ಗೂಗಲ್ ಬಾರ್ಡ್‌ನಲ್ಲಿ ಹೊಸ ಅಪ್ಡೇಟ್: ಇನ್ಮುಂದೆ ನಕಲಿ AI ಗಳಿಗೆ ಅವಕಾಶವೇ ಇಲ್ಲ!
ಸರ್ಚ್ ಇಂಜಿನ್ ದೈತ್ಯ ತನ್ನ ಗೂಗಲ್ ಬಾರ್ಡ್ ಅನ್ನು ಅಪ್ಡೇಟ್ ಮಾಡಿದೆ. ಈ ಮೂಲಕ ಹಲವು ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದ್ದು, ಜೆಮಿನಿ ಪ್ರೊ ಮಾದರಿಯು ಮೇನ್ ಹೈಲೈಟ್ ಆಗಿದೆ. ಇದು ಕಂಪನಿಯ ಇಲ್ಲಿಯವರೆಗಿನ "ಅತ್ಯಂತ ಸಮರ್ಥ AI ಮಾದರಿ" ಎಂದು ಹೆಸರಿಸಿದೆ. ಇನ್ನು ಗೂಗಲ್ ಬಾರ್ಡ್ AI ಚಾಟ್ ಅನ್ನು ಇಂಗ್ಲಿಷ್‌ನಲ್ಲಿ ನಡೆಸಿದರೆ, ಇದೀಗ 40 ಕ್ಕೂ ಹೆಚ್ಚು ಭಾಷೆಗಳು ಮತ್ತು 230+ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಬೆಂಬಲವನ್ನು ವಿಸ್ತರಿಸಿದೆ.
ಹೌದು, ಗೂಗಲ್ ಹೊಸದಾಗಿ ತನ್ನ ಬಾರ್ಡ್ ಅನ್ನು ಅಪ್ಡೇಟ್ ಮಾಡುವ ಮೂಲಕ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. ಅದರಂತೆ ಇಮೇಜ್ ಜನರೇಷನ್ ಸಾಮರ್ಥ್ಯದ ಜೊತೆಗೆ ಉತ್ತಮ "ತಿಳುವಳಿಕೆ, ತಾರ್ಕಿಕ, ಸಾರಾಂಶ ಮತ್ತು ಕೋಡಿಂಗ್" ಸಾಮರ್ಥ್ಯಗಳನ್ನು ಪರಿಚಯಿಸಿದೆ. ಅಲ್ಲದೆ ಬಾರ್ಡ್ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸಲು ಉತ್ತಮಗೊಳಿಸುತ್ತದೆ. ಹಾಗಾದ್ರೆ ಗೂಗಲ್‌ನ ಜೆಮಿನಿ ಪ್ರೊ ಮಾಡೆಲ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಬಾರ್ಡ್ ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು, ತೆಲುಗು, ಉರ್ದು ಭಾಷೆಗಳನ್ನು ಬೆಂಬಲಿಸಲಿದೆ. ಇದಲ್ಲದೆ, ಗೂಗಲ್ ತನ್ನ ಡಬಲ್-ಚೆಕ್ ಫೀಚರ್ಸ್ ಅನ್ನು 40 ಭಾಷೆಗಳಲ್ಲಿ ವಿಸ್ತರಿಸುತ್ತಿದೆ. ಇನ್ನು ಜೆಮಿನಿ ಪ್ರೊ ಆಯ್ಕೆಯನ್ನು 'G' ಐಕಾನ್ ಮೂಲಕ ಪ್ರಾಂಪ್ಟ್ ಮಾಡಬಹುದು ಎನ್ನಲಾಗಿದೆ. ನೀವು 'G' ಐಕಾನ್ ಅನ್ನು ಕ್ಲಿಕ್ ಮಾಡಿದಾಗ, ಅದರ ಪ್ರತಿಕ್ರಿಯೆಯನ್ನು ದೃಢೀಕರಿಸಲು ವೆಬ್‌ನಾದ್ಯಂತ ವಿಷಯವಿದೆಯೇ ಎಂದು ಬಾರ್ಡ್ ಮೌಲ್ಯಮಾಪನ ಮಾಡಲಿದೆ.
ಒಂದು ವೇಳೆ ಬಾರ್ಡ್ ವೆಬ್‌ನಲ್ಲಿನ ಕಂಟೆಂಟ್ ಅನ್ನು ಮೌಲ್ಯಮಾಪನ ಮಾಡಲು ಸಾಧ್ಯವಾದರೆ, ನೀವು ಹೈಲೈಟ್ ಮಾಡಲಾದ ನುಡಿಗಟ್ಟುಗಳನ್ನು ಕ್ಲಿಕ್ ಮಾಡಬಹುದಾಗಿದೆ. ಜೊತೆಗೆ ಸರ್ಚ್ ಮೂಲಕ ಕಂಡುಬರುವ ಮಾಹಿತಿಯನ್ನು ಬೆಂಬಲಿಸುವ ಅಥವಾ ವ್ಯತಿರಿಕ್ತಗೊಳಿಸುವ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದಾಗಿದೆ. ಇದಲ್ಲದೆ ಇಂಗ್ಲಿಷ್ ಭಾಷೆಯಲ್ಲಿ ಬಾರ್ಡ್‌ನಲ್ಲಿ ಇಮೇಜ್ ಬಿಲ್ಟ್ ಸಾಮರ್ಥ್ಯಗಳನ್ನು ಸಹ ಸೇರ್ಪಡೆ ಮಾಡಿದೆ.

ಗೂಗಲ್ ಬಾರ್ಡ್ ಇದೀಗ "ಉತ್ತಮ-ಗುಣಮಟ್ಟದ, ಫೋಟೋರಿಯಾಲಿಸ್ಟಿಕ್" ಚಿತ್ರಗಳನ್ನು ನೀಡಬಲ್ಲ ಪರಿಷ್ಕರಿಸಿದ ಇಮೇಜೆನ್ 2 ಮಾದರಿಯಿಂದ ಚಾಲಿತವಾಗುತ್ತದೆ. ಈ ಚಿತ್ರಗಳನ್ನು ರಚಿಸುವುದನ್ನು ಪ್ರಾರಂಭಿಸಲು ಬಳಕೆದಾರರು ಸರ್ಚ್ ಬಾರ್‌ನಲ್ಲಿ ಕಾಣುವ ಜೆಮಿನಿ ಪ್ರೊ ಪ್ರಾಂಪ್ಟ್ ಅನ್ನು ಟೈಪ್ ಮಾಡಬಹುದು. ಆದರಿಂದ ಗೂಗಲ್ ಈ ಚಿತ್ರಗಳ ಪಿಕ್ಸೆಲ್‌ಗಳಲ್ಲಿ ಡಿಜಿಟಲ್ ಗುರುತಿಸಬಹುದಾದ ವಾಟರ್‌ಮಾರ್ಕ್‌ಗಳನ್ನು ಎಂಬೆಡ್ ಮಾಡುವುದಕ್ಕೆ ಅವಕಾಶ ದೊರೆತಿದೆ. ಇದಕ್ಕಾಗಿ ಸಿಂಥಿಡ್ ಅನ್ನು ಬಳಸಬಹುದಾಗಿದೆ.

ಇದರಿಂದ ಸುರಕ್ಷತೆಯ ವಿಚಾರವಾಗಿ ಬಳಕೆದಾರರಿಗೆ ನಕಲಿ ಎಐಗಳಿಂದ ರಕ್ಷಣೆ ನೀಡಲಿದೆ. ಗಾರ್ಡ್‌ರೈಲ್‌ಗಳು ಹಿಂಸಾತ್ಮಕ, ಆಕ್ರಮಣಕಾರಿ ಅಥವಾ ಲೈಂಗಿಕವಾಗಿ ಅಶ್ಲೀಲ ವಿಷಯದ ಉತ್ಪಾದನೆಯನ್ನು ಮಿತಿಗೊಳಿಸಲು ಸಹಾಯ ಮಾಡಲಿದೆ. ಇದಲ್ಲದೆ, ಟೆಕ್ ದೈತ್ಯ ಹೆಸರಿನ ಜನರ ಚಿತ್ರ ಉತ್ಪಾದನೆಯನ್ನು ನಿರ್ಬಂಧಿಸುವ ಕ್ರಮಗಳನ್ನು ಜಾರಿಗೊಳಿಸಲಿದೆ. ಈಗಾಗಲೇ ಮೈಕ್ರೋಸಾಫ್ಟ್‌ನ AI ಚಾಟ್ ಮಾದರಿಯೊಂದಿಗೆ ಪೈಪೋಟಿ ನಡೆಸುತ್ತಿರುವ ಗೂಗಲ್ ಬಾರ್ಡ್ ಇನ್ನು ಹೆಚ್ಚಿನ ಸಾಮರ್ಥ್ಯಗಳನ್ನು ಪರಿಚಯಿಸುವುದಕ್ಕೆ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ AI ಚಾಟ್ ಮಾದರಿಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಈ ಹಾದಿಯಲ್ಲಿ ಚಾಟ್ ಜಿಪಿಟಿ ಮುಂಚೂಣಿಯಲ್ಲಿದೆ, ಇದಕ್ಕೆ ಟಕ್ಕರ್ ನೀಡುವ ಕೆಲಸವನ್ನು ಗೂಗಲ್‌ನ ಬಾರ್ಡ್ ಮಾಡುತ್ತಿದೆ. ಆದರೆ ಚಾಟ್ ಜಿಪಿಯ ಜನಪ್ರಿಯತೆ ಗೂಗಲ್ ಬಾರ್ಡ್ ಅನ್ನು ಮರೆ ಮಾಚುತ್ತಿದೆ. ಇದೇ ಕಾರಣಕ್ಕೆ ಗೂಗಲ್ ತನ್ನ ಬಾರ್ಡ್‌ನಲ್ಲಿ ಪರಿಣಾಮಕಾರಿ ಆಯ್ಕೆಯ ಫೀಚರ್ಸ್‌ಗಳನ್ನು ಸೆರ್ಪಡೆ ಮಾಡುವ ಮೂಲಕ ಹೊಸ ಹೆಜ್ಜೆ ಹಾಕಿದೆ. ಇದು ಮುಂದಿನ ದಿನಗಳಲ್ಲಿ ಹೇಗೆ ಪರಿಣಾಮ ಬೀರಲಿದೆ ಅನ್ನೊದನ್ನ ಕಾದು ನೋಡಬೇಕಿದೆ.


Click it and Unblock the Notifications








