Just In
- 23 hrs ago
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
- 1 day ago
ಅಗ್ಗದ ದರದಲ್ಲಿ ರಿಯಲ್ಮಿ C20 ಸ್ಮಾರ್ಟ್ಫೋನ್ ಅನಾವರಣ: ಫೀಚರ್ಸ್ ಏನು?
- 1 day ago
ಏರ್ಟೆಲ್ 449ರೂ. ಮತ್ತು ವಿ 449ರೂ. ಪ್ಲ್ಯಾನ್: ರೀಚಾರ್ಜ್ಗೆ ಯಾವುದು ಓಕೆ!
- 1 day ago
ಸ್ಮಾರ್ಟ್ಫೋನಿನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಕ್ರಮ ಅನುಸರಿಸಿ!
Don't Miss
- Sports
ಐಎಸ್ಎಲ್ 2020-21: ಅಂಕ ಹಂಚಿಕೊಂಡ ಜೆಮ್ಷೆಡ್ಪುರ, ಹೈದರಾಬಾದ್
- Movies
ವರುಣ್ ಧವನ್-ನತಾಶಾ ಮದುವೆಗೆ ಬಂದು ಟ್ರೋಲ್ ಆದ ಕರಣ್ ಜೋಹರ್
- News
ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪು
- Lifestyle
ಸೋಮವಾರದ ಭವಿಷ್ಯ: ಕರ್ಕ ರಾಶಿಯವರಿಗೆ ದಿನ ಉತ್ತಮ, ಉಳಿದ ರಾಶಿಫಲ ನೋಡಿ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೇಪರ್ ಫೋನ್ ತಮಾಷೆಯಲ್ಲ- ಖಂಡಿತ ಜಗತ್ತು ಮುಂದೊಂದು ದಿನ ನೋಡಲಿದೆ!
ಭಾರವಾಗಿರುವ ಫೋನ್ ವೊಂದನ್ನು ಹಿಡಿದು ಓಡಾಡುವುದು ನಿಮಗೆ ಕಷ್ಟವಾಗುತ್ತಿರಬಹುದು. ಅದಕ್ಕೊಂದು ಕವರ್, ಕೇಸ್ ಅಂತ ಎಷ್ಟೇ ಕಡಿಮೆ ತೂಕದ್ದು ಅಂದ್ರೂ ಈಗಿರುವ ಫೋನ್ ಗಳು ನಿಮ್ಮ ಜೇಬನ್ನು ತುಂಬುವಂತಿರುತ್ತದೆ. ಸಾಮಾನ್ಯವಾಗಿ ಸರಸಾರಿ 500 ಗ್ರಾಂ ತೂಕವಂತೂ ಇದ್ದೇ ಇರುತ್ತದೆ.
ಆದರೆ ಊಹಿಸಿಕೊಳ್ಳಿ ನಿಮ್ಮ ಫೋನ್ ಜಸ್ಟ್ ಒಂದು ಕಾಗದದ ತುಂಡಿನಂದಿದ್ದರೆ ಹೇಗಿರುತ್ತದೆ? ತೆಳುವಾದ ಕಾಗದದ ತುಂಡೊಂದನ್ನು ಬಸ್ ಟಿಕೆಟ್ ನಂತೆ ಮಡಚಿ ಜೇಬಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗುವಂತಿದ್ದರೆ ಹೇಗಿರುತ್ತದೆ ಎಂಬುದನ್ನು ಜಸ್ಟ್ ಕಲ್ಪನೆ ಮಾಡಿಕೊಳ್ಳಿ..
ನಾವೀಗ ಹೇಳುತ್ತಿರುವ ಈ ವಿಚಾರ ಕೇವಲ ತಮಾಷೆಯಲ್ಲ ಅಥವಾ ಕಲ್ಪನೆಗೆ ಮಾತ್ರವೇ ಸೀಮಿತವೂ ಅಲ್ಲ. ನಿಜಕ್ಕೂ ಕಾಗದದಂತ ಫೋನ್ ತಯಾರಿಕೆಯ ಬಗ್ಗೆ ಈಗಾಗಲೇ ಕೆಲಸಗಳು ಆರಂಭವಾಗುತ್ತಿದೆ. ದಿನವಿಡೀ ಫೋನ್ ಇಟ್ಟುಕೊಂಡು ಓಡಾಡುವವರಿಗೆ ಸಾಗಾಟ ಮತ್ತಷ್ಟು ಸುಲಭವಾಗಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಕೆಲಸಗಳು ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಗೂಗಲ್ ಸಂಸ್ಥೆ ಈಗಾಗಲೇ ಕೆಲಸವನ್ನು ಪ್ರಾರಂಭಿಸಿದೆ. ಗೂಗಲ್ ಕ್ರಿಯೇಟಿವ್ ಲ್ಯಾಬ್ ನ ಟೀಂ ಲೀಡರ್ ಆಗಿರುವ ಎಮ್ಮಾ ತುರ್ಪಿನ್ ಈ ಬಗ್ಗೆ ಹೇಳಿಕೆಯನ್ನು ಕೂಡ ನೀಡಿದ್ದಾರೆ.
ಒಂದು ತುಂಡು ಪೇಪರ್ ನಂತಿರುವ ಫೋನ್ ನ್ನು 8 ಬಾರಿ ಮಡಚವುದಕ್ಕೆ ಅವಕಾಶ ನೀಡುವಂತ ಪೇಪರ್ ಫೋನ್ ತಯಾರಿಯಲ್ಲಿ ಗೂಗಲ್ ನ ಕ್ರಿಯೇಟಿವ್ ಲ್ಯಾಬ್ ತೊಡಗಿದೆ ಎಂಬ ವಿಚಾರ ಇದೀಗ ತಿಳಿದುಬಂದಿದೆ.
ಲಂಡನ್ ನಲ್ಲಿರುವ “ಟೆಕ್ನಾಲಜಿ ಎಂಡ್ ಮ್ಯಾಜಿಕ್” ನ ಡೈರೆಕ್ಟರ್ ಆಗಿರುವ ಮತ್ತು ಲಂಡನ್ನಿನ ಸ್ಪೆಷಲ್ ಪ್ರೊಜೆಕ್ಟ್ ಡಿಸೈನ್ ಸ್ಟುಡಿಯೋದ ನಿರ್ದೇಶಕ ಆಡ್ರಿಯನ್ ವೆಸ್ಟ್ ವೇ ಪ್ರಕಾರ ಡಿಜಿಟಲ್ ಡೀಟಾಕ್ಸ್ ಕಲ್ಪನೆಯಲ್ಲಿ ಆಸಕ್ತಿ ಇರುವ ಕೆಲವು ಮಂದಿಯಿಂದ ಈ ಪೇಪರ್ ಫೋನ್ ನ ಹಾದಿ ಪ್ರಾರಂಭವಾಗಿದೆ. ಸದ್ಯ ಈ ತಂಡವು ಒಟ್ಟಾಗಿ ಗೂಗಲ್ ಜೊತೆಗೆ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿದೆ.
ಫೋನನ್ನು ಅಲ್ಲಲ್ಲಿ ಬಿಟ್ಟು ಹೋಗುತ್ತಿದ್ದದ್ದೇ ಇವರ ಈ ಕಲ್ಪನೆ ಹುಟ್ಟುವುದಕ್ಕೆ ಕಾರಣವಂತೆ. ಈ ಬಗ್ಗೆ ಈ ತಂಡದ ಜೊತೆಗೆ ನಿರ್ದೇಶಕ ಆಡ್ರಿಯನ್ ಮಾತನಾಡಿದ್ದಾರೆ. ಸ್ವಲ್ಪ ಸಮಯದ ವರೆಗೆ ಮೊಬೈಲ್ ಫೋನ್ ಇಲ್ಲದೆ ಬದುಕುವುದು ಎಷ್ಟು ಕಷ್ಟವಾಗುತ್ತದೆಯಲ್ಲವೇ? ಆ ಪರಿಕಲ್ಪನೆಯಲ್ಲಿ ಸಂಶೋಧನೆಗಳು ಮುಂದುವರಿಯುತ್ತಿದೆ.
ಟೆಕ್ ವ್ಯಸನದ ಬಗ್ಗೆ ಈಗಾಗಲೇ ಹಲವು ತರ್ಕಗಳು ನಡೆಯುತ್ತಿದೆ. ಟೆಕ್ ವ್ಯಸನದ ಸಾಂಕ್ರಾಮಿಕಕ್ಕೆ ಕೊಡುಗೆ ನೀಡಲಾಗುತ್ತಿದೆ ಎಂಬ ಟೀಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗೂಗಲ್ ನಡೆಸುತ್ತಿರುವ ಪ್ರಯತ್ನಗಳಲ್ಲಿ ಪೇಪರ್ ಫೋನ್ ಕೂಡ ಒಂದಾಗಿದೆ. ಗೂಗಲ್ ಇದರ ಜೊತೆಗ ಇನ್ನೂ ಹಲವು ಪ್ರೊಜೆಕ್ಟ್ ಗಳನ್ನು ಮಾಡುತ್ತಿದೆ ಅನ್ ಲಾಕ್ ಕ್ಲಾಕ್( ನೀವು ಎಷ್ಟು ಬಾರಿ ಫೋನ್ ನ್ನು ಅಲ್ ಲಾಕ್ ಮಾಡುತ್ತೀರಿ ಎಂಬುದನ್ನು ಇದು ತಿಳಿಸುತ್ತದೆ), ವಿಫ್ಲಿಪ್( ಇದರಲ್ಲಿ ಗುಂಪಿನ ಎಲ್ಲಾ ಸದಸ್ಯರು ಒಟ್ಟಿಗೆ ಫೋನ್ ನ್ನು ಆಫ್ ಮಾಡಲು ಅವಕಾಶವಿರುತ್ತದೆ),ಇತ್ಯಾದಿ ಪ್ರೊಜೆಕ್ಟ್ ಗಳನ್ನು ಮಾಡಲಾಗುತ್ತಿದೆ.
ಗೂಗಲ್ ಜೊತೆಗೆ ಇನ್ನೂ ಹಲವು ಸಿಲಿಕಾನ್ ವ್ಯಾಲಿ ಕಂಪೆನಿಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಪ್ರೊಡಕ್ಟ್ ಗಳ ಬಿಡುಗಡೆಗೆ ತಯಾರಿ ನಡೆಸುತ್ತಿವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190