ಸಮರ್ಪಕ ಗೂಗಲ್ ಸರ್ಚ್ ಗಾಗಿ ಗೂಗಲ್ ತರಬೇತಿ

Posted By: Varun
ಸಮರ್ಪಕ ಗೂಗಲ್ ಸರ್ಚ್ ಗಾಗಿ ಗೂಗಲ್ ತರಬೇತಿ

ನಿಮ್ಮ ತಲೆಗೆ ಏನಾದರೂ ಡೌಟ್ ಬಂದರೆ ಮೊದಲು ಗೊತ್ತಿರುವವರನ್ನು ಕೇಳುತ್ತೀರ ಇಲ್ಲವೆ ಗೂಗಲ್ ಅನ್ನು ಹುಡುಕುತ್ತೀರ. ಕೆಲವೊಂದು ಸಾರಿ ನೀವು ಹುಡುಕಲು ಗೂಗಲ್ ನಲ್ಲಿ ಟೈಪ್ ಮಾಡುವ ಪದ ಸಮರ್ಪಕವಾಗಿ ಇಲ್ಲದಿದ್ದರೆ ನಿಮಗೆ ಬೇಕಾದ ಉತ್ತರ ಸಿಗುವುದಿಲ್ಲ.

ಹಾಗಾಗಿ ನೀವು ಗೂಗಲ್ ನ ಸರ್ಚ್ ಎಂಜಿನ್ ಅನ್ನು ಅರ್ಥ ಮಾಡಿಕೊಳ್ಳಬೇಕು. ಯಾವ ಪದಗಳ ಕಾಂಬಿನೇಶನ್ ಬಳಸಿ ಟೈಪ್ ಮಾಡಿದರೆ ಗೂಗಲ್ ನಿಮಗೆ ಬೇಕಾದ ಮಾಹಿತಿಯನ್ನು ಹೆಕ್ಕಿ ಕೊಡುತ್ತದೆ ಎಂಬುದನ್ನು ತಿಳಿದಿರಬೇಕು. ಈಗ ಗೂಗಲ್ ಕಂಪನಿಯೇ ನಮಗೋಸ್ಕರ ಗೂಗಲ್ ನಲ್ಲಿ ಹುಡುಕುವುದು ಹೇಗೆ ಎಂಬ ಬಗ್ಗೆ ಉಚಿತ ಆನ್ಲೈನ್ ತರಬೇತಿ ನೀಡಲಿದೆ.

ದಿನನಿತ್ಯದ ಚಟುವಟಿಕೆಗಳಿಗೆ ಗೂಗಲ್ ಅನ್ನು ಹೇಗೆ ಬಳಸಬಹುದು, ಯಾವ ತಂತ್ರಗಳನ್ನು ಬಳಸಬೇಕು ಎಂಬ ಬಗ್ಗೆ ಈ ತರಗತಿಗಳಲ್ಲಿ ಹೇಳಿಕೊಡಲಾಗುವುದು. 6 ದಿನಗಳ ಕಾಲ ನಡೆಯುವ ಈ ಕೋರ್ಸ್, ಪ್ರತಿನಿತ್ಯ 50 ನಿಮಿಷಗಳ ಕಾಲ ನಡೆಯಲಿದ್ದು ಕೋರ್ಸ್ ನ ಅಂತ್ಯಕ್ಕೆ ಪ್ರಮಾಣ ಪತ್ರ ವನ್ನೂ ಗೂಗಲ್ ಕೊಡಲಿದೆ.

ಜೂನ್ 26 ರಿಂದ ನೋಂದಣಿ ಶುರುವಾಗಿದ್ದು ಜುಲೈ 16 ರ ಒಳಗೆ ನೋಂದಣಿ ಮಾಡಲು ಕೊನೆಯ ದಿನಾಂಕವಾಗಿದೆ. ಮೊದಲ ಬ್ಯಾಚ್ ಜುಲೈ 10 ಕ್ಕೆ ಶುರುವಾಗಲಿದೆ.

ಈ ಕೂಡಲೇ ನೀವು ರಿಜಿಸ್ಟರ್ ಮಾಡಲು ಈ ಲಿಂಕ್ ಅನ್ನು ನೋಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot