Home
ಸುದ್ದಿಜಾಲ

ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ ಗೂಗಲ್‌!

ಯಾವುದೇ ಒಂದು ಮಾಹಿತಿ ಬೇಕಿದ್ದರೂ ಥಟ್ಟನೆ ನೆನಪಿಗೆ ಬರೋದು ಗೂಗಲ್‌ ಸರ್ಚ್, ಅಷ್ಟರ ಮಟ್ಟಿಗೆ ಗೂಗಲ್‌ ತನ್ನ ಪ್ರಸಿದ್ದಿಯನ್ನ ಪಡೆದುಕೊಂಡಿದೆ. ಅಷ್ಟೇ ಅಲ್ಲ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ಗೂಗಲ್‌ ಬಳಕೆದಾರರ ನೆಚ್ಚಿನ ಸರ್ಚ್‌ ಇಂಜಿನ್‌ ಆಗಿದೆ. ಸದ್ಯ ಇದೀಗ ಗೂಗಲ್‌ ತನ್ನ ಗೂಗಲ್‌ ಕ್ಲೌಡ್‌ನಲ್ಲಿ ಹೊಸ ಫೀಚರ್ಸ್‌ ಒಂದನ್ನ ಪರಿಚಯಿಸಿದೆ.

ಹೌದು

ಹೌದು ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಗೂಗಲ್‌ ಕ್ಲೌಡ್‌ ನಲ್ಲಿ ಹೊಸ ಮಷಿನ್ ಇಮೇಜ್‌ ಫೀಚರ್ಸ್‌ ಅನ್ನು ಲಾಂಚ್‌ ಮಾಡಿದೆ. ಇದು ಗೂಗಲ್ ಕ್ಲೌಡ್‌ನಲ್ಲಿ ಇಮೇಜ್‌ಗಳನ್ನ ಬ್ಯಾಕಪ್‌ ಮಾಡಲು ಇಲ್ಲವೇ ರಿಸ್ಟೋರ್‌ ಮಾಡಲು ವರ್ಚುವಲ್‌ ಮಷಿನ್ ಅನ್ನು ಕ್ರಿಯೆಟ್‌ ಮಾಡಲು ಉಪಯೋಗವಾಗಲಿದೆ. ಇದರಿಂದ ಜನರಿಗೆ ಅಗತ್ಯ ಮಾಹಿತಿಯನ್ನು ನೀಡುವ ಎಲ್ಲಾ ಮಾಹಿತಿಯನ್ನ ಒಂದೇ ಫೀಚರ್ಸ್‌ನಲ್ಲಿ ನೀಡುವ ಕಂಪ್ಯೂಟ್‌ ಎಂಜಿನ್‌ ಪರಿಚಯಿಸಿದೆ.

ಗೂಗಲ್‌ನಲ್ಲಿ

ಗೂಗಲ್‌ನಲ್ಲಿ ಕಸ್ಟಮ್‌ ಇಮೇಜ್‌ಗಳು ಕೇವಲ ಸಿಂಗಲ್‌ ಡಿಸ್ಕ್‌ನ ವಿಷಯಗಳನ್ನು ಮಾತ್ರ ಸೆರೆಹಿಡಿಯುತ್ತವೆ. ಅಲ್ಲದೆ ನಿಮಗೆ ಅಗತ್ಯವಿರುವ ಅಪ್ಲಿಕೇಶನ್‌ಗಳೊಂದಿಗೆ ನೀವು ಮೊದಲೇ ಕಾನ್ಫಿಗರ್ ಮಾಡಿರುವ ಹೊಸ ನಿದರ್ಶನಗಳನ್ನು ರಚಿಸಲು ಈ ಮಾದರಿಯನ್ನ ಬಳಸಬಹುದಾಗಿದೆ. ಆದರೆ ಇದೀಗ ಮಷಿನ್‌ ಇಮೇಜ್‌ ಫೀಚರ್ಸ್‌ ಪರಿಚಯಿಸಿರೊದ್ರಿಂದ ಬಳಕೆದಾರರಿಗೆ ಹೆಚ್ಚಿನ ಸಮಯದ ಅಭಾವ ತಪ್ಪುತ್ತದೆ. ತಾವು ಆಯ್ಕೆ ಮಾಡಿದ ಪೋಟೋಗೆ ಸಂಬಂಧಿಸಿದ ವಿಚಾರಗಳನ್ನ ಹುಡುಕುವ ಬದಲು ಒಂದೇ ಬಾರಿಗೆ ಎಲ್ಲಾ ಮಾಹಿತಿಗಳನ್ನ ಇಲ್ಲಿ ತಿಳಿಯಬಹುದಾಗಿದೆ.

ಇಮೇಜ್‌

ಮಷಿನ್‌ ಇಮೇಜ್‌ ನಲ್ಲಿ ಲಭ್ಯವಾಗುವ ಚಿತ್ರಗಳು ಹೆಚ್ಚಿನ ವಿಷಯಗಳನ್ನ ಹಾಗೂ ಲಬ್ಯವಿರುವ ಸಂಪೂರ್ಣ ಮಾಹಿತಿಯನ್ನ ಮಲ್ಟಿಪಲ್‌ ಡಿಸ್ಕ್‌ನಲ್ಲಿ ಹೊಂದಿರುತ್ತದೆ. ನೀವು ಒಂದೇ ವರ್ಗಕ್ಕೆ ಸೇರಿದ ಇತರೆ ಇಮೇಜ್‌ಗಳನ್ನು ಆಯ್ಕೆ ಮಾಡಿದರೆ ಅದಕ್ಕೆ ಸಂಬಂಧಿಸಿದ ಮಾಹಿತಿ ಅಲ್ಲಿಯೇ ಲಭ್ಯವಾಗಲಿದೆ. ಇದರಿಂದ ನಿಮಗೆ ಬೇಕಿರುವ ಇಮೇಜ್‌ ಅದರ ಜೊತೆಗಿನ ಮಾಹಿತಿ ಎಲ್ಲವೂ ಒಂದೇ ಕಡೆ ಲಭ್ಯವಾಗಲಿದೆ. ಇದರಿಂದ ಹೆಚ್ಚುವರಿ ವಿಷಯಗಳಿಗಾಗಿ ಹಂತಹಂತವಾಗಿ ಸರ್ಚ್‌ ಮಾಡುವ ಬದಲು ಒಂದೇ ಹಂತದಲ್ಲಿ ವಿಚಾರ ತಿಳಿದುಕೊಳ್ಳಬಹುದಾಗಿರುವುದುರಿಂದ ಡೇಟಾ ಖರ್ಚು ಹಾಗೂ ಸಮಯವನ್ನು ಕಡಿಮೆ ಮಾಡುತ್ತದೆ.

ಇನ್ನು

ಇನ್ನು ಈ ಫೀಚರ್ಸ್‌ನಿಂದಾಗಿ ಬಳಕೆದಾರರ ಹೆಚ್ಚು ಸಮಯವನ್ನು ಉಳಿಸಬಹುದಾಗಿದೆ. ಜೊತೆಗೆ, ಮಷಿನ್‌ ಇಮೇಜ್‌ನಲ್ಲಿ ಡಿಫರೆನ್ಷಿಯಲ್ ಡಿಸ್ಕ್ ಬ್ಯಾಕಪ್ ಟೆಕ್ನಾಲಜಿಯನ್ನ ನೀಡಲಾಗಿದ್ದು, ಇದು ಬಳಕೆದಾರರಿಗೆ ವೇಗವಾದ, ವಿಶ್ವಾಸಾರ್ಹ ಮತ್ತು ವೆಚ್ಚ-ಪರಿಣಾಮಕಾರಿಯಾದ ನಿದರ್ಶನ ನೀಡುವ ಬ್ಯಾಕಪ್‌ಗಳನ್ನು ನೀಡುತ್ತದೆ. ಎಂದು ಈಗಾಗ್ಲೇ ಗೂಗಲ್ ಕಂಪ್ಯೂಟ್ ಎಂಜಿನ್‌ನ ಪ್ರಾಡಕ್ಟ್‌ ಮ್ಯಾನೆಜರ್‌ ಆರಿ ಲಿಬರ್ಮನ್ ಹೇಳಿಕೆ ನೀಡಿದ್ದಾರೆ.

ಸದ್ಯ

ಸದ್ಯ ಈ ಹೊಸ ಮಾದರಿಯ ಮಷಿನ್‌ ಇಮೇಜ್‌ಗಳು ಸ್ಕೇಲೆಬಿಲಿಟಿ, ಬ್ಯಾಕಪ್ ಮತ್ತು ರಿಸ್ಟೋರ್‌ ಮಾಡುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಇದರಿಂದ ನೀವು ಗೂಗಲ್‌ ಕ್ಲೌಡ್‌ನಲ್ಲಿ ಉಳಿಸುವ ಇಮೇಜ್‌ಗಳ ಪೂರ್ಣ ಮಾಹಿತಿಯ ಜೊತೆಗೆ ಮಲ್ಟಿ ಡಿಸ್ಕ್‌ ನೀಡುವುದರಿಂದ ಬಳಕೆದಾರರ ಮಾಹಿತಿಯನ್ನ ಗ್ರಹಿಸುವುದಕ್ಕೆ ಸಾಧ್ಯವಾಗಲಿದೆ. ಇದು ಒಂದು ರೀತಿಯಲ್ಲಿ ಬಳಕೆದಾರರಿಗೆ ಅದರಲ್ಲೂ ವಿಷಯ ಕೇಂದ್ರಿತ ಸಂಪನ್ಮೂಲ ಹುಡುಕುವವರಿಗೆ ಇದು ತುಂಬಾ ಉಪಯುಕ್ತವಾಗಿದೆ.

Best Mobiles in India

English summary
Machine images is a new type of Compute Engine resource that contains all the information people need to create, backup or restore a virtual machine.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+