ಇನ್ನು ಹೊಸ ಅವತಾರದಲ್ಲಿ ಗೂಗಲ್ ಗ್ಲಾಸ್

Written By:

ಗೂಗಲ್ ಗ್ಲಾಸ್‌ಗಾಗಿ ಗೂಗಲ್ ಹೊಸ ಫ್ರೇಮ್‌ಗಳು ಮತ್ತು ಶ್ಯಾಡ್‌ಗಳನ್ನು ಹೊರತಂದಿದೆ. ಅಮೇರಿಕನ್ ಫ್ಯಾಶನ್ ವಿನ್ಯಾಸಕ ಡಿಯೇನ್ ವೋನ್ ಫ್ರಸ್ಟನ್‌ಬರ್ಗ್ ತಯಾರಿಸಿರುವ ಈ ಗ್ಲಾಸ್ ಫ್ರೇಮ್‌ಗಳು ಡಿವಿಎಫ್ ತಯಾರಕವಾಗಿದೆ.

ಐದು ಹೊಸ ಫ್ರೇಮ್‌ಗಳು ಮತ್ತು ಎಂಟು ಹೊಸ ಶೇಡ್‌ಗಳಲ್ಲಿ ಗೂಗಲ್ ಗ್ಲಾಸ್ ವೆಬ್‌ಸೈಟ್‌ಗಳಲ್ಲಿ ಮತ್ತು ನೆಟ್‌ ಎ ಪೋರ್ಟರ್ ಮೂಲಕ ಜೂನ್‌ನಲ್ಲಿ ಲಭ್ಯವಾಗಲಿದೆ. ಈ ಸಂಗ್ರಹದಲ್ಲಿರುವ ಸನ್‌ಗ್ಲಾಸ್‌ಗಳು ಗ್ರೇ, ರೈನ್‌ಬೋ ಮತ್ತು ಕಂದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಕನ್ನಡಕವು ಮೂಲೆಯಲ್ಲಿ ಡಿವಿಎಫ್ ಬ್ಯಾನರ್ ಅನ್ನು ಹೊಂದಿದ್ದು ನೋಡಲು ಆಕರ್ಷಕವಾಗಿದೆ.

ಇನ್ನು ಹೊಸ ಅವತಾರದಲ್ಲಿ ಗೂಗಲ್ ಗ್ಲಾಸ್

ಗೂಗಲ್‌ನ ಟೈಟಾನಿಯಂ ಕಲೆಕ್ಷನ್‌ಗೆ ಸೇರಲಿರುವ ಫ್ರೇಮ್ ಮತ್ತು ಶೇಡ್‌ಗಳ ಹೊಸ ಸಂಗ್ರಹ, ಜನವರಿಯಲ್ಲಿ ಸ್ಥಾಪನೆಯಾಗಿದೆ. ಪೋರ್ಟರ್ ಆನ್‌ಲೈನ್‌ನಲ್ಲಿ ಈ ಸಂಗ್ರಹ ಕೂಡ ನಿಮಗೆ ಲಭ್ಯವಿರುತ್ತದೆ.

ಹೆಚ್ಚುವರಿಯಾಗಿ, ಮಾರ್ಚ್‌ನಲ್ಲೇ ಗೂಗಲ್ ಲಕ್ಸೋಟಿಕಾದೊಂದಿಗೆ ಪಾಲುದಾರರಾಗುವ ಮಾಹಿತಿಯನ್ನು ನೀಡಿತ್ತು ಇದು ರೇ ಬ್ಯಾನ್ ಮತ್ತು ಓಕ್ಲೇ ಬ್ರಾಂಡ್ ಫ್ರೇಮ್ ಮತ್ತು ಶ್ಯಾಡೋಗಳನ್ನು ನಿರ್ಮಿಸುತ್ತದೆ.

ಗೂಗಲ್ ಇಂತಹ ಫ್ರೇಮ್ ಮತ್ತು ಶ್ಯಾಡೋಗಳಿರುವ ಗೂಗಲ್ ಗ್ಲಾಸ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಿದ್ದು ಮೇ 2014 ರ ನಂತರ ಇಂತಹ ಗ್ಲಾಸ್‌ಗಳು ಪ್ರತಿಯೊಬ್ಬರಿಗೂ ಲಭ್ಯವಾಗಲಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot