Home
ಸುದ್ದಿಜಾಲ

ಗೂಗಲ್‌ ಟ್ರಾನ್ಸ್‌ಲೇಟ್‌ ಬಳಸುವ ಮುನ್ನ ಈ ಸುದ್ದಿಯನ್ನೊಮ್ಮೆ ಗಮನಿಸಿ!

ಗೂಗಲ್‌ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಟ್ರಾನ್ಸ್‌ಲೇಟ್‌ ಆಯ್ಕೆಯು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಗೂಗಲ್‌ ಟ್ರಾನ್ಸ್‌ಲೇಟ್‌ ಹಲವು ರೀತಿಯಲ್ಲಿ ಬಳಕೆದಾರರಿಗೆ ಸಹಾಯಮಾಡುತ್ತಾ ಬಂದಿದೆ. ಜೊತೆಗೆ ಗೂಗಲ್‌ ಕೂಡ ಕಾಲಕಾಲಕ್ಕೆ ಟ್ರಾನ್ಸ್‌ಲೇಟ್‌ ಆಯ್ಕೆಯಲ್ಲಿ ಹೊಸ ಅಪ್ಡೇಟ್‌ ನೀಡುತ್ತಲೇ ಬಂದಿದೆ. ಇದೀಗ ಮತ್ತೊಂದು ಉಪಯುಕ್ತ ಅಪ್ಡೇಟ್‌ ಅನ್ನು ಪರಿಚಯಿಸಿದೆ.

ಹೌದು, ಗೂಗಲ್‌ ಟ್ರಾನ್ಸ್‌ಲೇಟ್‌ ಹೊಸ ಅಪ್ಡೇಟ್‌ ಅನ್ನು ಪಡೆದುಕೊಂಡಿದೆ. ಇದು ಬಳಕೆದಾರರಿಗೆ ಇಮೇಜ್‌ನಲ್ಲಿರುವ ಟೆಕ್ಸ್ಟ್‌ಗಳನ್ನು ಟ್ರಾನ್ಸ್‌ಲೇಟ್‌ ಮಾಡಲು ಅವಕಾಶ ನೀಡಲಿದೆ ಎನ್ನಲಾಗಿದೆ. ಪ್ರಸ್ತುತ ಗೂಗಲ್‌ ಟ್ರಾನ್ಸ್‌ಲೇಟ್‌ ಟೆಕ್ಸ್ಟ್‌, ಡಾಕ್ಯುಮೆಂಟ್‌ ವೆಬ್‌ಸೈಟ್‌ಗಳನ್ನು ಮಾತ್ರ ಟ್ರಾನ್ಸ್‌ಲೇಟ್‌ ಮಾಡುತ್ತಿದೆ. ಆದರೆ ಈ ಹೊಸ ಅಪ್ಡೇಟ್‌ನಿಂದ ಇನ್ನಷ್ಟು ಅನುಕೂಲವಾಗಿದೆ. ಹಾಗಾದ್ರೆ ಹೊಸ ಅಪ್ಡೇಟ್‌ನಿಂದಾಗಿ ನಿಮಗೆ ಏನೆಲ್ಲಾ ಲಾಭವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಟ್ರಾನ್ಸ್‌ಲೇಟ್‌ ಬಳಸುವ ಮುನ್ನ ಈ ಸುದ್ದಿಯನ್ನೊಮ್ಮೆ ಗಮನಿಸಿ!

ಸಾಕಷ್ಟು ಪ್ರಖ್ಯಾತಿ ಪಡದುಕೊಂಡಿರುವ ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ಹೊಸ ಆಯ್ಕೆಯ ಸೇರ್ಪಡೆ ನಿಮಗೆ ಇನ್ನಷ್ಟು ಉಪಯುಕ್ತವಾಗಲಿದೆ. ಈ ಹೊಸ ಅಪ್ಡೇಟ್‌ ಮೂಲಕ ನೀವು ಇಮೇಜ್‌ಗಳಲ್ಲಿರುವ ಟೆಕ್ಸ್ಟ್‌ ಅನ್ನು ಕೂಡ ಸುಲಭವಾಗಿ ಭಾಷಾಂತರ ಮಾಡಬಹುದಾಗಿದೆ. ಇದು ಪ್ರತಿಯೊಂದು ಸ್ವರೂಪದಲ್ಲಿ ಮಾಹಿತಿಯನ್ನು ಭಾಷಾಂತರಿಸಲು ಅವಕಾಶ ನೀಡಲಿದೆ ಎನ್ನಲಾಗಿದೆ. ಅಂದರೆ ಇಮೇಜ್‌ಗಳಲ್ಲಿ ಟೆಕ್ಸ್ಟ್‌ ಅನ್ನು ಟ್ರಾನ್ಸ್‌ಲೇಟ್‌ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಆದರೆ ಈ ಆಯ್ಕೆಯು ಗೂಗಲ್‌ ಟ್ರಾನ್ಸ್‌ಲೇಟ್‌ ವೆಬ್ ಆಧಾರಿತ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಲಭ್ಯವಾಗಲಿದೆ.

