ಗೂಗಲ್‌ನಿಂದ ಹೊಸ ಫೀಚರ್ಸ್‌ಗಳ ಅನಾವರಣ! ಏನೆಲ್ಲಾ ಲಾಭವಿದೆ ಗೊತ್ತಾ?
ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕೆನಿಸಿದರೂ ಮೊದಲು ನೆನಪಾಗೋದೆ ಸರ್ಚ್ ಇಂಜಿನ್ ದೈತ್ಯ ಗೂಗಲ್. ಅಷ್ಟರ ಮಟ್ಟಿಗೆ ಗೂಗಲ್ ಬಳಕೆದಾರರ ಮನಸ್ಸಿನಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ಗೂಗಲ್ ಕೂಡ ಹೊಸ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಾ ಬಂದಿದೆ.
ಹೌದು, ಗೂಗಲ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಫೀಚರ್ಸ್‌ಗಳ ಗುಂಪನ್ನು ಲಾಂಚ್ ಮಾಡಿದೆ. ಗೂಗಲ್ ಲುಕ್‌ಔಟ್ ಅಪ್ಲಿಕೇಶನ್, ಗೂಗಲ್ ಮ್ಯಾಪ್, ಲೈವ್ ಕ್ಯಾಪ್ಶನ್, ವೇರ್ ಓಎಸ್ 4 ಮತ್ತು ಕ್ರೋಮ್ ಬ್ರೌಸರ್‌ನಲ್ಲಿ ಈ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ. ಇನ್ನು ಈ ಫೀಚರ್ಸ್‌ಗಳು ವಿಕಲಾಂಗರಿಗೆ ಸಹಾಯ ಮಾಡಲಿವೆ ಅನ್ನೊದು ಪ್ರಮುಖವಾಗಿದೆ. ಹಾಗಾದ್ರೆ ಗೂಗಲ್ ಸೇರಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲುಕ್ಔಟ್ ಅಪ್ಲಿಕೇಶನ್
ಗೂಗಲ್ ಲುಕ್‌ಔಟ್ ಅಪ್ಲಿಕೇಶನ್‌ನಲ್ಲಿ ಕೂಡ ಹೊಸ ಫೀಚರ್ಸ್ ಅನ್ನು ಸೇರ್ಪಡೆ ಮಾಡಿದೆ. ಈ ಫೀಚರ್ಸ್ ಅನ್ನು "ಇಮೇಜ್ ಪ್ರಶ್ನೆ ಮತ್ತು ಉತ್ತರ" ಎಂದು ಹೆಸರಿಸಲಾಗಿದೆ. ಇಮೇಜ್‌ಗಳು ಯಾವುದೇ ಕ್ಯಾಪ್ಶನ್‌ಗಳನ್ನು ಹೊಂದಿಲ್ಲ ದಿದ್ದರೂ ಕೂಡ ಇಮೇಜ್ ಮಾಹಿತಿಯನ್ನು ವಿವರಿಸಲಿದೆ. ಅಂದರೆ ಇಮೇಜ್‌ನಲ್ಲಿ ಏನಿದೆ ಅಂತಾ ನೀವು ಕೇಳಿದರೆ ಇಮೇಜ್‌ನ ವಿವರವನ್ನು ನೀಡಲಿದೆ. ಈ ಫೀಚರ್ಸ್ ಅಂಧ ಮತ್ತು ಕಡಿಮೆ ದೃಷ್ಟಿ ಹೊಂದಿರುವಂತಹ ಜನರಿಗೆ ಉಪಯುಕ್ತವಾಗಲಿದೆ.
ಗೂಗಲ್ ಮ್ಯಾಪ್ ಸೇರಿದ ಅತ್ಯಾಕರ್ಷಕ ಫೀಚರ್ಸ್
ಗೂಗಲ್ ಗೂಗಲ್ ಮ್ಯಾಪ್ ಮೂಲಕ ಗಾಲಿಕುರ್ಚಿಗೆ ಪ್ರವೇಶಿಸಬಹುದಾದ ಸ್ಥಳಗಳನ್ನು ತೋರಿಸಲಿದೆ. ಇದಕ್ಕಾಗಿ ವ್ಹೀಲ್‌ಚೇರ್ ಐಕಾನ್ ಅನ್ನು ಗೂಗಲ್ ಮ್ಯಾಪ್‌ನಲ್ಲಿ ತೋರಿಸಲಿದೆ. ಇದರಿಂದ ನೀವು ಪಾರ್ಕಿಂಗ್ ಅಥವಾ ವಿಶ್ರಾಂತಿ ಕೊಠಡಿಗಳ ಮಾಹಿತಿಯನ್ನು ತಿಳಿಯಬಹುದಾಗಿದೆ. ಇದಲ್ಲದೆ, ಬಳಕೆದಾರರು 'ಆಬೌಟ್' ಟ್ಯಾಬ್‌ಗೆ ಸ್ಕ್ರಾಲ್ ಮಾಡುವ ಮೂಲಕ ಗೂಗಲ್ ಮ್ಯಾಪ್‌ನಲ್ಲಿ ಪ್ರವೇಶದ ಮಾಹಿತಿಯನ್ನು ಸಹ ನೀವು ಆಡ್ ಮಾಡಬಹುದು.

ಲೈವ್ ಕ್ಯಾಪ್ಶನ್
ಗೂಗಲ್ ಕ್ಯಾಪ್ಶನ್ ಫೀಚರ್ಸ್ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ವಾಯ್ಸ್‌ನೊಂದಿಗೆ ಕ್ಯಾಪ್ಶನ್‌ಗಳನ್ನು ನೀಡಲಿದೆ. ಇದಲ್ಲದೆ, ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಲ್ಲಿ ಲೈವ್ ಶೀರ್ಷಿಕೆಯ ಅನುಭವವನ್ನು ಆಪ್ಟಿಮೈಸ್ ಮಾಡುವ ಹೊಸ ಶೀರ್ಷಿಕೆಗಳ ಬಾಕ್ಸ್ ಅನ್ನು ನೀಡಲಿದೆ. ಇದು ಬಳಕೆದಾರರಿಗೆ ಕರೆಗಳ ಸಮಯದಲ್ಲಿ ಪ್ರತಿಕ್ರಿಯೆಗಳನ್ನು ಟೈಪ್ ಮಾಡಲು ಸಾದ್ಯವಾಗಲಿದೆ.
Wear OS 4 ನಲ್ಲಿ ಪಠ್ಯದಿಂದ ಭಾಷಣದ ಅನುಭವ
ಗೂಗಲ್ ಈ ವರ್ಷದ ನಂತರ Wear OS 4 ನಲ್ಲಿ ಪರಿಷ್ಕರಿಸಿದ ಪಠ್ಯದಿಂದ ಭಾಷಣದ ಅನುಭವವನ್ನು ಪರಿಚಯಿಸಲಿದೆ ಎಂದು ಹೇಳಲಾಗಿದೆ.
ಕ್ರೋಮ್ ಅಡ್ರೆಸ್ ಬಾರ್
ಗೂಗಲ್ ಕ್ರೋಮ್ ಅಡ್ರೆಸ್ ಬಾರ್‌ನಲ್ಲಿ URL ಗಳಲ್ಲಿರುವ ಮುದ್ರಣದೋಷಗಳನ್ನು ಪತ್ತೆ ಮಾಡುವ ಫೀಚರ್ಸ್ ಅನ್ನು ಸೇರಿಸಲಾಗಿದೆ. ತಿದ್ದುಪಡಿಗಳ ಆಧಾರದ ಮೇಲೆ ವೆಬ್‌ಸೈಟ್‌ಗಳನ್ನು ಸೂಚಿಸಲಿದೆ ಎಂದು ಹೇಳಲಾಗಿದೆ. ಇದು ಡಿಸ್ಲೆಕ್ಸಿಯಾ ಹೊಂದಿರುವ ಜನರಿಗೆ, ಭಾಷೆ ಕಲಿಯುವವರಿಗೆ ಸಹಾಯ ಮಾಡಲಿದೆ ಎಂದು ವರದಿಯಾಗಿದೆ. ಇನ್ನು ಈ ಫಿಚರ್ಸ್ ಈ ಹಿಂದೆ ಕ್ರೋಮ್ ಡೆಸ್ಕ್‌ಟಾಪ್‌ನಲ್ಲಿ ಲಭ್ಯವಿದ್ದು, ಮುಂಬರುವ ತಿಂಗಳುಗಳಲ್ಲಿ ಮೊಬೈಲ್‌ನಲ್ಲಿ ಕೂಡ ಲಭ್ಯವಾಗಲಿದೆ.
ಇನ್ನು ಇತ್ತೀಚಿಗೆ, ಗೂಗಲ್ ಸಂಸ್ಥೆಯು ಗೂಗಲ್ ಮೆಸೆಜ್ಸ್‌ನಲ್ಲಿ ಹೊಸದಾಗಿ 'ಸೆಂಡ್ ಫೋಟೋ ಫಾಸ್ಟರ್' (Send photos faster) ಫೀಚರ್ ಅನ್ನು ಹೆಚ್ಚು ವಿಸ್ತರಣೆ ಮಾಡಿದೆ. ಈ ಆಯ್ಕೆಯು ಸೆಟ್ಟಿಂಗ್ ಮೆನುವಿನಲ್ಲಿ ನೂತನ ಟಾಗಲ್‌ನಂತೆ ಕಾಣಬಹುದು. ಈ ಫೀಚರ್ 'ವೇಗವಾಗಿ ಕಳುಹಿಸಲು ರೆಸಲ್ಯೂಶನ್ ಕಡಿಮೆಯಾಗಿದೆ' ಎಂಬ ವಿವರಣೆಯನ್ನು ಪಡೆದಿದೆ. ಈ ಹೊಸ ಫೀಚರ್ RCS ಮೆಸೆಜ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಇದು ಪ್ರಮಾಣಿತ ಎಸ್‌ಎಮ್‌ಎಸ್ ಮೆಸೆಜ್ ಅನ್ನು ಮೀರಿ ವರ್ಧಿತ ಫೀಚರ್ಸ್‌ಗಳ ಮತ್ತು ಸಾಮರ್ಥ್ಯಗಳನ್ನು ನೀಡುತ್ತದೆ. ಅಲ್ಲದೇ ಗೂಗಲ್ ಪಿಕ್ಸಲ್ ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿಗಳಂತಹ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯ ಇದೆ.


Click it and Unblock the Notifications








