Home
ಸುದ್ದಿಜಾಲ

ಭಾರತೀಯರಿಗೆ ಗೂಗಲ್‌ನಿಂದ ಗುಡ್‌ನ್ಯೂಸ್‌! ಈ ಫೀಚರ್ಸ್‌ ನಿಮ್ಮ ಜೀವವನ್ನು ಉಳಿಸಲಿದೆ!

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಅತ್ಯಂತ ಉಪಯುಕ್ತವಾದ ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಈಗಾಗಲೇ ಬೇರೆ ದೇಶಗಳಲ್ಲಿ ಲಭ್ಯವಿರುವ ಭೂಕಂಪದ ಎಚ್ಚರಿಕೆ ವ್ಯವಸ್ಥೆ (ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್) ಇದೀಗ ಭಾರತಕ್ಕೂ ಕೂಡ ಕಾಲಿಟ್ಟಿದೆ. ಇದರ ಬಗ್ಗೆ ಗೂಗಲ್‌ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.

ಹೌದು, ಭೂಕಂಪದ ಎಚ್ಚರಿಕೆ ನೀಡುವ ಹೊಸ ಸಿಸ್ಟಂ ಅನ್ನು ಗೂಗಲ್‌ ಭಾರತದಲ್ಲಿ ಪರಿಚಯಿಸಿದೆ. ಇದಕ್ಕಾಗಿ ಗೂಗಲ್‌ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಮತ್ತು ಭೂ ವಿಜ್ಞಾನ ಸಚಿವಾಲಯದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಸಹಯೋಗವನ್ನು ಪಡೆದುಕೊಂಡಿದೆ. ಈ ಸಿಸ್ಟಂ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ಗೂಗಲ್‌ನ ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತೀಯರಿಗೆ ಗೂಗಲ್‌ನಿಂದ ಗುಡ್‌ನ್ಯೂಸ್‌! ಈ ಫೀಚರ್ಸ್‌ ನಿಮ್ಮ ಜೀವವನ್ನು ಉಳಿಸಲಿದೆ

ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಹೆಸರೇ ಸೂಚಿಸುವಂತೆ ಭೂಕಂಪಗಳ ಬಗ್ಗೆ ಎಚ್ಚರಿಕೆಯನ್ನು ನೀಡಲಿದೆ. ಭೂಕಂಪಗಳು ಸಾಮಾನ್ಯ ನೈಸರ್ಗಿಕ ವಿಪತ್ತು ಆಗಿವೆ, ಆದರೆ ಇದರ ಮುನ್ಸೂಚನೆ ದೊರೆತರೆ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದಕ್ಕೆ ಪ್ರಯತ್ನಿಸಬಹುದು. ಈ ನಿಟ್ಟಿನಲ್ಲಿ ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಅತ್ಯಂತ ಉಪಯುಕ್ತ ಫೀಚರ್ಸ್‌ ಎನಿಸಿಕೊಂಡಿದೆ. ಗೂಗಲ್‌ ತನ್ನ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಈ ಸಿಸ್ಟಂ ಅನ್ನು ಹೊರತರುತ್ತಿರುವುದರಿಂದ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇದು ತುಂಬಾನೇ ಉಪಯುಕ್ತವಾಗಲಿದೆ.

ಇನ್ನು ಭೂಕಂಪ ಎಚ್ಚರಿಕೆ ವ್ಯವಸ್ಥೆಯು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಬಿಲ್ಟ್‌ ಸೆನ್ಸಾರ್‌ಗಳನ್ನು ಬಳಸಲಿದೆ. ಇದನ್ನು ಆಕ್ಸಿಲೆರೋಮೀಟರ್‌ ಸೆನ್ಸಾರ್‌ ಎನ್ನಲಾಗಿದ್ದು, ಇವುಗಳು ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್‌ಗಾಗಿ ಮಿನಿಯೇಚರ್ ಸೀಸ್ಮೋಮೀಟರ್‌ಗಳಾಗಿ ಕೂಡ ಕಾರ್ಯನಿರ್ವಹಿಸಲಿವೆ ಎಂದು ಗೂಗಲ್‌ ಬ್ಲಾಗ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸಲಿದೆ?
ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ನಿಮಗೆ ಭೂಕಂಪದ ಮುನ್ಸೂಚನೆ ನೀಡಲಿದೆ. ಪ್ಲಗ್-ಇನ್ ಮತ್ತು ಚಾರ್ಜಿಂಗ್ ಆಂಡ್ರಾಯ್ಡ್ ಫೋನ್ ಭೂಕಂಪದ ಆರಂಭಿಕ ನಡುಕಗಳನ್ನು ಪತ್ತೆಹಚ್ಚಿದಾಗ, ಡೇಟಾವನ್ನು ಸೆಂಟ್ರಲ್‌ ಸರ್ವರ್‌ಗೆ ಕಳುಹಿಸುತ್ತದೆ. ಹೀಗೆ ಒಂದೇ ಪ್ರದೇಶದಲ್ಲಿರುವ ಹಲವು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಕೂಡ ಒಂದೇ ರೀತಿಯ ಭೂಕಂಪದ ಅನುಭವ ಅಥವಾ ಭೂಮಿ ಅಲುಗಾಡುವುದನ್ನು ಪತ್ತೆ ಹಚ್ಚಿದರೆ ಸರ್ವರ್ ಭೂಕಂಪದ ಗುಣಲಕ್ಷಣಗಳನ್ನು ಅದರ ಕೇಂದ್ರಬಿಂದುವನ್ನು ಅಂದಾಜು ಮಾಡಲಿದೆ.

