ಫೋನ್‌ನಲ್ಲಿ ಪ್ರಮುಖ ಫೈಲ್‌ಗಳನ್ನು ತೆರೆಯಲು ಸಾಧ್ಯವಾಗದೇ? ಹೀಗೆ ಮಾಡಿ!!

Written By:

ಇಮೇಲ್ ಮೂಲಕ ರಿಪ್ಲೇ ಬರೆಯುವುದು ಮೊಬೈಲ್‌ಗಳ ಮೂಲಕ ಈಗ ಸುಲಭ ಸಾಧ್ಯ. ಆದರೆ, ಇಮೇಲ್‌ಗಳ ಮೂಲಕ ಬರುವ ಬಹುತೇಕ ಡಾಕ್ಯುಮೆಂಟ್ ಫೈಲ್‌ಗಳನ್ನು ತೆರೆಯಲು ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಸಪೋರ್ಟಿಂಗ್ ರೀಡರ್ ಇನ್‌ವೋಲ್ಟ್ ಇರುವುದಿಲ್ಲ. ಹಾಗಾಗಿ, ಅಂತಹ ಸ್ಮಾರ್ಟ್‌ಫೋನ್ ಹೊಂದಿರುವವರು ಕೆಲವು ಫೈಲ್‌ಗಳನ್ನು ತೆರೆಯಲು ಸಾಧ್ಯವಿಲ್ಲಾ.!!

ಹೌದು, ಎಲ್ಲವೂ ಸ್ಮಾರ್ಟ್‌ಫೋನ್ ಮೂಲಕವೇ ನಡೆಯುವಾಗ ಹಲವು ಫೈಲ್‌ಗಳು ನಮ್ಮ ಸ್ಮಾರ್ಟ್‌ಫೋನ್‌ ಮೂಲಕ ತೆರೆಯುವುದಿಲ್ಲ. ಇದರಿಂದ ಕೆಲವೊಮ್ಮೆ ಸ್ಮಾರ್ಟ್‌ಫೋನ್ ಬಳಕೆ ಕಿರಿಕಿರಿ ಎನ್ನಿಸಬಹುದು.! ಹಾಗಾಗಿ, ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಯಾವುದೇ ಫೈಲ್ ತೆರೆಯಲು ಬೇಕಾದ ಆಯ್ಕೆ ಏನು ಎಂದು ತಿಳಿಸಿಕೊಡುತ್ತೇವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪ್ ಇನ್‌ಸ್ಟಾಲ್ ಮಾಡಿ.!!

ಆಪ್ ಇನ್‌ಸ್ಟಾಲ್ ಮಾಡಿ.!!

ಮೊಬೈಲ್‌ಗಳಲ್ಲಿ ಡಾಕ್ಯುಮೆಂಟ್ ಫೈಲ್ ತೆರೆಯುವಂತಹ ತೊಂದರೆ ಇದ್ದರೆ ಕೇವಲ ಆಪ್ ಇನ್‌ಸ್ಟಾಲ್ ಮಾಡುವ ಮೂಲಕ ಈ ತೊಂದರೆ ಬಗೆಹರಿಸಿಕೊಳ್ಳಬಹುದು. ಈ ಆಪ್ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಎಲ್ಲಾ ಫೈಲ್‌ಗಳನ್ನು ತೆರೆಯುತ್ತದೆ. ಇದರಿಂದ ಪಿಸಿ ಮೊರೆ ಹೋಗುವುದನ್ನು ತಪ್ಪಿಸಬಹುದು.!!

ಗೂಗಲ್ ಡಾಕ್ಸ್ ಆಪ್ ಸಹಕಾರಿ.

ಗೂಗಲ್ ಡಾಕ್ಸ್ ಆಪ್ ಸಹಕಾರಿ.

ಬಹುತೇಕ ವರ್ಡ್ ಫೈಲ್‌ಗಳನ್ನು ತೆರೆಯಲು ಗೂಗಲ್ ಡಾಕ್ಸ್ ಹೆಚ್ಚು ಸಪೋರ್ಟ್ ಮಾಡುತ್ತದೆ. ಡಾಕ್ಯುಮೆಂಟ್ ಫೈಲ್ ತೆರೆಯುವ ಜತೆಗೆ ಅದರಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದರೆ ಅದನ್ನು ತಿದ್ದುವ (edit) ಅವಕಾಶವೂ ಗೂಗಲ್ ಡಾಕ್ಸ್‌ನಲ್ಲಿದೆ.! ಹಾಗಾಗಿ, ಗೂಗಲ್ ಡಾಕ್ಸ್ ಆಪ್ ಬಹಳ ಸಹಕಾರಿ.!!

ಫೈಲ್ ಅನ್ನು ಪಿಡಿಎಫ್ ಆಗಿ ಕೂಡ ಸೇವ್ ಮಾಡಿ!!

ಫೈಲ್ ಅನ್ನು ಪಿಡಿಎಫ್ ಆಗಿ ಕೂಡ ಸೇವ್ ಮಾಡಿ!!

ಗೂಗಲ್ ಡಾಕ್ಸ್‌ನಲ್ಲಿ ಡಾಕ್ಯುಮೆಂಟ್ ಫೈಲ್ ಪುಟ ಹೇಗೆ ಕಾಣುತ್ತದೆ ಎಂಬುದನ್ನು ಮೊಬೈಲ್‌ನಲ್ಲೇ ನೋಡಬಹುದು. ಅಲ್ಲದೆ ಡಾಕ್ಯುಮೆಂಟ್ ಫೈಲ್‌ನಲ್ಲಿ ಟೆಕ್ಸ್ಟ್‌ ಫಾಂಟ್ ಹಾಗೂ ಗಾತ್ರವನ್ನು ಬದಲಿಸಬಹುದು. ಇದೆಲ್ಲಾ ಬಿಡಿ ಫೈಲ್ ಅನ್ನು ಪಿಡಿಎಫ್ ಆಗಿ ಕೂಡ ಸೇವ್ ಮಾಡಿಕೊಳ್ಳಬಹುದು.

 ಹೊಸ ವರ್ಡ್ ಫೈಲ್ ರಚಿಸಬಹುದು.

ಹೊಸ ವರ್ಡ್ ಫೈಲ್ ರಚಿಸಬಹುದು.

ಡಾಕ್ಯುಮೆಂಟ್ಸ್ ತೆರೆಯುವ ರೀತಿಯಲ್ಲಿಯೇ ಗೂಗಲ್ ಡಾಕ್ಸ್ ಆಪ್ ಮೂಲಕವೇ ಹೊಸ ವರ್ಡ್ ಫೈಲ್ ರಚಿಸಬಹುದು. ಹಾಗಾಗಿ, ನಿಮ್ಮ ಮೊಬೈಲ್ ಡಾಕ್ಯುಮೆಂಟ್ ಫೈಲ್‌ಗಳಿಗೆ ಸಪೋರ್ಟ್ ಮಾಡುತ್ತಿಲ್ಲವಾದರೆ ಗೂಗಲ್ ಸ್ಟೋರ್‌ಗೆ ಹೋಗಿ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.!!

ಓದಿರಿ:ಗ್ಯಾಲಾಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಹೇಗಿರಲಿದೆ?..ಫೀಚರ್ಸ್ ಏನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
When it comes to writing and editing. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot