Google: ಆಂಡ್ರಾಯ್ಡ್ ಫೋನ್‌ಗಳ ಡೇಟಾ ಕಳ್ಳತನ ತಡೆಯಲು 'ಆ್ಯಂಟಿ ಥೆಫ್ಟ್' ವೈಶಿಷ್ಟ್ಯ ಸಿದ್ದಪಡಿಸಿದ ಗೂಗಲ್ !
ನಾವೀಗ ತಾಂತ್ರಿಕ ಯುಗದಲ್ಲಿದ್ದು, ಪ್ರತಿಯೊಂದು ವಿಭಾಗದಲ್ಲಿಯೂ ಹೊಸ ಹೊಸ ಅಪ್ಡೇಟ್‌ಗಳು ಆಗುವುದನ್ನು ನೋಡುತ್ತಿದ್ದೇವೆ. ಒಂದಿಲ್ಲೊಂದು ಹೊಸ ಹೊಸ ತಂತ್ರಜ್ಞಾನಗಳ ಅಭಿವೃದ್ದಿ ಹೊಂದುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಬಾಹ್ಯಾಕಾಶಕ್ಕೆ ನಾವು ಪ್ರಯಾಣ ಬೆಳೆಸುವ ವರೆಗೂ ತಂತ್ರಜ್ಞಾನ ಕ್ಷೇತ್ರ ಬೆಳೆದು ನಿಂತಿದೆ. ಅಂದಹಾಗೆ ಸ್ಮಾರ್ಟ್‌ಫೋನ್ ವಿಭಾಗದಲ್ಲಿಯೂ ಕೂಡ ದಿನೇ ದಿನೇ ಹೊಸ ಹೊಸ ಅಪ್ಡೇಟ್‌ಗಳನ್ನು ನಾವು ನೋಡುತ್ತಿದ್ದೇವೆ. ಇದೀಗ ಗೂಗಲ್ (Google) ಮೊಬೈಲ್ ಕಳ್ಳತನ ತಡೆಗಟ್ಟುವ ಉದ್ದೇಶದಿಂದ ಆಂಡ್ರಾಯ್ಡ್ ಮೊಬೈಲ್‌ಗಳಿಗೆ ನೂತನ ಅಪ್ಡೇಟ್ ಒಂದನ್ನು ಜಾರಿಗೊಳಿಸಿದೆ. ಹಾಗಿದ್ರೆ ಏನದು ನೂತನ ಅಪ್ಡೇಟ್ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಈ ಲೇಖನದಲ್ಲಿದೆ ಓದಿ.
Google ಕಳೆದ ತಿಂಗಳು ನಡೆದ ತನ್ನ ಬಹು ನಿರೀಕ್ಷಿತ ಡೆವಲಪರ್‌ಗಳ ಸಮ್ಮೇಳನದಲ್ಲಿ ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್‌ಗಳಿಗಾಗಿ ನೂತನ ಕಳ್ಳತನ ಪತ್ತೆ ವೈಶಿಷ್ಟ್ಯ ಒಂದನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು AI (Artificial Intelligence) ಕೃತಕ ಬುದ್ಧಿಮತ್ತೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಗೂಗಲ್ ತಿಳಿಸಿದೆ. ಈ ವೈಶಿಷ್ಟ್ಯದಿಂದಾಗಿ ಫೋನ್ ಕಳ್ಳತನವಾದ ಬಳಿಕವೂ ಕಳ್ಳರು ಫೋನ್ ಅನ್ನು ಬಳಸಲು ಸಾಧ್ಯವಾಗದೇ ಇರುವುದನ್ನು ಗಮನಿಸಬಹುದಾಗಿದೆ. ಸ್ಮಾರ್ಟ್‌ಫೋನ್ ನ ನಿಜವಾದ ಓನರ್ ಅಥವಾ ಬಳಕೆದಾರನ ಅನುಮತಿಯಿಲ್ಲದೆ ಫೋನ್ ಅನ್ನು ಅನ್‌ಲಾಕ್ ಮಾಡಲು ಸಾಧ್ಯವಾಗುವುದಿಲ್ಲ. ಈ ಕುರಿತಾದ ತಂತ್ರಜ್ಞಾನವನ್ನು ಬ್ರೆಜಿಲ್‌ನಲ್ಲಿ ಪರೀಕ್ಷೆಗೊಳಪಡಿಸಿದ ಬಳಿಕ ಗೂಗಲ್ ಈ ವೈಶಿಷ್ಟ್ಯವನ್ನು ಹೊರ ತಂದಿದೆ.

ಈ ವೈಶಿಷ್ಟ್ಯವು ಸ್ಮಾರ್ಟ್ ಫೋನ್ ಕದ್ದರೆ ಮೊಬೈಲ್ ಅನ್ನು ಲಾಕ್ ಮಾಡುತ್ತದೆ, ನಂತರ ಫೋನ್‌ನ ಯಾವುದೇ ಡೇಟಾ, ಫೋಟೋಗಳು, ಬ್ಯಾಂಕಿಂಗ್ ಸಂಬಂಧಿಸಿದ ಅಪ್ಲಿಕೇಶನ್‌ಗಳನ್ನು ಬಳಸಲಾಗುವುದಿಲ್ಲ. ಫೋನ್ ಕಳ್ಳತನದ ಸಂದರ್ಭದಲ್ಲಿ ಬಳಕೆದಾರರ ವೈಯಕ್ತಿಕ ಡೇಟಾ, ಬ್ಯಾಂಕಿಂಗ್ ವಿವರಗಳು ಇತ್ಯಾದಿಗಳ ರಕ್ಷಣೆಗೆ ಈ ನೂತನ "ಆ್ಯಂಟಿ ಥೆಫ್ಟ್" ವೈಶಿಷ್ಟ್ಯ ಅನುಕೂಲವಾಗಲಿದೆ.
