Home
ಸುದ್ದಿಜಾಲ

ಗೂಗಲ್‌ನಿಂದ ಹೊಸ ಫೀಚರ್ಸ್‌ ಸೇರ್ಪಡೆ; ಸರ್ಚ್‌ ಮಾಡುವಾಗ ಇನ್ಮುಂದೆ ತಪ್ಪಾಗೋಕೆ ಬಿಡಲ್ಲ.!

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಇದೀಗ ಬಳಕೆದಾರರು ಮತ್ತೊಮ್ಮೆ ಫುಲ್‌ ಖುಷ್‌ ಆಗುವಂತೆ ಮತ್ತೊಂದು ಫೀಚರ್ಸ್‌ ಒಂದನ್ನು ಸೇರ್ಪಡೆ ಮಾಡಿದೆ. ಇದು ಬಳಕೆದಾರರಿಗೆ ಗೂಗಲ್‌ ಸರ್ಚ್‌ನಲ್ಲಿಯೇ ಗ್ರಾಮರ್‌ (ವ್ಯಾಕರಣ) ಚೆಕ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಹೌದು, ಗೂಗಲ್‌ ಸರ್ಚ್‌ ಮಾಡುವಾಗ ನೀವು ಬಳಸಿರುವ ಗ್ರಾಮರ್‌ ಸರಿಯಿದೆಯಾ ಅಂತಾ ಬೇರೆ ವೆಬ್‌ಸೈಟ್‌ಗಳಿಗೆ ಬೇಟಿ ನಿಡಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ಗೂಗಲ್‌ ಸರ್ಚ್‌ನಲ್ಲಿಯೇ ಗ್ರಾಮರ್‌ ಚೆಕ್‌ ಮಾಡುವುದಕ್ಕೆ ಅವಕಾಶ ನೀಡಲು ಗೂಗಲ್‌ ಮುಂದಾಗಿದೆ. ಇದು ಶೀಘ್ರದಲ್ಲಿಯೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಇದಕ್ಕಾಗಿ ಗೂಗಲ್‌ ಹೊಸ ಎಐ ಸಿಸ್ಟಂ ಅನ್ನು ಕೂಡ ಬಳಸಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ಗೂಗಲ್‌ ಸರ್ಚ್‌ನಲ್ಲಿಯೇ ಗ್ರಾಮರ್‌ ಚೆಕ್‌ ಫೀಚರ್ಸ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ನಿಂದ ಹೊಸ ಫೀಚರ್ಸ್‌ ಸೇರ್ಪಡೆ; ಸರ್ಚ್‌ ಮಾಡುವಾಗ ತಪ್ಪಾಗೋಕೆ ಬಿಡಲ್ಲ.!

ಗೂಗಲ್‌ ತನ್ನ ಸರ್ಚ್‌ ಇಂಜಿನ್‌ನಲ್ಲಿ ಹೊಸ ಗ್ರಾಮರ್‌ ಚೆಕರ್‌ ಅನ್ನು ಸೇರ್ಪಡೆ ಮಾಡಿದೆ. ಇದು ಭಾಷೆಯನ್ನು ವಿಶ್ಲೇಷಿಸುವುದಕ್ಕೆ AI ಸಿಸ್ಟಂ ಅನ್ನು ಬಳಸಲಿದೆ. ಇದರಿಂದ ಬಳಕೆದಾರರು ಇನ್ಮುಂದೆ ಗೂಗಲ್‌ ಸರ್ಚ್‌ನಲ್ಲಿಯೇ ಗ್ರಾಮರ್‌ ಚೆಕ್‌ ಮಾಡಬಹುದಾಗಿದೆ. ನೀವು ಸರ್ಚ್‌ ಮಾಡುವಾಗ ಬರೆದ ವಾಕ್ಯದ ವ್ಯಾಕರಣ ಸರಿಯಾಗಿದೆಯಾ ಇಲ್ಲವೇ ಅನ್ನೊದನ್ನ ಈ ಗ್ರಾಮರ್‌ ಚೆಕರ್‌ ತಿಳಿಸಿಕೊಡಲಿದೆ. ಇದರಿಂದ ನಿಮಗೆ ನಿಖರವಾದ ವಿವರಗಳನ್ನು ಸರ್ಚ್‌ ಮಾಡುವುದಕ್ಕೆ ಸಾಧ್ಯವಾಗಲಿದೆ.

ಇನ್ನು ಗೂಗಲ್‌ನಲ್ಲಿ ಗೂಗಲ್‌ ಡಾಕ್ಸ್‌ ಮತ್ತು ಜಿ-ಮೇಲ್‌ ಸೇವೆಗಳಲ್ಲಿ ಇನ್‌ಬಿಲ್ಟ್‌ ಗ್ರಾಮರ್‌ ಚೆಕರ್‌ ಇದೆ ಆದರೂ. ಗೂಗಲ್‌ ಸರ್ಚ್‌ ಇಂಜಿನ್‌ನಲ್ಲಿಯೇ ಗ್ರಾಮರ್‌ ಚೆಕ್‌ ಫೀಚರ್ಸ್‌ ಸೇರ್ಪಡೆ ಮಾಡಿರುವುದು ಇದೇ ಮೊದಲು ಎಂದು ವರದಿಯಾಗಿದೆ. ಇದಿಷ್ಟೇ ಅಲ್ಲ AI-ಚಾಲಿತ ಸರ್ಚ್‌ ಅನ್ನು ಸೇರ್ಪಡೆ ಮಾಡುತ್ತಿರುವುದು ಗೂಗಲ್‌ ಕ್ರಾಂತಿಕಾರ ಹೆಜ್ಜೆ ಎಂದು ಹೇಳಲಾಗಿದೆ.

ಈಗಾಗಲೇ ಗೂಗಲ್‌ನ ಪ್ರತಿಸ್ಫರ್ಧಿಯಾದ ಮೈಕ್ರೋಸಾಫ್ಟ್ ಬಿಂಗ್, ಈಗಾಗಲೇ AI- ಚಾಲಿತ ಸರ್ಚ್‌ ಮತ್ತು ಚಾಟ್ ಸಾಮರ್ಥ್ಯಗಳನ್ನು ನೀಡುತ್ತಿದೆ. ಆದರೆ ಗೂಗಲ್‌ ಈ AI ಚಾಲಿತ ಸರ್ಚ್‌ ಸಾಮರ್ಥ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೊದಲು ಇನ್ನಷ್ಟಯ ಪರಿಷ್ಕರಿಸುವ ಕಾರ್ಯದಲ್ಲಿ ಮಗ್ನವಾಗಿದೆ. ಅದರಂತೆ ಗೂಗಲ್‌ನಲ್ಲಿರುವ ಗ್ರಾಮರ್‌ ಚೆಕ್‌ ಫೀಚರ್ಸ್‌ ಜನರೇಟಿವ್ AI ಯ ಮೇಲೆ ಬಿಲ್ಟ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಇದರ ಪಲಿತಾಂಶವು 100% ನಿಖರವಾಗಿರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ಈ ಫೀಚರ್ಸ್‌ ಇಂಗ್ಲಿಷ್‌ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.

ಗೂಗಲ್‌ನಿಂದ ಹೊಸ ಫೀಚರ್ಸ್‌ ಸೇರ್ಪಡೆ; ಸರ್ಚ್‌ ಮಾಡುವಾಗ ತಪ್ಪಾಗೋಕೆ ಬಿಡಲ್ಲ.!

ಗೂಗಲ್‌ನ ಹೊಸ AI-ಚಾಲಿತ ಗ್ರಾಮರ್‌ ಚೆಕ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ?
ಗೂಗಲ್‌ ಸರ್ಚ್‌ನಲ್ಲಿ ಗ್ರಾಮರ್‌ ಚೆಕ್‌ ಫಿಚರ್ಸ್‌ ಬಳಸುವುದು ತುಂಬಾ ಸರಳವಾಗಿದೆ. ಇದಕ್ಕಾಗಿ ನೀವು ಗೂಗಲ್‌ ಸರ್ಚ್‌ ಬಾರ್‌ನಲ್ಲಿ ನೀವು ಏನು ಸರ್ಚ್‌ ಮಾಡುತ್ತೀರಿ ಅನ್ನೊದನ್ನ ಟೈಪ್‌ ಮಾಡಿ ನಂತರ ಕೊನೆಯಲ್ಲಿ ಗ್ರಾಮರ್‌ ಚೆಕ್‌ ಅನ್ನು ಸೇರ್ಪಡೆ ಮಾಡಿದೆ. ಇದು ನಿಮ್ಮ ಗ್ರಾಮರ್‌ನಲ್ಲಿ ತಪ್ಪುಗಳನ್ನು ಗುರುತಿಸುವ ಮ್ಯಾಜಿಕ್ ಫೀಚರ್ಸ್‌ ಅನ್ನು ಆನ್ ಮಾಡುತ್ತದೆ. ಇದಲ್ಲದೆ ತಪ್ಪಾಗಿರುವ ಭಾಗಗಳನ್ನು ಗೂಗಲ್ ಹೈಲೈಟ್ ಮಾಡುತ್ತದೆ.

ಜೊತೆಗೆ ತಪ್ಪು ವಾಕ್ಯಗಳನ್ನು ಅಂಡರ್‌ಲೈನ್ ಮಾಡಲಿದೆ. ಎಲ್ಲವೂ ಸರಿಯಾಗಿದ್ದರೆ, ನಿಮಗೆ ಗ್ರೀನ್‌ ಚೆಕ್ ಮಾರ್ಕ್ ಅನ್ನು ನೀಡಲಿದೆ. ನೀವು ನೋಡುತ್ತೀರಿ. ಹೀಗೆ ಗ್ರಾಮರ್‌ ಚೆಕ್‌ ಆಗಿರುವ ವಾಕ್ಯಗಳ ಮೇಲೆ ನಿಮ್ಮ ಮೌಸ್‌ ಅನ್ನು ಮೂವ್‌ ಮಾಡಿದರೆ ಪಾಪ್‌ ಆಪ್‌ ಆಗುವ ಕಾಪಿ ಬಟನ್‌ ಕಾಣಲಿದೆ ಅದನ್ನು ಕ್ಲಿಕ್ ಮಾಡಿದರೆ ಸರಿಯಾದ ವಾಕ್ಯವನ್ನು ನೀವು ನಕಲಿಸಬಹುದಾಗಿದೆ.

Best Mobiles in India

English summary
Google has added a new grammar checker to its search engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+