ಅನಕ್ಷರಸ್ಥರೂ ಇಂಗ್ಲಿಷ್ ಅರ್ಥಮಾಡಿಕೊಳ್ಳಬಹುದು: ಗೂಗಲ್ ಕ್ರೋಮ್‌ನಲ್ಲಿ ಬಂತು ಇಂತಹ ಫೀಚರ್!
ಪ್ರಸಿದ್ಧ ಹಾಗೂ ಜನಪ್ರಿಯ ಸರ್ಚ್ ಎಂಜಿನ್ ದೈತ್ಯ ಗೂಗಲ್ ತನ್ನ ಕ್ರೋಮ್ ಬ್ರೌಸರ್‌ನಲ್ಲಿ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಇದು ಅನಕ್ಷರಸ್ಥರಿಗೂ ಇಂಗ್ಲಿಷ್ ಭಾಷೆಯನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಇನ್ಮುಂದೆ ವೆಬ್‌ಪುಟಗಳನ್ನು ಓದೋದು ಮಾತ್ರವಲ್ಲ, ನೇರವಾಗಿ ಆಲಿಸಬಹುದು. ಹೌದು, ಗೂಗಲ್ ಯಾವಾಗಲೂ ತನ್ನ ಬಳಕೆದಾರರ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಸಕಲ ಪ್ರಯತ್ನಗಳನ್ನು ಮಾಡುತ್ತದೆ. ಈಗ ಭಾಷೆಯ ನಿರ್ಬಂಧಗಳನ್ನು ತೆಗೆದುಹಾಕುವಲ್ಲಿ Google ಕಾರ್ಯನಿರ್ವಹಿಸುತ್ತಿದೆ. ಇದರಿಂದ ಜನರು ಭಾಷೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಈಗ ಕಂಪನಿಯು Google Chrome ನಲ್ಲಿ ಹೊಸ ಫೀಚರ್ ಅನ್ನು ಸೇರಿಸಲು ಹೊರಟಿದೆ.
ಗೂಗಲ್ ಕ್ರೋಮ್ ಬ್ರೌಸರ್ ಹೊಸ ಮುನ್ನುಡಿ ಬರೆಯಲು ಸಿದ್ಧವಾಗಿದೆ. "Listen to this page' (ಈ ಪುಟವನ್ನು ಆಲಿಸಿ) ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇದನ್ನು ಬಳಸಿಕೊಂಡು, ಆಂಡ್ರಾಯ್ಡ್ ಬಳಕೆದಾರರು ಪಾಡ್‌ಕಾಸ್ಟ್‌ಗಳಂತಹ ವೆಬ್‌ಪುಟಗಳನ್ನು ನೇರವಾಗಿ ಆಲಿಸಬಹುದು. ಅಂದರೆ ಇನ್ನುಮುಂದೆ ವೆಬ್‌ಪುಟಗಳನ್ನು ಓದುವ ಅಗತ್ಯವಿಲ್ಲ. ಅನಕ್ಷರಸ್ಥರೂ ಸಹ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಯನ್ನು ಅರ್ಥಮಾಡಿಕೊಳ್ಳಬಹು. ಈ ಹೊಸ ಫೀಚರ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Google Chromeನ ಹೊಸ ವೈಶಿಷ್ಟ್ಯವೇನು?
ಗೂಗಲ್ ಪ್ರಸಿದ್ಧ ಜನಪ್ರಿಯ ಸರ್ಚ್ ಎಂಜಿನ್ ದೈತ್ಯ. ಇದು ತನ್ನ ಕ್ರೋಮ್ ಬ್ರೌಸರ್‌ನಲ್ಲಿ ಹೊಸ ಫೀಚರ್ ತಂದಿದೆ. ಇದಕ್ಕೆ 'Listen to this page' ಎಂದು ಹೆಸರಿಸಿದೆ. ಇದನ್ನು ವಿಶೇಷವಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಎಂದೇ ತಯಾರಿಸಲಾಗಿದೆ. ವೆಬ್‌ಪುಟದಲ್ಲಿನ ಪಠ್ಯವನ್ನು ಧ್ವನಿಯಲ್ಲಿ ಕೇಳಲು ಇದನ್ನು ಬಳಸಬಹುದು. ಪಠ್ಯಗಳ ರೂಪದಲ್ಲಿ ವಿಷಯವನ್ನು ಅಧ್ಯಯನ ಮಾಡುವ ಅಗತ್ಯವಿಲ್ಲ. ಪ್ರಸ್ತುತ ಈ ಫೀಚರ್ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಇತರ ಬಳಕೆದಾರರಿಗೆ ಲಭ್ಯವಾಗಲಿದೆ.