ಈ ಆ್ಯಂಟಿ ಥೆಫ್ಟ್ ವೈಶಿಷ್ಟ್ಯವು ಕದ್ದ ಸಾಧನವನ್ನು ಮೂರು ರೀತಿಯಲ್ಲಿ ಲಾಕ್ ಮಾಡಲು ಸಹಾಯ ಮಾಡುತ್ತದೆ ಎಂದು ಗೂಗಲ್ ತನ್ನ ಡೆವಲಪರ್‌ಗಳ ಸಮ್ಮೇಳನದಲ್ಲಿ ವಿವರಿಸಿದೆ. ಮೊಬೈಲ್ ಹ್ಯಾಂಡ್‌ಸೆಟ್ ಕಳ್ಳನ ಬಳಿ ಇದೆಯೇ ಅಥವಾ ನಿಜವಾದ ಮಾಲೀಕರ ಬಳಿ ಇದೆಯೇ ಎಂದು ಕಂಡುಹಿಡಿಯಲು ಗೂಗಲ್ ಎಐ (Google AI) ಅನ್ನು ಬಳಸುತ್ತದೆ. ಇದಕ್ಕಾಗಿ, ಸಾಧನದ ಚಲನೆಯನ್ನು ಪತ್ತೆ ಹಚ್ಚಲಾಗುತ್ತದೆ ಮತ್ತು ಚಲನೆಯು ಅನುಮಾನಾಸ್ಪದವಾಗಿ ಕಂಡು ಬಂದರೆ ಫೋನ್ ಲಾಕ್ ಆಗುತ್ತದೆ. ಫೋನಿನ ಡಿಸ್‌ಪ್ಲೇಯು ತಕ್ಷಣ ಲಾಕ್ ಆಗುತ್ತದೆ. ಬಳಕೆದಾರರು ತಮ್ಮ ಕಳ್ಳತನವಾಗಿರುವ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಯನ್ನು ಮತ್ತೊಂದು ಮೊಬೈಲ್ ಅನ್ನು ಬಳಸಿಕೊಂಡು ದೂರದಿಂದಲೇ ಲಾಕ್ ಮಾಡಲು ಸಾಧ್ಯವಾಗುತ್ತದೆ. ಹೆಚ್ಚುವರಿಯಾಗಿ, ಫೋನ್ ದೀರ್ಘ ಕಾಲದವರೆಗೆ ಇಂಟರ್ನೆಟ್ ಸಂಪರ್ಕ ಹೊಂದಿಲ್ಲದಿದ್ದರೆ ಅದು ಸ್ವಯಂಚಾಲಿತವಾಗಿ ಲಾಕ್ ಆಗಲಿದೆ ಎಂದು ಗೂಗಲ್ ತಿಳಿಸಿದೆ.
ಗೂಗಲ್‌ನಿಂದ ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ ಕಳ್ಳರು ಫೋನ್ ಅನ್ನು ಕದ್ದ ನಂತರ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಕದ್ದ ಫೋನ್ ಅನ್ನು ಮಾರಾಟ ಮಾಡುವುದು ಕಷ್ಟಕರವಾಗಿರುತ್ತದೆ, ಏಕೆಂದರೆ ಫ್ಯಾಕ್ಟರಿಗೆ ರಿಟರ್ನ್ ಮಾಡಲು ಅಥವಾ ಸಾಧನವನ್ನು ಅನ್‌ಲಾಕ್ ಮಾಡಲು ನಿಜವಾದ ಮಾಲೀಕರ ದಾಖಲೆಗಳು ಅಥವ ಸಹಿ ಅಗತ್ಯವಿರುತ್ತದೆ.
ಈ ನಡುವೆ YouTube ಹೆಚ್ಚು ಬಳಕೆದಾರ ಸ್ನೇಹಿ ಮತ್ತು ಸಂವಾದಾತ್ಮಕವಾಗಿಸುವ ಗುರಿ ಹೊಂದಿರುವ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಗಮನಾರ್ಹವಾದ ಅಪ್‌ಗ್ರೇಡ್ ಅನ್ನು ಯೋಜಿಸುತ್ತಿದೆ. ಟೆಕ್ ದೈತ್ಯ Google AI ಲೈವ್ ಚಾಟ್, ಚಾನಲ್‌ಗಳಿಗಾಗಿ QR ಕೋಡ್‌ಗಳು ಮತ್ತು Google Lens ಹುಡುಕಾಟ ವೈಶಿಷ್ಟ್ಯದಂತಹ ಹೊಸ ಮತ್ತು ಸುಧಾರಿತ ಸಾಧನಗಳನ್ನು YouTube ಗೆ ಸಂಯೋಜಿಸಲು ಕೆಲಸ ಮಾಡುತ್ತಿದೆ.


Click it and Unblock the Notifications








