ಭಾರತದಲ್ಲಿಯೇ ತಯಾರಾಗಲಿದೆ ಗೂಗಲ್ ಪಿಕ್ಸೆಲ್ 8 ಫೋನ್! ಹಾಗಾದ್ರೆ ಬೆಲೆ ಏನಾಗಲಿದೆ?
ಇತ್ತೀಚೆಗೆ ಟೆಕ್ ವಲಯಕ್ಕೆ ಎಂಟ್ರಿ ನೀಡಿದ ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್‌ಗಳ ಅಬ್ಬರ ಜೋರಾಗಿದೆ. ಇದರ ನಡುವೆ ಗೂಗಲ್ ಕಂಪೆನಿ ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಉತ್ಪಾದನೆ ಮಾಡುವುದಾಗಿ ಗೂಗಲ್ ಹೇಳಿದೆ. ಈ ಮೂಲಕ ಪಿಕ್ಸೆಲ್ 8 ನೊಂದಿಗೆ ಭಾರತದಲ್ಲಿ ಪಿಕ್ಸೆಲ್ ಫೋನ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲು ಗೂಗಲ್ ಮುಂದಾಗಿದೆ.
ಹೌದು, ಗೂಗಲ್ ಕಂಪನಿಯ ಮೇಡ್ ಇನ್ ಇಂಡಿಯಾ ಈವೆಂಟ್‌ನಲ್ಲಿ ಗೂಗಲ್ ಮಹತ್ವದ ಘೋಷಣೆ ಮಾಡಿದೆ. ಅದರಂತೆ ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿಯೇ ತಯಾರಾಗಲಿದೆ. ಅಷ್ಟೇ ಅಲ್ಲ ಮುಂದಿನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳು ಕೂಡ ಭಾರತದಲ್ಲಿಯೇ ಉತ್ಪಾದನೆಯಾಗಲಿವೆ. ಹಾಗಾದ್ರೆ ಭಾರತದಲ್ಲಿಯೇ ತಯಾರಿಸಲಾದ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಖರೀದಿಗೆ ಯಾವಾಗ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೇಡ್ ಇನ್ ಇಂಡಿಯಾ ಗೂಗಲ್ ಪಿಕ್ಸೆಲ್ 8
ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಮೂಲಕ ಗೂಗಲ್ ಭಾರತದಲ್ಲಿ ತನ್ನ ಪಿಕ್ಸೆಲ್ ಫೋನ್‌ಗಳನ್ನು ಉತ್ಪಾದನೆ ಮಾಡಲು ಮುಂದಾಗಿದೆ. ಇದು ಪಿಕ್ಸೆಲ್ ಫೋನ್‌ಗಳನ್ನು ಭಾರತದಲ್ಲಿಯೇ ಸ್ಥಳೀಯವಾಗಿ ಉತ್ಪಾದಿಸಲು ಅಂತರಾಷ್ಟ್ರೀಯ ಮತ್ತು ದೇಶೀಯ ತಯಾರಕರೊಂದಿಗೆ ಪಾಲುದಾರಿಕೆ ಮಾಡಲು ಯೋಜಿಸಿದೆ. ಪ್ರಸ್ತುತ, ಗೂಗಲ್ ತನ್ನ ಸಾಧನಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡುತ್ತಿದೆ.
ಆದರೆ ಇತರ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾರಾಟವಾಗುವ ಪಿಕ್ಸೆಲ್ ಫೋನ್‌ಗಳ ಸಂಖ್ಯೆ ಸೀಮಿತವಾಗಿವೆ. ಆದರಿಂದ ಮೇಡ್ ಇನ್ ಇಂಡಿಯಾ ಪಿಕ್ಸೆಲ್ ಫೋನ್‌ಗಳಿಗೆ ಅದ್ಯತೆ ನೀಡಲು ಗೂಗಲ್ ಮುಂದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಿಕ್ಸೆಲ್ ಫೋನ್‌ಗಳು ಭಾರತದಲ್ಲಿ ತಯಾರಾಗುವುದು ಮಾತ್ರವಲ್ಲ ಪಿಕ್ಸೆಲ್ ವಾಚ್‌ಗಳು ಕೂಡ ತಯಾರಾಗಲಿದೆ ಎನ್ನಲಾಗಿದೆ. ಸದ್ಯ ಭಾರತವು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಆದ್ಯತೆಯ ಮಾರುಕಟ್ಟೆಯಾಗಿದೆ ಆದರಿಂದ ನಮ್ಮ ಅತ್ಯುತ್ತಮ ಹಾರ್ಡ್‌ವೇರ್ ಮತ್ತು ಅಂತರ್ನಿರ್ಮಿತ ಸಾಫ್ಟ್‌ವೇರ್ ಸಾಮರ್ಥ್ಯಗಳನ್ನು ದೇಶಾದ್ಯಂತ ಜನರಿಗೆ ತರಲು ನಾವು ಬದ್ಧರಾಗಿದ್ದೇವೆ ಎಂದು ಗೂಗಲ್ ಹೇಳಿಕೊಂಡಿದೆ.
ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಭಾರತದಲ್ಲಿಯೇ ಉತ್ಪಾದನೆಯಾದರೆ, ಭಾರತದಲ್ಲಿ ಪಿಕ್ಸೆಲ್ ಸಾಧನಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಭಾರತದಲ್ಲಿ ಗೂಗಲ್ ಪಿಕ್ಸೆಲ್ 8 ಬೆಲೆ ಎಷ್ಟಿದೆ?
ಭಾರತದಲ್ಲಿ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ 75,999ರೂ. ಬೆಲೆಯನ್ನು ಹೊಂದಿದೆ. ಇದು ಹ್ಯಾಝೆಲ್, ಅಬ್ಸಿಡಿಯನ್ ಮತ್ತು ರೋಸ್ ಬಣ್ಣದ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಇನ್ನು ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್ 1,06,999ರೂ ಬೆಲೆಯನ್ನು ಹೊಂದಿದೆ. ಇದು ಬೇ, ಅಬ್ಸಿಡಿಯನ್ ಮತ್ತು ಪಿಂಗಾಣಿ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಗೂಗಲ್ ಪಿಕ್ಸೆಲ್ 8 ಫೀಚರ್ಸ್ ಹೇಗಿದೆ?
ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ 6.2 ಇಂಚಿನ FHD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ. ಜೊತೆಗೆ ಡಿಸ್‌ಪ್ಲೇ 2,000 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ. ಇದು ಟೈಟಾನ್ M2 ಸೆಕ್ಯುರಿಟಿ ಮೈಕ್ರೊಪ್ರೊಸೆಸರ್‌ನೊಂದಿಗೆ ಬರಲಿದ್ದು, ಟೆನ್ಸರ್ G3 ಚಿಪ್‌ಸೆಟ್ ಅನ್ನು ರನ್ ಮಾಡುತ್ತದೆ. ಹಾಗೆಯೇ 8GB RAM ಅನ್ನು 128GB ಮತ್ತು 256GB ಸ್ಟೋರೇಜ್ ಆಯ್ಕೆಗಳೊಂದಿಗೆ ಬರಲಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ.


Click it and Unblock the Notifications








