ಗೂಗಲ್ ಗ್ಲಾಸ್ ಬಳಸಿದ್ರೆ ತಲೆನೋವು ಬರತ್ತಂತೆ ಕಣ್ರೀ?

Written By:

ಅಯ್ಯೋ ಗೂಗಲ್ ಗ್ಲಾಸ್ ಬಳಸಿದ್ರೆ ತಲೆನೋವಾ! ಹೌದೆಂದು ಸದ್ಯದ ವರದಿಯೊಂದು ತಿಳಿಸಿದೆ. ಆದರೆ ನೀವು ಈ ಗ್ಲಾಸ್ ಅನ್ನು ಹೆಚ್ಚು ಸಮಯ ಬಳಸಿದರೆ ಮಾತ್ರ ನಿಮಗೆ ತಲೆನೋವು ಉಂಟಾಗುವುದು ಅದು ಗೊತ್ತಾ ನಿಮಗೆ?

ಗೂಗಲ್ ಗ್ಲಾಸ್ ಅನ್ನು ಅತಿಯಾಗಿ ಬಳಸುವುದು ಬಳಕೆದಾರರಿಗೆ ತಲೆನೋವು ಉಂಟುಮಾಡುತ್ತಿದೆ ಎಂದು ಹೆಚ್ಚಿನ ಗ್ರಾಹಕರು ಆರೋಪಿಸಿದ್ದಾರೆ. ಆದ್ದರಿಂದ ಗೂಗಲ್ ಕೂಡ ಗೂಗಲ್ ಗ್ಲಾಸ್‌ನ ಬಳಕೆಯನ್ನು ಕಡಿಮೆ ಮಾಡುವಂತೆ ಬಳಕೆದಾರರಲ್ಲಿ ಮನವಿ ಮಾಡಿದೆ. ಗ್ಲಾಸ್‌ನ ಬದಿಯಲ್ಲಿರುವ ಒಂದು ಸಣ್ಣ ಗ್ಲಾಸ್ ದೃಷ್ಟಿಗೆ ಸಮಾನಾಂತರವಾಗಿ ಇರುವುದು ಇದಕ್ಕೆ ಕಾರಣವಾಗಿರಬಹುದು.

ಗೂಗಲ್ ಗ್ಲಾಸ್ ಬಳಸಿದ್ರೆ ತಲೆನೋವು ಬರತ್ತಂತೆ ಕಣ್ರೀ?

ಈ ಡಿವೈಸಿನ ಪ್ರಯೋಗ ವೇಳೆಯಲ್ಲಿ ಇಬ್ಬರು ವರದಿಗಾರಿಗೆ ಈ ರೀತಿಯ ಅನುಭವಾಗಿದ್ದನ್ನು ತಿಳಿಸಿದ್ದಾರೆ. ಒಬ್ಬ ಗ್ರಾಹಕರಂತೂ ಗೂಗಲ್ ಗ್ಲಾಸ್ ಅನ್ನು ಇಡೀ ದಿನ ಬಳಸಿದ್ದರಿಂದಾಗಿ ಅವರ ತಲೆ ಸಿಡಿದು ಹೋದಂತ ಅನುಭವವಕ್ಕೆ ಒಳಗಾಗಿದ್ದಾರೆ ಎಂಬುದನ್ನು ಸೂಚಿಸಿದ್ದಾರೆ. ಗೂಗಲ್ ಕನ್ನಡಕದಲ್ಲಿ ಬಲಬದಿಯಲ್ಲಿರುವ ಸಣ್ಣ ಗ್ಲಾಸ್ ದೃಷ್ಟಿಯ ಬಲಭಾಗದಲ್ಲಿರುವುದರಿಂದ ಅದನ್ನು ಧರಿಸುವ ಬಳಕೆದಾರನ ನೋಟ ಪ್ರತೀ ಸಲ ಆ ಸಣ್ಣ ಗಾಜಿನ ಮೇಲೆ ಕೇಂದ್ರೀಕೃವಾಗುತ್ತದೆ. ಇದರಿಂದ ತಲೆನೋವಿನ ತೊಂದರೆ ಉಂಟಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ಗೂಗಲ್ ಕೂಡ ಇದನ್ನು ಅಂಗೀಕರಿಸಿದ್ದು ತನ್ನ ಬಳಕೆದಾರರಿಗೆ ಈ ಕನ್ನಡಕವನ್ನು ಹೆಚ್ಚು ಬಳಸದಂತೆ ಆದೇಶಿಸಿದೆ. ಗ್ಲಾಸ್ ಧರಿಸಿ ರಾತ್ರಿ ಪೂರ್ತಿ ಮೂವಿ ನೋಡುವುದು, ಡ್ರೈವಿಂಗ್ ಮಾಡುವುದು ಮುಂತಾದ ಕೆಲಸಗಳನ್ನು ಮಾಡಬಾರದೆಂದು ಕೇವಲ ದಿಕ್ಕನ್ನು ಪರಿಶೀಲಿಸಲು ಚಿತ್ರಗಳನ್ನು ತೆಗೆಯಲು ಬಳಸಬಹುದೆಂದು ಗೂಗಲ್ ತಿಳಿಸಿದೆ. ಗ್ಲಾಸ್‌ನಲ್ಲಿ ಬಳಸಿರುವ ಅಪ್ಲಿಕೇಶನ್ ಅನ್ನು ಇಂತಹ ಕಾರ್ಯಗಳಿಗೆ ಮಾತ್ರ ಬಳಸುವಂತೆ ರಚಿಸಲಾಗಿದ್ದು ದೈನಂದಿನ ಕನ್ನಡಕದಂತೆ ಇದನ್ನು ಬಳಸಬಾರದೆಂದು ಗೂಗಲ್ ಮನಿ ಮಾಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot