ಭಾರತದಲ್ಲಿ ಗೂಗಲ್‌ ಡೂಡಲ್‌ 4, 2012 ಸ್ಪರ್ಧೆ ಆರಂಭ

Posted By: Staff
ಭಾರತದಲ್ಲಿ ಗೂಗಲ್‌ ಡೂಡಲ್‌ 4, 2012 ಸ್ಪರ್ಧೆ ಆರಂಭ

ಸರ್ಚ್‌ ಇಂಜಿಂನ್‌ಗಳ ದೊಡ್ಡಣ್ಣ ಗೂಗಲ್‌ ಭಾರತದಲ್ಲಿ ಡೂಡಲ್‌ 4, 2012 ಸ್ಪರ್ಧೆಗೆ ಬುಧವಾರ ಚಾಲನೇ ನೀಡಿದೆ. ಗೂಗಲ್‌ ಮಕ್ಕಳಿಗಾಗಿ ಈ ಸ್ಪರ್ಧೆ ಏರ್ಪಡಿಸಿದ್ದು 5 ರಿಂದ 16 ವರ್ಷವಯಸ್ಸಿನ ಮಕ್ಕಳು ಪಾಲ್ಗೋಳ್ಳ ಬಹುದಾಗಿದೆ. ಅಂದಹಾಗೆ ಈ ಬಾರಿ "ವಿಧತೆಯಲ್ಲಿ ಏಕತೆ" ಸ್ಪರ್ಧೆಯ ಥೀಮ್‌ ಆಗಿದ್ದು ಇದರ ಹಿನ್ನಲ್ಲೆಯಲ್ಲಿ ಗೂಗಲ್‌ ಲೋಗೋ ಆಧರಿಸಿ ಡೂಡಲ್‌ ನಿರ್ಮಿಸ ಬೇಕಾಗಿದೆ.

1998 ರಿಂದಲೂ ಗೂಗಲ್‌ ವಿವಿಧ ದೇಶಗಳ ಸ್ವಾತಂತ್ರ ದಿನಾಚರಣೆ, ಒಲಿಂಪಿಕ್‌ ಕ್ರೀಡಾಕೂಟ ಸೇರಿದಂತೆ ಪ್ರಖ್ಯಾತ ವ್ಯಕ್ತಿಗಳ ಜನ್ಮದಿನಾಚರಣೆ ಗಳಂತಹ ವಿಶೇಷ ಸಂದರ್ಭಗಳಲ್ಲಿ ಹೊಸ ಬಗೆಯ ಡೂಡಲ್ಸ್‌ ತರುವ ಮೂಲಕ ಆಚರಿಸುತ್ತಾ ಬಂದಿದೆ.

" ಗೂಗಲ್‌ನ ಡೂಡಲ್‌ 4 ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಲೆ ಹಾಗೂ ತಂತ್ರಜ್ಞಾನದ ಕುರಿತಾಗಿ ತಿಳಿದುಕೊಳ್ಳಲು ಒಂದು ಉತ್ತಮ ಅವಕಾಶವಾಗಿದೆ, ಈ ಮೂಲಕ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಪಡಿಸಲು ಅವಕಾಶ ದೊರೆಯುತ್ತದೆ" ಈ ಸ್ಪರ್ಧೆಯಲ್ಲಿ ಭಾಗವಹಿಸು ಎಲ್ಲರೂ ಆಂನಂದಿಸಲಿದ್ದಾರೆ ಎಂದು ಭಾವಿಸುತ್ತೇನೆ ಎಂದು ಸ್ಪರ್ಧೆಯನ್ನು ಘೊಷಿಸಿದ ಬಳಿಕ ಮಾತನಾಡಿದ ಗೂಗಲ್‌ ಇಂಡಿಯಾದ ಮಾರ್ಕೆಟಿಂಗ್‌ ಮುಖ್ಯಸ್ಥರಾದ ನಿಖಿಲ್‌ ರುಂಗ್ಟಾ ಹೇಳಿದರು.

ದೇಶದ ಪ್ರಮುಖ 40 ನಗರಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಂದು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳು ವವರನ್ನು 1 ರಿಂದ 3 ತರಗತಿ, 4 ರಿಂದ 6 ತರಗತಿ ಹಾಗೂ 6 ರಿಂದ 10 ತರಗತಿಯ ವಿದ್ಯಾರ್ಥಿಗಲನ್ನಾಗಿ ಮೂರು ಗುಂಪುಗಳನ್ನಾಗಿ ಮಾಡಲಾಗುವುದು.

ಸ್ಪರ್ಧೆಯ ಫಲಿತಾಂಶವನ್ನು ನವೆಂಬರ್‌ 6 ರಂದು ನವದೆಹಲಿಯಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಘೊಷಿಸಲಾಗುವುದು. ಮೊದಲ ಆಯ್ಕೆ ಪಡೆದ ಡೂಡಲ್‌ ಅನ್ನು ನವೆಂಬರ್‌ 14ರ ಮಕ್ಕಳ ದಿನಾಚರಣೆಯಂದು ಗೂಗಲ್‌ ಇಂಡಿಯಾದ ಹೊಂ ಪೇಜ್‌ನಲ್ಲಿ ಪ್ರಕಟ ಗೊಳಿಸಲಾಗುವುದು. ಅಲ್ಲದೆ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ 12 ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಟ್ಯಾಬ್ಲೆಟ್‌ ಹಾಗೂ ಗೂಗಲ್‌ ಕಿಟ್‌ ನೀಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲು ನೊಂದಣಿ ಮಾಡಲು 2012 ರ ಅಕ್ಟೋಬರ್‌ 23, ಕೊನೆಯ ದಿನಾಂಕವಾಗಿದೆ. ಗೂಗಲ್‌ ದೂಡಲ್‌ ಸ್ಪರ್ಧೆಯ ಕರಿತಾಗಿ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲೀಕ್‌ ಮಾಡಿ.

 Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot