ಸ್ವಾತಂತ್ರ್ಯೋತ್ಸವಕ್ಕೆ ನವಿಲಿನ ಗರಿ ಬಿಚ್ಚಿದ ಗೂಗಲ್

Posted By: Varun
ಸ್ವಾತಂತ್ರ್ಯೋತ್ಸವಕ್ಕೆ ನವಿಲಿನ ಗರಿ ಬಿಚ್ಚಿದ ಗೂಗಲ್
ಭಾರತೀಯರ ಅತ್ಯಂತ ಹೆಮ್ಮೆಯ ದಿನವಾದ ಆಗಸ್ಟ್ 15 ರಂದು ರಜ ಸಿಗುತ್ತೆ ಅಂತ ಕೆಲವರು ಮಜಾ ಮಾಡ್ತಾರೆ, ದೇಶ ಭಕ್ತಿ ಜಾಸ್ತಿ ಇರೋರು ಧ್ವಜ ಹಾರಿಸಿ ಸ್ವೀಟ್ ಹಂಚಿ ಖುಷಿ ಪಡ್ತಾರೆ. ಕೆಲವರು ಆಚೆ ತೋರಿಸಿಕೊಳ್ಳದೆ ಇದ್ರೂ ದೇಶಕ್ಕೋಸ್ಕರ ಪ್ರಾಣತ್ಯಾಗ ಮಾಡಿರೋ ಸೇನಾನಿಗಳ ಸ್ಮರಣೆ ಮಾಡುತ್ತಾರೆ.

ಹೀಗೆ ಒಬ್ಬಬ್ರು ಒಂದೊಂದ್ ಥರ ನೆನೆಸಿಕೊಂಡರೆ, ಗೂಗಲ್ ಕೂಡ ತನ್ನ ಡೂಡಲ್ ಮೂಲಕ ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ.

2003 ರಿಂದ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾ ಬಂದಿರುವ ಅದು 66 ನೆ ದಿನಾಚರಣೆಗೆ ನಮ್ಮ ರಾಷ್ಟ್ರ ಪಕ್ಷಿಯಾದ ನವಿಲಿನ ಡೂಡಲ್ ಪ್ರಕಟಿಸಿದ್ದು, ಅದರ ಕತ್ತಿನ ಭಾಗ 'G' ಅಕ್ಷರದ ಮಾದರಿಯಲ್ಲಿ ಬಗ್ಗಿದ್ದು, ತನ್ನ ರಂಗುರಂಗಿನ ಗರಿಗಳಿಂದ ಸ್ವಾತಂತ್ರ್ಯವನ್ನು ಬಿಂಬಿಸುವಂತೆ ಡೂಡಲ್ ಅನ್ನು ಚಿತ್ರಿಸಲಾಗಿದ್ದು ಬಹಳ ಅರ್ಥಪೂರ್ಣವಾಗಿದೆ.

ಕಳೆದ ವರ್ಷ ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜವಿರುವ ಡೂಡಲ್ ಅನ್ನು ಗೂಗಲ್ ಪ್ರಕಟಿಸಿತ್ತು. ಭಾರತ ಅಷ್ಟೇ ಅಲ್ಲದೆ ಆಗಸ್ಟ್ 15 ರಂದು ದಕ್ಷಿಣ ಕೊರಿಯಾ, ಬಹ್ರೈನ್ ಹಾಗು ಕಾಂಗೋ ಗಣರಾಜ್ಯಗಳೂ ತಮ್ಮ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿದ್ದು, ಆ ದೇಶಕ್ಕೂ ಅದರದೇ ಆದ ಡೂಡಲ್ ಅನ್ನು ಗೂಗಲ್ ಪ್ರಕಟಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot