Home
ಸುದ್ದಿಜಾಲ

ಗೂಗಲ್‌ನ ಬಾರ್ಡ್‌ ಇದೀಗ ಜೆಮಿನಿ ಅಡ್ವಾನ್ಸ್ಡ್: ಇನ್ನೂ ಮೊಬೈಲ್‌ನಲ್ಲಿಯೂ ಲಭ್ಯ!

ಗೂಗಲ್‌ನ ಜನಪ್ರಿಯ AI ಚಾಟ್‌ಬಾಟ್ ಬಾರ್ಡ್ ಇನ್ಮುಂದೆ ಜೆಮಿನಿ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ. ಇದಕ್ಕಾಗಿ ಗೂಗಲ್‌ ತನ್ನ ಬಾರ್ಡ್‌ ಅನ್ನು ಜೆಮಿನಿ ಎಂದು ರೀ ಬ್ರಾಂಡ್ ಮಾಡುವುದಾಗಿ ಘೋಷಿಸಿದೆ. ಇದು ಅಂಡರ್‌ ಲೈಯಿಂಗ್‌ ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್‌ ಅನ್ನು ಹೊಂದಿದೆ. ಈ ಮಾಡೆಲ್‌ ಸುಧಾರಿತ ಶ್ರೇಣಿ ಅಲ್ಟ್ರಾವನ್ನು ಬಿಡುಗಡೆ ಮಾಡಲಿದೆ.

ಹೌದು, ಗೂಗಲ್‌ ನವೀಕರಿಸಿದ ಬಾರ್ಡ್ ಅನ್ನು ಈಗ ಜೆಮಿನಿ ಅಡ್ವಾನ್ಸ್ಡ್ ಎಂದು ಹೆಸರಿಸಲಾಗಿದೆ. ಇದಲ್ಲದೆ ಗೂಗಲ್‌ ಕಂಪನಿಯು ಆಂಡ್ರಾಯ್ಡ್‌ನಲ್ಲಿ ಹೊಸ ಜೆಮಿನಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. iOS ನಲ್ಲಿನ ಗೂಗಲ್‌ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಜೆಮಿನಿ ಅಡ್ವಾನ್ಸ್‌ ಅನ್ನು ಪ್ರವೇಶಿಸಬಹುದಾಗಿದೆ. ಹಾಗಾದ್ರೆ ಜೆಮಿನಿ ಅಡ್ವಾನ್ಸ್ಡ ವಿಶೇಷತೆ ಏನು? ಇದರ ಕಾರ್ಯನಿರ್ವಹಣೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ನ ಬಾರ್ಡ್‌ ಇದೀಗ ಜೆಮಿನಿ ಅಡ್ವಾನ್ಸ್ಡ್: ಇನ್ನೂ ಮೊಬೈಲ್‌ನಲ್ಲಿಯೂ ಲಭ್ಯ!

ಗೂಗಲ್‌ ತನ್ನ ಬ್ಲಾಗ್‌ನಲ್ಲಿ ವಿವರಿಸಿರುವಂತೆ ಜೆಮಿನಿ ಅಡ್ವಾನ್ಸ್ಡ್‌ ಹೆಚ್ಚು ವಿಕಸನಗೊಂಡಿದೆ. ಇದು ಸಂಪೂರ್ಣ ಎಕೋ ಸಿಸ್ಟಂ ಅನ್ನು ಬೆಂಬಲಿಸಲಿದ್ದು, ಮೊಬೈಲ್‌ನಲ್ಲಿಯೂ ಕೂಡ ಬಳಕೆಮಾಡಬಹುದಾಗಿದೆ. ಇನ್ನು ಪ್ರತಿದಿನ ಶತಕೋಟಿ ಜನರು ಬಳಸುವ ಉತ್ಪನ್ನಗಳಿಂದ, ಡೆವಲಪರ್‌ಗಳು ಮತ್ತು ವ್ಯವಹಾರಗಳಿಗೆ ಸಹಾಯ ಮಾಡುವ API ಗಳು ಮತ್ತು ಪ್ಲಾಟ್‌ಫಾರ್ಮ್‌ಗಳವರೆಗೆ ಜೆಮಿನಿ ಅಡ್ವಾನ್ಸ್‌ ಅನ್ನು ವಿಸ್ತರಿಸಲಾಗಿದೆ.

ಗೂಗಲ್ ಜೆಮಿನಿಯ ಹೊಸ ಆವೃತ್ತಿಯನ್ನು ಅಲ್ಟ್ರಾ ಎಂದು ಹೆಸರಿಸಲಾಗಿದೆ. ಈ ಮಾದರಿಯು ಗೂಗಲ್‌ನ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಅತ್ಯಾಧುನಿಕ AI ಮಾದರಿಯಾಗಿದೆ ಎಂದು ಗೂಗಲ್ ಹೇಳಿದೆ. ಇದು ಸಂಕೀರ್ಣ ಕಾರ್ಯಗಳಲ್ಲಿ ಹೆಚ್ಚು ಪ್ರವೀಣವಾಗಿದ್ದು, ಬಳಕೆದಾರರು ಸುದೀರ್ಘವಾದ, ಹೆಚ್ಚು ವಿವರವಾದ ಸಂಭಾಷಣೆಗಳನ್ನು ಹೊಂದಬಹುದು ಎಂದು ಗೂಗಲ್ ಹೇಳಿಕೊಂಡಿದೆ. ಇದರೊಂದಿಗೆ ಜೆಮಿನಿ ಅಡ್ವಾನ್ಸ್ಡ್ ಹೆಚ್ಚು ಸನ್ನಿವೇಶವನ್ನು ಹೊಂದಿದ್ದು, ಸುಧಾರಿತ ಕೋಡಿಂಗ್‌ನಲ್ಲಿ ಉತ್ತಮವಾಗಿದೆ.

ಇನ್ನು ಪ್ರತಿ ತಿಂಗಳು $19.99 ಕ್ಕೆ ಹೊಸ Google One AI ಪ್ರೀಮಿಯಂ ಯೋಜನೆಗೆ ಚಂದಾದಾರರಾಗುವ ಜನರು ಜೆಮಿನಿ ಅಡ್ವಾನ್ಸ್ಡ್ ಅನ್ನು ಬಳಸಲು ಪ್ರಾರಂಭಿಸಬಹುದಾಗಿದೆ. ಆದರೆ ಯಾವುದೇ ವೆಚ್ಚವಿಲ್ಲದೆ ಎರಡು ತಿಂಗಳ ಪ್ರಯೋಗದೊಂದಿಗೆ ಪ್ರಾರಂಭವಾಗುತ್ತದೆ. ಇದರಲ್ಲಿ ಮಲ್ಟಿಮೋಡಲ್ ಫೀಚರ್ಸ್‌ಗಳು, ಹೆಚ್ಚು ಸಂವಾದಾತ್ಮಕ ಕೋಡಿಂಗ್ ಸಾಮರ್ಥ್ಯಗಳು, ಆಳವಾದ ವಿಶ್ಲೇಷಣಾ ಪರಿಕರಗಳು ಮತ್ತು ಹೆಚ್ಚಿನವುಗಳಿಗೆ ಬಳಕೆದಾರರು ಪ್ರವೇಶ ಪಡೆಯುವುದಕ್ಕೆ ಅವಕಾಶವಿದೆ.

ಗೂಗಲ್‌ನ ಬಾರ್ಡ್‌ ಇದೀಗ ಜೆಮಿನಿ ಅಡ್ವಾನ್ಸ್ಡ್: ಇನ್ನೂ ಮೊಬೈಲ್‌ನಲ್ಲಿಯೂ ಲಭ್ಯ!

ಗೂಗಲ್‌ನ ಜೆಮಿನಿ ಅಡ್ವಾನ್ಸ್ಡ್ ಇಂಗ್ಲಿಷ್‌ನಲ್ಲಿ 150 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಲಭ್ಯವಿದೆ. ವರ್ಕ್‌ಸ್ಪೇಸ್ ಮತ್ತು ಗೂಗಲ್ ಕ್ಲೌಡ್‌ನಂತಹ ಇತರ ಉತ್ಪನ್ನಗಳಿಗೆ ಜೆಮಿನಿ ಮಾದರಿಗಳನ್ನು ಸಂಯೋಜಿಸಲು Google ಪ್ಲಾನ್‌ ಕೂಡ ಮಾಡಿದೆ. ಇದಲ್ಲದೆ AI ಪ್ರೀಮಿಯಂ ಚಂದಾದಾರರು ಶೀಘ್ರದಲ್ಲೇ Gmail, ಡಾಕ್ಸ್, ಸ್ಲೈಡ್‌ಗಳು, ಶೀಟ್‌ಗಳು ಮತ್ತು ಹೆಚ್ಚಿನವುಗಳಲ್ಲಿ ಜೆಮಿನಿಯನ್ನು ಬಳಬಹುದಾಗಿದೆ. ಇದಲ್ಲದೆ ಜೆಮಿನಿ ಮಾದರಿಯು ಇಮೇಜ್ ಜನರೇಷನ್ ಸಾಮರ್ಥ್ಯದ ಜೊತೆಗೆ ಉತ್ತಮ "ತಿಳುವಳಿಕೆ, ತಾರ್ಕಿಕ, ಸಾರಾಂಶ ಮತ್ತು ಕೋಡಿಂಗ್" ಸಾಮರ್ಥ್ಯಗಳನ್ನು ಹೊಂದಿದೆ. ಅಲ್ಲದೆ ಬಾರ್ಡ್ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸಲು ಉತ್ತಮಗೊಳಿಸುತ್ತದೆ.

ಆಂಡ್ರಾಯ್ಡ್ ಮೊಬೈಲ್‌ ಬಳಕೆದಾರರು ಕೂಡ ಜೆಮಿನಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇನ್ನು ಈ ಜೆಮಿನಿ ಅಪ್ಲಿಕೇಶನ್‌ನ ಮೂಲಕ ಟೈಮರ್‌ಗಳನ್ನು ಹೊಂದಿಸುವುದು, ಕರೆಗಳನ್ನು ಮಾಡುವುದು ಮತ್ತು ನಿಮ್ಮ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸುವುದು ಕೂಡ ಮಾಡಬಹುದು. ಸದ್ಯ ಜೆಮಿನಿ ಇಂದಿನಿಂದ ಇಂಗ್ಲಿಷ್‌ನಲ್ಲಿ US ನಲ್ಲಿ Android ಮತ್ತು iOS ಫೋನ್‌ಗಳಲ್ಲಿ ಲಭ್ಯವಾಗಲಿದೆ. ಆದರೆ ಮುಂಬರುವ ವಾರಗಳಲ್ಲಿ ಸಂಪೂರ್ಣವಾಗಿ ಲಭ್ಯವಿರುತ್ತದೆ.

ಇನ್ನು ಜೆಮಿನಿ ಪ್ರೊ ಆಯ್ಕೆಯನ್ನು 'G' ಐಕಾನ್ ಮೂಲಕ ಪ್ರಾಂಪ್ಟ್ ಮಾಡಬಹುದು ಎನ್ನಲಾಗಿದೆ. ನೀವು 'G' ಐಕಾನ್ ಅನ್ನು ಕ್ಲಿಕ್ ಮಾಡಿದಾಗ, ಅದರ ಪ್ರತಿಕ್ರಿಯೆಯನ್ನು ದೃಢೀಕರಿಸಲು ವೆಬ್‌ನಾದ್ಯಂತ ವಿಷಯವಿದೆಯೇ ಎಂದು ಬಾರ್ಡ್ ಮೌಲ್ಯಮಾಪನ ಮಾಡಲಿದೆ.

Best Mobiles in India

English summary
Google has rebranding its AI chatbot Bard as Gemini: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+