ್ಯನಿರ್ವಹಿಸುತ್ತಿದೆ. ಇದು ಆಪಲ್‌ನ ಆಫರ್ ವಿರುದ್ಧ ಸ್ಪರ್ಧಿಸುತ್ತದೆ. ಅಲ್ಲದೆ ಈ ಫೀಚರ್ಸ್ ಬಳಕೆದಾರರು ಕಳೆದುಹೋದ ವಸ್ತುಗಳನ್ನು ಹುಡುಕಲು ಸಹಾಯ ಮಾಡಲಿದೆ.
ಇನ್ನು ಬ್ಲೂಟೂತ್ ಟ್ರ್ಯಾಕರ್‌ಗಳ ಇತ್ತೀಚಿನ ಸುದ್ದಿಗಳನ್ನು ಗಮನಿಸಿದರೆ ಜಿಯೋ ಕಂಪೆನಿ ಅತಿ ಕಡಿಮೆ ಬೆಲೆಯಲ್ಲಿ ಹೊಸ ಬ್ಲೂಟೂತ್ ಟ್ರ್ಯಾಕರ್ ಜಿಯೋಟ್ಯಾಗ್ ಅನ್ನು ಪರಿಚಯಿಸಿತ್ತು. ಇದು ಡಿವೈಸ್‌ಗಳು ಮತ್ತು ಪರಿಕರಗಳನ್ನು ಟ್ರ್ಯಾಕ್ ಮಾಡುವ ಬ್ಲೂಟೂತ್ ಟ್ರ್ಯಾಕರ್ ಆಗಿದ್ದು, ಆಪಲ್‌ಏರ್‌ಟ್ಯಾಗ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಇದನ್ನು ಸ್ಮಾರ್ಟ್‌ಫೋನ್ ಬಳಕೆದಾರರು ಜಿಯೋಥಿಂಗ್ಸ್ ಅಪ್ಲಿಕೇಶನ್ ಮೂಲಕ ಕನೆಕ್ಟ್ ಮಾಡಬಹುದಾಗಿದೆ. ಜೊತೆಗೆ ನಿಮ್ಮ ಡಿವೈಸ್‌ಗಳನ್ನು ಎಲ್ಲಿ ಇರಿಸಿದ್ದೀರಾ ಅನ್ನೊದನ್ನ ಟ್ರ್ಯಾಕ್ ಮಾಡಲು ಅವಕಾಶ ನೀಡಲಿದೆ.
ನಿಮಗೆ ತಿಳಿದಿರುವಂತೆ ಬ್ಲೂಟೂತ್ ಟ್ರ್ಯಾಕರ್‌ಗಳಿಗೆ ಭಾರಿ ಬೇಡಿಕೆಯಿದೆ. ಇವುಗಳ ಮೂಲಕ ತಮ್ಮ ಕಳೆದುಹೋದ ಕೀಗಳು, ಡಿವೈಸ್‌ಗಳನ್ನು ಸುಲಭವಾಗಿ ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ. ಇದೇ ಕಾರಣಕ್ಕೆ ಸ್ಮಾರ್ಟ್ ಡಿವೈಸ್‌ಗಳ ಜೊತೆಗೊಂದು ಟ್ರ್ಯಾಕಿಂಗ್ ಟ್ಯಾಗ್ ಹೊಂದುವುದಕ್ಕೆ ಬಯಸುತ್ತಾರೆ.


Click it and Unblock the Notifications








