Home
ಸುದ್ದಿಜಾಲ

Google For India 2024: ಭಾರತಕ್ಕೆ ಭರ್ಜರಿ ಗಿಫ್ಟ್‌! ಕನ್ನಡದಲ್ಲೂ Gemini Live, ಹೊಸ AI ಫೀಚರ್ಸ್‌ ಲಾಂಚ್

Google For India 2024: ಗೂಗಲ್‌ ತನ್ನ ಭಾರತೀಯ ಬಳಕೆದಾರರಿಗೆ ಹಲವು ಉಡುಗೊರೆಗಳನ್ನು ನೀಡಿದೆ. ಕನ್ನಡದಲ್ಲೂ ಜೆಮಿನಿ ಲೈವ್ ಅನ್ನು ಪ್ರಾರಂಭಿಸಿದೆ. ನೀವು, ಇಂದಿನಿಂದಲೇ ಜೆಮಿನಿ ಲೈವ್‌ನ ಲಾಭವನ್ನು ಪಡೆಯಬಹುದು. ಇದರೊಂದಿಗೆ ಜೆಮಿನಿಯಲ್ಲಿ ಹೊಸ ವೈಶಿಷ್ಟ್ಯ, ಗೂಗಲ್ ಸರ್ಚ್ ಎಐ ಅವಲೋಕನ, ವಿಡಿಯೋದೊಂದಿಗೆ ಗೂಗಲ್ ಲೆನ್ಸ್, ಗೂಗಲ್ ಮ್ಯಾಪ್ ಮತ್ತು ಗೂಗಲ್ ಪೇ ಸೇವೆಗಳಲ್ಲಿ ಹೊಸ ಅಪ್ಡೇಟ್‌ ತಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಗೂಗಲ್ ಕಂಪನಿಗೆ ಭಾರತವು ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಕಂಪನಿಯು ತನ್ನ ಯಾವುದೇ ಹೊಸ ಸೇವೆಗಳು ಅಥವಾ ಉತ್ಪನ್ನಗಳಲ್ಲಿ ಭಾರತವನ್ನು ಬಿಟ್ಟು ಹೋಗದಿರಲು ಇದು ಪ್ರಮುಖ ಕಾರಣವಾಗಿದೆ. ಕಂಪನಿಯು ಇಂದು ತನ್ನ ಗೂಗಲ್ ಫಾರ್ ಇಂಡಿಯಾ 2024 ಈವೆಂಟ್ ಅನ್ನು ಆಯೋಜಿಸಿತ್ತು. ಇದು ಗೂಗಲ್‌ನ 10ನೇ ಸಮಾರಂಭವಾಗಿದ್ದು, ಇದರಲ್ಲಿ ಅನೇಕ ಉತ್ಪನ್ನಗಳು ಮತ್ತು ಹೊಸ ಸೇವೆಗಳನ್ನು ಪ್ರಾರಂಭಿಸಿತು. ಜೊತೆಗೆ, ಅನೇಕ ಹೊಸ ಪ್ರಕಟಣೆಗಳನ್ನು ಸಹ ಘೋಷಿಸಿತು.

Google For India 2024: ಕನ್ನಡದಲ್ಲೂ Gemini Live, ಹೊಸ AI ಫೀಚರ್ಸ್‌ ಲಾಂಚ್

ಸಮಾರಂಭದಲ್ಲಿ ಮಾತನಾಡಿದ ಗೂಗಲ್ ಇಂಡಿಯಾ ಎಂಡಿ ರೋಮಾ ದತ್ತಾ ಚೌಬೆ ಅವರು, ಭಾರತದ ಎಐ (AI) ಶಕ್ತಿಯು 2030ರ ವೇಳೆಗೆ 33 ಲಕ್ಷ ಕೋಟಿ ರೂ.ಗಳ ಆರ್ಥಿಕ ಮೌಲ್ಯವನ್ನು ರಚಿಸಬಹುದು ಎಂದು ಹೇಳಿದರು. ಭಾರತೀಯ ಎಐಯ ಈ ಆರ್ಥಿಕ ಮೌಲ್ಯವು ಭಾರತದಲ್ಲಿ ಇಡೀ ಪೀಳಿಗೆಗೆ ಶಕ್ತಿ ತುಂಬುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ಭವಿಷ್ಯಕ್ಕಾಗಿ ಗೂಗಲ್ ಮೂರು ದೊಡ್ಡ ಗುರಿಗಳನ್ನು ಹೊಂದಿದೆ. ಅದು ಪ್ರತಿಯೊಬ್ಬ ಮನುಷ್ಯನ ಪ್ರಗತಿ, ಭಾರತೀಯ ಎಐ ಪರಿಸರ ವ್ಯವಸ್ಥೆಯ ಅಭಿವೃದ್ಧಿ ಮತ್ತು ಭವಿಷ್ಯಕ್ಕಾಗಿ ತಯಾರಿ ಎಂದರು.