ತಕ್ಷಣವೇ ಇದು ವೇಗವಾಗಿ ಹತ್ತಿರದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಅರ್ಥ್ ಕ್ವೇಕ್ ಅಲರ್ಟ್ ಅನ್ನು ಸೆಂಡ್‌ ಮಾಡಲಿದೆ. ಈ ಆಲರ್ಟ್‌ ಸಂದೇಶವನು ತಕ್ಷಣವೇ ಎಲ್ಲಾ ಬಳಕೆದಾರರಿಗೆ ಸೆಂಡ್‌ ಆಗಲಿದೆ ಎನ್ನಲಾಗಿದೆ. ಇನ್ನು ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಂ ಅನ್ನು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ಇದು ಆಂಡ್ರಾಯ್ಡ್ ಬೆಂಬಲಿತ ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ವ್ಯಾಪಕ ಶ್ರೇಣಿಯ ಬಳಕೆದಾರರಿಗೆ ಪ್ರವೇಶವನ್ನು ನೀಡಲಿದೆ.

ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಅನ್ನು ಯಾವ ಆಂಡ್ರಾಯ್ಡ್‌ ಡಿವೈಸ್‌ಗಳು ಬೆಂಬಲಿಸಲಿವೆ?
ಆಂಡ್ರಾಯ್ಡ್‌ 5 ಅಥವಾ ಹೊಸ ಆಂಡ್ರಾಯ್ಡ್‌ ಸಿಸ್ಟಂನಲ್ಲಿ ರನ್‌ ಆಗುವ ಎಲ್ಲಾ ಆಂಡ್ರಾಯ್ಡ್‌ ಬಳಕೆದಾರರಿಗೂ ಈ ಫೀಚರ್ಸ್‌ ಲಭ್ಯವಾಗಲಿದೆ. ಇದನ್ನು ಬಳಸುವುದಕ್ಕೆ ಬಳಕೆದಾರರು ವೈ-ಫೈ ಅಥವಾ ಸೆಲ್ಯುಲಾರ್ ಡೇಟಾ ಸಂಪರ್ಕವನ್ನು ಹೊಂದಿರಬೇಕು. ಅಲ್ಲದೆ ಆಂಡ್ರಾಯ್ಡ್‌ ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಮತ್ತು ಲೊಕೇಶನ್‌ ಸೆಟ್ಟಿಂಗ್ಸ್‌ ಆಕ್ಟಿವಿಟಿ ಆಗಿದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಈ ಆಲರ್ಟ್‌ಗಳ ಅವಶ್ಯಕತೆ ಇಲ್ಲವೆಂದರೆ ಡಿವೈಸ್‌ ಸೆಟ್ಟಿಂಗ್ಸ್‌ ಮೂಲಕ ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಅನ್ನು ಆಫ್‌ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ನೊಂದಿಗೆ ಗೂಗಲ್‌ನ ಪಾಲುದಾರಿಕೆಯು ಭೂಕಂಪದ ಎಚ್ಚರಿಕೆಗಳು ಮತ್ತು ಸುರಕ್ಷತೆಯ ಮಾಹಿತಿಯನ್ನು ಒದಗಿಸುವಲ್ಲಿ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿದೆ. ಆಂಡ್ರಾಯ್ಡ್ ಅರ್ಥ್ ಕ್ವೇಕ್ ಅಲರ್ಟ್ ಸಿಸ್ಟಮ್ ಭಾರತದಲ್ಲಿ ವಿಪತ್ತು ಸನ್ನದ್ಧತೆ ಮತ್ತು ಪ್ರತಿಕ್ರಿಯೆಯನ್ನು ಹೆಚ್ಚಿಸಲು ಗೂಗಲ್‌ನ ಬದ್ಧತೆಯನ್ನು ತೋರಿಸುತ್ತದೆ ಎಂದು ವರದಿಯಾಗಿದೆ.

Best Mobiles in India

English summary
Google has introduced its Android Earthquake Alert System in India: How it will work?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+