ಇದರಿಂದ ಬಳಕೆದಾರರು ತಮ್ಮ ವೆಬ್ ಬ್ರೌಸರ್‌ಗಳಲ್ಲಿ ಗೂಗಲ್‌ ಟ್ರಾನ್ಸ್‌ಲೇಟ್‌ನ ಹೊಸ ಅಪ್ಡೇಟ್‌ ಅನ್ನು ತೆರೆದುಬಹುದಾಗಿದೆ. ಅಲ್ಲದೆ ತಮಗೆ ಟ್ರಾನ್ಸ್‌ಲೇಟ್‌ ಮಾಡಲು ಬಯಸುವ ಟೆಕ್ಸ್ಟ್‌ ಹೊಂದಿರುವ ಚಿತ್ರವನ್ನು ಅಪ್‌ಲೋಡ್ ಮಾಡಬಹುದು. ಟ್ರಾನ್ಸ್‌ಲೇಟ್‌ ಆಯ್ಕೆಯಲ್ಲಿ ಇಮೇಜ್‌ ಅನ್ನು ಅಪ್ಲೋಡ್‌ ಮಾಡಿದ ನಂತರ 'ಫ್ರಂ ಲ್ಯಾಂಗ್ವೇಜ್‌' ಅನ್ನು 'ಡಿಟೆಕ್ಟ್‌ ಲ್ಯಾಂಗ್ವೇಜ್‌ ' ಎಂದು ಸೆಟ್‌ ಮಾಡಬಹುದು. ಇಲ್ಲವೇ ಲಭ್ಯವಿರುವ ಭಾಷೆಗಳಿಂದ ಒಂದನ್ನು ಆಯ್ಕೆ ಮಾಡಬಹುದು. ಅಲ್ಲದೆ ಟೆಕ್ಸ್ಟ್‌ ಅನ್ನು ಭಾಷಾಂತರಿಸಲು ಬಯಸುವ ಭಾಷೆಯನ್ನು ಸೆಟ್‌ ಮಾಡಬಹುದಾಗಿದೆ.

ಗೂಗಲ್‌ ಟ್ರಾನ್ಸ್‌ಲೇಟ್‌ ಬಳಸುವ ಮುನ್ನ ಈ ಸುದ್ದಿಯನ್ನೊಮ್ಮೆ ಗಮನಿಸಿ!

ಇನ್ನು ಗೂಗಲ್‌ ವೆಬ್‌ನಲ್ಲಿ ಇಮೇಜ್‌ ಅನ್ನು ಅಪ್ಲೋಡ್‌ ಮಾಡಿದ ತಕ್ಷಣವೇ ಗೂಗಲ್‌ ಟ್ರಾನ್ಸ್‌ಲೇಟ್‌ ಇಮೇಜ್‌ಗಳಲ್ಲಿನ ಟೆಕ್ಸ್ಟ್‌ ಅನ್ನು ಟ್ರಾನ್ಸ್‌ಲೇಟ್‌ ಮಾಡಲಿದೆ. ಟೆಕ್ಸ್ಟ್‌ ಅನ್ನು ಟ್ರಾನ್ಸ್‌ಲೇಟ್‌ ಮಾಡುವುದಕ್ಕೆ ಬಳಕೆದಾರರು ಗೂಗಲ್‌ನಲ್ಲಿ 133 ಭಾಷೆಗಳಿಂದ ಆಯ್ಕೆ ಮಾಡಬಹುದು. ಗೂಗಲ್‌ ಟ್ರಾನ್ಸ್‌ಲೇಟ್‌ ವೆಬ್‌ ಆಯ್ಕೆಯಲ್ಲಿರುವ ಲ್ಯಾಂಗ್ವೇಜ್‌ ಪಿಕರ್ ಮೆನುವಿನಲ್ಲಿ ಮೇಲಿನ ಎಡ ಮೂಲೆಯಲ್ಲಿ ಟಾಗಲ್ ಬಟನ್ ಅನ್ನು ಕಾಣಬಹುದು. ಇದು ಬಳಕೆದಾರರಿಗೆ ಮೂಲ ಚಿತ್ರ ಹಾಗ ಭಾಷಾಂತರ ಮಾಡಿದ ಚಿತ್ರದ ನಡುವಿನ ಆಯ್ಕೆಯನ್ನು ಬದಲಾಯಿಸಲು ಅವಕಾಶ ನೀಡಲಿದೆ.