ಕನ್ನಡದಲ್ಲಿ ಜೆಮಿನಿ ಲೈವ್ ಪ್ರಾರಂಭ

ಗೂಗಲ್ ಭಾರತದಲ್ಲಿ ಜೆಮಿನಿ ಲೈವ್ ಅನ್ನು ಪ್ರಾರಂಭಿಸಿದೆ. ಇದು ಮೊದಲು ಇಂಗ್ಲಿಷ್‌ನಲ್ಲಿ ಲಭ್ಯವಿತ್ತು. ಈಗ ಕಂಪನಿಯು ಇದನ್ನು ಹಿಂದಿ ಭಾಷೆ ಸೇರಿದಂತೆ 8 ಇತರೆ ಭಾಷೆಗಳಾದ ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ತೆಲುಗು, ತಮಿಳು ಮತ್ತು ಉರ್ದು ಭಾಷೆಯಲ್ಲಿ ಪರಿಚಯಿಸಿದೆ. ನೀವು ಇಂದಿನಿಂದಲೇ ಜೆಮಿನಿ ಲೈವ್‌ನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತು ಲೈವ್ ಪ್ರಶ್ನೆಗಳಿಗೆ ಉತ್ತರಗಳನ್ನು ಅದರ ಮೂಲಕ ಕೇಳಬಹುದು.

ಜೆಮಿನಿಯಲ್ಲಿ ಹೊಸ ವೈಶಿಷ್ಟ್ಯ

ಗೂಗಲ್ ತನ್ನ ಜೆಮಿನಿ ಎಐ ಟೂಲ್‌ನಲ್ಲಿ ಇಮೇಜ್ ಟು ವೀಡಿಯೋಗೆ ಉತ್ತಮ ವೈಶಿಷ್ಟ್ಯವನ್ನು ಸೇರಿಸಿದೆ. ಇದರ ಸಹಾಯದಿಂದ ನೀವು ಯಾವುದೇ ಫೋಟೋವನ್ನು ಕ್ಲಿಕ್ ಮಾಡುವ ಮೂಲಕ ಉತ್ತಮ ವಿಡಿಯೋವನ್ನು ಸುಲಭವಾಗಿ ರಚಿಸಬಹುದು.

ಗೂಗಲ್ ಸರ್ಚ್ ಎಐ ಅವಲೋಕನ

ವಿವಿಧ ಮೂಲಗಳಿಂದ ಮಾಹಿತಿ ಮತ್ತು ದೃಷ್ಟಿಕೋನಗಳನ್ನು ಪ್ರವೇಶಿಸಲು ನಿಮಗೆ ಸಹಾಯ ಮಾಡಲು ಎಐ ಅವಲೋಕನಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಈ ಬಗ್ಗೆ ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ. ಗೂಗಲ್ ಸರ್ಚ್ ಎಐ ಅವಲೋಕನಗಳನ್ನು ಎರಡು ತಿಂಗಳ ಹಿಂದೆ ಭಾರತದಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ಗೂಗಲ್ ಹೇಳಿದೆ. ಆದರೆ, ಮುಂಬರುವ ವಾರಗಳಲ್ಲಿ ಕಂಪನಿಯು ಇದನ್ನು ಬೆಂಗಾಲಿ, ಮರಾಠಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಿದೆ.

