ಚಾಲಕನಿಲ್ಲದ ಚಲಿಸುವ ಕಾರನ್ನು ನೋಡಿರುವಿರಾ?

By Shwetha
|

ಚಾಲಕನಿಲ್ಲದೆ ಚಲಾಯಿಸುವ ಕಾರಿನ ಬಗ್ಗೆ ನೀವು ಕೇಳಿರುವಿರಾ? ಹೌದು ಈ ಕಾರು ಈಗ ಎಲ್ಲೆಡೆಯೂ ಖ್ಯಾತಿಯನ್ನು ಪಡೆಯುತ್ತಿದೆ. ಈಗಾಗಲೇ ಇದು ಏಳು ಲಕ್ಷ ಮೈಲುಗಳನ್ನು ಸ್ವಯಂಚಾಲಿತವಾಗಿ ಕ್ರಮಿಸಿದ್ದು ಸ್ಮಾರ್ಟ್ ಆಗಿ ಹೊರಹೊಮ್ಮಿದೆ.

ನಗರ ರಸ್ತೆಗಳಲ್ಲಿ ಸಾಗಿರುವ ಗೂಗಲ್‌ನ ಸೆಲ್ಫ್ ಡ್ರೈವಿಂಗ್ ಕಾರು ಮಾನವನ ಬಳಕೆಯಿಲ್ಲದೆ ತನ್ನಷ್ಟಕ್ಕೇ ಚಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಟ್ರಾಫಿಕ್‌ನಲ್ಲಿ ನಿಧಾನವಾಗಿ ಮುಂದುವರಿಯುವುದು, ಸಿಗ್ನಲ್‌ಗಳನ್ನು ಸಮರ್ಪಕವಾಗಿ ನಿರ್ವಹಿಸುವುದು, ರಸ್ತೆಗಳಲ್ಲಿ ಬೇರೆ ವಾಹನಗಳಿಗೆ ಸ್ಥಳ ಬಿಟ್ಟು ಚಲಿಸುವುದು ಇವೇ ಮೊದಲಾದ ಕಾರ್ಯಗಳನ್ನು ಈ ಕಾರು ಮಾಡುತ್ತದೆ.

ಚಾಲಕನಿಲ್ಲದ ಚಲಿಸುವ ಕಾರನ್ನು ನೋಡಿರುವಿರಾ?

ಈ ಕಾರು ಪ್ರೊಜೆಕ್ಟ್‌ನ ಡೈರಕ್ಟರ್ ಆದ ಕ್ರಿಸ್ ಆರ್ಮ್‌ಸನ್ ಹೇಳುವಂತೆ ಕಾರು ವಿಶೇಷ ತಂತ್ರಜ್ಞಾನಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದ್ದು ನೂರರಷ್ಟು ಅಂತರ ವಿಷಯಗಳನ್ನು ಅರಿಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಅಂದರೆ ಬೇರೆ ಬೇರೆ ಪ್ರದೇಶಗಳು, ಕಾರು ಹೋಗಬೇಕಾಗಿರುವ ದಿಕ್ಕುಗಳು ಇತ್ಯಾದಿಯನ್ನು ಚೆನ್ನಾಗಿ ತಿಳಿದುಕೊಂಡಿದೆ.

ಕಂಪ್ಯೂಟರ್‌ ಇದರ ಪ್ರತಿಯೊಂದು ಹಂತವನ್ನು ಚೆನ್ನಾಗಿ ಅರೆದು ಕುಡಿದಿದ್ದು ಇದು ಮಾಡುವ ಕಾರುಬಾರನ್ನು ನೀವು ರಸ್ತೆಯಲ್ಲೇ ಗಮನಿಸಬಹುದೆಂಬುದನ್ನು ಕ್ರಿಸ್ ಹೇಳಿದ್ದಾರೆ. ಈ ಕಾರು ವಿನ್ಯಾಸಕ್ಕಾಗಿ ಅತ್ಯಾಧುನಿಕ ತಂತ್ರಗಾರಿಕೆಯನ್ನು ಬಳಸಿದ್ದು ಇದು ಮಾನವನ ಕೆಲಸವನ್ನು ಹಗುರಗೊಳಿಸಲಿದೆ. ಕಾರಿನ ಮೇಲೆ ಒಂದು ಕ್ಯಾಮೆರಾ ಇದ್ದು ಇದು ಕಾರಿನ ಒಳಗಡೆ ಇರುವ ಕಂಪ್ಯೂಟರ್‌ಗೆ ದಾರಿಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಬರಿಯ ಕಂಫ್ಯೂಟರ್ ಚಾಲನೆ ಮಾಡುವ ಕಾರು ಇದಾಗಿದ್ದರೂ ಅದು ರಸ್ತೆಯ ನಿಯಮಗಳನ್ನು ಪಾಲಿಸಿಕೊಂಡು ಮುಂದುವರಿಯುವ ನೋಟ ನಿಜಕ್ಕೂ ಅದ್ಭುತವಾದದ್ದು. ಕಾರು ಇನ್ನೂ ಕೂಡ ಕೆಲವೊಂದು ಸವಾಲುಗಳನ್ನು ಎದುರಿಸಲು ತಯಾರಿಯನ್ನು ಮಾಡುತ್ತಿದ್ದು ಇದಕ್ಕೆ ಕೆಲವು ವರ್ಷಗಳು ಮಾತ್ರ ಸಾಕು. ಚಾಲಕನಿಲ್ಲದ ಕಾರನ್ನು ಬಳಸಲು ಉತ್ಸುಕರಾಗಿರುವವರು ಕೊಂಚ ಸಮಯವಾದರೂ ಇದನ್ನು ಬಳಸಲು ಕಾಯಲೇಬೇಕು.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X