ಈ ಫೀಚರ್ ಎಷ್ಟು ಭಾಷೆಗಳಲ್ಲಿ ಲಭ್ಯ
Google ತಂದಿರುವ ಈ ವಿಶೇಷ ಫೀಚರ್ ಪ್ರಸ್ತುತ 12 ಭಾಷೆಗಳಲ್ಲಿ ಲಭ್ಯವಿದೆ. ಬಳಕೆದಾರರು ಇಂಗ್ಲಿಷ್, ಹಿಂದಿ, ಬೆಂಗಾಲಿ ಜೊತೆಗೆ ಅರೇಬಿಕ್, ಚೈನೀಸ್, ಫ್ರೆಂಚ್, ಜರ್ಮನ್, ಇಂಡೋನೇಷಿಯನ್, ಜಪಾನೀಸ್, ಪೋರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಆಡಿಯೋವನ್ನು ಕೇಳಬಹುದು. ಸ್ಕ್ರೀನ್ ಲಾಕ್ ಆಗಿದ್ದರೂ ಆಯಾ ಭಾಷೆಗಳಲ್ಲಿ ಆಡಿಯೋ ಕೇಳಲು ಸಾಧ್ಯ ಇರುವಂತೆ ಈ ಫೀಚರ್ ಅನ್ನು ತಯಾರಿಸಲಾಗಿದೆ.
ಈ ಫೀಚರ್ ಯಾರೆಲ್ಲಾ ಬಳಸಬಹುದು?
ಇದಲ್ಲದೇ, ಒಂದು ವೆಬ್‌ಪುಟದಲ್ಲಿ ಆಡಿಯೋವನ್ನು ಕೇಳುವಾಗ, ನಾವು ಇನ್ನೊಂದು ವೆಬ್‌ಪುಟವನ್ನು ಪ್ರವೇಶಿಸಬಹುದು. ಸುದೀರ್ಘ ಲೇಖನಗಳನ್ನು ಮತ್ತು ಕಷ್ಟಕರವಾದ ವಾಕ್ಯಗಳನ್ನು ಓದಲು ಈ ಫೀಚರ್ ತುಂಬಾ ಉಪಯುಕ್ತವಾಗಿದೆ. ಆದರೆ, ಪ್ರಸ್ತುತ ಈ ಫೀಚರ್ ಎಲ್ಲಾ ವೆಬ್‌ಪೇಜ್‌ಗಳಿಗೆ ಬೆಂಬಲಿತವಾಗಿಲ್ಲ. ಆದರೆ, ಬೆಂಬಲಿತ ಪುಟಗಳಿಗೆ ಪ್ಲೇಬ್ಯಾಕ್ ಸೌಲಭ್ಯವು ಕಾಣಿಸುತ್ತದೆ. ಕಂಪನಿಯು ಶೀಘ್ರದಲ್ಲೇ ಎಲ್ಲರಿಗೂ ಈ ವೈಶಿಷ್ಟ್ಯವನ್ನು ಹೊರತರಲಿದೆ.
ಈ ಫೀಚರ್ ಅನ್ನು ಬಳಸುವುದು ಹೇಗೆ?
ಹಂತ 1: Listen to this page ಫೀಚರ್ ಅನ್ನು ನೀವು ಬಳಸಲು ಇಚ್ಛಿಸಿದಲ್ಲಿ ಬಯಸಿದ Google Chrom ತೆರೆಯಿರಿ.
