Home
ಸುದ್ದಿಜಾಲ

Google: ಲೈವ್‌ ಲೊಕೇಶನ್‌ ಶೇರ್‌ ಮಾಡುವವರು ಇಲ್ಲಿ ಗಮನಿಸಿ: ಈ ಸುದ್ದಿಯನ್ನು ನೀವು ಓದಲೇಬೇಕು!

ಸರ್ಚ್‌ ಇಂಜಿನ್‌ ದೈತ್ಯ ತನ್ನ ಬಳಕೆದಾರರ ಬಹು ದಿನಗಳ ಬೇಡಿಕೆಯನ್ನು ಪೂರೈಸಿದೆ. ತನ್ನ ಗೂಗಲ್‌ ಮ್ಯಾಪ್‌ನಲ್ಲಿ ರಿಯಲ್‌ ಟೈಂ ಲೊಕೇಶನ್‌ ಶೇರ್‌ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಈ ಮೂಲಕ ಇಷ್ಟು ದಿನಗಳವರೆಗೆ ಲೊಕೇಶನ್‌ ಶೇರ್‌ಗಾಗಿ ವಾಟ್ಸಾಪ್‌, ಟೆಲಿಗ್ರಾಮ್‌ ಬಳಸುತ್ತಿದ್ದವರು ಇನ್ಮುಂದೆ ಗೂಗಲ್‌ ಮ್ಯಾಪ್‌ ಮೂಲಕವೇ ನೇರವಾಗಿ ಲೊಕೇಶನ್‌ ಶೇರ್‌ ಮಾಡಬಹುದು.

ಹೌದು, ಗೂಗಲ್‌ ಮ್ಯಾಪ್‌ನಲ್ಲಿ ರಿಯಲ್‌ ಟೈಂ ಲೊಕೇಶನ್‌ ಶೇರ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಪ್ರಸ್ತುತ ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡರಲ್ಲೂ ಕೂಡ ಲಭ್ಯವಾಗಲಿದೆ. ಈ ಮೂಲಕ ಬಳಕೆದಾರರು ತಮ್ಮ ಸಂಪರ್ಕಗಳೊಂದಿಗೆ ಅಥವಾ ಲಿಂಕ್ ಅನ್ನು ಬಳಸುವ ಮೂಲಕ ತಮ್ಮ ಲೈವ್ ಲೊಕೇಶನ್‌ ಅನ್ನು ಹಂಚಿಕೊಳ್ಳಲು ಅವಕಾಶ ಸಿಗಲಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ ಲೈವ್‌ ಲೊಕೇಶನ್‌ ಶೇರ್‌ ಮಾಡುವುದು ಹೇಗೆ? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೈವ್‌ ಲೊಕೇಶನ್‌ ಶೇರ್‌ ಮಾಡುವವರು ಇಲ್ಲಿ ಗಮನಿಸಿ: ಈ ಸುದ್ದಿನೀವು ಓದಲೇಬೇಕು!

ಗೂಗಲ್‌ ಮ್ಯಾಪ್‌ನಲ್ಲಿ ಲೈವ್‌ ಲೊಕೇಶನ್‌ ಶೇರ್‌ ವಿಶೇಷತೆ ಏನು?
ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಲೈವ್ ಲೊಕೇಶನ್‌ ಶೇರ್‌ ಮಾಡುವುದಕ್ಕೆ ಇದೀಗ ಅವಕಾಶ ನೀಡಲಾಗಿದೆ. ನೀವು ಗೂಗಲ್‌ ಮ್ಯಾಪ್‌ನಲ್ಲಿ ಲೈವ್‌ ಲೊಕೇಶನ್‌ ಅನ್ನು 1 ದಿನದವರೆಗೆ ಅಥವಾ ಅನಿರ್ದಿಷ್ಟವಾಗಿ ಹಂಚಿಕೊಳ್ಳಲು ಅನುಮತಿಸಲಾಗಿದೆ. ಇದಲ್ಲದೆ ನೀವು 15 ನಿಮಿಷಗಳು, 30 ನಿಮಿಷಗಳು ಮತ್ತು 45 ನಿಮಿಷಗಳ ನಡುವಿನ ಸಮಯದ ಮಧ್ಯಂತರವನ್ನು ಸಹ ಬದಲಾಯಿಸಬಹುದಾಗಿದೆ. ಜೊತೆಗೆ ನಂತರ 1 ಗಂಟೆ, 2 ಗಂಟೆಗಳ ಅವಧಿಗೆ ಲೊಕೇಶನ್‌ ಶೇರ್‌ ನೊಂದಿಗೆ ನಿಮ್ಮ ಡಿವೈಸ್‌ನ ಬ್ಯಾಟರಿ ಪರ್ಸಟೇಂಜ್‌ ಅನ್ನು ಹಂಚಿಕೊಳ್ಳುತ್ತದೆ.

