ಗೂಗಲ್ ಜೆಮಿನಿಗೆ ಮತ್ತೆರಡು ಹೊಸ AI ವೈಶಿಷ್ಟ್ಯಗಳು ಸೇರ್ಪಡೆ!
ಗೂಗಲ್ ತನ್ನ ಜೆಮಿನಿ AI ಚಾಟ್‌ಬಾಟ್‌ಗೆ ಕ್ಯಾನ್ವಾಸ್ ಮತ್ತು ಆಡಿಯೊ ಓವರ್‌ವೀವ್ಸ್ ಎಂಬ ಎರಡು ಹೊಸ ವೈಶಿಷ್ಟ್ಯಗಳನ್ನು ಸೇರಿಸಿರುವುದಾಗಿ ವರದಿಯಾಗಿದೆ. ಗೂಗಲ್ ಜೆಮಿನಿ AI ಚಾಟ್‌ಬಾಟ್‌ನಲ್ಲಿ ಇನ್ನು ನೈಜ ಸಮಯದಲ್ಲಿ ಕೋಡಿಂಗ್ ಮಾಡುವಾಗ ಡಾಕ್ಯುಮೆಂಟ್‌ಗಳನ್ನು ರಚಿಸಲು ಮತ್ತು ಸಂಪಾದಿಸಲು ಸಂವಾದಾತ್ಮಕ ಕಾರ್ಯಕ್ಷೇತ್ರಕ್ಕಾಗಿ ಕ್ಯಾನ್ವಾಸ್ ಅನ್ನು ಬಳಸಲು ಅನುಮತಿಸಲಿದೆ. ಹಾಗೆಯೇ, ಡಾಕ್ಯುಮೆಂಟ್‌ಗಳು ಮತ್ತು ಸ್ಲೈಡ್‌ಗಳಂತಹ ಪಠ್ಯವನ್ನು AI-ರಚಿತ ಪಾಡ್‌ಕ್ಯಾಸ್ಟ್ ಆಗಿ ಪರಿವರ್ತಿಸಲು ಆಡಿಯೋ ಓವರ್‌ವೀವ್ಸ್ ವೈಶಿಷ್ಟ್ಯವನ್ನು ಬಳಸಬಹುದು.
ಜೆಮಿನಿಯಲ್ಲಿ ಉತ್ಪನ್ನ ನಿರ್ವಹಣೆಯ ಹಿರಿಯ ನಿರ್ದೇಶಕ ಡೇವ್ ಸಿಟ್ರಾನ್ ಅವರು ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಈ ಬಗ್ಗೆ ತಿಳಿಸಿದ್ದು, "ನಿರ್ದಿಷ್ಟ ವಿಭಾಗಗಳು ಅಥವಾ ಸಂಪೂರ್ಣ ಡ್ರಾಫ್ಟ್‌ಗಳನ್ನು ನವೀಕರಿಸಬೇಕೇ? ತ್ವರಿತ ಸಂಪಾದನೆ ಪರಿಕರಗಳೊಂದಿಗೆ ಟೋನ್, ಉದ್ದ ಅಥವಾ ಫಾರ್ಮ್ಯಾಟಿಂಗ್ ಅನ್ನು ಸುಲಭವಾಗಿ ಹೊಂದಿಸಿ," ಎಂದು ಹೇಳಿದ್ದಾರೆ. ಅಂದರೆ, ನೀವು ಭಾಷಣವನ್ನು ರಚಿಸುತ್ತಿರಲಿ, ಪ್ರಬಂಧ, ಬ್ಲಾಗ್ ಪೋಸ್ಟ್ ಅಥವಾ ವರದಿಯನ್ನು ಪರಿಷ್ಕರಿಸಲು ಸಹಾಯ ಬೇಕಾಗಲಿ, ಕ್ಯಾನ್ವಾಸ್ ನಿಮ್ಮ ಸೃಜನಶೀಲ ಔಟ್‌ಪುಟ್ ಅನ್ನು ಗರಿಷ್ಠಗೊಳಿಸಲು ನಿಮಗೆ ಸಹಾಯ ಮಾಡುತ್ತದೆ, "ಎಂದು ಅವರು ತಿಳಿಸಿದ್ದಾರೆ.
ಉದಾಹರಣೆಗೆ, ಕ್ಯಾನ್ವಾಸ್ ಮೂಲಕ ಪ್ಯಾರಾಗ್ರಾಫ್ ಅನ್ನು ಹೈಲೈಟ್ ಮಾಡಿ ಮತ್ತು ಅದನ್ನು ಹೆಚ್ಚು ಸಂಕ್ಷಿಪ್ತ, ವೃತ್ತಿಪರ ಅಥವಾ ಅನೌಪಚಾರಿಕವಾಗಿಸಲು ಜೆಮಿನಿಯನ್ನು ಬಳಸಬಹುದು. ಇದರಿಂದ ನೈಜ ಸಮಯದಲ್ಲಿ ಕೋಡಿಂಗ್ ಮಾಡುವಾಗ ಡಾಕ್ಯುಮೆಂಟ್‌ಗಳನ್ನು ರಚಿಸಲು ಮತ್ತು ಸಂಪಾದಿಸಲು ಸಂವಾದಾತ್ಮಕ ಕಾರ್ಯಕ್ಷೇತ್ರಕ್ಕಾಗಿ ಕ್ಯಾನ್ವಾಸ್ ಬಹಳ ಉಪಯೋಗಕಾರಿಯಾಗಿದೆ. ಆದಾಗ್ಯೂ, ಈ ಹೊಸ ವೈಶಿಷ್ಟ್ಯವು ಪ್ರಸ್ತುತ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ ಮತ್ತು ಶೀಘ್ರದಲ್ಲೇ ಭಾಷಾ ಬೆಂಬಲವನ್ನು ವಿಸ್ತರಿಸುವ ಯೋಜನೆಗಳಿವೆ ಎಂದು ತಿಳಿದುಬಂದಿದೆ.

