ಗೂಗಲ್ AI Flight Deals ಪರಿಚಯ: ವಿಮಾನ ಪ್ರಯಾಣಿಕರು ಇದನ್ನು ನೋಡಲೇಬೇಕು!
ಟೆಕ್ ದೈತ ಸಂಸ್ಥೆ ಗೂಗಲ್ ಇತ್ತೀಚೆಗೆ ತನ್ನ ಹೊಸ ಕೃತಕ ಬುದ್ಧಿಮತ್ತೆ (AI) ಸಾಧನವಾದ ಗೂಗಲ್ ಫ್ಲೈಟ್ ಡೀಲ್ಸ್ (Flight Deals) ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ವಿಮಾನ ಟಿಕೆಟ್‌ಗಳ ಬೆಲೆಯನ್ನು ಕಂಡುಕೊಳ್ಳಲು ಸಹಾಯ ಮಾಡುವ ಒಂದು ಪ್ರಮುಖ ವೈಶಿಷ್ಟ್ಯವಾಗಿದ್ದು, ಇದರನ್ನು ಪ್ರಯಾಣದ ದಿನಾಂಕ, ಗಮ್ಯಸ್ಥಾನ ಅಥವಾ ವಿಮಾನ ಪ್ರಕಾರವನ್ನು ನಿರ್ದಿಷ್ಟವಾಗಿ ನಿಗದಿಪಡಿಸದ, ಬದಲಾಗಿ ಯಾವುದೇ ಆಯ್ಕೆಗಳಿಗೆ ಹೊಂದಿಕೊಳ್ಳುವ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಹಾಗಾದರೆ, ಈ ಏನಿದು ಹೊಸ ಗೂಗಲ್ ಫ್ಲೈಟ್ ಡೀಲ್ಸ್'?, ಈ ವೈಶಿಷ್ಟ್ಯದ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ.
ಏನಿದು 'ಗೂಗಲ್ ಫ್ಲೈಟ್ ಡೀಲ್ಸ್'?
'ಗೂಗಲ್ ಫ್ಲೈಟ್ ಡೀಲ್ಸ್' ವೈಶಿಷ್ಟ್ಯವು ಚಾಟ್‌ಬಾಟ್ ಇಂಟರ್ಫೇಸ್ ಅನ್ನು ಆಧರಿಸಿರುವ ಫೀಚರ್ ಆಗಿದೆ. ಈ ಫೀಚರ್ ಬಳಕೆದಾರರು ತಮ್ಮ ಆದ್ಯತೆಗಳನ್ನು ಸಂವಾದ ರೂಪದಲ್ಲಿ ತಿಳಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, "ಈ ಚಳಿಗಾಲದಲ್ಲಿ ಉತ್ತಮ ಆಹಾರವಿರುವ ನಗರಕ್ಕೆ, ತಡೆರಹಿತ ವಿಮಾನದಲ್ಲಿ ಒಂದು ವಾರ ಪ್ರವಾಸ" ಅಥವಾ "ಹೊಸ ಸ್ನೋಫಾಲ್ ಇರುವ ವಿಶ್ವದರ್ಜೆಯ ರೆಸಾರ್ಟ್‌ಗೆ 10 ದಿನಗಳ ಸ್ಕೀ ಪ್ರವಾಸ" ಎಂದು ಬಳಕೆದಾರರು ಪ್ರಾಂಪ್ಟ್ ನೀಡಬಹುದು. ಇದರ ನಂತರ, ಸುಧಾರಿತ AI ಬಳಕೆದಾರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಸೂಕ್ತ ಉತ್ತರವನ್ನು ನೀಡುತ್ತದೆ.
ಇದನ್ನು ಸುಲಭವಾಗಿ ಹೇಳುವುದಾದರೆ, ನೀವು ಯಾವುದೇ ಪ್ರಶ್ನೆಯನ್ನು ಗೂಗಲ್ ಫ್ಲೈಟ್ ಡೀಲ್ಸ್ ನಲ್ಲಿ ಕೇಳಿದಾಗ, ಸುಧಾರಿತ AI (ಜೆಮಿನಿ ಎಐಯ ಕಸ್ಟಮ್ ಆವೃತ್ತಿಯಾಗಿರಬಹುದು) ಬಳಕೆದಾರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಗೂಗಲ್ ಫ್ಲೈಟ್ಸ್‌ನ ನೈಜ-ಸಮಯದ ಡೇಟಾವನ್ನು ಆಧರಿಸಿ ಸೂಕ್ತ ಆಯ್ಕೆಗಳನ್ನು ಪ್ರಸ್ತುತಪಡಿಸುತ್ತದೆ. ಇದು ವಿವಿಧ ವಿಮಾನಗಳು ಮತ್ತು ಬುಕಿಂಗ್ ಸೈಟ್‌ಗಳಿಂದ ಸಂಬಂಧಿತ ಡೀಲ್‌ಗಳನ್ನು ತೋರಿಸುತ್ತದೆ. ಇದರಿಂದ ನಿಮ್ಮ ವಿಮಾನ ಪ್ರಯಾಣವು ಸುಧಾರಿಸುತ್ತದೆ.

ಈ ಹೊಸ ಫೀಚರ್ ನೇರ ವೆಬ್ ಪುಟ ಅಥವಾ ಗೂಗಲ್ ಫ್ಲೈಟ್ಸ್‌ನ ಮೇಲಿನ ಎಡ ಮೆನುವಿನಲ್ಲಿ ಲಭ್ಯವಿದೆ. ಇದು ನಿರ್ದಿಷ್ಟ ಗಮ್ಯಸ್ಥಾನಗಳು ಮತ್ತು ದಿನಾಂಕಗಳೊಂದಿಗೆ ಹೋರಾಡುವ ( ತುರ್ತಾಗಿ ಪ್ರಯಾಣವನ್ನು ಆಯೋಜಿಸುವ ಸ್ಥಿತಿ ಎಂದು ಅರ್ಥೈಸಿಕೊಳ್ಳಬಹುದು) ಪ್ರಯಾಣಿಕರಿಗಾಗಿ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ಈ ಸಾಧನವನ್ನು ಪ್ರಸ್ತುತ ಕೆನಡಾ, ಭಾರತ ಮತ್ತು ಅಮೆರಿಕದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಇದು ಪ್ರಸ್ತುತ ಬೀಟಾ ಹಂತದಲ್ಲಿದೆ.ಇದು ಗೂಗಲ್‌ನ ಶಾಪಿಂಗ್ ಪರಿಕರಗಳ ವಿಸ್ತರಣೆಯ ಭಾಗವಾಗಿದೆ.
ಸಾಂಪ್ರದಾಯಿಕವಾಗಿ, ಅಗ್ಗದ ವಿಮಾನ ಟಿಕೆಟ್‌ಗಳನ್ನು ಹುಡುಕಲು, ಬಳಕೆದಾರರು ಹಸ್ತಚಾಲಿತವಾಗಿ ಬೇರೆ ಬೇರೆ ದಿನಾಂಕ, ಗಮ್ಯಸ್ಥಾನ ಮತ್ತು ಫಿಲ್ಟರ್‌ಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಗೂಗಲ್ ಫ್ಲೈಟ್ ಡೀಲ್ಸ್ ಈ ತೊಂದರೆಯನ್ನು ನಿವಾರಿಸಿದೆ. ಇದು ಕೇವಲ ಒಂದು ಚಾಟ್ ಪ್ರಾಂಪ್ಟ್ ಮೂಲಕ ಎಲ್ಲಾ ವಿಮಾನ ಪ್ರಯಾಣದ ಕೆಲಸವನ್ನು ಸುಲಭಗೊಳಿಸುತ್ತದೆ. ಇದು ವಿಮಾನ ಟಿಕೆಟ್‌ಗಳನ್ನು ಹುಡುಕುವ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ ಎಂದು ತಿಳಿದುಬಂದಿದೆ.
ಈ ಟೂಲ್ ವಿಶೇಷವಾಗಿ ಪ್ರಯಾಣದಲ್ಲಿ ನಮ್ಯತೆ ಹೊಂದಿರುವವರಿಗೆ ಹಣ ಉಳಿಸಲು ಸಹಾಯ ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಇದು ಪ್ರತಿಯೊಬ್ಬರಿಗೂ ಸೂಕ್ತವಾಗಿಲ್ಲದಿರಬಹುದು, ಆದರೆ ತಮ್ಮ ಮುಂದಿನ ಪ್ರವಾಸದಲ್ಲಿ ಹಣ ಉಳಿಸಲು ಪ್ರಮುಖ ಗುರಿ ಹೊಂದಿರುವವರಿಗೆ ಇದು ಒಂದು ಅದ್ಭುತ ಸಾಧನವಾಗಿದೆ. ಗೂಗಲ್‌ನ ಈ ಹೊಸ AI ಉಪಕ್ರಮವು ಪ್ರಯಾಣದ ಉದ್ಯಮದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಆದರೂ, ಇದು ನಿಗದಿತ ದಿನಾಂಕ ಅಥವಾ ಗಮ್ಯಸ್ಥಾನವನ್ನು ಹೊಂದಿರುವ ಬಳಕೆದಾರರಿಗೆ ಎಷ್ಟರ ಮಟ್ಟಿಗೆ ಉಪಯುಕ್ತವಾಗಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


Click it and Unblock the Notifications