ಲೈವ್‌ ಲೊಕೇಶನ್‌ ಶೇರ್‌ ಮಾಡಿದಾಗ ಸ್ವೀಕರಿಸುವವರು ನಿಮ್ಮ ಹಂಚಿಕೊಂಡ ಸ್ಥಳವನ್ನು ವೀಕ್ಷಿಸಿದಾಗ ಮತ್ತು ಸ್ವೀಕರಿಸುವವರ ನಡುವಿನ ನಿಖರವಾದ ಅಂತರವನ್ನು ವೀಕ್ಷಿಸಬಹುದಾಗಿದೆ. ನಿಖರವಾದ ಸ್ಥಳಕ್ಕೆ ನ್ಯಾವಿಗೇಟ್ ಮಾಡಲು ನಿರ್ದೇಶನಗಳನ್ನು ಪಡೆಯಲು ಗೂಗಲ್‌ ಮ್ಯಾಪ್‌ ಬಟನ್ ಅನ್ನು ಸಹ ತೋರಿಸಲಿದೆ. ರಿಯಲ್‌ ಟೈಂ ಲೊಕೇಶನ್‌ ಶೇರ್‌ ಮಾಡುವುದಕ್ಕೆ, ಬಳಕೆದಾರರು ತಮ್ಮ ಗೂಗಲ್‌ ಖಾತೆಗೆ ಮ್ಯಾಪ್‌ ಅಪ್ಲಿಕೇಶನ್‌ನಲ್ಲಿ ಸೈನ್ ಇನ್ ಮಾಡಬೇಕಾಗುತ್ತದೆ.

ಲೈವ್‌ ಲೊಕೇಶನ್‌ ಶೇರ್‌ ಮಾಡುವವರು ಇಲ್ಲಿ ಗಮನಿಸಿ: ಈ ಸುದ್ದಿನೀವು ಓದಲೇಬೇಕು!

ಗೂಗಲ್‌ ಮ್ಯಾಪ್‌ನಲ್ಲಿ ಲೈವ್ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?
* ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ತೆರೆಯಿರಿ
* ನಿಮ್ಮ ಪ್ರೊಫೈಲ್ ಚಿತ್ರ ಐಕಾನ್ ಮೇಲೆ ಟ್ಯಾಪ್ ಮಾಡಿ
* 'ಲೊಕೇಶನ್‌ ಶೇರ್‌' ಆಯ್ಕೆಮಾಡಿ
* ನಂತರ ಶೇರ್‌ ಲೊಕೇಶನ್‌ ಬಟನ್ ಮೇಲೆ ಟ್ಯಾಪ್ ಮಾಡಿ
* ಈಗ ಸಮಯದ ಮಧ್ಯಂತರವನ್ನು ಆಯ್ಕೆಮಾಡಿ
* 'ನೀವು ಇದನ್ನು ಆಫ್ ಮಾಡುವವರೆಗೆ' ಎಂದು ಸೆಟ್‌ ಮಾಡಿದರೆ ನಿಮ್ಮ ಡಿವೈಸ್‌ನಲ್ಲಿ ಹೆಚ್ಚಿದ ಬ್ಯಾಟರಿ ಬಳಕೆಯನ್ನು ನೀವು ಗಮನಿಸಬಹುದು.
* ನಂತರ ನೀವು ಲೊಕೇಶನ್‌ ಶೇರ್‌ ಮಾಡಲು ಬಯಸುವ ಸಂಪರ್ಕವನ್ನು ಆಯ್ಕೆಮಾಡಿ.
* ನೀವು WhatsApp ನಂತಹ ಥರ್ಡ್-ಪಾರ್ಟಿ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಕೂಡ ಅದೇ ಲಿಂಕ್ ಅನ್ನು ಹಂಚಿಕೊಳ್ಳಬಹುದು.

ಲೈವ್‌ ಲೊಕೇಶನ್‌ ಶೇರ್‌ ಮಾಡುವವರು ಇಲ್ಲಿ ಗಮನಿಸಿ: ಈ ಸುದ್ದಿನೀವು ಓದಲೇಬೇಕು!
* ನೀವು ಶೇರ್‌ ಮಾಡಿದ ಸಂಪರ್ಕವು ಅವರ ಡಿವೈಸ್‌ನಲ್ಲಿ Google ನಕ್ಷೆಗಳ ಅಪ್ಲಿಕೇಶನ್‌ನಲ್ಲಿ ನಿಮ್ಮ ಲೈವ್ ಸ್ಥಳವನ್ನು ನೋಡಲು ಸಾಧ್ಯವಾಗುತ್ತದೆ.
* Gmail ID ಬಳಸಿಕೊಂಡು ನಿರ್ದಿಷ್ಟ ಸಂಪರ್ಕದೊಂದಿಗೆ ನಿಮ್ಮ ನೈಜ-ಸಮಯದ ಸ್ಥಳವನ್ನು ನೀವು ಹಂಚಿಕೊಂಡರೆ, ಆಯ್ಕೆಮಾಡಿದ ವ್ಯಕ್ತಿ ಮಾತ್ರ ನಿಮ್ಮ ಸ್ಥಳಕ್ಕೆ ಪ್ರವೇಶವನ್ನು ಹೊಂದಿರುತ್ತಾರೆ ಎಂಬುದು ಗಮನಿಸಬೇಕಾದ ವಿಚಾರ.
* ಒಂದು ವೇಳೆ ನೀವು ಲಿಂಕ್ ಅನ್ನು ಹಂಚಿಕೊಂಡರೆ, ಲಿಂಕ್ ಹೊಂದಿರುವ ಯಾವುದೇ ವ್ಯಕ್ತಿ ನಿಮ್ಮ ಲೈವ್ ಸ್ಥಳವನ್ನು ನೋಡಲು ಸಾಧ್ಯವಾಗುತ್ತದೆ.
Best Mobiles in India

English summary
Google has added support for real-time location sharing in Maps: How to Use?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+