ಗೂಗಲ್‌ ಐ/೦ 2013

By Ashwath
|

ಗೂಗಲ್‌ ಐ/ಒ (Google I/O) ಗೂಗಲ್‌ ಕಂಪೆನಿಯ ವಾರ್ಷಿಕ ಡೆವಲಪರ್-ಕೇಂದ್ರಿತ ಕಾನ್ಫರೆನ್ಸ್ ಗೂಗಲ್‌ನ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಆಫೀಸ್‌ನಲ್ಲಿ ಆರಂಭಗೊಂಡಿದೆ. ಕಳೆದ ಬುಧವಾರದಿಂದ ಈ ಸಮ್ಮೇಳನ ಆರಂಭಗೊಂಡಿದ್ದು ಇಂದು ಸಮಾಪನಗೊಳ್ಳಲಿದೆ. ಹೀಗಾಗಿ ಗಿಜ್ಬಾಟ್‌ ಈ ಐ/ಒ ಸ್ಮಮೇಳನ ಹಿನ್ನಲೆ ಮತ್ತು ಮೊದಲ ದಿನದ ಹೈಲೈಟ್ಸ್‌ಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ತಂದಿದೆ.ಒಂದೊಂದೆ ಪುಟಗಳನ್ನು ತಿರುಗಿಸಿ ಓದಿಕೊಂಡು ಹೋಗಿ.

ಗೂಗಲ್‌ ಐ/೦ 2013

ಗೂಗಲ್‌ ಐ/೦ 2013

ಗೂಗಲ್‌ ಐ/ಒ ಆರಂಭಗೊಂಡದ್ದು2008ರಲ್ಲಿ.I/Oವನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು. I ಮತ್ತು 0 ಅಂದರೆ ಇನ್‌ಪುಟ್‌/ಔಟ್‌ಪುಟ್‌ ಅಥವಾ 'Innovation in the Open' ಎಂದು ಅರ್ಥೈಸಬಹುದು.

ಗೂಗಲ್‌ ಐ/೦ 2013 :

ಗೂಗಲ್‌ ಐ/೦ 2013 :

ಸಾಧಾರಣವಾಗಿ ಈ ಸಮ್ಮೇಳನ ವರ್ಷದ ಮೇ ಅಥವಾ ಜೂನ್‌ ತಿಂಗಳಿನಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ತನ್ನ ಉತ್ಪನ್ನಗಳಾದ ಆಂಡ್ರಾಯ್ಡ್‌, ಕ್ರೋಮ್‌, ಕ್ರೋಮ್‌ ಓಎಸ್‌,ಗೂಗಲ್‌ ಆಪ್ಸ್‌,ಗೂಗಲ್‌ ವೆಬ್‌ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಅಥವಾ ಹೊಸ ಸೇವೆಗಳನ್ನು ಬಿಡುಗಡೆ ಮಾಡುತ್ತದೆ.

ಗೂಗಲ್‌ ಐ/೦ 2013 :

ಗೂಗಲ್‌ ಐ/೦ 2013 :

ಇದುವರೆಗೂ 900 ಮಿಲಿಯನ್‌ ಆಂಡ್ರಾಯ್ಡ್‌ ಸಾಧನಗಳು ವಿಶ್ವದಲ್ಲಿ ಮಾರಾಟವಾಗಿದೆ ಎಂದು ಗೂಗಲ್‌ ಈ ಸಮ್ಮೇಳನದಲ್ಲಿ ಹೇಳಿದೆ.

ಗೂಗಲ್‌ ಐ/೦ 2013 :

ಗೂಗಲ್‌ ಐ/೦ 2013 :

ಗೂಗಲ್‌ ಚಾಟ್‌ ಅಥವಾ ಟಾಕ್‌ ಸೇವೆಯನ್ನು ಗೂಗಲ್‌ ನಿಲ್ಲಿಸಿದೆ. ಈ ಸೇವೆಯ ಬದಲಾಗಿ ಅಲ್ಲಿ ಗೂಗಲ್‌ ಹ್ಯಾಂಗ್‌ಔಟ್‌ ಮೂಲಕ ಮಾತನಾಡಬಹುದು.

ಗೂಗಲ್‌ ಐ/೦ 2013 :

ಗೂಗಲ್‌ ಐ/೦ 2013 :

ಹ್ಯಾಂಗ್‌ಔಟ್‌ ಸೇವೆ ಕ್ರೋಮ್‌ ಬ್ರೌಸರ್‌ ಅಪ್ಲಿಕೇಶನ್‌, ಗೂಗಲ್‌ ಪ್ಲೇ ಸ್ಟೋರ್‌, ಆಪಲ್‌ ಸ್ಟೋರ್‌ನಲ್ಲಿ ಲಭ್ಯವಿದೆ.

ಗೂಗಲ್‌ ಐ/೦ 2013 :

ಗೂಗಲ್‌ ಐ/೦ 2013 :

ಈ ಹಿಂದೆ ಗೂಗಲ್‌ ಅರ್ಥ್ ಸೇವೆಯನ್ನು ಬಳಸಬೇಕಾದರೆ ಗೂಗಲ್‌ ಅರ್ಥ್‌ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಬೇಕಿತ್ತು.ಆದರೆ ಇನ್ನು ಮುಂದೆ ಬ್ರೌಸರ್‌ನಿಂದಲೇ ನೀವು ಗೂಗಲ್ ಅರ್ಥ್ ಸೇವೆಯನ್ನು ಬಳಸಬಹುದು.

ಗೂಗಲ್‌ ಐ/೦ 2013 :

ಗೂಗಲ್‌ ಐ/೦ 2013 :

ಗೂಗಲ್‌ ಮ್ಯೂಸಿಕ್‌ಗಾಗಿಯೇ ಹೊಸ ಗೂಗಲ್‌ ಹೊಸ ಸೇವೆ ಆರಂಭಿಸಿದೆ. All Accessನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆರಂಭಿಸಿದ್ದು ಪ್ರಾಯೋಗಿಕವಾಗಿ ಅಮರಿಕದಲ್ಲಿ ಆರಂಭಗೊಂಡಿದೆ.

ಗೂಗಲ್‌ ಐ/೦ 2013 :

ಗೂಗಲ್‌ ಐ/೦ 2013 :

ಗೂಗಲ್‌ ಪ್ಲಸ್‌ಗೆ ಮತ್ತಷ್ಟು ಹೊಸ ಫೀಚರ್‌ಗಳನ್ನು ಗೂಗಲ್‌ ಸೇರಿಸಿದೆ. ಹೊಸದಾಗಿ 41 ವಿಶೇಷತೆಗಳು ಬಂದಿದ್ದು ಗೂಗಲ್‌ಪ್ಲಸ್‌ ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಪಡಿಸಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X