Home
ಸುದ್ದಿಜಾಲ

ಗೂಗಲ್ ಗೆ 7,40,79,50,00,000 ರೂ.ದಂಡ..!

By Avinash

ಆಂಡ್ರಾಯ್ಡ್ ಒಎಸ್ ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್ ಗೆ ಯುರೋಪಿಯನ್ ಯುನಿಯನ್ 74 ಸಾವಿರ ಕೋಟಿ ರೂ. ದಂಡ ವಿಧಿಸಿದೆ. ಆಂಡ್ರಾಯ್ಡ್ ಒಎಸ್ ಕುರಿತು ದಾಖಲಾದ ಅಪನಂಬಿಕೆ ಪ್ರಕರಣದಲ್ಲಿ ಭಾರೀ ಮೊತ್ತದ ದಂಡಕ್ಕೆ ಗುರಿಯಾಗಿದೆ. ಈ ಕುರಿತಂತೆ ವಾರದೊಳಗೆ ತೀರ್ಪು ಪ್ರಕಟಿಸಲಾಗುತ್ತೆ ಎಂದು ಯುರೋಪಿಯನ್ ಯುನಿಯನ್ ಕಾಂಪಿಟೇಷನ್ ಕಮಿಷನರ್ ಮಾರ್ಗರೆಥ್ ವೆಸ್ಟಾಗರ್ ತಿಳಿಸಿದ್ದಾರೆ.

ಗೂಗಲ್ ಗೆ  7,40,79,50,00,000 ರೂ.ದಂಡ..!

ಯುರೋಪಿಯನ್ ಯುನಿಯನ್ ತನಿಖೆಯಲ್ಲಿ ಗೂಗಲ್ ತಪ್ಪು ಬಯಲಾಗಿದ್ದು, ಆಂಡ್ರಾಯ್ಡ್ ಒಎಸ್ ಆಧಾರಿತ ಡಿವೈಸ್ ನಿರ್ಮಿಸುವ ಕಂಪನಿಗಳನ್ನು ಕಾನೂನು ಬಾಹಿರ ನಿಯಮಗಳಿಗೆ ಒಳಪಡಿಸಿತ್ತು. ಇದರಿಂದ ಸ್ಪರ್ಧಾತ್ಮಕತೆಗೆ ಮತ್ತು ಗ್ರಾಹಕರ ಆಯ್ಕೆಗೆ ಪೆಟ್ಟು ನೀಡಿದೆ ಎನ್ನಲಾಗಿದೆ. ಜಗತ್ತಿನಲ್ಲಿ 80%ಕ್ಕೂ ಹೆಚ್ಚು ಸ್ಮಾರ್ಟ್ ಪೋನ್ ಗಳಲ್ಲಿ ಆಂಡ್ರಾಯ್ಡ್ ಒಎಸ್ ಬಳಕೆಯಾಗುತ್ತಿದೆ. ಇದರಿಂದ ಹೆಚ್ಚಿನ ಬಳಕೆದಾರರು ಆಂಡ್ರಾಯ್ಡ್ ಗ್ಯಾಡ್ಜೆಟ್ ಗಳನ್ನು ಹುಡುಕುತ್ತಾರೆ. ಇದು ಗೂಗಲ್ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.

2016ರಿಂದ ಆಂಡ್ರಾಯ್ಡ್ ವಿರುದ್ಧದ ಅಪನಂಬಿಕೆ ಪ್ರಕರಣವನ್ನು ತನಿಖೆ ಮಾಡಲು ಯುರೋಪಿಯನ್ ಯುನಿಯನ್ ಪ್ರಾರಂಭಿಸಿತ್ತು. ಗೂಗಲ್ ಆಂಡ್ರಾಯ್ಡ್ ಓಎಸ್ ಪರವಾನಗಿ ನೀಡಲು ಅನೇಕ ಷರತ್ತುಗಳನ್ನು ಹಾಕಿರುವುದು ಸಾಬೀತಾಗಿತ್ತು. 11 ಬಿಲಿಯನ್ ಡಾಲರ್ ದಂಡ ವಿಧಿಸಬಹುದಾಗಿದೆ. ಆದರೆ, ಸಂಪೂರ್ಣ ತೀರ್ಪು ಹೊರ ಬಿದ್ದ ಮೇಲೆ ದಂಡದ ಬಗ್ಗೆ ಖಚಿತ ಮಾಹಿತಿ ಸಿಗುತ್ತದೆ.

ಗೂಗಲ್ ತನ್ನ ಸರ್ಚ್ ಇಂಜಿನ್ ನಿಂದ ಮತ್ತು ಜಾಹೀರಾತುಗಳನ್ನು ಬಳಸಿದ ವೆಬ್ ಸೈಟ್ ಗಳಿಂದ ಸ್ಪರ್ಧಿಗಳನ್ನು ನಿಷೇಧಿಸಿರುವ ಕುರಿತು ಮೂರನೇ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

How to view all photos, pages, comments and posts you liked on Facebook (KANNADA)

ಗೂಗಲ್ ಗೆ  7,40,79,50,00,000 ರೂ.ದಂಡ..!

ಯುರೋಪಿಯನ್ ಯುನಿಯನ್ ನಿಂದ ಗೂಗಲ್ ಸಂಸ್ಥೆ ಈ ರೀತಿ ಶಿಕ್ಷೆಗೊಳಗಾಗಿರುವುದು ಇದು 2ನೇ ಬಾರಿಯಾಗಿದೆ. ಕಳೆದ ವರ್ಷ ಶಾಪಿಂಗ್ ಶಾಪಿಂಗ್ ಸೇವೆಗಳ ಹೋಲಿಕೆಯಲ್ಲಿ ನಡೆದಿರುವ ಅಕ್ರಮದಲ್ಲಿ ಗೂಗಲ್ ಗೆ 2.7 ಬಿಲಿಯನ್ ಡಾಲರ್ ದಂಡ ವಿಧಿಸಲಾಗಿತ್ತು. ನಂತರ ಗೂಗಲ್ ತನ್ನ ಹುಡುಕಾಟ ಫಲಿತಾಂಶಗಳಲ್ಲಿ ಶಾಪಿಂಗ್ ಕೊಡುಗೆ ಹೋಲಿಸುವಲ್ಲಿ ಬದಲಾವಣೆಗಳನ್ನು ಪರಿಚಯಿಸಿತ್ತು.
ಯುರೋಪಿಯನ್ ನಿಯಂತ್ರಕರು ಈ ಹಿಂದೆ ಮೈಕ್ರೋಸಾಫ್ಟ್, ಇಂಟೆಲ್, ಆಪಲ್, ಗೂಗಲ್, ಫೇಸ್ ಬುಕ್ ಮತ್ತು ಅಮೆಜಾನ್ ಗಳನ್ನು ತನಿಖೆ ನಡೆಸಿತ್ತು.

Best Mobiles in India

English summary
Google could face up to $11 billion in EU anti-trust case for its Android OS. to know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+