ಇನ್ನು ಈ ಪರಿಕರವನ್ನು ಆರಂಭದಲ್ಲಿ Google ನ NotebookLM ನಲ್ಲಿ ಪರಿಚಯಿಸಲಾಯಿದ್ದು, ಪಾಡ್‌ಕ್ಯಾಸ್ಟ್ ನೈಸರ್ಗಿಕ ರೀತಿಯಲ್ಲಿ ವಿಷಯವನ್ನು ಚರ್ಚಿಸುವ ಒಂದೆರಡು AI ಹೋಸ್ಟ್‌ಗಳನ್ನು ಸಹ ಒಳಗೊಂಡಿದೆ.ಓಪನ್‌ಎಐ ಮತ್ತು ಆಂಥ್ರೊಪಿಕ್ ಈಗಾಗಲೇ ಕ್ರಮವಾಗಿ ಕ್ಯಾನ್ವಾಸ್ ಮತ್ತು ಪ್ರಾಜೆಕ್ಟ್ಸ್ ಎಂಬ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ. ಈ ವೈಶಿಷ್ಟ್ಯಗಳನ್ನು ಜಾಗತಿಕವಾಗಿ ಜೆಮಿನಿ ಮತ್ತು ಜೆಮಿನಿ ಅಡ್ವಾನ್ಸ್ಡ್ ಚಂದಾದಾರರಿಗಾಗಿ ಹೊರತರಲಾಗಿದೆ. ಕಳೆದ ವಾರವಷ್ಟೇ ಗೂಗಲ್ ತನ್ನ ಜೆಮಿನಿ AI ಚಾಟ್‌ಬಾಟ್‌ಗೆ ಹಲವು ವೈಶಿಷ್ಟ್ಯಗಳನ್ನು ಸೇರಿಸಿತ್ತು.
ಗೂಗಲ್ತನ್ನ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್‌ನಲ್ಲಿ ಎರಡನೇ ಭಾಷೆಯ ಬೆಂಬಲವನ್ನು ಸೇರಿಸುವ ಮಹತ್ವದ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚಿಗಷ್ಟೆ ವರದಿಯಾಗಿತ್ತು. ಗೂಗಲ್‌ನ ಜೆಮಿನಿ ಲೈವ್‌ಗೆ ಎರಡನೇ ಭಾಷೆಗೆ ಬೆಂಬಲವನ್ನು ಸೇರಿಸುವ ಕೆಲಸದಲ್ಲಿ ಗೂಗಲ್ ಕೆಲಸ ಮಾಡುತ್ತಿದ್ದು, ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಮಾತನಾಡುವಾಗ ಅಥವಾ ಬರೆಯುವಾಗ ಎರಡು ವಿಭಿನ್ನ ಭಾಷೆಗಳನ್ನು ಬಳಸಲು ಅವಕಾಶ ನೀಡುತ್ತದೆ. ಇದು ಬಳಕೆದಾರರು ಹೇಳುವುದನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ, ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಸಹ ಹೊಂದಿರಲಿದೆ ಎಂದು ಹೇಳಲಾಗಿದೆ.
ಜೆಮಿನಿ ಲೈವ್ ತನ್ನ ಬಳಕೆದಾರರಿಗೆ ವಾಕ್ಯದ ಮಧ್ಯದಲ್ಲಿ ಭಾಷೆಗಳ ನಡುವೆ ಬದಲಾಯಿಸಲು ಅನುಮತಿಸುತ್ತದೆ ಮತ್ತು AI ಇದನ್ನೂ ಇನ್ನೂ ಸೂಕ್ತವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ. ಸ್ವಲ್ಪ ಸರಿಯಾದ ಪ್ರಾಂಪ್ಟ್‌ನೊಂದಿಗೆ ಬಳಕೆದಾರರು ಜೆಮಿನಿಯನ್ನು ಒಂದೇ ಸಮಯದಲ್ಲಿ ಎರಡು ಭಾಷೆಗಳಲ್ಲಿ ಮಾತನಾಡುವಂತೆ ಮಾಡಬಹುದು. ಬಳೆಕದಾರರು ಕಂಗ್ಲಿಷ್ (ಕನ್ನಡ ಮತ್ತು ಇಂಗ್ಲಿಷ್ ಮಿಶ್ರಣ) ಅಥವಾ ಸ್ಪ್ಯಾಂಗ್ಲಿಷ್ (ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಮಿಶ್ರಣ) ನಂತಹ ಹೈಬ್ರಿಡ್ ಭಾಷಾ ಪ್ರಭೇದಗಳಲ್ಲಿ ಒಂದನ್ನು ಬಯಸಿದರೆ ಇದು ಉಪಯುಕ್ತವಾಗಿರುತ್ತದೆ.


Click it and Unblock the Notifications








