Subscribe to Gizbot

ಗೂಗಲ್ ಗ್ಲಾಸ್ ನಿಜವಾದ ಬಳಕೆ ಹೇಗಿದೆ

Posted By:

ಗೂಗಲ್ ಗ್ಲಾಸ್ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಇದೊಂದು ಕನ್ನಡಕವಗಿದ್ದು ಹೊಸ ಹೊಸ ಅನ್ವೇಷಣೆಗಳನ್ನು ಮಾಡುವವರಿಗೆ ದಾರಿ ದೀಪವಾಗಿದೆ. ನಿಮಗೆ ಈ ಗ್ಲಾಸ್ ಅನ್ನು ಧರಿಸಿಕೊಂಡು ಸೈಕಲ್ ಸವಾರಿ ಮಾಡಬಹುದು, ಜಾಗಿಂಗ್ ಹೋಗುತ್ತಿರುವಾಗ ಹಾಡು ಕೇಳಬಹುದು, ನೀವು ಹೋಗುತ್ತಿರುವ ಪ್ರದೇಶದ ಮಾಹಿತಿಯನ್ನು ವೀಕ್ಷಿಸಬಹುದು.

ಹೀಗೆ ಹತ್ತು ಹಲವು ಮಾದರಿಗಳಲ್ಲಿ ಗೂಗಲ್ ಗ್ಲಾಸ್ ಅನ್ನು ಬಳಕೆ ಮಾಡಬಹುದು. ನೀವು ಹೊಸ ಹೊಸ ಸಾಧನೆಗಳನ್ನು ಸಾಧಿಸುವವರಾಗಿದ್ದರೆ ನಿಮಗಿದು ಮಾಡುವ ಉಪಕಾರ ಮಾತ್ರ ಅಸದಳವಾದುದು. ಈಗ ತನ್ನ ವಿಸ್ತಾರವನ್ನು ಕೊಂಚ ಮುಂದಕ್ಕೆ ಹಾಕಿರುವ ಗೂಗಲ್ ತನ್ನ ಗ್ಲಾಸ್ ಅನ್ನು ವ್ಯಾವಹಾರಿಕವಾಗಿ ವಿಸ್ತರಿಸಿದೆ.

ಗೂಗಲ್ ಗ್ಲಾಸ್ ನಿಜವಾದ ಬಳಕೆ ಹೇಗಿದೆ

ಆಕ್ಟೀವ್ ಏಂಟ್ಸ್ ಎಂದು ಕರೆಯಲಾದ ನೆದರ್‌ಲ್ಯಾಂಡ್ ಕಂಪೆನಿ 50 ಆನ್‌ಲೈನ್ ಗ್ಲಾಸ್‌ಗಳನ್ನು ತನ್ನ ಸಗಟು ವ್ಯಾಪಾರಿಗಳಿಗೆ ನೀಡಿದೆ.

ಇಲ್ಲಿನ ಗ್ರಾಹಕರು ಗೂಗಲ್ ಗ್ಲಾಸ್ ಬಳಕೆಯನ್ನು ಚೆನ್ನಾಗಿ ಮಾಡುತ್ತಿದ್ದು ಗ್ಲಾಸ್ ಉತ್ತಮ ಮಾರಾಟವನ್ನು ಪಡೆದುಕೊಂಡಿದೆ ಎಂದು ಕಂಪೆನಿ ತಿಳಿಸಿದೆ. ಅಮೆಝಾನ್ ವೆಬ್‌ಸೈಟ್‌ನಲ್ಲಿ ಈ ಗ್ಲಾಸ್ ಖರೀದಿಯು ನಿಮಗೆ ರಿಯಾಯಿತಿ ದರವನ್ನು ನೀಡಲಿದೆ.

ಗ್ಲಾಸ್ ಇನ್ನೂ ಕೂಡ ಹಲವಾರು ಪರಿಣಾಮಾತ್ಮಕ ವಿಧಾನಗಳನ್ನು ಅನುಸರಿಸುತ್ತಿದ್ದು ಇನ್ನಷ್ಟು ಪ್ರಗತಿಯನ್ನು ಕಾಣಬೇಕಿದೆ. ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ಮಾಡಿ ಹೊಸದಾಗಿ ರೂಪುಗೊಳ್ಳಲಿದೆ. ಗ್ಲಾಸ್ ಅನ್ನು ಬಳಸುವ ಬಳಕೆದಾರರು ತಮ್ಮ ಅನಿಸಿಕೆಗಳನ್ನು ನೇರವಾಗಿ ವ್ಯಕ್ತಪಪಡಿಸಬಹುದಾಗಿದ್ದು ಇನ್ನೂ ಬೇಕಾದ ತಾಂತ್ರಿಕ ಅಂಶಗಳನ್ನು ಬಳಕೆದಾರರ ಅಭಿಪ್ರಾಯಕ್ಕನುಗುಣವಾಗಿ ಮಾಡಲಾಗುತ್ತದೆ.

ಅಂತೂ ಹೊಸ ಮಾದರಿಯಲ್ಲಿ ಗೂಗಲ್ ಗ್ಲಾಸ್ ಬದಲಾಗಲಿದ್ದು ತನ್ನ ಉತ್ಪನ್ನದ ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ. ಹೊಸ ಹೊಸ ದೃಷ್ಟಿಕೋನಗಳನ್ನು ಮಾದರಿಯಾಗಿಟ್ಟುಕೊಂಡು ಸೈದ್ಧಾಂತಿಕವಾಗಿ ಮುಂದುವರಿಯುವ ತುಮುಲ ಗೂಗಲ್‌ಗಿದೆ ಎಂಬುದು ಇದರ ಸೂಚನೆಯಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot