ಪಾನಿಪುರಿ ಅಂದ್ರೆ ಇಷ್ಟಾನಾ?..ಹಾಗಿದ್ರೆ ನೀವು ತಿಳಿಯಲೇಬೇಕು ಈ ಕಟ್ಟಾ-ಮಿಟ್ಟಾ ಕಹಾನಿ!
ಪಾನಿಪುರಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇದೀಗ ಪಾನಿಪುರಿ ಗೂಗಲ್ ಅನ್ನು ಕೂಡ ಆಕರ್ಷಿಸಿದೆ, ಇದಕ್ಕೆ ಸಾಕ್ಷಿಯೆಂಬಂತೆ ಗೂಗಲ್ ತನ್ನ ಡೂಡಲ್ ಮೂಲಕ ಪಾನಿಪುರಿಗೆ ಗೌರವ ಸಲ್ಲಿಸಲಿದೆ. ಅಷ್ಟೇ ಅಲ್ಲ ತನ್ನ ಗೂಗಲ್ ಡೂಡಲ್‌ನಲ್ಲಿ ಪಾನಿಪುರಿ ಗೇಮ್ ಅನ್ನು ಆಡಲು ಅವಕಾಶ ನೀಡಿದೆ.
ಹೌದು, ಗೂಗಲ್ ತನ್ನ ಗೂಗಲ್ ಸರ್ಚ್ ಪೇಜ್‌ನಲ್ಲಿ ಹೊಸ ಪಾನಿಪುರಿ ಡೂಡಲ್ ಗೇಮ್ ಪರಿಚಯಿಸಿದೆ. ತನ್ನ ಸರ್ಚ್ ಲೋಗೋವನ್ನು ಪಾನಿಪುರಿ ಡೂಡಲ್‌ಗೆ ಬದಲಾಯಿಸುವ ಮೂಲಕ ಪಾನಿಪುರಿಗೆ ವಿಶೇಷ ಗೌರವ ನೀಡಿದೆ. ಜೊತೆಗೆ ಪಾನಿಪುರಿ ಪ್ರಿಯರು ಗೂಗಲ್ ಡೂಡಲ್‌ನಲ್ಲಿ ಗೇಮ್ ಆಡುವುದಕ್ಕೆ ಕೂಡ ಅವಕಾಶ ನೀಡಿದೆ. ಹಾಗಾದ್ರೆ ಪಾನಿಪುರಿ ಡೂಡಲ್‌ನಲ್ಲಿ ಗೇಮ್ ಆಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಪಾನಿಪುರಿಗೆ ಡೂಡಲ್ ಗೌರವ ನೀಡಿದ್ದು ಯಾಕೆ?
ಗೂಗಲ್ ಇಂದು ತನ್ನ ಸರ್ಚ್ ಪೇಜ್‌ನಲ್ಲಿ ಪಾನಿಪುರಿ ಗೇಮ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಏಷ್ಯಾದಾದ್ಯಂತ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಪಾನಿಪುರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. 2015 ರಲ್ಲಿ ಇದೇ ದಿನದಂದು, ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ 51 ವಿವಿಧ ವಿಧದ ಪಾನಿ ಪುರಿಗಳನ್ನು ನೀಡುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಲಾಗಿತ್ತು. ಅದನ್ನು ನೆನಪು ಮಾಡುವ ಪ್ರಯತ್ನವಾಗಿ ಗೂಗಲ್ ತನ್ನ ಡೂಡಲ್‌ನಲ್ಲಿ ಪಾನಿಪುರಿ ಗೇಮ್ ಗೌರವ ನೀಡಿದೆ.
ಗೂಗಲ್ ಡೂಡಲ್ ಪಾನಿಪುರಿಗೇಮ್ ಆಡುವುದು ಹೇಗೆ?
ಗೂಗಲ್ ತನ್ನ ಡೂಡಲ್ ಲೋಗೋವನ್ನು ಪಾನಿಪುರಿ ಗೇಮ್ ಆಗಿ ಬದಲಾಯಿಸಿದೆ. ಇದರ ಮೇಲೆ ಕ್ಲಿಕ್ ಮಾಡಿದರೆ ಪಾನಿಪುರಿ ಗೇಮ್ ತೆರೆದುಕೊಳ್ಳಲಿದೆ. ಇದರಲ್ಲಿ ಆಟಗಾರರು ಪಾನಿ ಪುರಿ ಮಾರಾಟಗಾರರಾಗಿ ಕಾರ್ಯನಿರ್ವಹಿಸುವಂತೆ ಕಾಣಲಿದೆ. ಅದರಂತೆ ನೀವು ಗ್ರಾಹಕರಿಗೆ ಅವರು ಬಯಸಿದ ನೀರಿನ ಪರಿಮಳದೊಂದಿಗೆ ಪಾನಿ ಪುರಿಯನ್ನು ಬಡಿಸುವುದಕ್ಕೆ ಅವಕಾಶ ನೀಡಲಿದೆ. ಈ ಗೇಮ್ ಸ್ವಲ್ಪಮಟ್ಟಿಗೆ ಕ್ಯಾಂಡಿ ಕ್ರಷ್ ಗೇಮ್ ಮಾದರಿಯಲ್ಲಿಯೇ ವಿನ್ಯಾಸಗೊಳಿಸಲಾಗಿದೆ.
ಇನ್ನು ಈ ಗೇಮ್‌ನಲ್ಲಿ ಆಟಗಾರರಿಗೆ ಚಿತ್ರಗಳ ರೂಪದಲ್ಲಿ ಗ್ರಾಹಕರಿಗೆ ಏನು ಬೇಕು ಅನ್ನೊದನ್ನ ತೋರಿಸಲಿದೆ. ಅಲ್ಲದೆ ನೀವು ಗ್ರಾಹಕರಿಗೆ ಪಾನಿಪುರಿ ನೀಡುವುದಕ್ಕೆ ಪಾನಿಪುರಿಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಮೇಲ್ಭಾಗದಲ್ಲಿ ತೋರಿಸಿರುವ ಚಿತ್ರದ ಮೇಲೆ ಕ್ಲಿಕ್ ಮಾಡುತ್ತಾ ಸಾಗಬೇಕಾಗುತ್ತದೆ. ಇನ್ನು ಈ ಗೇಮ್‌ನಲ್ಲಿ ಎರಡು ವಿಭಿನ್ನ ರೀತಿಯ ಪಾನಿಪುರಿಗಳನ್ನು ತೋರಿಸಲಾಗುತ್ತದೆ. ಇದರ ಮೇಲೆ ಟ್ಯಾಪ್ ಮಾಡುವ ಮೂಲಕ ಗೇಮ್ ಅಲ್ಲಿ ಮುಂದುವರೆಯಬಹುದಾಗಿದೆ.
ಎರಡು ವಿಭಿನ್ನ ವಿಧಾನಗಳಲ್ಲಿ ಲಭ್ಯವಿರುವ ಪಾನಿಪುರಿಗೇಮ್ ಸಮಯ ಮತ್ತು ವಿಶ್ರಾಂತಿ ಆಯ್ಕೆಯಲ್ಲಿ ಲಭ್ಯವಿದೆ. ಟೈಮ್ಡ್ ಮೋಡ್‌ನಲ್ಲಿ, ಆಟಗಾರರು ಸೀಮಿತ ಸಮಯವನ್ನು ಹೊಂದಿರುತ್ತಾರೆ, ಇದರಲ್ಲಿ ಅವರು ಪಾನಿಪುರಿಸ್ ಬೋರ್ಡ್‌ನಿಂದ ಸರಿಯಾದ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ಆಡಬೇಕಾಗುತ್ತದೆ. ಆದರೆ ರಿಲ್ಯಾಕ್ಸ್ಡ್ ಮೋಡ್ ಯಾವುದೇ ಟೈಮರ್ ಅನ್ನು ಹೊಂದಿಲ್ಲ. ಇದರಲ್ಲಿ ಆಟವಾಡುವವರಿಗೆ ಮೂರು ರೀತಿಯ ಅವಕಾಶಗಳು ಲಭ್ಯವಾಗಲಿವೆ.

ಪಾನಿಪುರಿ ಹುಟ್ಟಿದ್ದು ಹೇಗೆ? ಇದರ ಹಿಂದೆ ಇದೆ ಮಹಾಭಾರತದ ಕಥೆ?
ಭಾರತದಲ್ಲಿ ಯಾವುದೇ ಒಂದು ವಿಚಾರವನ್ನು ತೆಗೆದುಕೊಂಡರು ಅದಕ್ಕೆ ದಂತಕಥೆಗಳ ಮೂಲ ಇದ್ದೆ ಇರುತ್ತದೆ. ಅದರಂತೆ ನಮ್ಮ ನಿಮ್ಮೆಲ್ಲರ ಪಾನಿಪುರಿಗೂ ಕೂಡ ಒಂದು ದಂತಕಥೆಯಿದೆ. ಈ ದಂತಕಥೆಯ ಪ್ರಕಾರ ಪಾನಿಪುರಿ ಹುಟ್ಟಿದ್ದೆ ಮಹಭಾರತದ ಕಾಲದಲ್ಲಿ ಎನ್ನಲಾಗಿದೆ. ದ್ರೌಪದಿಯು ಸೀಮಿತವಾಗಿದ್ದ ಆಹಾರ ಪದಾರ್ಥಗಳನ್ನು ಪಂಚಪಾಂಡವರಿಗೂ ಹಂಚಬೇಕಾದ ಅನಿವಾರ್ಯತೆ ಎದುರಾದಗ ಪಾನಿಪುರಿಯನ್ನು ಮಾಡಿದಳು ಎಂದು ಹೇಳಲಾಗಿದೆ. ಏಕೆಂದರೆ ಪಾನಿಪುರಿ ಮಾಡುವುದು ತುಂಬಾ ಸುಲಭವಾಗಿದ್ದು, ಆಲೂಗಡ್ಡೆ ಮತ್ತು ತರಕಾರಿಗಳು ಹಾಗೂ ಸ್ವಲ್ಪ ಪ್ರಮಾಣದ ಗೋಧಿ ಹಿಟ್ಟನ್ನು ಬಳಸಿ ದ್ರೌಪದಿ ಪಾನಿಪುರಿ ಮಾಡಿದ್ದಳು ಎಂದು ಹೇಳಲಾಗುತ್ತದೆ.


Click it and Unblock the Notifications








