ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳಿದ್ದರೆ ಕೂಡಲೇ ಡಿಲೀಟ್ ಮಾಡಿರಿ! ಕಾರಣ ಇಲ್ಲಿದೆ!
ಸ್ಮಾರ್ಟ್‌ಫೋನ್ ಬಳಕೆದಾರರೇ ಸ್ವಲ್ಪ ಇಲ್ಲಿ ಗಮನಿಸಿ. ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ. ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಸ್ಪೈವೇರ್‌ಗಳನ್ನು ಹೊಂದಿರುವ ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚಿದೆ. ಇದರಲ್ಲಿ ನೀವು ಬಳಸುತ್ತಿರುವ ಜನಪ್ರಿಯ ಅಪ್ಲಿಕೇಶನ್‌ಗಳು ಕೂಡ ಸೇರಿರಬಹುದು.
ಹೌದು, ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಕೆಲವು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಹೊಸ ಸ್ಪೈವೇರ್ ಅನ್ನು ಪತ್ತೆ ಹಚ್ಚಿದೆ. ಅಲ್ಲದೆ ಈ ಅಪ್ಲಿಕೇಶನ್‌ಗಳನ್ನು ಕೂಡಲೇ ರಿಮೂವ್ ಮಾಡಿದ್ದು, ಬಳಕೆದಾರರಿಗೆ ಡಿಲೀಟ್ ಮಾಡುವಂತೆ ಸೂಚಿಸಿದೆ. ಇನ್ನು ಈ ಅಪ್ಲಿಕೇಶನ್‌ಗಳು ಬಳಕೆದಾರರ ಖಾಸಗಿ ಡೇಟಾವನ್ನು ಕದಿಯುತ್ತಿದ್ದವು ಅನ್ನೊದು ಕಂಡುಬಂದಿದೆ. ಹಾಗಾದ್ರೆ ಗೂಗಲ್ ಯಾವೆಲ್ಲಾ ಅಪ್ಲಿಕೇಶನ್‌ಗಳನ್ನು ರಿಮೂವ್ ಮಾಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಪ್ಲೇ ಸ್ಟೋರ್ ಒಟ್ಟು 101 ಆ್ಯಪ್‌ಗಳನ್ನು ಡಿಮೂವ್ ಮಾಡಿದೆ. ಒಟ್ಟು 421,290,300 ಬಾರಿ ಡೌನ್‌ಲೋಡ್ ಮಾಡಲಾದ ಈ ಆ್ಯಪ್‌ಗಳಲ್ಲಿ ಸ್ಪೈವೇರ್ ಕಂಡುಬಂದಿದೆ ಎಂದು ಡಾ. ವೆಬ್ ಹೇಳಿಕೊಂಡಿದೆ. ಸದ್ಯ ಗೂಗಲ್ ಈ ಆ್ಯಪ್‌ಗಳನ್ನು ರಿಮೂವ್ ಮಾಡಿದೆ ಆದರೂ ನೀವು ಬಳಕೆ ಮಾಡುತ್ತಿದ್ದರೆ ಕೂಡಲೇ ಡಿಲೀಟ್ ಮಾಡಬೇಕಾದ ಅನಿವಾರ್ಯತೆಯಿದೆ. ಇವುಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಆ್ಯಪ್‌ಗಳ ವಿವರ ಈ ಕೆಳಗಿನಂತಿದೆ.
ನೋಯಿಜ್: ವಿಡಿಯೋ ಎಡಿಟ್ ವಿಥ್ ಮ್ಯೂಸಿಕ್
ನೋಯಿಜ್ ಅಪ್ಲಿಕೇಶನ್ ಗೂಗಲ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಟ್ಟು 100,000,000 ಡೌನ್‌ಲೋಡ್‌ಗಳನ್ನು ದಾಟಿದೆ. ಇದು ಹೆಸರೇ ಸೂಚಿಸುವಂತೆ ಎಡಿಟಿಂಗ್ ಟೂಲ್ಸ್‌ಗಳನ್ನು ನೀಡುವ ಅಪ್ಲಿಕೇಶನ್ ಎನಿಸಿಕೊಂಡಿದೆ. ಇದರಲ್ಲಿ ನೀವು ಅತ್ಯುತ್ತಮ ಫಿಲ್ಟರ್‌ಗಳು, ಎಫೆಕ್ಟ್ಸ್ ಮತ್ತು ಮ್ಯೂಸಿಕ್ ಅನ್ನು ಅನುಭವಿಸಲು ಸಾದ್ಯವಿದೆ. ಸದ್ಯ ಈ ಆ್ಯಪ್ ಅನ್ನು ಗೂಗಲ್ ರಿಮೂವ್ ಮಾಡಿದ್ದು, ನೀವು ಕೂಡ ಬಳಸುತ್ತಿದ್ದರೆ ಕೂಡಲೇ ಡಿಲೀಟ್ ಮಾಡಿರಿ.
ಜಪ್ಯಾ - ಫೈಲ್ ಟ್ರಾನ್ಸ್ಫರ್, ಶೇರ್
ಗೂಗಲ್ ಪ್ಲೇ ಸ್ಟೋರ್‌ನಿಂದ ರಿಮೂವ್ ಆಗಿರುವ ಅಪ್ಲಿಕೇಶನ್‌ಗಳಲ್ಲಿ ಜಪ್ಯಾ ಕೂಡ ಒಂದಾಗಿದೆ. ಇದು ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಸುಲಭವಾದ ಫೈಲ್ ವರ್ಗಾವಣೆಯನ್ನು ನೀಡುವ ಕೆಲಸ ಮಾಡಲಿದೆ. ಆದರೆ ಇದರಲ್ಲಿ ಸ್ಪೈವೇರ್ ಕಂಡುಬಂದಿರುವುದರಿಂದ ಕೂಡಲೇ ನಿಮ್ಮ ಮೊಬೈಲ್‌ನಲ್ಲಿ ಇದನ್ನು ಡಿಲೀಟ್ ಮಾಡಿ ಎಂದು ಗೂಗಲ್ ಹೇಳಿದೆ.
ವಿಫ್ಲೈ
ವಿಫ್ಲೈ ಅಪ್ಲಿಕೇಶನ್‌ನಲ್ಲಿ ಕೂಡ ಸ್ಪೈವೇರ್ ಕಂಡುಬಂದಿದೆ. ಈ ಅಪ್ಲಿಕೇಶನ್ ಇಲ್ಲಿಯವರೆಗೆ ಪ್ಲೇ ಸ್ಟೋರ್‌ನಲ್ಲಿ 50,000,000 ಕ್ಕೂ ಹೆಚ್ಚು ಡೌನ್‌ಲೋಡ್ ಪಡೆದುಕೊಂಡಿದೆ. ಆದರೆ ಇದೀಗ ಗೂಗಲ್ ಪ್ಲೇ ಸ್ಟೋರ್‌ನಿಂದ ಕಿಕ್‌ಔಟ್ ಆಗಿದೆ.
ಎಂವಿ ಬಿಟ್ - ಎಂವಿ ವಿಡಿಯೋ ಸ್ಟೇಟಸ್ ಮೇಕರ್
ಇದು ವೀಡಿಯೊ ಎಡಿಟಿಂಗ್ ಪ್ಲಿಕೇಶನ್ ಆಗಿದ್ದು, ಇಲ್ಲಿಯವರೆಗೆ 50,000,000 ಕ್ಕಿಂತ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ. ಸದ್ಯ ಇದನ್ನು ಸಹ ಗೂಗಲ್ ಪ್ಲೇ ಸ್ಟೋರ್‌ನಿಂದ ಕಿಕ್‌ಔಟ್ ಮಾಡಲಾಗಿದೆ.
Biugo
ಗೂಗಲ್ ರಿಮೂವ್ ಮಾಡಿದ ಅಪ್ಲಿಕೇಶನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಇದರಲ್ಲಿ ನೀವು ಮ್ಯಾಜಿಕ್ ಟೆಂಪ್ಲೇಟ್‌ಗಳು ಮತ್ತು ಎಫೆಕ್ಟ್‌ಗಳನ್ನು ಬಳಸಿಕೊಂಡು ವಿಡಿಯೋಗಳನ್ನು ಎಡಿಟ್ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. 50,000,000 ಡೌನ್‌ಲೋಡ್‌ಗಳನ್ನು ಹೊಂದಿರುವ ಈ ಅಪ್ಲಿಕೇಶನ್ ಅನ್ನು ನೀವು ಕೂಡ ಬಳಕೆ ಮಾಡ್ತಾ ಇದ್ದರೆ ಕೂಡಲೇ ಡಿಲೀಟ್ ಮಾಡಿ ಎಂದು ಗೂಗಲ್ ಹೇಳಿದೆ.

ಕ್ರೇಜಿ ಡ್ರಾಪ್
ಕ್ರೇಜಿ ಡ್ರಾಪ್ ಅಪ್ಲಿಕೇಶನ್ ಸಹ ಗೂಗಲ್ ಪ್ಲೇ ಸ್ಟೋರ್‌ನಿಂದ ರಿಮೂವ್ ಆಗಿದೆ. ಇದು ಈಗಾಗಲೇ 10,000,000 ಡೌನ್‌ಲೋಡ್‌ಗಳನ್ನು ಹೊಂದಿದೆ.
ಕ್ಯಾಶ್‌ಜೈನ್
ಪ್ಲೇ ಸ್ಟೋರ್‌ನಲ್ಲಿ 10,000,000 ಡೌನ್‌ಲೋಡ್‌ಗಳನ್ನು ಹೊಂದಿರುವ ಕ್ಯಾಶ್‌ಜೈನ್ ಅಪ್ಲಿಕೇಶನ್ ಕೂಡ ರಿಮೂವ್ ಆಗಿದೆ. ಒಂದು ವೇಳೆ ನಿಮ್ಮ ಮೊಬೈಲ್‌ನಲ್ಲಿ ಸಹ ಈ ಆ್ಯಪ್ ಇದ್ದರೆ ಕೂಡಲೇ ಡಿಲೀಟ್ ಮಾಡಿರಿ.


Click it and Unblock the Notifications








