Home
ಸುದ್ದಿಜಾಲ

ಗೂಗಲ್‌ ಕ್ರೋಮ್‌ನಿಂದ ಅಚ್ಚರಿಯ ಫೀಚರ್ಸ್‌ ಸೇರ್ಪಡೆ! ಇದರ ಲಾಭ ಕೇಳಿದ್ರೆ ಅಚ್ಚರಿ ಪಡ್ತೀರಾ?

ಜನಪ್ರಿಯ ವೆಬ್‌ ಬ್ರೌಸರ್‌ ಗೂಗಲ್‌ ಕ್ರೋಮ್‌ ಮತ್ತೊಮ್ಮೆ ತನ್ನ ಬಳಕೆದಾರ ಮನಗೆದ್ದಿದೆ. ಈ ಭಾರಿ ಬಳಕೆದಾರರ ಅನುಕೂಲಕ್ಕಾಗಿ ಹಲವು ಹೊಸ ಫೀಚರ್ಸ್‌ಗಳನ್ನು ಹೊತ್ತು ತಂದಿದೆ. ಇದರಿಂದ ಬಳಕೆದಾರರಿಗೆ ಬಹು ಉಪಯೋಗವನ್ನು ನೀಡುವ ತನ್ನ ಪ್ರಯತ್ನವನ್ನು ಇನ್ನಷ್ಟು ವಿಸ್ತರಣೆ ಮಾಡಿದೆ. ಸದ್ಯ ಗೂಗಲ್‌ ಕ್ರೋಮ್‌ ಗೂಗಲ್‌ ಮೆಮೊರಿ ಮತ್ತು ಎನರ್ಜಿ ಸೇವರ್‌ ಮೋಡ್‌ಗಳನ್ನು ಮ್ಯಾಕ್‌, ವಿಂಡೋಸ್‌, ಲಿನಕ್ಸ್‌ ಮತ್ತು ಕ್ರೋಮ್‌ಬುಕ್‌ಗಳಲ್ಲಿ ಪರಿಚಯಿಸಿದೆ.

ಗೂಗಲ್‌ ಕ್ರೋಮ್‌ನಿಂದ ಅಚ್ಚರಿಯ ಫೀಚರ್ಸ್‌ ಸೇರ್ಪಡೆ!

ಹೌದು, ಗೂಗಲ್‌ ಕ್ರೋಮ್‌ ಹೊಸದಾಗಿ ಗೂಗಲ್‌ ಮೆಮೊರಿ ಮತ್ತು ಎನರ್ಜಿ ಸೇವರ್‌ ಮೋಡ್‌ಗಳನ್ನು ಪರಿಚಯಿಸಿದೆ. ಇವುಗಳು ವಿಂಡೋಸ್‌, ಲಿನ್ಸ್‌, ಮ್ಯಾಕ್‌ ಮತ್ತು ಕ್ರೋಮ್‌ಬುಕ್‌ನಲ್ಲಿ ಪ್ರಿ ಲೋಡ್‌ ಆಗಿರಲಿದೆ ಎಂದು ಗೂಗಲ್‌ ಹೇಳಿದೆದ. ಇನ್ನು ಈ ಮೋಡ್‌ಗಳನ್ನು ಸೈಡ್‌ಬಾರ್‌ನಲ್ಲಿ ಕ್ರೋಮ್‌ ಸೆಟ್ಟಿಂಗ್ಸ್‌ಗೆ ಹೋಗುವ ಮೂಲಕ ಆಫ್‌ ಮತ್ತು ಆನ್‌ ಮಾಡಬಹುದಾಗಿದೆ. ಇವುಗಳನ್ನು ಸಕ್ರಿಯಗೊಳಿಸುವ ಮೂಲಕ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ. ಹಾಗಾದ್ರೆ ಈ ಹೊಸ ಮೋಡ್‌ಗಳ ಉಪಯೋಗ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿಂಡೋಸ್‌, ಲಿನ್ಸ್‌, ಮ್ಯಾಕ್‌ ಮತ್ತು ಕ್ರೋಮ್‌ಬುಕ್‌ನಲ್ಲಿ ಗೂಗಲ್‌ನ ಮೆಮೊರಿ ಮತ್ತು ಎನರ್ಜಿ ಸೇವರ್‌ ಅನ್ನು ಆಕ್ಟಿವ್‌ ಮಾಡಲಾಗಿದೆ. ಗೂಗಲ್‌ ಕ್ರೋಮ್‌ ಪರಿಚಯಿಸಿರುವ ಮೆಮೊರಿ ಸೇವರ್‌ ಬಳಕೆದಾರರಿಗೆ ಇತರ ಪುಟಗಳು ಮತ್ತು ಅಪ್ಲಿಕೇಶನ್‌ಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲಿದೆ. ಇದಕ್ಕಾಗಿ ಆಟೋಮ್ಯಾಟಿಕ್‌ ಆಗಿ ನಿಷ್ಕ್ರಿಯ ಟ್ಯಾಬ್‌ಗಳಿಂದ ಮೆಮೊರಿಯನ್ನು ಫ್ರಿ ಮಾಡಲಿದೆ. ಇನ್ನು ಮೆಮೊರಿ ಸೇವರ್ ಮೂಲಕ ಬಳಕೆದಾರರು ಉತ್ತಮ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ನಿಮ್ಮ ಟ್ಯಾಬ್‌ಗಳನ್ನು ಕಾಯುವುದು ಇಷ್ಟವಿಲ್ಲದಿದ್ದರೆ "ಫ್ರೀಸ್ ಅಪ್ ಮೆಮೊರಿ ಫ್ರಮ್ ಆಕ್ಟಿವ್ ಟ್ಯಾಬ್" ಬಾರ್‌ಗೆ ಡೈರೆಕ್ಟ್‌ ಆಗಿ ಸೈಟ್‌ಗಳನ್ನು ಸೇರಿಸಲು ಕ್ರೋಮ್‌ ಅನುಮತಿಸಲಿದೆ.

