Home
ಸುದ್ದಿಜಾಲ

ಗೂಗಲ್‌ ಫ್ಲೈಟ್ಸ್ ಸೇರಿದ ಹೊಸ ಆಯ್ಕೆ.. ಕಡಿಮೆ ಬೆಲೆಯ ಫ್ಲೈಟ್‌ ಟಿಕೆಟ್‌ ಖರೀದಿಸೋದು ಇನ್ನು ಸುಲಭ!

ಕಡಿಮೆ ಬೆಲೆಯಲ್ಲಿ ವಿಮಾನ ಟಿಕೆಟ್‌ ಅನ್ನು ಖರೀದಿಸಬೇಕೆಂದು ಕೊಂಡವರಿಗೆ ಗೂಗಲ್‌ ಗುಡ್‌ನ್ಯೂಸ್‌ ನೀಡಿದೆ. ಗೂಗಲ್‌ನ ಆನ್‌ಲೈನ್‌ ಫ್ಲೈಟ್‌ ಸರ್ಚ್‌ ಸೇವೆಯಾದ ಗೂಗಲ್‌ ಫ್ಲೈಟ್ಸ್‌ ಆಯ್ಕೆಯಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಬಜೆಟ್‌ ಸ್ನೇಹಿ ಬೆಲೆಯಲ್ಲಿ ಫ್ಲೈಟ್‌ ಟಿಕೆಟ್‌ ಖರೀದಿಸುವುದಕ್ಕೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ.

ಹೌದು, ಗೂಗಲ್‌ ಫ್ಲೈಟ್ಸ್‌ ಆಯ್ಕೆಯಲ್ಲಿ ಇನ್‌ಸೈಟ್ಸ್‌ (insights) ಎನ್ನುವ ಹೊಸ ಫೀಚರ್ಸ್‌ ಪರಿಚಯಿಸಲಾಗಿದೆ. ಇದು ವಿಮಾನ ಪ್ರಯಾಣಿಕರಿಗೆ ಅತ್ಯಂತ ಬಜೆಟ್‌ ಸ್ನೇಹಿ ಬೆಲೆಗಳಲ್ಲಿ ಫ್ಲೈಟ್‌ ಟಿಕೆಟ್‌ ಖರೀದಿಸಲು ಸೂಕ್ತ ಸಮಯ ಯಾವುದು ಎಂದು ನಿರ್ಧರಿಸುವುದಕ್ಕೆ ಸಹಾಯ ಮಾಡಲಿದೆ. ಇದು ಒದಗಿಸುವ ಸಲಹೆಗಳು ಆಯ್ದ ವಿಮಾನಕ್ಕೆ ನಿರ್ದಿಷ್ಟವಾದ ಐತಿಹಾಸಿಕ ಡೇಟಾವನ್ನು ಆಧರಿಸಿವೆ ಎಂದು ಹೇಳಲಾಗಿದೆ. ಹಾಗಾದ್ರೆ ಗೂಗಲ್‌ ಫ್ಲೈಟ್ಸ್‌ insights ಫೀಚರ್ಸ್‌ ಕಾರ್ಯ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಫ್ಲೈಟ್ಸ್ ಸೇರಿದ ಹೊಸ ಆಯ್ಕೆ.. ಫ್ಲೈಟ್‌ ಟಿಕೆಟ್‌ ಖರೀದಿಸೋದು ಇನ್ನು ಸುಲಭ

ಗೂಗಲ್‌ ಫ್ಲೈಟ್ಸ್‌ ಸೇರಿರುವ ಇನ್‌ಸೈಟ್ಸ್‌ ಫೀಚರ್ಸ್‌ ಕಡಿಮೆ ಬೆಲೆಗೆ ಫ್ಲೈಟ್‌ ಟಿಕೆಟ್‌ ಬಯಸೋರಿಗೆ ಸೂಕ್ತವಾಗಿದೆ. ಇದು ನಿಮಗೆ ಯಾವಾಗ ಕಡಿಮೆ ಬೆಲೆಗೆ ವಿಮಾನ ಟಿಕೆಟ್‌ ಲಭ್ಯವಾಗಲಿದೆ ಅನ್ನೊದನ್ನ ಸೂಚಿಸಲಿದೆ. ಗೂಗಲ್‌ ನ ಅಧಿಕೃತ ಬ್ಲಾಗ್ ಪೋಸ್ಟ್‌ನ ಪ್ರಕಾರ, ಗೂಗಲ್‌ ಫ್ಲೈಟ್ಸ್‌ನ ಹೊಸ ಆಯ್ಕೆಯು ಬಳಕೆದಾರರಿಗೆ ಫ್ಲೈಟ್‌ ಟಿಕೆಟ್‌ ಸರ್ಚ್‌ ಮಾಡುವವರಿಗೆ ಪ್ರಸ್ತುತ ಫ್ಲೈಟ್ ಬೆಲೆಗಳನ್ನು ಅದೇ ಮಾರ್ಗದ ಹಿಂದಿನ ಸರಾಸರಿಗಳಿಗೆ ಹೋಲಿಸಿದರೆ ಯಾವುದು ಹೆಚ್ಚು ಯಾವುದು ಕಡಿಮೆ ಬೆಲೆ ಅನ್ನೊದನ್ನ ತಿಳಿಸಲಿದೆ.

