ಗೂಗಲ್‌ ಶಾಪಿಂಗ್‌ ಹಬ್ಬ:1 ದಿನ ವಿಸ್ತರಣೆ

Posted By:

ಗೂಗಲ್‌ ಆನ್‌ಲೈನ್‌ ಶಾಪಿಂಗ್‌ ಹಬ್ಬವನ್ನು ಒಂದು ದಿನ ವಿಸ್ತರಿಸಿದ್ದು,ನಾಳೆಗೆ ಕೊನೆಯಾಗಲಿದೆ. ಗ್ರಾಹಕರು ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ ವಸ್ತುವನ್ನು ಖರೀದಿಸಬಹುದಾಗಿದೆ.

ಗೂಗಲ್‌ ಡಿಸೆಂಬರ್‌ 11ರಿಂದ ಆನ್‌ಲೈನ್‌ ಶಾಪಿಂಗ್ ಹಬ್ಬವನ್ನು ಆರಂಭಿಸಿದ್ದು ಇಂದು ಕೊನೆಯಾಗಬೇಕಿತ್ತು. ಆರಂಭದ ದಿನ ಕೆಲವು ತಾಂತ್ರಿಕ ಕಾರಣದಿಂದಾಗಿ ವೆಬ್‌ಸೈಟ್‌ ಓಪನ್‌ ಆಗುತ್ತಿರಲಿಲ್ಲ.ವೆಬ್‌ಸೈಟ್‌ ಸರಿಯಾದ ಬಳಿಕ ಆನ್‌ಲೈನಲ್ಲಿ ವಸ್ತುಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನ ವಿಸ್ತರಿಸುವುದಾಗಿ ಗೂಗಲ್‌ ಟ್ವೀಟರ್‌ನಲ್ಲಿ ತಿಳಿಸಿದೆ.

<blockquote class="twitter-tweet blockquote" lang="en"><p>We're so sorry for the delay in the <a href="https://twitter.com/search?q=%23GOSF&src=hash">#GOSF</a> launch.The site will be up soon and you can shop through the deals being offered until 13th Dec</p>— Google India (@googleindia) <a href="https://twitter.com/googleindia/statuses/410490179317542912">December 10, 2013</a></blockquote> <script async src="//platform.twitter.com/widgets.js" charset="utf-8"></script>
ಕಳೆದ ವರ್ಷದಿಂದ ಗೂಗಲ್‌ ಈ ರೀತಿಯ ಆನ್‌ಲೈನ್‌ ಶಾಪಿಂಗ್‌ ಹಬ್ಬವನ್ನು ವರ್ಷ‌ಕ್ಕೊಮ್ಮೆ ಆಯೋಜಿಸುತ್ತಿದ್ದು,ಕಳೆದ ವರ್ಷದ ಹಬ್ಬಕ್ಕೆ ಗ್ರಾಹಕರು ಮತ್ತು ಆನ್‌ಲೈನ್‌ ಶಾಪಿಂಗ್‌ ತಾಣಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು.ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ಪ್ರತಿದಿನ ನಡೆಯುವ ವ್ಯವಹಾರಕ್ಕಿಂತ ಶೇ.350 ಹೆಚ್ಚಿನ ಪ್ರಮಾಣದ ವ್ಯವಹಾರ ಈ ಹಬ್ಬದ ಸಂದರ್ಭದಲ್ಲಿ ನಡೆದಿತ್ತು.

ಉತ್ಪನ್ನಗಳ ಮೇಲೆ ಶೇ.20 ರಿಂದ ಶೇ.80ರಷ್ಟು ರಿಯಾಯಿತಿ ದರವನ್ನು ಕಂಪೆನಿಗಳು ಘೋಷಿಸಿದ್ದು,ಸ್ಪೀಕರ್‌ಗಳ ಮೇಲೆ ಶೇ.50,ಮೊಬೈಲ್‌ಗಳ ಮೇಲೆ ಶೇ.45,ಕಂಪ್ಯೂಟರ್‌ ಟ್ಯಾಬ್ಲೆಟ್‌ಗಳ ಮೇಲೆ ಶೇ.30 ದರ ಕಡಿತಗೊಂಡಿದೆ.ಮನೆ ಬಳಕೆ ವಸ್ತುಗಳು ಪಿಠೋಪಕರಣಗಳು,ಜೊತೆಗೆ ಪ್ರವಾಸಿ ಟಿಕೆಟ್‌ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ: ಗೂಗಲ್‌ ಶಾಪಿಂಗ್‌ ಹಬ್ಬ-ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot