ಗೂಗಲ್ ನಿಂದ ಹೈ-ಟೆಕ್ ಕಂಪ್ಯೂಟರ್ ಕನ್ನಡಕ

By Varun
|
ಗೂಗಲ್ ನಿಂದ ಹೈ-ಟೆಕ್ ಕಂಪ್ಯೂಟರ್ ಕನ್ನಡಕ

ಗೂಗಲ್, ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದು ಏನಾದರೊಂದು ಹೊಸ ಪ್ರಯತ್ನ ಮಾಡುತ್ತಲೇ ಇರುತ್ತದೆ.

ನೆನ್ನೆ ಬಂದಿರುವ ಹೊಸ ಸುದ್ದಿ ಏನೆಂದರೆ, ಕಂಪ್ಯೂಟರ್ ಇರುವ ಹೈ-ಟೆಕ್ ಗ್ಲಾಸ್ ಅನ್ನುತನ್ನ ಲ್ಯಾಬ್- ಗೂಗಲ್- ಎಕ್ಸ್ ನಲ್ಲಿ ತಯಾರಿಸುತ್ತಿದೆಯಂತೆ.

ಇದರ ವೈಶಿಷ್ಟ್ಯ ಏನಪ್ಪಾ ಅಂದರೆ ಇದು ಕನ್ನಡಕ ಕಂಪ್ಯೂಟರ್. HUD ( ಹೆಡ್ ಅಪ್ ಡಿಸ್ ಪ್ಲೇ ), ಅಂದರೆ ನೀವು ಈ ಕನ್ನಡಕ ವನ್ನ ಧರಿಸಿ ಒಂದು ಕಣ್ಣಿನಿಂದ ನಿಮ್ಮ ಕಣ್ ಮುಂದೆ ಇರುವ ಗ್ಲಾಸ್ ಅನ್ನು ಮಾನಿಟರ್ ರೀತಿ ಉಪಯೋಗಿಸಬಹುದು. ತಲೆ ಮೇಲೆ ಕೆಳಗೆ ಮಾಡಿದರೆ ಗ್ಲಾಸ್ ಮೇಲಿನಸ್ಕ್ರೀನ್ ಚಲಿಸುತ್ತದೆ. ಕನ್ನಡಕ ಹಾಕಿಕೊಂಡರೆ ಸಾಕು ನಿಮಗೆ ಕಂಪ್ಯೂಟರ್ ನ ಎಲ್ಲ ಅನುಭವ ಕೊಡುತ್ತದೆ.

ಇದು ಆಂತರಿಕ ಕ್ಯಾಮರಾ ಹೊಂದಿದ್ದು, ಆಂಡ್ರಾಯ್ಡ ಚಾಲಿತ ಓ.ಎಸ್ ನಿಂದ ಕೆಲಸ ಮಾಡುತ್ತದೆ. ಈ ಕನ್ನಡಕ ಇನ್ನು ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರಲಿದೆಯಂತೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X