ಅಲ್ಲದೆ ನೀವು ಟಿಕೆಟ್‌ ಅನ್ನು ತಕ್ಷಣವೇ ಬುಕ್ ಮಾಡಬೇಕೆ ಅಥವಾ ಕಡಿಮೆ ಬೆಲೆ ಟಿಕೆಟ್‌ಗಾಗಿ ಕಾಯಬಹುದೇ ಅನ್ನೊದನ್ನ ನಿರ್ಧರಿಸಬಹುದು. ಇದಕ್ಕಾಗಿ ಗೂಗಲ್‌ ಫ್ಲೈಟ್ಸ್‌ ಇನ್‌ಸೈಟ್ಸ್‌ ಫೀಚರ್ಸ್‌ ಸಹಾಯ ಮಾಡಲಿದೆ. ಇದು ಬಳಕೆದಾರರು ಆಯ್ಕೆಮಾಡಿದ ಪ್ರಯಾಣದ ದಿನಾಂಕಗಳು ಮತ್ತು ಗಮ್ಯಸ್ಥಾನಗಳಲ್ಲಿ ಬುಕಿಂಗ್ ಮಾಡಲು ಕಡಿಮೆ ಬೆಲೆಯ ಟಿಕೆಟ್‌ ಯಾವಾಗ ಸಿಗಲಿದೆ ಅನ್ನೊದನ್ನ ತಿಳಿಸಲಿದೆ. ಈ ಹೆಚ್ಚುವರಿ ಮಾಹಿತಿಯನ್ನು ಬಳಕೆದಾರರಿಗೆ ಮಾರ್ಗದರ್ಶನ ನೀಡಲು ಮತ್ತು ಹೆಚ್ಚಿನ ವಿಶ್ವಾಸವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಇನ್ನು ಗೂಗಲ್‌ ಫ್ಲೈಟ್ಸ್‌ ಕೂಡ ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಪ್ರೈಸ್‌ ಟ್ರ್ಯಾಕಿಂಗ್‌ ಆಯ್ಕೆಯು ಕೂಡ ಒಂದಾಗಿದೆ. ಈ ಆಯ್ಕೆಯನ್ನು ಸಕ್ರಿಯಗೊಳಿಸುವ ಮೂಲಕ, ಫ್ಲೈಟ್‌ ಪ್ರೈಸ್‌ ರೇಟ್‌ ಕಡಿಮೆಯಾದರೆ ಬಳಕೆದಾರರಿಗೆ ಆಲರ್ಟ್‌ ನೀಡಲಿದೆ. ಇನ್ನು ಈ ಆಯ್ಕೆಯನ್ನು ಬಳಸಬೇಕಾದರೆ ನೀವು ಗೂಗಲ್‌ ಅಕೌಂಟ್‌ಗೆ ಲಾಗ್‌ಇನ್‌ ಆಗಬೇಕು.

ಪ್ರೈಸ್‌ ಗ್ಯಾರಂಟಿ ಬ್ಯಾಡ್ಜ್‌ನೊಂದಿಗೆ ಫ್ಲೈಟ್‌ಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ, ನಿರ್ಗಮನದವರೆಗೆ ಗೂಗಲ್‌ ಪ್ರತಿದಿನ ಫ್ಲೈಟ್ ದರವನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಾ ಬರಲಿದೆ. ಒಂದು ವೇಳೆ ಬೆಲೆ ಕಡಿಮೆಯಾದರೆ ಗೂಗಲ್‌ ಪೇ ಮೂಲಕ ನೀವು ಪಾವತಿಸಿರುವ ಮೊತ್ತದಲ್ಲಿ ಹೆಚ್ಚುವರಿ ಮೊತ್ತವನ್ನು ಮರುಪಾವತಿ ಮಾಡಲಿದೆ. ಸದ್ಯ ಈ ಹೊಸ ಆಯ್ಕೆಯು ಗೂಗಲ್‌ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡುವ ಗ್ರಾಹಕರಿಗೆ ಹೆಚ್ಚಿನ ಭರವಸೆ ಮತ್ತು ಹೆಚ್ಚುವರಿ ಮೌಲ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಇನ್ನು ಗೂಗಲ್‌ ಇತ್ತೀಚಿಗೆ ತನ್ನ ಸರ್ಚ್‌ ಇಂಜಿನ್‌ನಲ್ಲಿ ಹೊಸ ಗ್ರಾಮರ್‌ ಚೆಕರ್‌ ಅನ್ನು ಪರಿಚಯಿಸಿದೆ. ಇದು AI ಸಿಸ್ಟಂ ಮೂಲಕ ಭಾಷೆಯನ್ನು ವಿಶ್ಲೇಷಿಸುವ ಕಾರ್ಯ ಮಾಡಲಿದೆ. ಇದರಿಂದ ಬಳಕೆದಾರರು ಗೂಗಲ್‌ ಸರ್ಚ್‌ನಲ್ಲಿಯೇ ಗ್ರಾಮರ್‌ ಚೆಕ್‌ ಮಾಡೋಕೆ ಸಾಧ್ಯವಾಗಲಿದೆ. ಇದರಿಂದ ನೀವು ಸರ್ಚ್‌ ಮಾಡುವಾಗ ಬಳಸುತ್ತಿರುವ ಪದ ಬಳಕೆ ಸರಿಯಾಗಿದೆಯಾ, ವ್ಯಾಕರಣ ಬದ್ದವಾಗಿದೆಯಾ ಅನ್ನೊದನ್ನ ತಿಳಿಯಬಹುದಾಗಿದೆ.

Best Mobiles in India

English summary
Google Flights has introduced money-saving feature to book cheaper flights
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+