ವಿಡಿಯೋದೊಂದಿಗೆ ಗೂಗಲ್ ಲೆನ್ಸ್

ಇಲ್ಲಿಯವರೆಗೆ ನೀವು ಚಿತ್ರದ ಫೋಟೋ ತೆಗೆಯಲು ಮತ್ತು ಅದರ ಬಗ್ಗೆ ಹುಡುಕಲು ಗೂಗಲ್ ಲೆನ್ಸ್ ಬಳಸಿರಬೇಕು. ಆದರೆ, ಇನ್ಮುಂದೆ ಫೋಟೋಗಳ ಜೊತೆಗೆ ನೀವು ಯಾವುದೇ ವಿಡಿಯೋವನ್ನು ಗೂಗಲ್ ಲೆನ್ಸ್‌ನಲ್ಲಿ ಸೆರೆಹಿಡಿಯಬಹುದು. ಮತ್ತು ಅದರ ಬಗ್ಗೆ ಮಾಹಿತಿಯನ್ನು ಸುಲಭವಾಗಿ ಹೊರತೆಗೆಯಬಹುದು. ಇದರೊಂದಿಗೆ, ಕಂಪನಿಯು ಎಐ ಸಾರಾಂಶ ವಿಮರ್ಶೆಗಳ ಪರಿಕರವನ್ನು ಸಹ ತರುತ್ತಿದೆ. ಇದು ನಿಮಗೆ ತುಂಬಾ ಉಪಯುಕ್ತವಾಗಿದೆ.

ನೀವು, ಗೂಗಲ್ ಮ್ಯಾಪ್‌ನಲ್ಲಿ ಹೋಟೆಲ್ ಅಥವಾ ರೆಸ್ಟೋರೆಂಟ್ ಇತ್ಯಾದಿಗಳ ವಿಮರ್ಶೆಯನ್ನು ತಿಳಿಯಲು ಎಲ್ಲಾ ಜನರು ನೀಡಿದ ವಿಮರ್ಶೆಗಳನ್ನು ಓದುವ ಅಗತ್ಯವಿಲ್ಲ. ಇದೆಲ್ಲದರ ಹೊರತಾಗಿ, ಗೂಗಲ್‌ ಉದ್ಯಮಿಗಳಿಗಾಗಿ ಹೊಸ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ ಉತ್ಪನ್ನ ಸ್ಟುಡಿಯೋ, ಎಐ ರಚಿತ ವ್ಯವಹಾರ ವಿವರಣೆ, ವಾಟ್ಸ್‌ಆಪ್‌ ಏಕೀಕರಣ ಸೇರಿದೆ. ಈ ಸೌಲಭ್ಯಗಳನ್ನು ಪ್ರಾರಂಭಿಸಲಿರುವ ವಿಶ್ವದ ಮೊದಲ ಮಾರುಕಟ್ಟೆ ಭಾರತ ಎಂದು ಗೂಗಲ್ ಹೇಳಿದೆ.

ವ್ಯಾಪಾರಿಗಳಿಗಾಗಿ ಹಲವಾರು ಹೊಸ ಎಐ ಫೀಚರ್ಸ್‌ ಪ್ರಾರಂಭ

1. ಉತ್ಪನ್ನ ಸ್ಟುಡಿಯೋ: ಸ್ಥಳೀಯ ಕಲಾವಿದರು ತಮ್ಮ ಉತ್ಪನ್ನಗಳ ವಿಡಿಯೋಗಳನ್ನು ರಚಿಸಲು ಗೂಗಲ್‌ನ ಎಐ ಮಾದರಿಗಳನ್ನು ಬಳಸಬಹುದು.

2. ಎಐ ರಚಿಸಿದ ವ್ಯಾಪಾರ ವಿವರಣೆಗಳು: ವ್ಯಾಪಾರಿಗಳು ತಮ್ಮ ಪ್ರೊಫೈಲ್‌ಗಳನ್ನು ಎಐ ರಚಿಸಿದ ವ್ಯಾಪಾರದ ವಿವರಗಳ ಮೂಲಕ ಸುಲಭವಾಗಿ ನವೀಕರಿಸಬಹುದು.

3. ವಾಟ್ಸ್‌ಆಪ್‌ ಏಕೀಕರಣ: ಗೂಗಲ್‌ ಸರ್ಚ್‌ನಲ್ಲಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ವ್ಯಾಪಾರಿಗಳು ವಾಟ್ಸ್‌ಆಪ್‌ನೊಂದಿಗೆ ನೊಂದಿಗೆ ಸಂಯೋಜಿಸಬಹುದು.

Best Mobiles in India

English summary
Google for India 2024: Google announces key updates. Gemini Live gets Kannada support
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+