ಹಂತ 2: ನಂತರ, ನೀವು ಕೇಳಲು ಬಯಸುವ ಪುಟಕ್ಕೆ ನೀವು ನ್ಯಾವಿಗೇಟ್ ಮಾಡಬೇಕು.
ಹಂತ 3: ಬಳಿಕ, ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳಿರುವ ಗುರುತಿನ ಮೇಲೆ ಕ್ಲಿಕ್ಕಿಸಿ.
ಹಂತ 4: ನಂತರ ಅಲ್ಲಿ ಕಾಣಿಸುವ 'Listen to this page' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 5: ಈ ಪ್ರಕ್ರಿಯೆಯ ನಂತರ ನೀವು ಈ ಫೀಚರ್ ಅನ್ನು ಬಳಸಲು ಸಾಧ್ಯವಾಗುತ್ತದೆ.
ಹೀಗೆ ನೀವು ಈ ಫೀಚರ್ ಅನ್ನು ಬಳಸಬಹುದು. ಈ ಪ್ರಕ್ರಿಯೆ ಮುಗಿದ ಕೂಡಲೇ, ಧ್ವನಿಯು ಪಾಡ್‌ಕ್ಯಾಸ್ಟ್‌ನಂತೆ ತಕ್ಷಣವೇ ಆರಂಭವಾಗುತ್ತದೆ. ಮ್ಯೂಸಿಕ್ ಪ್ಲೇಯರ್‌ನಂತೆ ನೀವು ಅದನ್ನು ವಿರಾಮಗೊಳಿಸಬಹುದು, ರಿವೈಂಡ್ ಮಾಡಬಹುದು. ವೇಗವಾಗಿ ಫಾರ್ವರ್ಡ್ ಕೂಡ ಮಾಡಬಹುದು ಎಂದು ಗೂಗಲ್ ಹೇಳಿದೆ.
ನಾಲ್ಕು ಧ್ವನಿ ಪ್ರಕಾರಗಳನ್ನು ಹೊಂದಿದೆ
ಇದಲ್ಲದೆ, ನೀವು ವೇಗವಾಗಿ ಕೇಳಲು ಬಯಸಿದರೆ, ಪ್ಲೇಬ್ಯಾಕ್ ವೇಗವನ್ನು ಸಹ ಬದಲಾಯಿಸಬಹುದು. ಇದು ರೂಬಿ, ರಿವರ್, ಫೀಲ್ಡ್ ಮತ್ತು ಮಾಸ್ ಎಂಬ ನಾಲ್ಕು ಧ್ವನಿ ಪ್ರಕಾರಗಳನ್ನು ಹೊಂದಿದೆ. ನೀವು ಇಷ್ಟಪಡುವ ಧ್ವನಿಯನ್ನು ಆಯ್ಕೆ ಮಾಡಬಹುದು. ಆ ಮೂಲಕ ಪಠ್ಯವನ್ನು ಆರಾಮವಾಗಿ ಆಡಿಯೋ ರೂಪದಲ್ಲಿ ಕೇಳಬಹುದು.
ಒಟ್ಟಾರೆ, ಗೂಗಲ್ ಕ್ರೋಮ್‌ನಲ್ಲಿ ಬರುವ ಈ ಫೀಚರ್ ಅನಕ್ಷರಸ್ಥರಿಗೆ ಇಂಗ್ಲಿಷ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಅರ್ಥವೇನೆಂದರೆ ಜನರು ಇನ್ನುಮುಂದೆ ಇಂಗ್ಲಿಷ್ ಭಾಷೆಯನ್ನು ಉದ್ವಿಗ್ನವಾಗಿ ನೋಡುವುದಿಲ್ಲ. ಕಂಪನಿಯು ಶೀಘ್ರದಲ್ಲೇ ಬೇರೆ ಭಾಷೆಗಳಲ್ಲೂ ಈ ಫೀಚರ್ ಅನ್ನು ಹೊರತರಲಿದೆ. ಇದು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.


Click it and Unblock the Notifications








