ಗೂಗಲ್ ಬಳಸಿ "ಕನ್ನಡದ ಕೋಟ್ಯಧಿಪತಿ" ಆಗಿ

By Varun
|
ಗೂಗಲ್ ಬಳಸಿ

ಸುವರ್ಣ ವಾಹಿನಿಯಲ್ಲಿ ಬರುವ, ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಖ್ಯಾತ ಕಾರ್ಯಕ್ರಮ "ಕನ್ನಡದ ಕೋಟ್ಯಧಿಪತಿ" ಕಾರ್ಯಕ್ರಮ ಈಗಾಗಲೇ ಸೂಪರ್ ಹಿಟ್. ಕನ್ನಡ ನಾಡಿನ ಲಕ್ಷಾಂತರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದಿನಂಪ್ರತಿ SMS ಕಳಿಸುತ್ತಾ ಇರುತ್ತಾರೆ.

ಈ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳು ದೇಶೀಯ ಹಾಗು ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಿದ್ದು, ಸಾಮಾನ್ಯ ಜ್ಞಾನ ಹಾಗು ಕೆಲವೊಮ್ಮೆ ಕಾಮನ್ ಸೆನ್ಸ್ ಅವಶ್ಯಕತೆ ಇರುತ್ತದೆ. ಕನ್ನಡದ ಬಗ್ಗೆ, ನಾಡಿನ ಬಗ್ಗೆ, ಫಿಲಂ, ರಾಜಕೀಯ, ಕ್ರೀಡೆ, ಒಗಟುಗಳು, ಸಾಹಿತ್ಯದ ಬಗ್ಗೆ ನಾವು ತಿಳಿದುಕೊಂಡೇ ಇರುತ್ತೇವೆ. ಆದರೆ ಅಲ್ಲಿ ಕೇಳುವ ಅಂತರರಾಷ್ಟ್ರೀಯ ವಿಚಾರಗಳಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ನಮಗೆ ಅಷ್ಟಾಗಿ ಉತ್ತರ ಗೊತ್ತಿರುವುದಿಲ್ಲ. ಹಾಗಾಗಿ ನೀವು ಈ ಪ್ರೋಗ್ರಾಮ್ ನಲ್ಲಿ ಭಾಗವಹಿಸಲು ಈಗಾಗಲೇ SMS ಕಳುಹಿಸಿ ತಯಾರಿ ನಡೆಸುತ್ತಿದ್ದರೆ, ಗೂಗಲ್ ನ ದಿನಕ್ಕೊಂದುಹೊಸ ಪ್ರಶ್ನೆ ಕೇಳುವ "agoogleaday.com ಅನ್ನು ಉಪಯೋಗಿಸಿಕೊಂಡು ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.

ಗೂಗಲ್, ಈ ವೆಬ್ಸೈಟಿನಲ್ಲಿ ದಿನಕ್ಕೊಂದು ಪ್ರಶ್ನೆ ಕೇಳುತ್ತೆ. ನೀವು ನಿಮ್ಮ ತಲೆ ಉಪಯೋಗಿಸಿ ಅದು ಕೊಡುವ ಸುಳಿವನ್ನು ಉಪಯೋಗಿಸಿಕೊಂಡು, ಗೂಗಲ್ ಸರ್ಚ್ ಮಾಡಿ ಉತ್ತರವನ್ನು ಹುಡುಕಬಹುದು. ನಿಮಗೆ ಉತ್ತರ ತೋಚದಿದ್ದರೆ ಅದೇ ಸವಿವರವಾದ ಉತ್ತರವನ್ನು ಸಹ ಕೊಡುತ್ತದೆ. ಮಜವಾಗಿರುವ, ಬುದ್ಧಿಗೆ ಸಾಕಷ್ಟು ಕಸರತ್ತು ಕೊಡುವ ಈ ವೆಬ್ಸೈಟ್ ಅನ್ನು ಉಪಯೋಗಿಸಿಕೊಂಡು ನಮ್ಮ ದಟ್ಸ್ ಕನ್ನಡ ಓದುಗರು ಮತ್ತಷ್ಟು ಜ್ಞಾನ ಹೆಚ್ಚಿಸಿಕೊಂಡು ಕೋಟ್ಯಧಿಪತಿಯಾಗಲೆಂದು ಆಶಿಸುತ್ತೇವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X