ಇದಲ್ಲದೆ ಗೂಗಲ್‌ ಇತ್ತೀಚಿಗೆ ಗೂಗಲ್‌ ಮೆಮೊರಿ ಮತ್ತು ಎನರ್ಜಿ ಸೇವರ್‌ ಮೋಡ್‌ಗಳನ್ನು ಪರಿಚಯಿಸಿದೆ. ಇವುಗಳು ವಿಂಡೋಸ್‌, ಲಿನ್ಸ್‌, ಮ್ಯಾಕ್‌ ಮತ್ತು ಕ್ರೋಮ್‌ಬುಕ್‌ನಲ್ಲಿ ಪ್ರಿ ಲೋಡ್‌ ಆಗಿರಲಿದೆ ಎಂದು ಗೂಗಲ್‌ ಹೇಳಿದೆದ. ಇನ್ನು ಈ ಮೋಡ್‌ಗಳನ್ನು ಸೈಡ್‌ಬಾರ್‌ನಲ್ಲಿ ಕ್ರೋಮ್‌ ಸೆಟ್ಟಿಂಗ್ಸ್‌ಗೆ ಹೋಗುವ ಮೂಲಕ ಆಫ್‌ ಮತ್ತು ಆನ್‌ ಮಾಡಬಹುದಾಗಿದೆ. ಇವುಗಳನ್ನು ಸಕ್ರಿಯಗೊಳಿಸುವ ಮೂಲಕ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.

ಗೂಗಲ್‌ ಟ್ರಾನ್ಸ್‌ಲೇಟ್‌ ಬಳಸುವ ಮುನ್ನ ಈ ಸುದ್ದಿಯನ್ನೊಮ್ಮೆ ಗಮನಿಸಿ!

ವಿಂಡೋಸ್‌, ಲಿನ್ಸ್‌, ಮ್ಯಾಕ್‌ ಮತ್ತು ಕ್ರೋಮ್‌ಬುಕ್‌ನಲ್ಲಿ ಗೂಗಲ್‌ನ ಮೆಮೊರಿ ಮತ್ತು ಎನರ್ಜಿ ಸೇವರ್‌ ಅನ್ನು ಆಕ್ಟಿವ್‌ ಮಾಡಲಾಗಿದೆ. ಗೂಗಲ್‌ ಕ್ರೋಮ್‌ ಪರಿಚಯಿಸಿರುವ ಮೆಮೊರಿ ಸೇವರ್‌ ಬಳಕೆದಾರರಿಗೆ ಇತರ ಪುಟಗಳು ಮತ್ತು ಅಪ್ಲಿಕೇಶನ್‌ಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲಿದೆ. ಇದಕ್ಕಾಗಿ ಆಟೋಮ್ಯಾಟಿಕ್‌ ಆಗಿ ನಿಷ್ಕ್ರಿಯ ಟ್ಯಾಬ್‌ಗಳಿಂದ ಮೆಮೊರಿಯನ್ನು ಫ್ರಿ ಮಾಡಲಿದೆ. ಇನ್ನು ಮೆಮೊರಿ ಸೇವರ್ ಮೂಲಕ ಬಳಕೆದಾರರು ಉತ್ತಮ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ನಿಮ್ಮ ಟ್ಯಾಬ್‌ಗಳನ್ನು ಕಾಯುವುದು ಇಷ್ಟವಿಲ್ಲದಿದ್ದರೆ "ಫ್ರೀಸ್ ಅಪ್ ಮೆಮೊರಿ ಫ್ರಮ್ ಆಕ್ಟಿವ್ ಟ್ಯಾಬ್" ಬಾರ್‌ಗೆ ಡೈರೆಕ್ಟ್‌ ಆಗಿ ಸೈಟ್‌ಗಳನ್ನು ಸೇರಿಸಲು ಕ್ರೋಮ್‌ ಅನುಮತಿಸಲಿದೆ.

Best Mobiles in India

English summary
This new feature, that is ability to translate text in images, is available on Google’s Translate’s web-based platform only.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+