ಗೂಗಲ್‌ ಕ್ರೋಮ್‌ನಿಂದ ಅಚ್ಚರಿಯ ಫೀಚರ್ಸ್‌ ಸೇರ್ಪಡೆ!

ಇನ್ನು ಗೂಗಲ್‌ ಕ್ರೋಮ್‌ ಮೆಮೊರಿ ಸೇವರ್‌ ಮೂಲಕ 30% ಕಡಿಮೆ ಮೆಮೊರಿಯನ್ನು ಬಳಸುತ್ತದೆ. ಜೊತೆಗೆ ನಿಮ್ಮ ಸಕ್ರಿಯ ವೀಡಿಯೊ ಮತ್ತು ಗೇಮಿಂಗ್ ಟ್ಯಾಬ್‌ಗಳನ್ನು ಸರಾಗವಾಗಿ ಚಾಲನೆ ಮಾಡಲು ಇದು ಉಪಯುಕ್ತವಾಗಲಿದೆ. ಇದಲ್ಲದೆ ಕ್ರೋಮ್ ಬ್ಯಾಕ್‌ಗ್ರೌಂಡ್‌ ಆಕ್ಟಿವಿಟಿ ಮತ್ತು ವಿಶ್ಯುಯಲ್‌ ಎಫೆಕ್ಟ್‌ಗಳನ್ನು ಸೀಮಿತಗೊಳಿಸುವ ಮೂಲಕ ಬ್ಯಾಟರಿ ಪವರ್‌ ಅನ್ನು ಸೇವ್‌ ಮಾಡಲಿದೆ. ಇನ್ನು ಗೂಗಲ್‌ ಕ್ರೋಮ್‌ ಮೆಮೊರಿ ಸೇವರ್‌ ಅನಿಮೇಶನ್‌ಗಳು ಮತ್ತು ಮೃದುವಾದ ಸ್ಕ್ರೋಲಿಂಗ್‌ಗಳು, ವೀಡಿಯೊ ಫ್ರೇಮ್ ರೇಟ್‌ಗಳನ್ನು ಸಹ ಒಳಗೊಂಡಿದೆ.

ಇದಲ್ಲದೆ ಗೂಗಲ್‌ ಕ್ರೋಮ್‌ ಇತ್ತೀಚಿಗೆ ಗೂಗಲ್ ಪಾಸ್‌ಕೀಗಳನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಪಾಸ್‌ವರ್ಡ್‌ ಇಲ್ಲದೆ ಲಾಗ್‌ ಇನ್‌ ಮಾಡಬಹುದಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಈ ಸಂಬಂಧ ಪರೀಕ್ಷೆಗಳು ನಡೆದಿದ್ದವು. ಅದರಂತೆ ಗೂಗಲ್ ಉತ್ತಮ ಭದ್ರತೆಗಾಗಿ ಸ್ಥಿರವಾದ M108 ಆವೃತ್ತಿಯೊಂದಿಗೆ ಕ್ರೋಮ್‌ ನಲ್ಲಿ ಪಾಸ್‌ಕೀ ಬೆಂಬಲವನ್ನು ಹೊರತರಲು ಪ್ರಾರಂಭಿಸಿದೆ. ಪಾಸ್‌ಕೀ ಎಂಬುದು ಪಾಸ್‌ವರ್ಡ್‌ಗಳು ಮತ್ತು ಇತರೆ ಫಿಶ್ ಮಾಡಬಹುದಾದ ದೃಢೀಕರಣ ಅಂಶಗಳಿಗೆ ಸುರಕ್ಷಿತ ಬದಲಿ ಮಾರ್ಗವಾಗಿದೆ.

ಗೂಗಲ್‌ ಕ್ರೋಮ್‌ನಿಂದ ಅಚ್ಚರಿಯ ಫೀಚರ್ಸ್‌ ಸೇರ್ಪಡೆ!

ಈ ಪಾಸ್‌ಕೀ ಗಳನ್ನು ರಿ ಯೂಸ್‌ ಮಾಡಲು ಸಾಧ್ಯವಿಲ್ಲ ಆದರಿಂದ ಇವುಗಳು ಹೆಚ್ಚು ಸೆಕ್ಯುರ್‌ ಆಗಿರಲಿದೆ ಎನ್ನಲಾಗಿದೆ. ಅಲ್ಲದೆ ಸರ್ವರ್ ಉಲ್ಲಂಘನೆಗಳಲ್ಲಿ ಸೋರಿಕೆಯಾಗುವುದಿಲ್ಲ ಮತ್ತು ಫಿಶಿಂಗ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸುತ್ತವೆ. ಪಾಸ್‌ಕೀಗಳನ್ನು ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದ್ದು, ವಿವಿಧ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇದು ಕೆಲಸ ಮಾಡುತ್ತದೆ. ಹಾಗೆಯೇ ಪಾಸ್‌ಕೀ ಮೂಲಕ ಸೈನ್ ಇನ್ ಮಾಡಲು ಬಳಕೆದಾರರು ಡಿವೈಸ್‌ ಅನ್ನು ಅನ್‌ಲಾಕ್ ಆಗಿರುವ ರೀತಿಯಲ್ಲಿಯೇ ದೃಢೀಕರಿಸಬೇಕಿದೆ ಎಂದು ಗೂಗಲ್ ಹೇಳಿದೆ.

Best Mobiles in India

English summary
Google’s Memory and Energy Saver are enabled, but users can turn them off/on by going to Chrome Settings under Performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+