Home
ಸುದ್ದಿಜಾಲ

ಗೂಗಲ್‌ ಪಿಕ್ಸೆಲ್‌ 8 ಸರಣಿ ಬಿಡುಗಡೆ ದಿನಾಂಕ ಪ್ರಕಟ.. ಟೆಕ್‌ ವಲಯದಲ್ಲಿ ಭಾರಿ ಸಂಚಲನ!

ಈ ವರ್ಷ ಬಿಡುಗಡೆ ಆಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ ಸರಣಿಗಳಲ್ಲಿ ಗೂಗಲ್‌ ಪಿಕ್ಸೆಲ್‌ 8 ಸರಣಿ ಕೂಡ ಒಂದು. ಈಗಾಗಲೇ ಹಲವು ಇಮೇಜ್‌ ಸೋರಿಕೆಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ. ಇದೀಗ ಗೂಗಲ್‌ ಪಿಕ್ಸೆಲ್‌ 8 ಸರಣಿ ಬಿಡುಗಡೆ ದಿನಾಂಕ ಬಹಿರಂಗವಾಗಿದ್ದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಹೌದು, ಗೂಗಲ್‌ ಪಿಕ್ಸೆಲ್‌ 8 ಸರಣಿ ಆಕ್ಟೋಬರ್‌ 4 ರಂದು ಬಿಡುಗಡೆ ಆಗಲಿದೆ. ಗೂಗಲ್‌ ಪಿಕ್ಸೆಲ್‌ 8 ಸರಣಿ ಬಿಡುಗಡೆಗಾಗಿ ಮೇಡ್ ಬೈ ಗೂಗಲ್ ಈವೆಂಟ್ ಆಯೋಜಿಸಿರುವುದಾಗಿ ಗೂಗಲ್‌ ಸ್ಪಷ್ಟಪಡಿಸಿದೆ. ಇನ್ನು ಈ ವರ್ಷದ ಮೇಡ್ ಬೈ ಗೂಗಲ್ ಈವೆಂಟ್ ವೈಯಕ್ತಿಕ ಈವೆಂಟ್ ಆಗಿದ್ದು, ಕಳೆದ ವರ್ಷದಂತೆ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿದೆ. ಈ ಈವೆಂಟ್ ಅನ್ನು ಯುಟ್ಯೂಬ್‌ ಮೂಲಕ ಲೈವ್‌ ಸ್ಟೀಮ್‌ ಮಾಡಬಹುದಾಗಿದೆ. ಹಾಗಾದ್ರೆ ಗೂಗಲ್‌ ಪಿಕ್ಸೆಲ್‌ 8 ಸರಣಿಯಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪಿಕ್ಸೆಲ್‌ 8 ಸರಣಿ ಬಿಡುಗಡೆ ದಿನಾಂಕ ಪ್ರಕಟ.. ಭಾರಿ ಸಂಚಲನ!

ಗೂಗಲ್‌ ಪಿಕ್ಸೆಲ್‌ 8 ಸರಣಿ ಏನೆಲ್ಲಾ ನಿರೀಕ್ಷೆ?
ಗೂಗಲ್‌ ಪಿಕ್ಸೆಲ್‌ 8 ಸರಣಿಯು ಈ ವರ್ಷದ ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ ಅನಾವರಣಗೊಳ್ಳಲಿದೆ. ಈ ಸರಣಿಯಲ್ಲಿ ಗೂಗಲ್‌ ಪಿಕ್ಸೆಲ್ 8 ಮತ್ತು ಗೂಗಲ್‌ ಪಿಕ್ಸೆಲ್ 8 ಪ್ರೊ ಫೋನ್‌ಗಳು ಬರಲಿವೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್‌ಗಳ ಜೊತೆಗೆ ಗೂಗಲ್‌ ಪಿಕ್ಸೆಲ್ ವಾಚ್ 2 ಕೂಡ ಬಿಡುಗಡೆ ಆಗುವ ಸಾಧ್ಯತೆಯಿದೆ.

ಗೂಗಲ್‌ ಪಿಕ್ಸೆಲ್‌ 8 ಸರಣಿ ಫೀಚರ್ಸ್‌ ನಿರೀಕ್ಷೆ ಏನು?
ಗೂಗಲ್‌ ಪಿಕ್ಸೆಲ್‌ 8 ಸರಣಿಯ ಎರಡು ಫೋನ್‌ಗಳು ತಮ್ಮ ವಿನ್ಯಾಸದ ಶ್ರೇಣಿಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ಈ ಭಾರಿ ಕರ್ವ್ಡ್‌ ಡಿಸ್‌ಪ್ಲೇ ಬದಲಿಗೆ, ಫ್ಲಾಟ್ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ಗೂಗಲ್‌ ಪಿಕ್ಸೆಲ್‌ 8 ಪ್ರೊ ಮಾದರಿಯ ಎಲ್ಲಾ ಲೆನ್ಸ್‌ಗಳಿಗೆ ಕ್ಯಾಮೆರಾ ವಿಸರ್ ಒಂದೇ ಕಟೌಟ್ ಅನ್ನು ಹೊಂದಿರಲಿದೆ. ಜೊತೆಗೆ ಟೆಂಪರೇಚರ್ ಸೇನ್ಸಾರ್‌ ಅನ್ನು ಸಹ ಹೊಂದಿರಲಿದೆ. ಇನ್ನು ಗೂಗಲ್‌ ಪಿಕ್ಸೆಲ್‌ 8 ಸರಣಿಯು ಮೂರನೇ ತಲೆಮಾರಿನ ಟೆನ್ಸರ್‌ G3 ಪ್ರೊಸೆಸರ್‌ನಿಂದ ರನ್‌ ಆಗುವ ನಿರೀಕ್ಷೆಯಿದೆ. ಇನ್ನು ಎರಡು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಗೂಗಲ್‌ ಪಿಕ್ಸೆಲ್‌ 8 ಸರಣಿಯು ಹೊಸ 50 ಮೆಗಾಪಿಕ್ಸೆಲ್‌ ಸ್ಯಾಮ್‌ಸಂಗ್‌ ಐಸೋಸೆಲ್‌ GN2 ಪ್ರೈಮೆರಿ ಸೆನ್ಸಾರ್‌ ಅನ್ನು ಹೊಂದಿರಲಿದೆ. ಇದು ಪಿಕ್ಸೆಲ್‌ 6 ಮತ್ತು ಪಿಕ್ಸೆಲ್‌ 7 ಸರಣಿಗಳಲ್ಲಿನ GN1 ಸೆನ್ಸಾರ್‌ಗಳಿಗಿಂತ 35% ಹೆಚ್ಚು ಬೆಳಕನ್ನು ಸೆರೆಹಿಡಿಯಲಿದೆ. ಇನ್ನು ಹೊಸ 64 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಆದರೆ ಪಿಕ್ಸೆಲ್‌ 8 12.2MP ಆವೃತ್ತಿಯೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಇನ್ನು ಎರಡೂ ಸ್ಮಾರ್ಟ್‌ಫೋನ್‌ಗಳು ಹೊಸ ಸಾಫ್ಟ್‌ವೇರ್ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಗೂಗಲ್‌ ಪಿಕ್ಸೆಲ್ 8 ಸ್ಮಾರ್ಟ್‌ಫೋನ್‌ 6.1 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದೆ. ಗೂಗಲ್‌ ಪಿಕ್ಸೆಲ್‌ 8 ಪ್ರೊ ಸ್ಮಾರ್ಟ್‌ಫೋನ್‌ 6.7 ಇಂಚಿನ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಡಿಸ್‌ಪ್ಲೇ ಕೂಡ 120Hz ವೇರಿಯಬಲ್ ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ.

ಇನ್ನು ಈ ಸರಣಿಯಲ್ಲಿ ಗೂಗಲ್‌ ಪಿಕ್ಸೆಲ್ 8 ಸ್ಮಾರ್ಟ್‌ಫೋನ್‌ 4,485mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಆದರೆ ಗೂಗಲ್‌ ಪಿಕ್ಸೆಲ್‌ 8 ಪ್ರೊ ಸ್ಮಾರ್ಟ್‌ಫೋನ್‌ 4,950mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಪಿಕ್ಸೆಲ್‌ 8 ಫೋನ್‌ 24W ಅನ್ನು ಬೆಂಬಲಿಸಲಿದೆ. ಇನ್ನು ಪಿಕ್ಸೆಲ್‌ 8 ಪ್ರೊ ಫೋನ್‌ 27W ಚಾರ್ಜಿಂಗ್ ವೇಗವನ್ನು ಬೆಂಬಲಿಸಲಿದೆ. ಈ ಎರಡೂ ಮಾದರಿಗಳು 20W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ.

Best Mobiles in India

English summary
Google has announced the launch date for the Pixel 8 series: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+